ಸಮಂತಾ ನಾಗಚೈತನ್ಯ ವಿಚ್ಛೇದನಕ್ಕೂ ಮುನ್ನ ನಡೆದಿದ್ದು ಏನು: ಷರತ್ತು ಹಾಕಿದ್ದ ನಾಗಚೈತನ್ಯ?
ನಟಿ ಸಮಂತಾ ಪುಷ್ಪ ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ ರಿಲೀಸ್ ಆದ ಬಳಿಕ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಗ್ಗೆ ಹೆಚ್ಚಿನ ಸುದ್ದಿಗಳು ಹುಟ್ಟಿಕೊಂಡಿವೆ. ಅವರ ವಿಚ್ಛೇದನಕ್ಕೆ ಕಾರಣ ಏನು? ಸಮಂತಾ ನಾಗಚೈತನ್ಯ ದೂರ ಆಗಿದ್ದು ಯಾಕೆ? ಎನ್ನುವ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದೆ.
ಸಮಂತಾ ನಿರ್ಧಾರಗಳು ಕುಟುಂಬದ ಗೌರವಕ್ಕೆ ಹಾನಿ ಉಂಟು ಮಾಡುತ್ತವೆ ಎನ್ನುವ ಕಾರಣಕ್ಕೆ ಇವರು ಬೇರೆ ಆಗಿದ್ದಾರೆ ಎನ್ನುವ ಸುದ್ದಿಗಳು ಬಂದಿವೆ. ಆದರೆ ಕುಟುಂಬದ ಅಭಿಪ್ರಾಯಕ್ಕಿಂತಲೂ ನಾಗಚೈತನ್ಯ ಮತ್ತು ಸಮಂತಾ ನಡುವೆ ನಡೆದಿದ್ದು ಏನು ಎನ್ನುವ ಬಗ್ಗೆ ಈಗ ವರದಿಗಳು ಬಿತ್ತರ ಆಗಿವೆ.
ಈಗ ಟಾಲಿವುಡ್ ಅಂಗಳದಲ್ಲಿ ಮತ್ತೊಂದು ಸುದ್ದಿ ಹಬ್ಬಿದೆ. ಇವರು ವಿಚ್ಛೇದನಕ್ಕೂ ಮೊದಲು ಆದ ಘಟನಾವಳಿಗಳ ಬಗ್ಗೆ ವರದಿ ಆಗಿದೆ. ಅಷ್ಟು ಸುಲಭವಾಗಿ ಈ ಜೋಡಿ ಬೇರೆ ಆಗಲು ಕಾರಣ ಏನು ಎನ್ನುವುದು ಈಗ ಬಹಿರಂಗ ಆಗಿದೆ.

ಸಮಂತಾಗೆ ಷರತ್ತು ಹಾಕಿದ್ದ ನಾಗಚೈತನ್ಯ?
ಮದುವೆಯ ಬಳಿಕ ಸಮಂತಾ 'ಸೂಪರ್ ಡೀಲಕ್ಸ್'ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು, ಬೋಲ್ಡ್ ದೃಶ್ಯಗಳಲ್ಲಿ ಬೋಲ್ಡ್ ಆಗಿಯೇ ಅಭಿನಯಿಸಿದ್ದರು ಸಮಂತಾ. ಆ ಮೂಲಕ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆದರೆ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ಸಮಂತಾಳನ್ನು ನೋಡಿದ ನಾಗಾರ್ಜುನ್ ಕುಟುಂಬಕ್ಕೆ ಅದನ್ನು ಸಹಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಇದು ಇಲ್ಲಿ ತನಕ ಕೇಳಿ ಬಂದಿರುವ ಸುದ್ದಿ. ಆದರೆ ಕುಟುಂಬವನ್ನು ಬಿಟ್ಟು ಸತಿ ಪತಿಯ ನಡುವೆ ಭಿನ್ನಾಭಿಪ್ರಾಯಕ್ಕೆ ದಾರಿ ಮಾಡಿ ಕೊಟ್ಟಿದ್ದು ಕೂಡ ಇದೇ 'ಫ್ಯಾಮಿಲಿ ಮ್ಯಾನ್' ಬೋಲ್ಡ್ ದೃಶ್ಯ. 'ಫ್ಯಾಮಿಲಿ ಮ್ಯಾನ್' ರಿಲೀಸ್ ಬಳಿಕ ಸಮಂತಾ ಈ ರೀತಿ ತೆರೆಯ ಮೇಲೆ ಹಾಟ್ ಆಗಿ ಕಾಣಿಸಿಕೊಳ್ಳಬಾರದು ಎಂದು ನಾಗಚೈತನ್ಯ ಷರತ್ತು ಹಾಕಿದ್ದರಂತೆ. ಅದರಿಂದಲೇ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು ಎನ್ನಲಾಗಿದೆ.

