For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ-ಪ್ರೀತಿ ಎರಡರ ಬಣ್ಣವೂ ಕೆಂಪು: ಬರುತ್ತಿದೆ 'ವಿರಾಟ ಪರ್ವಂ'

  |

  'ನಕ್ಸಲಿಸಮ್' ಕುರಿತಾಗಿ 1990-2000 ದಶಕದಲ್ಲಿ ಕೆಲವಾರು ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಕುರಿತು ಸಿನಿಮಾ ಬಂದಿರುವುದು ಕಡಿಮೆ. ಬದಲಾದ ರಾಜಕೀಯ ಪರಿಸ್ಥಿತಿಯೂ ಇದಕ್ಕೆ ಕಾರಣ ಇರಬಹುದು.

  ಇದೀಗ ನಕ್ಸಲಿಸಮ್ ಕುರಿತಾಗಿ ಸಿನಿಮಾ ಒಂದು ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಪ್ರಿಯಾಮಣಿ ಅಂಥಹಾ ದೊಡ್ಡಪಾತ್ರವರ್ಗ ಹೊಂದಿರುವ 'ವಿರಾಟ ಪರ್ವಂ' ಹೆಸರಿನ ಈ ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಕೆರಳಿಸಿದೆ.

  'ವಿರಾಟ ಪರ್ವಂ' ಕೇವಲ ನಕ್ಸಲಿಸಮ್ ಕತೆಯಲ್ಲ ಬದಲಿಗೆ ಉತ್ಕಟ ಪ್ರೇಮ, ನಕ್ಸಲಿಸಮ್ ಹಾಗೂ ವಿಚಾರಗಳ ಸಂಘರ್ಷವುಳ್ಳ ಸಿನಿಮಾ ಎಂಬುದು ಟ್ರೇಲರ್‌ನಲ್ಲಿಯೇ ಗೊತ್ತಾಗಿದೆ.

  ನಕ್ಸಲ್ ನಾಯಕನ ಪ್ರೇಮದಲ್ಲಿ ಬೀಳುವ ಸಾಯಿ ಪಲ್ಲವಿ ಪಾತ್ರ ಆತನಿಗಾಗಿ ಕುಟುಂಬವನ್ನು ಬಿಟ್ಟು ಕಾಡು ಸೇರುತ್ತಾಳೆ. ಆತನ ಬಂಡಾಯದ ವಿಚಾರಧಾರೆಯುಳ್ಳ ಕವನಗಳು ಸಾಯಿ ಪಲ್ಲವಿಗೆ ಆತನಲ್ಲಿ ಅನುರಕ್ತಳಾಗುವಂತೆ ಮಾಡುತ್ತವೆ. ಸಾಯಿ ಪಲ್ಲವಿ ಕಾಡು ಸೇರಿದ ಮೇಲೆ ಏನಾಗುತ್ತದೆ ಎಂಬುದು ಕತೆ.

  ಟ್ರೇಲರ್ ನೋಡಿದರೆ ಇದೊಂದು 'ಅಮೂರ್ತ' ಕತೆಯುಳ್ಳ ಸಿನಿಮಾ ಎಂಬ ಅನುಮಾನ ಮೂಡಿಸುತ್ತದೆ. ಟ್ರೇಲರ್‌ನಲ್ಲಿ ಪೊಲೀಸರು ಸಾಯಿ ಪಲ್ಲವಿಯ ತಪಾಸಣೆ ಮಾಡುತ್ತಿರುವ ದೃಶ್ಯವೊಂದಿದೆ. ನಕ್ಸಲ್ ಪ್ರಭಾವದ ಪ್ರದೇಶದಲ್ಲಿ ಪೊಲೀಸರು ದೌರ್ಜನ್ಯವನ್ನು ತೋರಿಸುವ ಪ್ರಯತ್ನ ಸಿನಿಮಾದಲ್ಲಿ ಮಾಡಲಾಗಿರುವುದು ಈ ದೃಶ್ಯದಿಂದ ಗೊತ್ತಾಗುತ್ತಿದೆ.

  ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

  'ವಿರಾಟ ಪರ್ವಂ' ಸಿನಿಮಾವನ್ನು ವೇಣು ದುಗ್ಗಲ ನಿರ್ದೇಶನ ಮಾಡಿದ್ದಾರೆ. ಡಿ ಸುರೇಶ್ ಬಾಬು, ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಪ್ರಿಯಾಮಣಿ, ನಂದಿತಾ ದಾಸ್ ಇನ್ನೂ ಇತರರು ನಟಿಸಿದ್ದಾರೆ. ಸಿನಿಮಾವು ಏಪ್ರಿಲ್ 30 ರಂದು ಬಿಡುಗಡೆ ಆಗಲಿದೆ.

  English summary
  Sai Pallavi, Rana Daggubati starer Virata parvam Telugu movie will release on April 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X