"ನೀವು ಗೆಲ್ಲಬೇಕು" ಎಂದ ಸಮಂತಾ; ಆರ್‌ಸಿಬಿಗೆ ಬೆಂಬಲವಾಗಿ ನಿಂತ್ರಾ?

ಆರ್‌ಸಿಬಿ ಮೊದಲ ಪ್ಲೇ ಆಫ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ(ಮೇ 19) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಗೆಲುವ ಸಾಧಿಸಿ ಪ್ಲೇ ಆಫ್ ಕನಸು ನನಸಾಗಿಸಿಕೊಂಡ ಆರ್‌ಸಿಬಿ ಇಂದು(ಮೇ 22) ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನಾಳೆ(ಮೇ 23) ಹೈದರಾಬಾದ್‌ ತಂಡವನ್ನು ಎದುರಿಸಬೇಕಿದೆ.

ಆರ್‌ಸಿಬಿ ಎರಡೂ ಪ್ಲೇ ಆಫ್ ಪಂದ್ಯಗಳನ್ನು ಗೆದ್ದು ಭಾನುವಾರ ಫೈನಲ್ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಗೆದ್ದು ಟ್ರೋಫಿ ಎತ್ತಿ ಹಿಡಿಯಬೇಕು ಎನ್ನುವುದು ಅಭಿಮಾನಿಗಳ ಮಹದಾಸೆ. ಅಸಂಖ್ಯಾತ ಅಭಿಮಾನಿಗಳು ಆರ್‌ಸಿಬಿ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ತೆಲುಗು ನಟಿ ಸಮಂತಾ ಕೂಡ ಫಾಫ್ ಡು ಪ್ಲೆಸಿಸ್ ತಂಡಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗ್ತಿದೆ. ಸ್ಯಾಮ್ ಹೊಸ ಇನ್‌ಸ್ಟಾ ಪೋಸ್ಟ್ ಇಂತಾದೊಂದು ಚರ್ಚೆ ಹುಟ್ಟಾಕ್ಕಿದೆ.

wanna see you win is Samantha supports RCB team

ಇದ್ದಕ್ಕಿದಂತೆ ನಟಿ ಸಮಂತಾ ಟ್ವೀಟ್ ಮಾಡಿ "ನೀವು(ನೀನು) ಗೆಲ್ಲುವುದನ್ನು ನಾನು ನೋಡಲು ಬಯಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ. "ನಿಮ್ಮ ಹೃದಯವು ಏನನ್ನು ಬಯಸುತ್ತದೆಯೋ,
ನೀವು ಯಾವುದೇ ಆಕಾಂಕ್ಷೆಗಳನ್ನು ಹೊಂದಿದ್ದರೂ, ನಾನು ನಿನಗಾಗಿ ಬೇರೂರುತ್ತಿದ್ದೇನೆ. ನೀನು ಈಗಾಗಲೇ ಗೆಲುವಿಗೆ ಅರ್ಹ" ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಸ್ಯಾಮ್ ಯಾವ ಗೆಲುವಿಗೆ ಹಾರೈಸಿದ್ದಾರೆ ಎನ್ನುವುದು ಮಾತ್ರ ಅರ್ಥವಾಗುತ್ತಿಲ್ಲ.

ಆರ್‌ಸಿಬಿ vs ಆರ್‌ಆರ್‌ ಪಂದ್ಯದ ಹಿನ್ನೆಲೆಯಲ್ಲಿ ಸಮಂತಾ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಆರ್‌ಸಿಬಿಗೆ ಬೆಂಬಲ ಸೂಚಿಸಿದ್ದಾರೆ ಎನ್ನುವುದು ಕೆಲವರ ವಾದ. ಕಾಮೆಂಟ್ ಬಾಕ್ಸ್‌ನಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಆದರೆ ಕೆಲವರು ಇದನ್ನು ಒಪ್ಪುತ್ತಿಲ್ಲ. ಒಂದು ವೇಳೆ ಆರ್‌ಸಿಬಿಗೆ ಬೆಂಬಲ ಸೂಚಿಸುವಂತಿದ್ದರೆ ನೇರವಾಗಿ ಪೋಸ್ಟ್ ಮಾಡುತ್ತಿದ್ದರು. ಈ ರೀತಿ ಗೂಡಾರ್ಥದಲ್ಲಿ ಬರೆಯುತ್ತಿರಲಿಲ್ಲ ಎಂದಿದ್ದಾರೆ.