ಸಮಂತಾ ಬಳಿ ಮಾತನಾಡಿದ್ದ ನಾಗಾರ್ಜುನ್!
ಸಮಂತಾ ಚಿತ್ರಗಳಲ್ಲಿ ಅಭಿನಯಿಸುವ ವಿಚಾರದಲ್ಲಿ ಸತಿ-ಪತಿಯ ನಡುವೆ ಜಗಳ ಹುಟ್ಟಿ ಕೊಂಡಿದೆ. ಅದು ತಾರಕಕ್ಕೇರಿದಾಗ ಇಬ್ಬರೂ ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಇವರಿಬ್ಬರ ಈ ನಿರ್ಧಾರದ ಬಗ್ಗೆ ಕುಟುಂಬದಲ್ಲಿ ಸಾಕಷ್ಟು ಚರ್ಚೆ ಆಗಿದೆ. ನಂತರ ಇವರ ವಿಚ್ಛೇದನಕ್ಕೂ ಮುನ್ನ ಸಮಂತಾ ಬಳಿ ನಾಗಚೈತನ್ಯ ತಂದೆ ನಾಗಾರ್ಜುನ್ ಅವರು ಮಾತನಾಡಿದ್ದರಂತೆ. ಆದರೆ ಅದರಿಂದ ಪ್ರಯೋಜನ ಆಗಿಲ್ಲ ಕೊನೆಗೂ ಇಬ್ಬರೂ ದೂರಾಗಿದ್ದಾರೆ.

ಮಧ್ಯಸ್ಥಿಕೆ ವಹಿಸಿದರು ರಾಣಾ ದಗ್ಗುಬಾಟಿ ಕುಟುಂಬ!
ಈ ವಿಚಾರ ಅಧಿಕೃತ ಆಗುವ ಮೊದಲು ಚಿತ್ರರಂಗದ ಹಲವರಿಗೆ ಗೊತ್ತಿತ್ತು. ಹಾಗಾಗಿ ಇವರನ್ನು ದೂರ ಆಗಲು ಬಿಡಬಾರದೆಂದು ಹಲವರು ಪ್ರಯತ್ನ ಕೂಡ ಪಟ್ಟಿದ್ದಾರೆ. ನಟ ರಾಣಾ ದಗ್ಗುಬಾಟಿ ಕುಟುಂಬ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿತ್ತು. ಅವರ ನಿರ್ಧಾರಗಳನ್ನು ಬದಲಿಸಲು ಸಾಕಷ್ಟು ಪ್ರತ್ನಿಸಿದ್ದಾರಂತೆ ರಾಣಾ. ಆದರೂ ಇಬ್ಬರೂ ಮತ್ತೇ ಕೂಡಿ ಬಾಳುವುದನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ.

ಪುಷ್ಪ ರಿಲೀಸ್ ಬಳಿಕ ಸಮಂತಾ ಟ್ರೋಲ್!
ಇನ್ನು ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಾಗ ಅವರು ಅಷ್ಟಾಗಿ ಟ್ರೋಲ್‌ಗೆ ತುತ್ತಾಗಿರಲಿಲ್ಲ. ಬದಲಿಗೆ ಅವರ ಅಭಿಮಾನಿಗಳು ಹೀಗೆ ಆಗ ಬಾರದಿತ್ತು ಎಂದು ಮರುಗಿದ್ದರು. ಆದರೆ ಪುಷ್ಪ ಚಿತ್ರದಲ್ಲಿ ನಟಿ ಸಮಂತಾ ಐಟಂ ಹಾಡಿಗೆ ಡಾನ್ಸ್ ಮಾಡಿದ್ದು ಹಲವರ ಕಣ್ಣು ಚುಚ್ಚಿದೆ. ಹಾಗಾಗಿ ಚಿತ್ರ ರಿಲೀಸ್ ಬೆನ್ನಲ್ಲೇ ಸಮಂತಾಳನ್ನು ಟ್ರೋಲ್ ಮಾಡಲಾಗಿದೆ. ಹಾಗಂತ ಸಮಂತಾ ಎಲ್ಲವನ್ನೂ ನೋಡಿಕೊಂಡು ಸುಮ್ಮನೇ ಕೂತಿಲ್ಲ. ಕೆಟ್ಟ ಕಮೆಂಟ್ ಮಾಡಿದವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.


Click it and Unblock the Notifications











