ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಗೆ ಪ್ರಧಾನಿ ಮೋದಿ ಶುಭಾಶಯ
ಬಹಳ ದಿನಗಳಿಂದ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದ್ದ ಆ ಘಳಿಗೆ ಹತ್ತಿರ ಬಂದಿದೆ. ಟಾಲಿವುಡ್ ನ ಲವ್ ಬರ್ಡ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಭಿಮಾನಿಗಳ ಪ್ರೀತಿಯ 'ವಿರೋಷ್' ಜೋಡಿ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಎಲ್ಲರಲ್ಲೂ ಸಂಭ್ರಮ ಮೂಡಿಸಿದೆ.
ಈ ಮದುವೆ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿ ಉಳಿದಿಲ್ಲ. ಈ ಜೋಡಿಯ ಹೊಸ ಪಯಣಕ್ಕೆ ಈಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ ಶುಭ ಹಾರೈಸಿದ್ದಾರೆ. ವಿಜಯ್ ದೇವರಕೊಂಡ ಅವರ ಪೋಷಕರಿಗೆ ವಿಶೇಷ ಪತ್ರ ಬರೆಯುವ ಮೂಲಕ ಮೋದಿ ಅವರು ತಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ನವಜೋಡಿಗೆ ತಲುಪಿಸಿದ್ದಾರೆ.

ಫೆಬ್ರವರಿ 26, 2026 ರಂದು ನಡೆಯಲಿರುವ ಈ ಮದುವೆಗೆ ಮೋದಿಯವರು ಆಮಂತ್ರಣ ಸ್ವೀಕರಿಸಿ ಸಂಭ್ರಮಿಸಿದ್ದಾರೆ. "ಇದು ನಿಜಕ್ಕೂ ಸಂತೋಷದಾಯಕ ಮತ್ತು ಶುಭ ಸಂದರ್ಭ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
"ದೈವಿಕವಾಗಿ ಬರೆಯಲ್ಪಟ್ಟ ಚಿತ್ರಕಥೆ" ಎಂದ ಪ್ರಧಾನಿ...
ಸಿನಿಮಾಗಳಲ್ಲಿ ವಿಜಯ್ ಮತ್ತು ರಶ್ಮಿಕಾ ಅನೇಕ ಚಿತ್ರಕಥೆಗಳನ್ನು ನೋಡಿದ್ದಾರೆ. ಆದರೆ ಜೀವನದ ಈ ಹೊಸ ಅಧ್ಯಾಯ ತುಂಬಾ ವಿಶೇಷವಾದುದು ಎಂದು ಮೋದಿ ಹೇಳಿದ್ದಾರೆ. "ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುವ ಈ ನಿಜ ಜೀವನದ ದೈವಿಕ ಚಿತ್ರಕಥೆಯು ಬೆಳ್ಳಿ ಪರದೆಯ ಮ್ಯಾಜಿಕ್ ಅನ್ನು ಮೀರಿಸುತ್ತದೆ" ಎಂದು ಅವರು ಬಣ್ಣಿಸಿದ್ದಾರೆ.
ಈ ಜೋಡಿ ಏಳು ಹೆಜ್ಜೆಗಳನ್ನು ಇಡುವ ಮೂಲಕ ಜೀವನಪರ್ಯಂತ ಸ್ನೇಹಿತರಾಗಿರಲಿ ಎಂದು ಹಾರೈಸಿದ್ದಾರೆ. ಪರಸ್ಪರರ ಸಾಮರ್ಥ್ಯಗಳನ್ನು ಗೌರವಿಸಿ, ಜವಾಬ್ದಾರಿಗಳನ್ನು ಹಂಚಿಕೊಂಡು ಸಾಗಲಿ ಎಂಬುದು ಮೋದಿಯವರ ಆಶಯವಾಗಿದೆ. ಒಬ್ಬ ಪ್ರಧಾನಿಯಿಂದ ಇಂತಹ ಸುಂದರ ಸಂದೇಶ ಬಂದಿರುವುದು ಮದುವೆಯ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜಸ್ಥಾನದ ಅರಮನೆಯಲ್ಲಿ 'ವಿರೋಷ್' ವಿವಾಹ
ವಿಜಯ್ ಮತ್ತು ರಶ್ಮಿಕಾ ಮದುವೆಗೆ ರಾಜಸ್ಥಾನದ ಉದಯಪುರ ಸಾಕ್ಷಿಯಾಗಲಿದೆ. ಐಟಿಸಿ ಹೋಟೆಲ್ 'ಮೆಮೆಂಟೋಸ್ ಬೈ ಏಕಾಯ' ಎಂಬ ಅದ್ಧೂರಿ ರೆಸಾರ್ಟ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಇದು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿದ್ದು, ಕೇವಲ ಆಪ್ತ ಬಂಧುಗಳು ಮತ್ತು ಗೆಳೆಯರು ಮಾತ್ರ ಭಾಗವಹಿಸಲಿದ್ದಾರೆ.

