twitter
    For Quick Alerts
    ALLOW NOTIFICATIONS  
    For Daily Alerts

    ಮುಸ್ಲಿಂ ಧಿರಿಸಿನಲ್ಲಿ ಜೂ.ಎನ್‌ಟಿಆರ್‌: ಕಾರಣ ಬಿಚ್ಚಿಟ್ಟ 'ಆರ್‌ಆರ್‌ಆರ್‌' ಕತೆಗಾರ

    |

    ಕೆಲವು ತಿಂಗಳ ಹಿಂದೆ 'ಆರ್‌ಆರ್‌ಆರ್' ಸಿನಿಮಾದ ಪಾತ್ರಗಳ ಟೀಸರ್ ಬಿಡುಗಡೆ ಆದಾಗ ದೊಡ್ಡ ವಿವಾದವೊಂದು ಎದ್ದಿತು.

    'ಆರ್‌ಆರ್‌ಆರ್‌' ಸಿನಿಮಾದಲ್ಲಿ ಜೂ.ಎನ್‌ಟಿಆರ್ ಹೋರಾಟಗಾರ ಕೋಮರಮ್ ಭೀಮ್ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರದ ಟೀಸರ್‌ನ ಕೊನೆಯಲ್ಲಿ ಮುಸ್ಲಿಂ ಧಿರಿಸು ತೊಟ್ಟು ಜೂ.ಎನ್‌ಟಿಆರ್ ಕಾಣಿಸಿಕೊಂಡಿದ್ದರು. ಇದು ವಿವಾದ ಎಬ್ಬಿಸಿತ್ತು. ಕೋಮರಮ್ ಭೀಮ್ ಹಿಂದು ಆಗಿದ್ದು ಅವರನ್ನು ಮುಸ್ಲಿಂ ವ್ಯಕ್ತಿಯಾಗಿ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

    ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಆರ್‌ಆರ್‌ಆರ್' ಸಿನಿಮಾಕ್ಕೆ ಕತೆ ಬರೆದಿದ್ದು, ಸಿನಿಮಾದಲ್ಲಿ ಕೋಮರಮ್ ಭೀಮ್ ಅವರನ್ನು ಮುಸ್ಲಿಂ ವ್ಯಕ್ತಿಯಾಗಿ ತೋರಿಸಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು ಏಕೆ?

    ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು ಏಕೆ?

    ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜಯೇಂದ್ರ ಪ್ರಸಾದ್, ''ಸಿನಿಮಾದಲ್ಲಿ ಜೂ.ಎನ್‌ಟಿಆರ್ ಪಾತ್ರವು (ಕೋಮರಮ್ ಭೀಮ್) ನಿಜಾಮರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತದೆ. ನಂತರ ಆ ಪಾತ್ರಕ್ಕೆ ಪೊಲೀಸರಿಂದಲೂ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆಗ ಆ ಪಾತ್ರ ತನ್ನ ಗುರುತು ಮರೆಮಾಚಲು ಮುಸ್ಲಿಂ ವ್ಯಕ್ತಿಯಾಗಿ ಬದಲಾಗುತ್ತದೆ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

    ಗೌರವ ಹೆಚ್ಚಾಗುವಂತೆ ಸಿನಿಮಾ ಮಾಡಲಾಗಿದೆ: ವಿಜಯೇಂದ್ರ ಪ್ರಸಾದ್

    ಗೌರವ ಹೆಚ್ಚಾಗುವಂತೆ ಸಿನಿಮಾ ಮಾಡಲಾಗಿದೆ: ವಿಜಯೇಂದ್ರ ಪ್ರಸಾದ್

    ''ಯಾರಿಗೂ ನೋವಾಗದಂತೆ ಹಾಗೂ ಆ ಪಾತ್ರಗಳ, ವ್ಯಕ್ತಿಗಳ (ಕೋಮರಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು) ಬಗೆಗಿನ ಗೌರವ ಹೆಚ್ಚಾಗುವ ರೀತಿಯಲ್ಲಿ 'ಆರ್‌ಆರ್‌ಆರ್‌' ಸಿನಿಮಾ ನಿರ್ಮಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರ ಪೊಲೀಸ್ ವೇಷದಲ್ಲಿ ಕಾಣಿಸಿಕೊಂಡಿರುವುದಕ್ಕೆ ಕಾರಣವನ್ನೂ ಸಹ ಚಿತ್ರಮಂದಿರದಲ್ಲಿಯೇ ನೋಡಿ ಸಂತೋಷಪಡಬೇಕು'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

    ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಜನನ

    ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಜನನ

    1901 ರಲ್ಲಿ ಕೋಮರಂ ಭೀಮ್ ಜನನ ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಆಗುತ್ತದೆ. ತಮ್ಮ ಜೀವನ ಪೂರ್ತಿ ಅವರು ನಿಜಾಮರ ವಿರುದ್ಧ ಹಾಗೂ ರಜಾಕರ ವಿರುದ್ಧ ಹೋರಾಡಿದ್ದರು. ಬುಡಕಟ್ಟು ಜನರ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಬುಡಕಟ್ಟು ಸಮುದಾಯದ ನಾಯಕನಾಗಿ ಗುರುತಿಸಿಕೊಂಡವರು ಕೋಮರಂ ಭೀಮ್. ಇದೇ ಪಾತ್ರವನ್ನು 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಜೂ.ಎನ್‌ಟಿಆರ್ ನಿರ್ವಹಿಸಿದ್ದು, ಟೀಸರ್‌ ಒಂದರಲ್ಲಿ ಜೂ.ಎನ್‌ಟಿಆರ್ ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

    Recommended Video

    ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್
    ಕೋಮರಮ್ ಭೀಮ್, ಅಲ್ಲೂರಿ ಸೀತಾರಾಮ ರಾಜು ಕತೆ

    ಕೋಮರಮ್ ಭೀಮ್, ಅಲ್ಲೂರಿ ಸೀತಾರಾಮ ರಾಜು ಕತೆ

    'ಆರ್‌ಆರ್‌ಆರ್‌' ಸಿನಿಮಾವು ತೆಲುಗು ರಾಜ್ಯಗಳ ಅಪ್ರಮಿತ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಜೀವನದ ಕುರಿತಾದ ಕತೆಯಾಗಿದೆ. ಸಿನಿಮಾದ ಕೆಲವು ಪೋಸ್ಟರ್‌ಗಳು ಹಾಗೂ ಮೇಕಿಂಗ್ ವಿಡಿಯೋ ಹಾಗೂ ಕ್ಯಾರೆಕ್ಟರ್ ಟೀಸರ್‌ ಈಗಾಗಲೇ ಬಿಡುಗಡೆ ಆಗಿವೆ. ಸಿನಿಮಾವು ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ, ಜೂ.ಎನ್‌ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ನಟಿಸಿದ್ದಾರೆ.

    English summary
    RRR movie story writer Vijayendra Prasad reveals why Jr NTR in in Muslim costume in RRR movie teaser. Jr NTR played Komaram Bheem character in RRR movie.
    Thursday, July 22, 2021, 18:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X