'ಧಮ್ಕಿ' ಫಸ್ಟ್‌ ಡೇ ಫಸ್ಟ್ ಶೋನಲ್ಲಿ ಪ್ರದರ್ಶನವಾಗಿದ್ದೇ ಬೇರೆ! ಸೀಟಿನಿಂದ ಎದ್ದು ಕಿರುಚಾಡಿದ ಪ್ರೇಕ್ಷಕರು

ನಿನ್ನೆ ( ಮಾರ್ಚ್ 22 ) ಯುಗಾದಿ ಹಬ್ಬದ ಪ್ರಯುಕ್ತ ವಿವಿಧ ಚಿತ್ರರಂಗಗಳಲ್ಲಿ ಹಲವು ಚಿತ್ರಗಳು ತೆರೆಗೆ ಬಂದವು. ಯುಗಾದಿ ರಜೆ ಪ್ರಯುಕ್ತ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿ ರಸಿಕರು ಚಿತ್ರಮಂದಿರಗಳಿಗೆ ಕಾಲಿಡಲಿದ್ದಾರೆ ಎಂಬುದು ಚಿತ್ರತಂಡಗಳ ಲೆಕ್ಕಾಚಾರ. ಅದರಂತೆ ತೆಲುಗು ಚಿತ್ರರಂಗದಲ್ಲಿ ಯುವ ನಟ ವಿಶ್ವಕ್ ಸೇನ್ ನಟನೆಯ ಹಾಗೂ ನಿರ್ದೇಶನದ ಧಮ್ಕಿ ಚಿತ್ರ ಬಿಡುಗಡೆಯಾಗಿದೆ.

ಹೌದು, ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ನಟನಾಗಿ ತೆಲುಗು ಸಿನಿ ರಸಿಕರ ಮನಗೆದ್ದಿದ್ದ ವಿಶ್ವಕ್ ಸೇನ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೂ ಸಹ ಕೈಹಾಕಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾಗಳ ಮೂಲಕವೇ ತೆಲುಗು ಯುವ ಸಿನಿ ರಸಿಕರಿಗೆ ಹತ್ತಿರವಾದ ವಿಶ್ವಕ್ ಸೇನ್ ನಿರ್ದೇಶನದ ಮೂಲಕವೂ ಸಹ ಮೊದಲ ಬಾರಿಯೇ ಗೆದ್ದ ಮುನ್ಸೂಚನೆಗಳು ಸಿಕ್ಕಿದೆ.

Vizg Sukanya theatre played Dhamaka movie instead Das ka Dhamki on release day

ನಿನ್ನೆ ಚಿತ್ರವನ್ನು ನೋಡಿ ಹೊರಬಂದ ಬಹುತೇಕ ಸಿನಿ ರಸಿಕರು ಚಿತ್ರ ಚೆನ್ನಾಗಿದೆ, ವಿಶ್ವಕ್ ಸೇನ್ ಕೇವಲ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ನಿರ್ದೇಶಕ ಕೂಡ ಹೌದು ಎಂಬ ಅಭಿಪ್ರಾಯವನ್ನು ಸಿನಿ ರಸಿಕರು ವ್ಯಕ್ತಪಡಿಸಿದ್ದಾರೆ. ಚಿತ್ರ ಮೊದಲ ದಿನ ವಿಶ್ವದಾದ್ಯಂತ 4 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದ್ದು, ಇದು ವಿಶ್ವಕ್ ಸೇನ್ ಸಿನಿ ವೃತ್ತಿ ಜೀವನದ ದೊಡ್ಡ ಓಪನಿಂಗ್ ಎನಿಸಿಕೊಂಡಿದೆ.

ಇನ್ನು ಈ ಚಿತ್ರದ ಬಿಡುಗಡೆ ದಿನದ ಮೊದಲ ಪ್ರದರ್ಶನದಲದ ವೇಳೆ ಚಿತ್ರಮಂದಿರದ ಸಿಬ್ಬಂದಿ ಯಡವಟ್ಟೊಂದನ್ನು ಮಾಡಿದ್ದು ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹೌದು, ವಿಶಾಖಪಟ್ಟಣದಲ್ಲಿನ ಸುಕನ್ಯಾ ಚಿತ್ರಮಂದಿರದಲ್ಲಿ 'ದಾಸ್ ಕಾ ಧಮ್ಕಿ' ಚಿತ್ರದ ಬದಲಾಗಿ ರವಿತೇಜಾ ಹಾಗೂ ಶ್ರೀಲೀಲಾ‌ ನಟನೆಯ 'ಧಮಾಕಾ' ಚಿತ್ರವನ್ನು ಪ್ರದರ್ಶಿಸಲಾಗಿದೆ.

