ವಿಜೆ ಚಿತ್ರಾ ಸಾವಿನಲ್ಲಿ ತೆಲುಗು ನಟನೊಬ್ಬನ ಕೈವಾಡ: ಗೆಳತಿಯ ಸ್ಪೋಟಕ ಹೇಳಿಕೆ

ತಮಿಳು ಧಾರಾವಾಹಿ ನಟಿ, ನಿರೂಪಕಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಆರಂಭದಲ್ಲಿ ವಿಜೆ ಚಿತ್ರಾ ಸಾವಿಗೆ ಪತಿ ಹೇಮಂತ್ ನೇರ ಕಾರಣ ಎನ್ನಲಾಗಿತ್ತು, ನಂತರ ವಿಜೆ ಚಿತ್ರಾ ತಮ್ಮ ಮನೆಯವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ, ಚಿತ್ರಾ ಸಾಯುವ ದಿನ ತಾಯಿಯೊಂದಿಗೆ ಗಂಟೆಗಟ್ಟಲೆ ಮಾತನಾಡಿ ಜಗಳವಾಡಿದ್ದರು ಎನ್ನಲಾಯಿತು.

ಈಗ ವಿಜೆ ಚಿತ್ರಾ ಆಪ್ತ ಗೆಳತಿಯೊಬ್ಬರು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದು, ಈ ಹೇಳಿಕೆ ಆಧರಿಸಿ ನೋಡುವುದಾದರೆ, ವಿಜೆ ಚಿತ್ರಾ ಸಾವಿನ ಹಿಂದೆ ತೆಲುಗಿನ ಖ್ಯಾತ ನಟನೊಬ್ಬನ ಕೈವಾಡವಿದ್ದಂತಿದೆ.

ಮಾಧ್ಯಮದೊಟ್ಟಿಗೆ ಮಾತನಾಡಿರುವ ವಿಜೆ ಚಿತ್ರಾ ಆಪ್ತ ಗೆಳತಿ, ತೆಲುಗು ಯುವ ನಟನೊಬ್ಬನೊಂದಿಗೆ ವಿಜೆ ಚಿತ್ರಾಗೆ ಗೆಳತನವಿತ್ತು. ರಾಜಕೀಯ ಪ್ರಭಾವವನ್ನೂ ಹೊಂದಿರುವ ಆ ನಟ, ಚಿತ್ರಾಳ ಖಾಸಗಿ ವಿಡಿಯೋ ಮಾಡಿಕೊಂಡು, ಅದನ್ನು ಚಿತ್ರಾಳ ಪತಿ ಹೇಮಂತ್ ಗೆ ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದ' ಎಂದಿದ್ದಾರೆ.

ಚಿತ್ರಾ ಗೆಳತಿಯ ಸ್ಪೋಟಕ ಹೇಳಿಕೆ

ಚಿತ್ರಾ ಗೆಳತಿಯ ಸ್ಪೋಟಕ ಹೇಳಿಕೆ

ಚಿತ್ರಾ ಗೆಳತಿಯ ಈ ಹೇಳಿಕೆ ಚಿತ್ರಾ ಸಾವಿನ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಮುಂದುವರೆದು ಮಾತನಾಡಿರುವ ಚಿತ್ರಾಳ ಗೆಳತಿ, 'ಆ ಯುವ ನಟ ಚಿತ್ರಾಳಿಗೆ ಸಾಕಷ್ಟು ಬೆದರಿಸಿದ್ದ, ಅಲ್ಲದೆ, 2021 ರ ಹೊಸವರ್ಷದಂದು ಒಂದು ರಾಜಕೀಯ ಪಾರ್ಟಿಗೆ ಬಂದು ಅಲ್ಲಿಯೇ ಉಳಿದುಕೊಳ್ಳಬೇಕೆಂದು ಒತ್ತಡ ಹಾಕಿದ್ದ' ಎಂದು ಸಹ ಹೇಳಿದ್ದಾರೆ.

ಸೆಟ್‌ನಲ್ಲಿ ಎಲ್ಲರೆದರು ಕೂಗಾಡಿದ್ದ ಹೇಮಂತ್

ಸೆಟ್‌ನಲ್ಲಿ ಎಲ್ಲರೆದರು ಕೂಗಾಡಿದ್ದ ಹೇಮಂತ್

ಚಿತ್ರಾ ನಟಿಸುತ್ತಿದ್ದ ಧಾರಾವಾಹಿಯ ಸಹನಟ-ನಟಿಯರು ಹೇಳಿರುವಂತೆ, ಚಿತ್ರಾ ಆತ್ಮಹತ್ಯೆ ಮಾಡಿಕೊಂಡ ದಿನ, ಚಿತ್ರಾಳ ಪತಿ ಹೇಮಂತ್ ಸೆಟ್‌ಗೆ ಬಂದಿದ್ದ, ಸೆಟ್‌ನಲ್ಲಿಯೇ ಎಲ್ಲರ ಎದುರು ಚಿತ್ರಾ ಜೊತೆ ಜಗಳವಾಡಿ, ಆಕೆಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ.

ಜಗಳವಾಡಿದ್ದ ಪತಿ ಹೇಮಂತ್

ಜಗಳವಾಡಿದ್ದ ಪತಿ ಹೇಮಂತ್

ಹೋಟೆಲ್‌ಗೆ ಹೋದ ಬಳಿಕವೂ ಹೇಮಂತ್ ಜಗಳ ಮುಂದುವರೆಸಿದ್ದು, ಜೋರಾಗಿ ಕೂಗಾಡಿ, ಮದುವೆಯನ್ನು ಅಂತ್ಯಗೊಳಿಸುವುದಾಗಿ ಬೆದರಿಸಿದ್ದ. ಆ ನಂತರ ಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೇಮಂತ್ ಅನ್ನು ಪೊಲೀಸರು ಬಂಧಿಸಿದ್ದಾರೆ, ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಸತ್ಯ ಇನ್ನಷ್ಟೆ ಹೊರಬರಬೇಕಿದೆ.

Recommended Video

ಮಜಾ ಟಾಕೀಸ್ ಬಿಟ್ಟು ಹೊಸ ಉದ್ಯಮ ಆರಂಭ ಮಾಡಿದ ಶ್ವೇತಾ ಚೆಂಗಪ್ಪ | Filmibeat Kannada
ಗುಟ್ಟಾಗಿ ಮದುವೆಯಾಗಿದ್ದ ಚಿತ್ರಾ

ಗುಟ್ಟಾಗಿ ಮದುವೆಯಾಗಿದ್ದ ಚಿತ್ರಾ

ವಿಜೆ ಚಿತ್ರಾ ಹಾಗೂ ಹೇಮಂತ್ ಇದೇ ವರ್ಷದ ಅಕ್ಟೋಬರ್ 19 ರಂದು ಗುಟ್ಟಾಗಿ ರಿಜಿಸ್ಟರ್ ಮದುವೆ ಆಗಿದ್ದರು. ಇಬ್ಬರೂ ಫೆಬ್ರವರಿಯಲ್ಲಿ ತಮ್ಮ ಮದುವೆಯನ್ನು ಬಹಿರಂಗಗೊಳಿಸುವ ಯೋಚನೆಯಲ್ಲಿದ್ದರು. ಆದರೆ ಚಿತ್ರಾ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ.

More from Filmibeat

English summary
VJ Chiatra's friend said to media that a well known Telugu actor constantly threatened her that he will send Chiatra's private videos to her husband Hemanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X