'ಲಿಯೋ' ತೆಲುಗು ಸಿನಿಮಾಗೆ ತಪ್ಪದ ಸಂಕಷ್ಟ; ಅ.20 ರವರೆಗೆ ಬಿಡುಗಡೆಗೆ ತಡೆಯಾಜ್ಞೆ ನೀಡಿದ ಕೋರ್ಟ್

ದಳಪತಿ ವಿಜಯ್ ಅವರ 'ಲಿಯೋ' 2023 ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಲಿಯೋ ಈ ವಾರ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗುತ್ತಿದ್ದು, ತಮಿಳುನಾಡಿನಲ್ಲಿ ಕಳೆದ ಕೆಲವು ವಾರಗಳಿಂದ ಚಿತ್ರದ ತಂಡವನ್ನು ವಿವಾದಗಳು ಬೆನ್ನು ಬಿಡದೆ ಕಾಡುತ್ತಿವೆ. ಇದರ ಜೊತೆಗೆ ಈಗ ಹೈದರಾಬಾದ್‌ನಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ.

ವಿಶೇಚ ಪ್ರದರ್ಶನ ಬೇಕು ಎಂದು ಪರದಾಡುತ್ತಿರುವ ಚಿತ್ರತಂಡಕ್ಕೆ ಇದೀಗ, ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್ ಅಕ್ಟೋಬರ್ 20 ರವರೆಗೆ 'ಲಿಯೋ' ಬಿಡುಗಡೆಯನ್ನು ತಡೆಹಿಡಿಯಲು ತಡೆಯಾಜ್ಞೆ ನೀಡಿ ಮತ್ತೊಂದು ಶಾಕ್ ಕೊಟ್ಟಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನ ನಾಗ ವಂಶಿ ಚಿತ್ರದ ಶೀರ್ಷಿಕೆ 'ಲಿಯೋ' ಬಳಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಲಿಯೋ ತಂಡಕ್ಕೆ ನುಂಗಲಾರದ ಬಿಸಿತುಪ್ಪವಾಗಿದೆ.

Vijays Leo Telugu release withheld till 20th October, Hyderabads City Civil Court Order

'ಲಿಯೋ' ತೆಲುಗು ರಿಲೀಸ್‌ಗೆ ಸಂಕಷ್ಟ

ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ 'ಲಿಯೋ' ಅಕ್ಟೋಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿ ಸಜ್ಜಾಗಿದೆ. ಈ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುವುದು ಕಷ್ಟವಾಗಿದೆ.

ಎಸ್... ಅಕ್ಟೋಬರ್ 17 ರಂದು, ಹೈದರಾಬಾದ್‌ನ ಸಿಟಿ ಸಿವಿಲ್ ನ್ಯಾಯಾಲಯವು ತೆಲುಗಿನಲ್ಲಿ 'ಲಿಯೋ' ಶೀರ್ಷಿಕೆಯ ಬಳಕೆಯ ಕುರಿತು ಸಿತಾರಾ ಎಂಟರ್‌ಟೈನ್‌ಮೆಂಟ್‌ನ ನಿರ್ಮಾಪಕ ನಾಗ ವಂಶಿ ಸಲ್ಲಿಸಿದ ಅರ್ಜಿಯನ್ನು ಆಧರಿಸಿ ತಡೆಯಾಜ್ಞೆ ನೀಡಿ ಆದೇಶವನ್ನು ಹೊರಡಿಸಿದೆ. ಅಕ್ಟೋಬರ್ 20ರವರೆಗೆ ತೆಲುಗು ಭಾಷೆಯ ಬಿಡುಗಡೆಯನ್ನು ತಡೆಹಿಡಿಯಲು ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಈಗಾಗಲೇ ಸಿನಿಮಾ ಬಿಡುಗಡೆ ವಿಚಾರಕ್ಕೆ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ಫಸ್ಟ್ ಡೇ ಫಸ್ಟ್ ಶೋ ಅಂತ ಮುಂಜಾನೆ 4 ಗಂಟೆ ಸ್ಪೆಷಲ್ ಶೋಗೂ ಸಂಕಷ್ಟ ಎದುರಾಗಿದೆ. ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. 'ಲಿಯೋ'ಗೆ ಸ್ಪೆಷಲ್ ಶೋ ಅನುಮತಿ ಸಿಗದ ಬೆನ್ನಲ್ಲೇ ಸಿನಿಮಾದ ನಿರ್ಮಾಪಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮದ್ರಾಸ್ ಹೈಕೋರ್ಟ್‌ ಈಗ ಈ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಮತ್ತೆ ತಮಿಳುನಾಡು ಸರ್ಕಾರಕ್ಕೆ ವಹಿಸಿದೆ.

Vijays Leo Telugu release withheld till 20th October, Hyderabads City Civil Court Order

'ಲಿಯೋ'

ನಿರ್ದೇಶಕ ಲೋಕೇಶ್ ಕನಕರಾಜ್ ಅವರ 'ಲಿಯೋ' ಒಂದು ಹೈ ಆಕ್ಷನ್ ಥ್ರಿಲ್ಲರ್ ಆಗಿದ್ದು, ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಚಿತ್ರಕಥೆಯನ್ನು ಲೋಕೇಶ್, ರತ್ನ ಕುಮಾರ್ ಮತ್ತು ದೀರಜ್ ವೈದಿ ಬರೆದಿದ್ದಾರೆ. ದಳಪತಿ ವಿಜಯ್ ಜೊತೆಗೆ ಚಿತ್ರದಲ್ಲಿ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್ ಮತ್ತು ಪ್ರಿಯಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

More from Filmibeat

English summary
Vijay's 'Leo' telugu release withheld till 20th october, Hyderabad's city civil court order.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X