'ಆದಿಪುರುಷ್' ಸಿನಿಮಾ ನೋಡಲು ನಿಜವಾಗಿಯೂ ಚಿತ್ರಮಂದಿರಕ್ಕೆ ಬಂದ ವಾನರ.. ವಿಡಿಯೋ ವೈರಲ್

ಬಹುನಿರೀಕ್ಷಿತ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಸೂರ್ಯ ಹುಟ್ಟುವುದಕ್ಕೂ ಮುನ್ನ ಪ್ರೇಕ್ಷಕರಿಗೆ ತೆರೆಮೇಲೆ ಶ್ರೀರಾಮನಾಗಿ ಪ್ರಭಾಸ್ ದರ್ಶನವಾಗಿದೆ. ಒಂದಷ್ಟು ವಿವಾದಗಳ ನಡುವೆಯೂ ಸಿನಿಮಾ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ರಾಮಾಯಣ ಕಾವ್ಯ ಆಧರಿಸಿದ ಸಿನಿಮಾ ಎನ್ನುವ ಕಾರಣಕ್ಕೆ ಮೊದಲ ದಿನ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಸಿನಿಮಾ ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

ತಮ್ಮ ನೆಚ್ಚಿನ ನಟ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವುದು ಪ್ರಭಾಸ್ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಥಿಯೇಟರ್‌ಗಳಲ್ಲಿ ಜೈಶ್ರೀರಾಮ್ ಜಪ ಶುರುವಾಗಿದೆ. ಜೊತೆ ಹನುಮಂತನ ಧ್ಯಾನವೂ ನಡೀತಿದೆ. ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಬಾಲಿವುಡ್ ನಟ ದೇವದತ್ತ ನಟಿಸಿದ್ದಾರೆ. ಇನ್ನು ಸಿನಿಮಾ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಲ್ಲೂ ಹನಮಂತನಿಗಾಗಿ ಒಂದೊಂದು ಸೀಟ್ ಖಾಲಿ ಬಿಡಲಾಗಿದೆ. ಎಲ್ಲಿ ರಾಮ ಇರುತ್ತಾನೋ, ಎಲ್ಲಿ ರಾಮಾಯಣ ಪಾರಾಯಣ ಆಗುತ್ತದೋ ಅಲ್ಲಿಗೆ ಹನುಮಂತ ಬರ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

Viral video shows monkey who visits Prabhas Adipurush Screening Theater

ಥಿಯೇಟರ್‌ಗಳಲ್ಲಿ ಈ ರೀತಿ ಹನುಮಂತನಿಗಾಗಿ ಒಂದು ಸೀಟ್ ಕಾಯ್ದಿರಿಸುವ ಚಿತ್ರತಂಡದ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ದರು. ಕೆಲವೆಡೆ ಆ ರೀತಿ ಖಾಲಿ ಬಿಟ್ಟ ಸೀಟ್‌ಗೆ ಪೂಜೆ ಕೂಡ ಮಾಡಲಾಗುತ್ತಿದೆ. ಮತ್ತೆ ಕೆಲವರು ಇದೆಲ್ಲಾ ಅತಿಯಾಯಿತು, ಸಿನಿಮಾ ಥಿಯೇಟರ್‌ನ ದೇವಸ್ಥಾನವಾಗಿ ಬದಲಿಸಲು ನಿಮಗ್ಯಾರು ಅನುಮತಿ ಕೊಟ್ಟಿದ್ದು ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡುತ್ತಿದ್ದಾರೆ. ಆದರೆ ಚಿತ್ರತಂಡದ ನಂಬಿಕೆ ನಿಜವಾದಂತೆ ಕಾಣಿಸುತ್ತಿದೆ. 'ಆದಿಪುರುಷ್' ಸಿನಿಮಾ ಪ್ರದರ್ಶನವಾಗುತ್ತಿರುವ ಥಿಯೇಟರ್‌ವೊಂದಕ್ಕೆ ನಿಜವಾಗಿಯೂ ವಾನರ(ಕೋತಿ) ಎಂಟ್ರಿ ಕೊಟ್ಟಿದ್ದಾನೆ.

