ಸ್ಟಾರ್ ನಟ-ನಿರ್ದೇಶಕರಿಂದ 'ಕರ್ಣನ್' ತೆಲುಗಿಗೆ ರಿಮೇಕ್
ಟಾಲಿವುಡ್‌ನಲ್ಲಿ ಸೋಲು-ಗೆಲುವಿನ ಬಗ್ಗೆ ಹೆಚ್ಚು ಚಿಂತಿಸದೆ ಸತತವಾಗಿ ಸಿನಿಮಾಗಳನ್ನು ಮಾಡುತ್ತಿರುವ ನಟ ಬೆಲ್ಲಂಕೊಂಡ ಶ್ರೀನಿವಾಸ್. ತಾನು ಮಾಡುವ ಪ್ರತಿಯೊಂದು ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ತೆರೆಗೆ ತರುವ ಕಲಾವಿದ. ಸಿನಿಮಾ ರಿಲೀಸ್ ಆಗಿ ಫಲಿತಾಂಶ ಏನೇ ಆದರೂ ತನ್ನ ವೃತ್ತಿ ಜೀವನದ ಮೇಲೆ ಅದು ಕೆಟ್ಟ ಪರಿಣಾಮ ಬೀರದಂತೆ ಎಚ್ಚರ ವಹಿಸುವ ನಟ.
ತಮಿಳು ನಟ ಧನುಶ್ ಅಭಿನಯದಲ್ಲಿ ತೆರೆಕಂಡು ದೊಡ್ಡ ಯಶಸ್ಸು 'ಕರ್ಣನ್' ಸಿನಿಮಾ ಈಗ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ನಾಯಕನಾಗಿ ನಟಿಸಲಿದ್ದಾರೆ. ತಮಿಳಿನ 'ರಾಕ್ಷಸನ್' ಚಿತ್ರವನ್ನು ತೆಲುಗಿನಲ್ಲಿ 'ರಾಕ್ಷಸಡು' ಎಂದು ರಿಮೇಕ್ ಮಾಡಿ ಬೆಲ್ಲಂಕೊಂಡ ಶ್ರೀನಿವಾಸ್ ಗೆಲುವು ಕಂಡಿದ್ದರು. ಇದೀಗ, ಧನುಶ್ ನಟನೆಯ 'ಕರ್ಣನ್' ಚಿತ್ರದ ರಿಮೇಕ್ ಮಾಡಿ ಮತ್ತೊಂದು ಯಶಸ್ಸು ಪಡೆಯುವ ಹಾದಿಯಲ್ಲಿದ್ದಾರೆ. ಸ್ಟಾರ್ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಮುಂದೆ ಓದಿ..

ಶ್ರೀಕಾಂಡ್ ಅಡ್ಡಾಲ ಹೆಸರು ಚಾಲ್ತಿಯಲ್ಲಿತ್ತು
ಕರ್ಣನ್ ತೆಲುಗು ರಿಮೇಕ್ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎನ್ನುವುದು ಕುತೂಹಲ ಹೆಚ್ಚಿದೆ. ಹಲವು ದಿನಗಳಿಂದ ಶ್ರೀಕಾಂತ್ ಅಡ್ಡಾಲ ಹೆಸರು ಹರಿದಾಡುತ್ತಿದೆ. ಆದರೆ ಈ ಕುರಿತು ಯಾವ ಸ್ಪಷ್ಟನೆಯೂ ಸಿಕ್ಕಿಲ್ಲ. ಈ ನಡುವೆ ಮತ್ತೊಬ್ಬ ನಿರ್ದೇಶಕನ ಹೆಸರು ಚರ್ಚೆಗೆ ಬಂದಿದೆ.

ವಿವಿ ವಿನಾಯಕ್ ನಿರ್ದೇಶನದ ಜವಾಬ್ದಾರಿ?
ಬೆಲ್ಲಂಕೊಂಡ ಶ್ರೀನಿವಾಸ್ ಕುಟುಂಬಕ್ಕೆ ಆಪ್ತರಾಗಿರುವ ವಿವಿ ವಿನಾಯಕ್ 'ಕರ್ಣನ್' ರಿಮೇಕ್‌ಗೆ ಆಕ್ಷನ್ ಕಟ್ ಹೇಳುವ ಅವಕಾಶ ಪಡೆಯಬಹುದು ಎಂದು ವರದಿಯಾಗಿದೆ. 2018ರಲ್ಲಿ ಚಿರಂಜೀವಿ 'ಖೈದಿ 150' ನಂತರ ಸಾಯಿ ಧರಮ್ ತೇಜ ಜೊತೆ 'ಇಂಟಲಿಜೆಂಟ್' ಸಿನಿಮಾ ಮಾಡಿದ್ದ ವಿವಿ ವಿನಾಯಕ್ ಆ ಬಳಿಕ ಯಾವ ಪ್ರಾಜೆಕ್ಟ್ ಆರಂಭಿಸಿರಲಿಲ್ಲ.

ಛತ್ರಪತಿ ರಿಮೇಕ್?
ಅಂದ್ಹಾಗೆ, ವಿವಿ ವಿನಾಯಕ್ ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಸಿನಿಮಾವೊಂದು ಪ್ರಕಟಣೆಯಾಗಿದೆ. ತೆಲುಗು ಬ್ಲಾಕ್ ಬಸ್ಟರ್ ಹಿಟ್ 'ಛತ್ರಪತಿ' ಚಿತ್ರವನ್ನು ವಿವಿ ವಿನಾಯಕ್ ಹಿಂದಿಯಲ್ಲಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ನಾಯಕನಾಗಿ ಬಿಟೌನ್ ಪ್ರವೇಶಿಸುತ್ತಿದ್ದಾರೆ.
Recommended Video

ಛತ್ರಪತಿಗೂ ಮೊದಲು ಕರ್ಣನ್?
ಕೋವಿಡ್ ಪರಿಸ್ಥಿತಿಯಿಂದ ಛತ್ರಪತಿ ರಿಮೇಕ್ ಸದ್ಯಕ್ಕೆ ಈ ಸೆಟ್ಟೇರುವುದು ಕಷ್ಟ. ಹಾಗಾಗಿ, ಕರ್ಣನ್ ರಿಮೇಕ್ ಆರಂಭಿಸಲು ಮಾತುಕತೆ ಆಗಿದೆ ಎಂದು ತಿಳಿದು ಬಂದಿದೆ. ಕರ್ಣನ್ ರಿಮೇಕ್ ಮೂಲಕ ಮತ್ತೊಂದು ಯಶಸ್ಸಿನೊಂದಿಗೆ ಬಿಗ್ ಇಂಡಸ್ಟ್ರಿಗೆ ಎಂಟ್ರಿ ಕೊಡುವ ತಯಾರಿಯಲ್ಲಿ ಬೆಲ್ಲಂಕೊಂಡ ಇದ್ದಾರೆ.


Click it and Unblock the Notifications











