ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಸಿನಿಮಾ ಏನಾಯ್ತು?

ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಜೊತೆಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತ ಘೋಷಣೆ ಮುಗಿದು, ನಟ-ನಟಿಯರ ಆಯ್ಕೆ ನಡೆಯುತ್ತಿದೆ.

'ಸಲಾರ್' ಎಂದು ಸಿನಿಮಾಕ್ಕೆ ಹೆಸರಿಡಲಾಗಿದ್ದು, ಪ್ರಶಾಂತ್ ನೀಲ್ ಪಾಲಿಗೆ ಇದು ಮೊದಲ ತೆಲುಗು ಸಿನಿಮಾ ಆಗಿರಲಿದೆ. ಪ್ರಭಾಸ್ ನಟಿಸುತ್ತಿರುವ ಈ ಸಿನಿಮಾ ಬಗ್ಗೆ ಭಾರಿ ದೊಡ್ಡ ನಿರೀಕ್ಷೆಯೇ ಹುಟ್ಟಿದೆ.

ಆದರೆ ಪ್ರಶಾಂತ್ ನೀಲ್ 'ಸಲಾರ್' ಗೂ ಮುನ್ನಾ ಜೂ.ಎನ್‌ಟಿಆರ್ ಗೆ ಕತೆ ಹೇಳಿದ್ದರು. ಮತ್ತು ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಹಠಾತ್ತನೆ ಜೂ.ಎನ್‌ಟಿಆರ್ ಚಿತ್ರದ ಬಗ್ಗೆ ಚರ್ಚೆಯೇ ನಿಂತುಹೋಗಿ ಎಲ್ಲರ ಗಮನ 'ಸಲಾರ್‌' ನತ್ತ ತಿರುಗಿತು.

ಪ್ರಭಾಸ್ ಕಾರಣಕ್ಕೆ ಜೂ.ಎನ್‌ಟಿಆರ್ ಜೊತೆ ಸಿನಿಮಾ ಇಲ್ಲ?

ಪ್ರಭಾಸ್ ಕಾರಣಕ್ಕೆ ಜೂ.ಎನ್‌ಟಿಆರ್ ಜೊತೆ ಸಿನಿಮಾ ಇಲ್ಲ?

ಕೆಲವು ವರದಿಗಳ ಪ್ರಕಾರ, ಜೂ.ಎನ್‌ಟಿಆರ್ ಕತೆಯನ್ನು ನಿರಾಕರಿಸಿದ ಕಾರಣಕ್ಕೆ ಅದೇ ಕತೆಯನ್ನು ತುಸು ಬದಲಾವಣೆಗಳೊಂದಿಗೆ ಪ್ರಭಾಸ್‌ ಗೆ ಹೇಳಲಾಗಿ ಈಗ ಅದೇ ಸಿನಿಮಾ 'ಸಲಾರ್' ಹೆಸರಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಇದು ಸತ್ಯವಲ್ಲ.

ಸಿನಿಮಾ ಮಾತುಕತೆ ನಿಂತಿಲ್ಲ

ಸಿನಿಮಾ ಮಾತುಕತೆ ನಿಂತಿಲ್ಲ

ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಇನ್ನು ನಿಂತಿಲ್ಲ, ಮಾತು-ಕತೆ ಇನ್ನೂ ಜಾರಿಯಲ್ಲಿಯೇ ಇದೆ. ಲಾಕ್‌ಡೌನ್ ಹಾಗೂ ಅದರ ನಂತರದ ಬೆಳವಣಿಗೆಗಳಿಂದಾಗಿ ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಇನ್ನೂ ಕೈಗೂಡಿಲ್ಲವಷ್ಟೆ.

ಲಾಕ್‌ಡೌನ್‌ನಿಂದಾಗಿ ಯೋಜನೆಗಳು ತಲೆಕೆಳಗು

ಲಾಕ್‌ಡೌನ್‌ನಿಂದಾಗಿ ಯೋಜನೆಗಳು ತಲೆಕೆಳಗು

ಲಾಕ್‌ಡೌನ್ ಬಳಿಕ ಜೂ.ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾದರು. ಅದಾದ ನಂತರ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿಸಲೇ ಬೇಕಾದ ಒತ್ತಡದಲ್ಲಿದ್ದಾರೆ. ಹಾಗಾಗಿ ಪ್ರಶಾಂತ್ ನೀಲ್ ಸಿನಿಮಾಕ್ಕೆ ಇನ್ನೂ ಅಧಿಕೃತ ಒಪ್ಪಿಗೆ ಕೊಡಲಾಗಿಲ್ಲ.

Recommended Video

Arjun Sarja ಎಂಗೇಜ್ಮೆಂಟ್ ನಲ್ಲಿ Chiru ಹೇಗಿದ್ರು ನೋಡಿ | Filmibeat Kannada
ಜೂ.ಎನ್‌ಟಿಆರ್ ಬಿಡುವು ಪಡೆದಿರುತ್ತಾರೆ

ಜೂ.ಎನ್‌ಟಿಆರ್ ಬಿಡುವು ಪಡೆದಿರುತ್ತಾರೆ

ಇದೀಗ ಪ್ರಶಾಂತ್ ನೀಲ್, ಪ್ರಭಾಸ್ ಜೊತೆಗೆ ಸಿನಿಮಾ ಮುಗಿಸಿದ ಬಳಿಕ ಜೂ.ಎನ್‌ಟಿಆರ್ ಜೊತೆಗೆ ಸಿನಿಮಾ ಪ್ರಾರಂಭಿಸುತ್ತಾರೆ ಎನ್ನಲಾಗಿದೆ. ಆ ವೇಳೆಗೆ ಜೂ.ಎನ್‌ಟಿಆರ್ ಸಹ ಆರ್‌ಆರ್‌ಆರ್ ಹಾಗೂ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿಸಿರುತ್ತಾರೆ ಎನ್ನಲಾಗಿದೆ.

More from Filmibeat

English summary
Prashanth Neel and Jr NTR supposed to a movie together. But that project shelved due to coronavirus lock down.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X