ನರೇಶ್ – ಪವಿತ್ರಾ ಲೋಕೇಶ್ 'ಮತ್ತೆ ಮದುವೆ': ಕುಟುಂಬ ಸಮೇತ ಟೀಸರ್ ನೋಡಿ!
ಕಳೆದ ಕೆಲವು ತಿಂಗಳಿಂದ ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿ ವಿವಾದಕ್ಕೆ ಸಿಲುಕಿದೆ. ತೆಲುಗಿನ ಹಿರಿಯ ನಟ ನರೇಶ್ ನಾಲ್ಕನೇ ಬಾರಿ ಮದುವೆ ಸಿದ್ಧರಾಗಿದ್ದು, ಅದಕ್ಕೆ ಮೂರನೇ ಪತ್ನಿ ರಮ್ಯಾ ರಘುಪತಿ ಆಕ್ಷೇಪ ವ್ಯಕ್ತಪಡಿಸಿದ್ದರು.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧವನ್ನು ಬೀದಿಗೆ ರಮ್ಯಾ ರಘುಪತಿನೇ ಬೀದಿಗೆ ತಂದಿದ್ದರು. ಒಂದಿಷ್ಟು ದಿನದ ಹೈಡ್ರಾಮದ ಬಳಿಕ ನರೇಶ್ ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಆ ವಿಡಿಯೋದಲ್ಲಿ ಪವಿತ್ರಾ ಲೋಕೇಶ್‌ರನ್ನು ಚುಂಬಿಸುವ ದೃಶ್ಯವಿತ್ತು. ಆ ಬಳಿಕ ನರೇಶ್ ಹಾಗೂ ಪವಿತ್ರಾ ಇಬ್ಬರೂ ಮದುವೆ ಆಗುವ ವಿಡಿಯೋವನ್ನೂ ಹೊರಬಿಟ್ಟಿದ್ದರು. ಈ ಎರಡೂ ವಿಡಿಯೋಗಳು ವೈರಲ್ ಆಗಿದ್ದವು.

ಎರಡು ವಿಡಿಯೋ ವೈರಲ್ ಆಗುತ್ತಿದ್ದಂತೆ ಇದು ಹೊಸ ಸಿನಿಮಾದ ತುಣುಕುಗಳು ಅನ್ನೋದು ರಿವೀಲ್ ಆಗಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ನಟಿಸುತ್ತಿರುವ 'ಮಳ್ಳಿಪೆಳ್ಳಿ' ಚಿತ್ರದ ತುಣುಕುಗಳಿವು. ಈಗ ಇಬ್ಬರೂ ನಾಳೆ (ಏಪ್ರಿಲ್ 21) ತಮ್ಮ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.
ನರೇಶ್-ಪವಿತ್ರಾ 'ಮತ್ತೆ ಮದುವೆ'
ತೆಲುಗು ಚಿತ್ರರಂಗದ ಹಿರಿಯ ನಟ ನರೇಶ್ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗಿವೆ. ಈ ಬೆನ್ನಲ್ಲೇ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ 'ಮಳ್ಳಿ ಪೆಳ್ಳಿ'. ಈ ಸಿನಿಮಾದಲ್ಲೇ ನರೇಶ್ ಹೀರೊ. ಪವಿತ್ರಾ ಲೋಕೇಶ್ ಹೀರೊಯಿನ್.
'ಮಳ್ಳಿ ಪೆಳ್ಳಿ' ಸಿನಿಮಾವನ್ನು ಎಂ ಎಸ್ ರಾಜು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಮದುವೆ ಪ್ರಸಂಗವನ್ನು ತೆರೆಮೇಲೆ ತರಲಾಗುತ್ತಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ಟೀಸರ್ ಬಿಡುಗಡೆಗೆ ಸಕಾಲ!
ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ' ಅನ್ನೋ ಟೈಟಲ್ ಇಟ್ಟು ರಿಲೀಸ್ ಮಾಡುತ್ತಿದ್ದರೆ, ಕನ್ನಡದಲ್ಲಿ 'ಮತ್ತೆ ಮದುವೆ' ಟೈಟಲ್ ಮೂಲಕ ರಿಲೀಸ್ ಆಗುತ್ತಿದೆ. ಇದೇ ಸಿನಿಮಾದ ಟೀಸರ್ ಎರಡೂ ಭಾಷೆಯಲ್ಲೂ ನಾಳೆ( ಏಪ್ರಿಲ್ 21) ಬೆಳಗ್ಗೆ 11.11ಕ್ಕೆ ರಿಲೀಸ್ ಆಗುತ್ತಿದೆ.
'ಮಳ್ಳಿ ಪೆಳ್ಳಿ' ಸಿನಿಮಾ ಟೀಸರ್ ಏಪ್ರಿಲ್ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಟೀಸರ್ ರಿಲೀಸ್ ಆಗಿರಲಿಲ್ಲ. ನಾಳೆ(ಏಪ್ರಿಲ್ 21) ಈ ಸಿನಿಮಾದ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ರಿಲೀಸ್ ಮಾಡಿದೆ.
'ಮತ್ತೆ ಮದುವೆ' ಕೌಟುಂಬಿಕ ಸಿನಿಮಾ
'ಮತ್ತೆ ಮದುವೆ (ಮಳ್ಳಿ ಪೆಳ್ಳಿ) ಸಿನಿಮಾ ಕುಟುಂಬ ಸಮೇತ ನೋಡಬಹುದೇ? ಅನ್ನೋ ಗೊಂದಲಗಳಿಗೆ ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ. ಈಗಾಗಲೇ ಹೊರಬಿದ್ದಿರೋ ತುಣುಕುಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೈ ಕೆಮಿಸ್ಟ್ರಿ ಹೈಲೈಟ್ ಆಗಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಈ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ಜಯಸುಧಾ, ಶರತ್‌ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವನಿತಾ ವಿಜಯ್ ಕುಮಾರ್, ಅನನ್ಯ ನಾಗೆಲ್ಲ, ರೋಷನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮೂರಿ, ಮಧು ನಟಿಸಿದ್ದಾರೆ. ಸದ್ಯ ನಾಳೆ (ಏಪ್ರಿಲ್ 21) ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ರಿಲೀಸ್ ಆಗುತ್ತಿರುವ ಟೀಸರ್‌ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋ ಕುತೂಹಲವಿದೆ.


Click it and Unblock the Notifications











