ಎಷ್ಟು ಜನರ ಜೊತೆ ದೈಹಿಕ ಸಂಪರ್ಕ ಹೊಂದಿದ್ದೀರಿ ? ಬಿಗ್ ಬಾಸ್ ವಿಷ್ಣುಪ್ರಿಯಾ ಉತ್ತರ ಕೇಳಿ ಬೆಚ್ಚಿ ಬಿದ್ದ ಫ್ಯಾನ್ಸ್

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಇನ್ನೂ ಇದು ಸೊಶಿಯಲ್ ಮೀಡಿಯಾ ಕಾಲ. ಈ ''5G'' ಕಾಲದಲ್ಲಿ ಬಟ್ಟೆ ಬಿಚ್ಚುವುದು.. ಫೋಟೊಗೆ ಪೋಸು ಕೊಡುವುದು.. ಈಗೀಗ ತೀರಾ ಕಾಮನ್ ಆಗಿ ಬಿಟ್ಟಿದೆ.

ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ಹುಂಬತನದಲ್ಲಿ ಜನ ಕೂಡ ತಮ್ಮ ''ಬೆತ್ತಲೆ'' ರೂಪ ನೋಡಲು ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಆ ಪೈಕಿ ವಿಷ್ಣು ಪ್ರಿಯಾ ಕೂಡ ಒಬ್ಬರು ಎನ್ನುವ ಮಾತನ್ನು ಕಳೆದ ಕೆಲ ದಿನಗಳಿಂದ ಹೇಳುತ್ತಲೇ ಇದ್ದಾರೆ. ವಿಷ್ಣುಪ್ರಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

My Body Count Is Bigg Boss Fame Vishnu Priya s Shocking Live Confession Triggers Massive Troll Sto

ಹೌದು, ವಿಷ್ಣುಪ್ರಿಯಾ.. ಪಕ್ಕದ ಆಂಧ್ರದ ಪ್ರಖ್ಯಾತ ನಿರೂಪಕಿ. ಈಟಿವಿ ವಾಹಿನಿಯಲ್ಲಿ ಪ್ರಸಾರವಾದ ''ಪೋವೇ ಪೋರಾ'' ಎಂಬ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಆಂಧ್ರದೆಲ್ಲೆಡೆ ಮನೆ ಮಾತಾದವರು ಇವರು.

''ಯಮದೊಂಗ''.. ''ಶಿವಪ್ಪತಿಗಾರಂ'' ಸೇರಿ ಕೆಲ ಚಿತ್ರಗಳಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ. ತಮ್ಮ ಮಾತು ಮತ್ತು‌ ಮೈಮಾಟದಿಂದಲೇ ಆಗಾಗ ಸದ್ದು ಮಾಡುವ, ಪಡ್ಡೆ ಹುಡುಗರ ಕಣ್ಣು ಕುಕ್ಕುವ ವಿಷ್ಣುಪ್ರಿಯಾ ತೆಲುಗಿನ ''ಬಿಗ್ ಬಾಸ್'' ಮನೆಗೆ ಕಳೆದ ವರ್ಷ ಹೋಗಿದ್ದರು. ''ಬಿಗ್ ಬಾಸ್'' ಸೀಸನ್ 8ರಲ್ಲಿ ಭಾಗವಹಿಸಿದ್ದರು. ಹೆಚ್ಚು ಕಡಿಮೆ ಕೊನೆಯವರೆಗೆ ಮನೆಯಲ್ಲಿಯೇ ಉಳಿದು 98 ದಿನಗಳ ನಂತರ ಹೊರ ಬಂದರು.

ಇಂಥಾ ವಿಷ್ಣುಪ್ರಿಯಾ ಕಳೆದ ಕೆಲ ದಿನಗಳಿಂದ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನು ಹಲವರಿಗೆ ಗೊತ್ತಿರುವಂತೆ ಇನ್‌ಸ್ಟಾಗ್ರಾಮ್ ಈಗ ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಬಿಸಿನೆಸ್ ಮಾಡೆಲ್ ಕೂಡ ಹೌದು.

399 ರೂಪಾಯಿ ಹಣ ನೀಡಿ ನೀವು ಚಂದಾದಾರರಾದರೆ ಮುಗೀತು. ಬೇರೆ ಯಾರು ನೋಡಿರದ.. ಬೇರೆ ಎಲ್ಲಿಯೂ ಸಿಗದ.. ನಿಮ್ಮ ನೆಚ್ಚಿನ ತಾರೆಯರ ಫೋಟೊಗಳನ್ನು ನೀವು ನೋಡಬಹುದು. ಸದ್ಯ ಈ ''ಸಬ್‌ಸ್ಕ್ರಿಪ್ಷನ್'' ಫೀಚರ್ ನ ಕೆಲವರು ಅರೆಬೆತ್ತಲೆ ಸಂಸ್ಕೃತಿಯನ್ನು ಪೋಷಿಸಲು ಉಪಯೋಗ ಮಾಡುತ್ತಿದ್ದಾರೆ. ಪಡ್ಡೆ ಹುಡುಗರ ದಾರಿ ತಪ್ಪಿಸಿ ದುಡ್ಡು ಮಾಡುತ್ತಿದ್ದಾರೆ.

my-body-count-is-bigg-boss-fame-vishnu-priya-s-shocking-live-confession-triggers-massive-troll-sto

ಆಗಲೇ ಹೇಳಿದಂತೆ ಈ ಸಾಲಿನಲ್ಲಿ ವಿಷ್ಣುಪ್ರಿಯಾ ಕೂಡ ಒಬ್ಬರು ಎಂಬ ವಾದವನ್ನು ಹಲವರು ಮಾಡುತ್ತಿದ್ದಾರೆ. ಆದರೆ, ವಿಷ್ಣುಪ್ರಿಯಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಸದ್ಯ ತಮ್ಮ ವಿರುದ್ಧ ಎದ್ದ ಈ ಆಕ್ರೋಶದ ಅಲೆಯಿಂದ ವಿಷ್ಣುಪ್ರಿಯಾಗೆ ನಷ್ಟದ ಬದಲು ಲಾಭವಂತೂ ಆಗಿದೆ.

