ಅಬ್ಬಬ್ಬಾ.. ರಶ್ಮಿಕಾ ಮಂದಣ್ಣ ಅವರದ್ದು ಏನ್ ಟ್ಯಾಲೆಂಟ್ ಗುರು ; ವೈರಲ್ ವಿಡಿಯೋ...!
ಸಿನಿಮಾದವರು ಅಂದರೆ ಸುಖದ ಸುಪ್ಪತ್ತಿಗೆಯಲ್ಲಿ ಇರುವವರು ಅನ್ನುವುದು ಸಾಮಾನ್ಯ ಕಲ್ಪನೆ. ಐಶಾರಾಮಿ ಬದುಕನ್ನು ಬದುಕುವ ಇವರು ಬಹುಪಾಲು ತಮ್ಮ ಬದುಕನ್ನ ಕಳೆಯುವುದು ಪಂಚತಾರಾ ಹೊಟೇಲ್ ನಲ್ಲಿಯೇ. ಹೀಗಾಗಿಯೇ ಮನೆ ಮತ್ತು ಮನೆಯವರಿಂದ ಬಹುತೇಕ ದೂರವೇ ಇರುವ ಇವರು, ಅಡುಗೆ ಮಾಡಿಕೊಳ್ಳುವುದು ಎಲ್ಲ ಕನಸಿನ ಮಾತು ಎಂದೇ ಎಲ್ಲರು ಅಂದುಕೊಳ್ಳುತ್ತಾರೆ. ಆದರೆ. ಇದಕ್ಕೆ ಅಪವಾದ ಅನ್ನುವಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಒತ್ತಡದ ಬದುಕನ್ನ ಪಕ್ಕಕ್ಕಿಡ್ತಾರೆ. ಚಿಕ್ಕ ಚಿಕ್ಕ ವಿಚಾರದಲ್ಲಿ ಖುಷಿ ಕಂಡುಕೊಳ್ಳುವ ಪ್ರಯತ್ನ ಮಾಡ್ತಾರೆ. ಸಮಯ ಸಿಕ್ಕಾಗ ಅಡುಗೆಯನ್ನೂ ಮಾಡ್ತಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ
ಹೌದು, ರಶ್ಮಿಕಾ ಮಂದಣ್ಣ ಅವರ ಪುರಾತನ ಕಾಲದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.ವೈರಲ್ ಆದ ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಇಷ್ಟದ ಆಮ್ಲೆಟ್ ನ ಮಾಡಿದ್ದಾರೆ.

ಸಾಮಾನ್ಯವಾಗಿ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಎಲ್ಲರು ಆಮ್ಲೆಟ್ ಮಾಡಿದರೆ, ರಶ್ಮಿಕಾ ಮಂದಣ್ಣ ಪಾಲಕ್ ಮತ್ತು ಅಣಬೆಯನ್ನ ಸೇರಿಸಿ ಆಮ್ಲೇಟ್ ಮಾಡಿದ್ದಾರೆ. ಎಣ್ಣೆ, ತುಪ್ಪ, ಪಾಲಕ್, ಅಣಬೆ ಮತ್ತು ಸಾಸ್ ಸೇರಿಸಿ ಮಾಡಲಾದ ಈ ಆಮ್ಲೇಟ್ ನ ರುಚಿ ಹೇಗಿದೆಯೋ ಗೊತ್ತಿಲ್ಲ. ಆದರೆ.. ವಿಡಿಯೋವನ್ನ ಮಾತ್ರ ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ. ಸಾವಿರಾರು ಮಂದಿ ರಶ್ಮಿಕಾ ಮಂದಣ್ಣ ಅವರ ಈ ರೆಸಪಿಯನ್ನ ತಾವು ಕೂಡ ಮನೆಯಲ್ಲಿ ಟ್ರೈ ಮಾಡಿದ್ದಾರೆ.