ದಾಸ್ ಕಾ ಧಮ್ಕಿ ಚಿತ್ರ 'ಧಮ್ಕಿ' ಎಂದೇ ಖ್ಯಾತಿ ಪಡೆದಿದ್ದು ಚಿತ್ರವನ್ನು ಹುಡುಕುವಾಗ ಧಮ್ಕಿ ಬದಲಾಗಿ ಧಮಾಕಾ ಆಯ್ಕೆ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಎರಡೂ ಹೆಸರುಗಳನ್ನು ಹುಡುಕುವಾಗ ಆಂಗ್ಲ ಭಾಷೆಯ ಮೊದಲ ನಾಲ್ಕು ಅಕ್ಷರಗಳು ಒಂದೇ ಆಗಿರುವುದರಿಂದ ಇಷ್ಟೆಲ್ಲಾ ನಡೆದಿದೆ.

Vizg Sukanya theatre played Dhamaka movie instead Das ka Dhamki on release day

ಹೀಗೆ ಚಿತ್ರಮಂದಿರದಲ್ಲಿ ಧಮ್ಕಿ ಬದಲಾಗಿ ಧಮಕಾ ಚಿತ್ರವನ್ನು ಶುರು ಮಾಡಿದ್ದನ್ನು ಚಿತ್ರ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊಗಳನ್ನು ಹರಿಬಿಟ್ಟಿದ್ದಾರೆ‌. ಈ ವಿಡಿಯೊಗಳು ವೈರಲ್ ಆಗಿದ್ದು, ನೆಟ್ಟಿಗರು ಚಿತ್ರಮಂದಿರದ ಸಿಬ್ಬಂದಿ ಮಾಡಿದ ಯಡವಟ್ಟನ್ನು ಕಂಡು ನಕ್ಕಿದ್ದಾರೆ.

ಇನ್ನು ವಿಶ್ವಕ್ ಸೇನ್ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರದಲ್ಲಿ ತಾವೇ ನಟನಾಗಿ ನಟಿಸಿದ್ದು, ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿಯಾಗಿ ನಟಿ ನಿವೇದಾ ಪೇತುರಾಜ್ ಬಣ್ಣ ಹಚ್ಚಿದ್ದಾರೆ. ಚಿತ್ರ ಸಾಗರದಾಚೆಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿದ್ದು, ಅಮೆರಿಕಾದಲ್ಲಿ ಬಿಡುಗಡೆ ದಿನ ಒಂದೂವರೆ ಲಕ್ಷ ಡಾಲರ್ ಸಂಪಾದಿಸಿದೆ‌.

ಇದೇ ವಿಶ್ವಕ್ ಸೇನ್ ಈ ಸಿನಿಮಾ ಕಾರಣದಿಂದಾಗಿ ಹಿರಿಯ ನಟ ಅರ್ಜುನ್ ಸರ್ಜಾ ಜತೆ ವಿವಾದ ಮಾಡಿಕೊಂಡಿದ್ರು. ಅರ್ಜುನ್ ಸರ್ಜಾ‌ ನಿರ್ದೇಶನದಲ್ಲಿ ಸರ್ಜಾ ಮಗಳು ಐಶ್ವರ್ಯಗೆ ನಾಯಕನಾಗಿ ನಟಿಸಬೇಕಿದ್ದ ವಿಶ್ವಕ್ ಸೇನ್ ಆ ಚಿತ್ರ ಶುರುವಾಗುವ ಮುನ್ನವೇ ಹೊರಬಂದಿದ್ದರು‌. ಈ ವಿಷಯವನ್ನು ತಿಳಿಸಿ ಅರ್ಜುನ್ ಸರ್ಜಾ ಆಕ್ರೋಶ ಹೊರಹಾಕಿದ್ದರು‌. ವಿಶ್ವಕ್ ಸೇನ್ ನಟಿಸುತ್ತೇನೆ ಎಂದು ಹೇಳಿ ಈಗ ಕೈ ಎತ್ತಿದ್ದಾರೆ ಎಂದು ಆಪಾದಿಸಿದ್ದರು‌.

ಈ ಆಪಾದನೆಯನ್ನು ತಳ್ಳಿಹಾಕಿದ ವಿಶ್ವಕ್ ಸೇನ್ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದರು‌. ತಾನು ನಿರ್ದೇಶಿಸಿರುವ ಈ ಚಿತ್ರಕ್ಕಾಗಿಯೇ ವಿಶ್ವಕ್ ಸೇನ್ ಅರ್ಜುನ್ ಸರ್ಜಾ ಜತೆ ವಿವಾದ ಮಾಡಿಕೊಂಡಿದ್ದರು ಎನ್ನಲಾಗಿದೆ. ತನ್ನ ಈ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದ ವಿಶ್ವಕ್ ಸೇನ್ ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರಕ್ಕೆ ಸಮಯ ನೀಡಲಾಗದೇ ಚಿತ್ರದಿಂದ ಹೊರಬಂದಿದ್ರು ಎಂಬ ಸುದ್ದಿ ಇದೆ‌.

More from Filmibeat

English summary
Vizg Sukanya theatre played Dhamaka movie instead Das ka Dhamki on release day. Readon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X