ಇದಕ್ಕೆ ಪುರಾವೆ ಎಂಬಂತೆ ವಿವಾದದಿಂದ ವಿಷ್ಣುಪ್ರಿಯಾ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.ಸಬ್‌ಸ್ಕ್ರೈಬರ್ಸ್‌ಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ ಎನ್ನುವ ಸುದ್ದಿ ಆಂಧ್ರದಲ್ಲಿ ಕೇಳಿ ಬರುತ್ತಿದೆ.
ಹೀಗಿರುವಾಗ ಇದೀಗ ವಿಷ್ಣುಪ್ರಿಯಾ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಅಸಲಿಗೆ ವಿಷ್ಣುಪ್ರಿಯಾ ತಮ್ಮ ಅಭಿಮಾನಿಗಳಿಗಾಗಿ ಇತ್ತೀಚೆಗೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬರು ನೇರವಾಗಿ ನಿಮ್ಮ ಬಾಡಿ ಕೌಂಟ್ ಎಷ್ಟು ? (ಇಲ್ಲಿಯವರೆಗೆ ಎಷ್ಟು ಜನರೊಂದಿಗೆ ದೈಹಿಕ ಸಂಬಂಧ ಹೊಂದಿದ್ದೀರಾ..?) ಎಂಬ ತೀರಾ ವೈಯಕ್ತಿಕ ಪ್ರಶ್ನೆಯನ್ನು ಕೇಳಿದ್ದಾರೆ.

ಬಹುಶಃ ವಿಷ್ಣುಪ್ರಿಯಾ ಅವರಲ್ಲದೇ ಬೇರೆ ಯಾರೇ ಇದ್ದಿದ್ದರೂ ಕೂಡ ಈ ಪ್ರಶ್ನೆಗೆ ಕೆರಳಿ ಕೆಂಡವಾಗುತ್ತಿದ್ದರು. ಆದರೆ, ವಿಷ್ಣುಪ್ರಿಯಾ ಮಾತ್ರ ಈ ಪ್ರಶ್ನೆಯಿಂದ ವಿಚಲಿತರಾಗಲಿಲ್ಲ. ಚೂರು ಕೂಡ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ತಮ್ಮ ಬಾಡಿ ಕೌಂಟ್ ಐದು ಎಂದು ಉತ್ತರ ನೀಡಿದ್ಧಾರೆ. ಇಲ್ಲಿ ಪ್ರಾಮಾಣಿಕವಾದ ಮಾತುಕತೆ ನಡೆಯುತ್ತಿರುವುದರಿಂದ ನಾನು ಕೂಡ ಪ್ರಾಮಾಣಿಕವಾಗಿ ಉತ್ತರ ನೀಡುತ್ತಿದ್ದೇನೆ ಎಂದಿದ್ಧಾರೆ.

ವಿಷ್ಣುಪ್ರಿಯಾ ಅವರ ಬೋಲ್ಡ್ ಸ್ಟೆಟ್ಮೆಂಟ್ ಕೇಳಿ ಲೈವ್‌ನಲ್ಲಿದ್ದ ಹಲವರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಕ್ಲಿಪ್ ಲೈವ್ ಮುಗಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು "ದೈಹಿಕ ಸಂಬಂಧದ ಲೆಕ್ಕ" ಎಂದು ವಿಷ್ಣುಪ್ರಿಯಾ ಅವರನ್ನು ಟ್ರೋಲ್ ಮಾಡುತ್ತಿದ್ದರೆ, ಇನ್ನು ಕೆಲವು ಅಭಿಮಾನಿಗಳು ವಿಷ್ಣುಪ್ರಿಯಾ ಅವರ ಪರವಾಗಿ ವಾದಿಸುತ್ತಾ, ಅವರು ಆ ಅರ್ಥದಲ್ಲಿ ಹೇಳಿಲ್ಲ, ತಮಗೆ ಇದುವರೆಗೆ ಎಷ್ಟು ಜನ ಬಾಯ್‌ಫ್ರೆಂಡ್ಸ್ ಇದ್ದರು ಎಂದೋ ಅಥವಾ ಬೇರೆ ಅರ್ಥದಲ್ಲಿ ಮಾತನಾಡುತ್ತಿದ್ದರೋ ಏನೋ ಎಂದು ಪ್ರತಿವಾದ ಮಾಡುತ್ತಿದ್ಧಾರೆ. ಆದರೆ ವಾಸ್ತವದಲ್ಲಿ ಇಂದಿನ ಜನರೇಷನ್‌ನಲ್ಲಿ (GEN Z) ಈ ಪದವನ್ನು 99% ದೈಹಿಕ ಸಂಬಂಧದ ಲೆಕ್ಕಕ್ಕೇ ಬಳಸಲಾಗುತ್ತದೆ.

English summary
Bigg Boss star Vishnu Priya triggers a massive troll storm after getting brutally honest about her body count during a live session. Watch the viral clip!
Read more about: bigg boss social media tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X