ಈಗಾಗಲೇ ಉದಯಪುರದಲ್ಲಿ ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿವೆ. ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಲಿರುವ ಈ ವಿವಾಹಕ್ಕೆ ದೇಶದ ವಿವಿಧ ಗಣ್ಯರು ಬರುವ ನಿರೀಕ್ಷೆಯಿದೆ. ಮದುವೆಯ ನಂತರ ಒಂದು ದೊಡ್ಡ ಮಟ್ಟದ ರಿಸೆಪ್ಷನ್ ಕೂಡ ಆಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್ ಜೋಡಿ
ಕಳೆದ ಭಾನುವಾರವಷ್ಟೇ ವಿಜಯ್ ಮತ್ತು ರಶ್ಮಿಕಾ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಅಭಿಮಾನಿಗಳು ಇವರಿಬ್ಬರ ಹೆಸರನ್ನು ಸೇರಿಸಿ 'ವಿರೋಷ್' ಎಂದು ಕರೆಯುತ್ತಿದ್ದರು. ಅದೇ ಹೆಸರಿನಲ್ಲಿ ತಮ್ಮ ಮದುವೆಯ ಸಭೆಯನ್ನು ಕರೆದಿದ್ದಾರೆ. "ನೀವು ನಮಗೆ ನೀಡಿದ ಪ್ರೀತಿಗೆ ನಾವು ಸದಾ ಋಣಿ" ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಬೆಂಬಲವೇ ನಮ್ಮ ಶಕ್ತಿ ಎಂದು ಈ ಜೋಡಿ ಹೇಳಿದೆ. ಸಿನೆಮಾ ಅಭಿಮಾನಿಗಳು ಈಗ ತಮ್ಮ ನೆಚ್ಚಿನ ಜೋಡಿಯ ಮದುವೆ ಫೋಟೋಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗ ಎಲ್ಲಿ ನೋಡಿದರೂ ವಿಜಯ್-ರಶ್ಮಿಕಾ ವಿವಾಹದ್ದೇ ಮಾತು.
ಹೊಸ ಜೀವನಕ್ಕೆ ಕಾಲಿಡುತ್ತಿರುವ ಪ್ರೇಮಿಗಳು
ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳ ಮೂಲಕ ಈ ಜೋಡಿ ಫೇಮಸ್ ಆಗಿತ್ತು. ತೆರೆಯ ಮೇಲೆ ಇವರ ಕೆಮಿಸ್ಟ್ರಿ ನೋಡಿ ಮದುವೆಯಾಗುವಂತೆ ಫ್ಯಾನ್ಸ್ ಒತ್ತಾಯಿಸುತ್ತಿದ್ದರು. ಈಗ ಜನರ ಆಸೆ ಕೊನೆಗೂ ಈಡೇರುತ್ತಿದೆ. ಕರ್ನಾಟಕದ ಬೆಡಗಿ ರಶ್ಮಿಕಾ ಈಗ ಅಧಿಕೃತವಾಗಿ ತೆಲುಗು ಚಿತ್ರರಂಗದ ಸ್ಟಾರ್ ವಿಜಯ್ ಅವರ ಕೈ ಹಿಡಿಯುತ್ತಿದ್ದಾರೆ.


Click it and Unblock the Notifications