ಐಪಿಎಲ್ ಟೂರ್ನಿ ಶುರುವಾಗಿ 17 ವರ್ಷ ಕಳೆದಿದೆ. ಆದರೆ ಆರ್‌ಸಿಬಿ ತಂಡ ಮಾತ್ರ ಈವರೆಗೆ ಗೆಲುವು ಸಾಧಿಸಿಲ್ಲ. ಫೈನಲ್‌ಗೆ ಹೋಗಿ ಕೂಡ ಸೋತಿರುವ ಉದಾಹರಣೆಯಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಪ್ರತಿವರ್ಷ 'ಈ ಸಲ ಕಪ್ ನಮ್ದೇ' ಎಂದು ಕಾಯುತ್ತಾ ಕೂತಿದ್ದಾರೆ. ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಆರ್‌ಸಿಬಿ ಹೊರ ಹೊಮ್ಮಿದೆ. ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿದ್ದ ತಂಡ ಅಚ್ಚರಿ ಎನ್ನುವಂತೆ ಫೀನಿಕ್ಸ್ ರೀತಿ ಎದ್ದು ಬಂದು ಪ್ಲೇ ಆಪ್‌ ಹಂತಕ್ಕೇರಿದೆ.

ಈ ಬಾರಿ ಆದರೂ ಆರ್‌ಸಿಬಿ ಟ್ರೋಫಿಗೆ ಮುತ್ತಿಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸಮಂತಾ ಕೂಡ ಆರ್‌ಸಿಬಿ ಅಭಿಮಾನಿ ಆಗಿಬಿಟ್ರಾ? ಎನ್ನುವ ಅನುಮಾನ ಶುರುವಾಗಿದೆ. ಸಮಂತಾ ಈ ಹಿಂದೆ ಆರ್‌ಸಿನಿ ತಂಡದ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗಾಗಿ ಆಕೆ ಆರ್‌ಸಿಬಿ ತಂಡಕ್ಕೆ ಬೆಂಬಲ ಸೂಚಿಸಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನುವ ಚರ್ಚೆ ಕೂಡ ನಡೀತಿದೆ.

ವಿರಾಟ್‌ ಕೊಹ್ಲಿ ಭರ್ಜಕರಿ ಕಂಬ್ಯಾಕ್ ಮಾಡಿದ್ದ ಬಗ್ಗೆ ಸ್ಯಾಮ್ ಮಾತನಾಡಿದ್ದರು. ಆತನ ಆಟ ನನಗೆ ಸ್ಫೂರ್ತಿ ಎಂದಿದ್ದರು. "ವಿರಾಟ್ ಕೊಹ್ಲಿ ಬಹಳ ಸ್ಫೂರ್ತಿದಾಯಕ ಆಟಗಾರ. ಆತನ ಶ್ರದ್ಧೇ, ಸಮರ್ಪಣ ಮನೋಭಾವ, ಬದ್ಧತೆ ನಿಜಕ್ಕೂ ಅದ್ಭುತ ಮತ್ತು ನೋಡಲು ಬಹಳ ಸ್ಫೂರ್ತಿದಾಯಕವಾಗಿರುತ್ತದೆ. ಅವರು ತಮ್ಮ ನಿಷ್ಠುರತೆ ಮತ್ತು ನಿರ್ಣಯದಿಂದ ಬಹಳಷ್ಟು ಜೀವನವನ್ನು ಬದಲಾಯಿಸಿದ್ದಾರೆ. ನಾನು ಕೊಹ್ಲಿ ಕಂಬ್ಯಾಕ್ ಮಾಡಿದಾಗ, ಶತಕ ಸಿಡಿಸಿದಾಗ ಬಹುತೇಕ ಅತ್ತುಬಿಟ್ಟಿದ್ದೆ. ಆತ ನಿಜಕ್ಕೂ ಸ್ಫೂರ್ತಿದಾಯಕ" ಎಂದು ಬರೆದಿದ್ದರು.

More from Filmibeat

English summary
I wanna see you win, Samantha's Cryptic Post Goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X