ಸಮಂತಾಳನ್ನು ಮೇಲೆತ್ತಿ ಗಿರ ಗಿರನೇ ತಿರುಗಿಸಿದ ದೇವರಕೊಂಡ: ಶ್ರೀ ರೆಡ್ಡಿ ಕಮೆಂಟ್ ಏನು?
ಒಂದ್ಕಡೆ ಸಮಂತಾ, ಇನ್ನೊಂದ್ಕಡೆ ವಿಜಯ್ ದೇವರಕೊಂಡ. ಇಬ್ಬರ ಕೆಮಿಸ್ಟ್ರಿ ಬಗ್ಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಇಬ್ಬರ ಕೆಮಿಸ್ಟ್ರಿ. ಈ ಹೈಪರ್ ಆಕ್ವೀವ್ ಜೋಡಿಯನ್ನು ಹಾವ-ಭಾವಗಳು ನೋಡಿ ಪ್ರೇಕ್ಷಕರೇ ಕನ್ಫ್ಯೂಸ್ ಆಗಿದ್ದಾರೆ.
ಸಮಂತಾ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನೊಂದು ವರ್ಷ ಸಿನಿಮಾ ಮಾಡೋದಿಲ್ಲ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಸಮಂತಾ 'ಖುಷಿ' ಪ್ರಮೋಷನ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾ ಆಕ್ವೀವ್ ಆಗಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ಸಮಂತಾ ಜೊತೆಯಾಗಿ ನಟಿಸಿದ ಸಿನಿಮಾ 'ಖುಷಿ'. ಈ ಸಿನಿಮಾ ಹಾಡುಗಳು ಹಾಗೂ ಟ್ರೈಲರ್ ಈಗಾಗಲೇ ಸದ್ದು ಮಾಡುತ್ತಿವೆ. ಟಾಲಿವುಡ್ ಬೆಸ್ಟ್ ಪೇರ್ ಅಂತ ಈಗಾಗಲೇ ಟೈಟಲ್ ಕೊಡ ಕೊಟ್ಟಿದ್ದಾಗಿದೆ. ಇತ್ತೀಚೆಗೆ ನಡೆದ ಮ್ಯೂಸಿಕ್ ಲಾಂಚ್ ಈವೆಂಟ್ ಈ ಟೈಟಲ್‌ಗೆ ಸಾಕ್ಷಿ ಎಂಬಂತಿದೆ. ಸದ್ಯ 'ಖುಷಿ' ಆಡಿಯೋ ಲಾಂಚ್ ಕಾರ್ಯಕ್ರಮದ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿವೆ. ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಅಖಾಡಕ್ಕಿಳಿ ಕಮೆಂಟ್ ಮಾಡಿದ್ದಾರೆ.
ಸಮಂತಾ-ವಿಜಯ್ ಫುಲ್ ಬಿಂದಾಸ್
ನಿನ್ನೆ (ಆಗಸ್ಟ್ 15) ಹೈದರಾಬಾದ್‌ನಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾ ಆಡಿಯೋ ಲಾಂಚ್ ಈವೆಂಟ್ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿದ್ದು ಸಮಂತಾ ಹಾಗೂ ವಿಜಯ್ ದೇವರಕೊಂಡು ಡ್ಯಾನ್ಸ್ ಪರ್ಫಾಮೆನ್ಸ್. ಸ್ಟೇಜ್ ಮೇಲೆ ಇಬ್ಬರೂ ಮೈಮರೆತು ಹೆಜ್ಜೆ ಹಾಕಿದ್ದರು. ಇದೇ ಪರ್ಫಾಮೆನ್ಸ್‌ನ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಖುಷಿ' ಜೋಡಿಗೆ ಶ್ರೀ ರೆಡ್ಡಿ ಕಮೆಂಟ್
'ಖುಷಿ' ಈವೆಂಟ್‌ನಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಪ್ಪಿಕೊಂಡ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಫೋಟೊ ಹಾಗೂ ವಿಡಿಯೋಗಳಿಗೆ ಟಾಲಿವುಡ್‌ನ ವಿವಾದಾತ್ಮಕ ನಟಿ ಶ್ರೀರೆಡ್ಡಿ ಕಮೆಂಟ್ ಮಾಡಿದ್ದಾರೆ. ಇದು ಸಮಂತಾ ಹಾಗೂ ವಿಜಯ್ ಅಭಿಮಾನಿಗಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಫೋಟೊಗಳಿಗೆ ಕಮೆಂಟ್ ಮಾಡಿ ಅಂತ ಶ್ರೀ ರೆಡ್ಡಿ ಇಬ್ಬರ ಫೋಟೊಗಳನ್ನು ಶೇರ್ ಮಾಡಿದ್ದರು. ಹೀಗ್ಯಾಕೆ ಟ್ವೀಟ್ ಮಾಡಿದ್ದಾರೆ ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.
ರಶ್ಮಿಕಾಗೆ ಮೋಸ ಮಾಡಿದ್ರಾ ವಿಜಯ್?
ಶ್ರೀ ರೆಡ್ಡಿ ಇವರಿಬ್ಬರ ಸ್ಟೇಜ್ ಪರ್ಫಾಮೆನ್ಸ್ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ವಿಜಯ್ ದೇವರಕೊಂಡ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಮೋಸ ಮಾಡಿದ್ದಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಸಮಂತಾ ಹಾಗೂ ವಿಜಯ್ ದೇವರಕೊಂಡು ಇಬ್ಬರ ಜೋಡಿ ಚೆನ್ನಾಗಿದೆ ಎಂದೂ ಕೆಲವರು ಕಮೆಂಟ್ ಬಾಕ್ಸ್‌ನಲ್ಲಿ ಬರೆಯುತ್ತಿದ್ದಾರೆ.
'ಖುಷಿ' ಸಿನಿಮಾಗೆ ಭರ್ಜರಿ ಪ್ರಚಾರ
ಈ ಹಿಂದೆ 'ಖುಷಿ' ಅನ್ನೋ ಟೈಟಲ್‌ನಲ್ಲೇ ತೆಲುಗು ಹಾಗೂ ತಮಿಳು ಸಿನಿಮಾಗಳು ಬಂದಿದ್ದವು. ತೆಲುಗಿನಲ್ಲಿ ಪವನ್ ಕಲ್ಯಾಣ್ ಹಾಗೂ ಭೂಮಿಕಾ ನಟಿಸಿದ್ದರು. ಹಾಗೇ ತಮಿಳಿನಲ್ಲಿ ದಳಪತಿ ವಿಜಯ್ ಹಾಗೂ ಜ್ಯೋತಿಕಾ ನಟಿಸಿದ್ದರು. ಈ ಎರಡೂ ಜೋಡಿಗಳು ಪ್ರೇಕ್ಷಕರ ಮನಗೆದ್ದಿದ್ದವು. ಈಗ ರಿಲೀಸ್‌ಗೆ ರೆಡಿಯಾಗಿರೋ 'ಖುಷಿ'ಯಲ್ಲಿ ಸಮಂತಾ ಹಾಗೂ ವಿಜಯ್ ಸಿನಿಪ್ರಿಯರ ಮನಗೆಲ್ಲುತ್ತಾರಾ? ಅನ್ನೋದು ಕುತೂಹಲ.


Click it and Unblock the Notifications