ಥಿಯೇಟರ್‌ಗೆ ಬಂದ ಕೋತಿ

ಸದ್ಯ 'ಆದಿಪುರುಷ್' ಸಿನಿಮಾ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಕ್ಕೆ ಕೋತಿ ಬಂದಿರುವ ವಿಡಿಯೋ ಆಗಿದೆ. ಸ್ಕ್ರೀನ್ ಪಕ್ಕದ ಗೋಡೆಯ ಕಿಂಡಿಯಿಂದ ಕೋತಿಯೊಂದು ಸಿನಿನಿಮಾ ನೋಡುತ್ತಿರುವುದನ್ನು ಆ ವಿಡಿಯೋದಲ್ಲಿ ನೋಡಬಹುದು. ಕೋತಿಯನ್ನು ನೋಡಿದ ಪ್ರೇಕ್ಷಕರು ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಶ್ರೀರಾಮ ಕಥೆ ಹೇಳುವ ಎಲ್ಲಾ ಕಡೆ ಹನುಮಂತ ಇರುತ್ತಾನೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಫನ್ನಿ ಕಾಮೆಂಟ್‌ಗಳು

ಇನ್ನು ಈ ವಿಡಿಯೋ ನೋಡಿ ಕೆಲವರು ಫನ್ನಿ ಕಾಮೆಂಟ್ ಮಾಡಿದ್ದಾರೆ. ಬಹುಶಃ ಆ ಚಿತ್ರಮಂದಿರದಲ್ಲಿ ಹನುಮಂತನಿಗೆ ಸೀಟ್ ಮೀಸಲಿಟ್ಟಂತೆ ಕಾಣುತ್ತಿಲ್ಲ. ಅದಕ್ಕೆ ವಾನರ ವೆಂಟಿಲೇಟರ್ ಏರಿದ್ದಾನೆ, ಮತ್ತೊಬ್ಬರು ಎಲ್ಲಿ ನನ್ನ ಸೀಟ್ ಎಂದು ಹನುಮಂತ ಹುಡುಕಾಡುತ್ತಿರುವಂತಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು 'ಆದಿಪುರುಷ್' ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಹನುಮಂತ ಬಂದುಬಿಟ್ಟಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

Viral video shows monkey who visits Prabhas Adipurush Screening Theater

ರಾಮನನ್ನು ಪ್ರೀತಿಸದವಲಿಲ್ಲ

ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲೂ ನಿರ್ದೇಶಕ ಓಂ ರಾವುತ್ ಥಿಯೇಟರ್‌ಗಳಲ್ಲಿ ಹನುಮಂತನಿಗೆ ಒಂದು ಸೀಟ್ ಮೀಸಲಿಡುವ ಬಗ್ಗೆ ಮಾತನಾಡಿದ್ದರು. ತಮ್ಮ ತಾಯಿ ಈ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ರಾಮಾಯಣ ಪಾರಾಯಣ ಮಾಡುವ ಸ್ಥಳಕ್ಕೆ ಹನುಮಂತ ಬರ್ತಾನೆ ಎಂದು. ಭಕ್ತರ ಈ ನಂಬಿಕೆಯನ್ನು ಗೌರವಿಸಿ ನಾವು ಈ ನಿರ್ಧಾರಕ್ಕೆ ಬಂದಿರೋದಾಗಿ ವಿವರಿಸಿದ್ದರು.

ಫಸ್ಟ್‌ ಡೇ 110 ಕೋಟಿ ರೂ. ಗಳಿಕೆ?

'ಆದಿಪುರುಷ್' ಸಿನಿಮಾ ಕ್ರೇಜ್ ಜೋರಾಗಿದೆ. ಅದಕ್ಕೆ ತಕ್ಕಂತೆ ಫಸ್ಟ್ ಡೇ ಟಿಕೆಟ್ ಬುಕ್ಕಿಂಗ್ ಕೂಡ ನಡೆದಿದೆ. ಮೊದಲ ದಿನವೇ ಸಿನಿಮಾ 110 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡುವ ಲೆಕ್ಕಾಚಾರ ನಡೀತಿದೆ. ಬರೀ ಕರ್ನಾಟಕದಲ್ಲೇ ಬುಕ್ಕಿಂಗ್ 3.5 ಕೋಟಿ ರೂ. ಮೀರಿದೆ. ಹಾಗಾಗಿ ಸಿನಿಮಾ ದೊಡ್ಡಮಟ್ಟದಲ್ಲೇ ಕಲೆಕ್ಷ್ ಮಾಡುವ ನಿರೀಕ್ಷೆಯಿದೆ.

More from Filmibeat

English summary
Viral video shows monkey who visits Prabhas Adipurush Screening Theater. Makers reserve an empty seat in every theater where the film is screened. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X