ಇನ್ನೂ ಕೆಲವರು ರಶ್ಮಿಕಾ ಮಂದಣ್ಣ ಅವರ ಈ ಅಡುಗೆ ಮಾಡುವ ಕಲೆಯನ್ನ ಕಂಡು ಬೆಕ್ಕಸ ಬೆರಗಾಗಿದ್ದಾರೆ. ನಿಮಗೆ ಅಡುಗೆ ಮಾಡೋಕೂ ಬರುತ್ತೆ ಅನ್ನುವ ವಿಚಾರ ನಮಗೆ ಇವತ್ತೇ ಗೊತ್ತಾಯಿತು ಎಂದು ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಆಮ್ಲೆಟ್ ಹೊರತು ಪಡಿಸಿದರೆ ರಶ್ಮಿಕಾ ಮಂದಣ್ಣಗೆ ಅಕ್ಕಿ ರೊಟ್ಟಿ ಮಾಡುವುದು ಇಷ್ಟ. ಇಷ್ಟೇ ಅಲ್ಲ ಮೊಟ್ಟೆ, ತುಪ್ಪ, ಪ್ರೋಟಿನ್ ಪುಡಿ, ಬಾಳೆಹಣ್ಣು, ಖರ್ಜೂರ, ಬಾದಾಮಿ ಮಿಲ್ಕ್, ಚಾಕ್ಲೇಟ್ ಪ್ರೊಟೀನ್ ಪ್ಯಾನ್ಕೇಕ್ಸ್ ಹಾಗೂ ಓಟ್ಸ್ ಸೇರಿಸಿ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ, ನಂತರ ಅದರಿಂದ ರುಚಿಕರವಾದ ದೋಸೆ ಮಾಡುತ್ತಾರಂತೆ ರಶ್ಮಿಕಾ ಮಂದಣ್ಣ. ಚಿಕನ್ ಪುಟ್ಟು ಕರಿ ಮತ್ತು ರಸಂ ಮಾಡುವುದರಲ್ಲಿ ಕೂಡ ರಶ್ಮಿಕಾ ಮಂದಣ್ಣ ಸಿದ್ಧ ಹಸ್ತರು. ಇನ್ನೂ ಹಿಂದೊಮ್ಮೆ ರಾಮ್ ಚರಣ್ ತೇಜಾ ಪತ್ನಿ ಉಪಾಸನಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಭಾಗವಹಿಸಿ ಕ್ಯಾರೆಟ್ ಹಲ್ವಾ ಮಾಡಿದ್ದರು.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪುಷ್ಪ 2 ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ಇನ್ನೂ.. ಧನುಷ್ ಅಭಿನಯದ ಕುಬೇರ ಚಿತ್ರದಲ್ಲಿ ಕೂಡ ರಶ್ಮಿಕಾ ನಾಯಕಿ ಪಾತ್ರ ನಿರ್ವಹಿಸುತ್ತಿದ್ದಾರೆ. ಗರ್ಲ್ ಫ್ರೆಂಡ್ ಮತ್ತು ರೇನ್‌ಬೋ.. ಬಿಡುಗಡೆಯಾಗಬೇಕಿರುವ ರಶ್ಮಿಕಾ ಮಂದಣ್ಣ ಅಭಿನಯದ ಇನ್ನೆರಡು ಸಿನಿಮಾಗಳು. ಈ ಸಿನಿಮಾಗಳನ್ನ ಹೊರತು ಪಡಿಸಿ ಬಾಲಿವುಡ್ ನಲ್ಲಿಯೂ ರಶ್ಮಿಕಾ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.
ಒಟ್ನಲ್ಲಿ ಕೊರೊನಾ ಕಾಲಘಟ್ಟದಲ್ಲಿ ರಶ್ಮಿಕಾ ಮಂದಣ್ಣ ಮಾಡಿದ್ದ ಆಮ್ಲೆಟ್ ನ ಘಮಘಮ ವಾಸನೆ ಈಗ ಬಡಿಯುತ್ತಿದೆ. ವಿಡಿಯೋ ಮತ್ತೊಮ್ಮೆ ಎಲ್ಲೆಡೆ ಹರಿದಾಡುತ್ತಿದೆ.


Click it and Unblock the Notifications











