ರಾಜಮೌಳಿ ಪತ್ನಿ ರಮಾರನ್ನು ಪ್ರೀತಿಸುತ್ತಿದ್ದರೇ ಶ್ರೀನಿವಾಸ ರಾವ್? ಪ್ರೀತಿ ತ್ಯಾಗ ಮಾಡಿದ್ದು ನಿಜವೇ?

By ಫಿಲ್ಮಿಬೀಟ್ ಡೆಸ್ಕ್

ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಿರ್ದೇಶಕ ರಾಜಮೌಳಿ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ತಮ್ಮ ಸಿನಿಮಾಗಳಿಂದಲೇ ಸದ್ದು ಮಾಡುತ್ತಿದ್ದ ರಾಜಮೌಳಿ ಇಂದು (ಫೆಬ್ರವರಿ 27) ವಿವಾದಗಳಿಂದಲೇ ಸುದ್ದಿಯಲ್ಲಿ ಇದ್ದರು. ರಾಜಮೌಳಿ ವಿವಾದಗಳಿಂದ ದೂರವೇ ಉಳಿದಿರುತ್ತಾರೆ. ಸಿನಿಮಾ ಬಿಟ್ಟರೆ ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕುವುದಕ್ಕೂ ಹೋಗುವುದಿಲ್ಲ. ಇಂತಹ ಸಂದರ್ಭದಲ್ಲಿ ವಿವಾದವೊಂದು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ.

ರಾಜಮೌಳಿಯ ಸ್ನೇಹಿತ ಹಾಗೂ 'ಯಮದೊಂಗ' ಸಿನಿಮಾ ಕಾರ್ಯಕಾರಿ ನಿರ್ಮಾಪಕ ಉಪ್ಪಾಲಪಟಿ ಶ್ರೀನಿವಾಸ ರಾವ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಇದಕ್ಕೆ ರಾಜಮೌಳಿಯೇ ಕಾರಣ ಅಂತ ಹೇಳಿ ನಾಪತ್ತೆಯಾಗಿದ್ಧಾರೆ. ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆಂದು ಈ ವಿಡಿಯೋದಲ್ಲಿ ಆರೋಪಿಸಿದ್ದರು.

What is this SS Rajamouli wife Rama and Uppalapati Srinivasa Rao controversial triangular love story

ಶ್ರೀನಿವಾಸ ರಾವ್ ಮಾಡಿದ ಆರೋಪಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ತ್ರಿಕೋನ ಪ್ರೇಮಕಥೆ. ರಾಜಮೌಳಿ ಗೆಳೆಯ ತಮ್ಮದು ಟ್ರ್ಯಾಂಗುಲರ್ ಲವ್‌ಸ್ಟೋರಿ ಎಂದು ಹೇಳಿಕೊಂಡಿದ್ದಾರೆ. ಇದು ರಾಜಮೌಳಿ ಅಭಿಮಾನಿಗಳು ಸೇರಿದಂತೆ ಸಿನಿಮಾ ಮಂದಿಯಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಈ ಆರೋಪ ನಿಜವೇ? ರಾಜಮೌಳಿ, ಪತ್ನಿ ರಮಾ ಹಾಗೂ ಶ್ರೀನಿವಾಸ ರಾವ್ ಅವರ ತ್ರಿಕೋನ ಪ್ರೇಮಕಥೆಯ ಹಿನ್ನೆಲೆ ಏನು? ಈ ಘಟನೆ ಬಳಿಕ ಟಾಲಿವುಡ್‌ನಲ್ಲಿ ಓಡಾಡುತ್ತಿರುವ ಸುದ್ದಿ ಏನು ತಿಳಿಯಲು ಮುಂದೆ ಓದಿ.

'ಯಮದೊಂಗ' ಸಿನಿಮಾ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ ರಾವ್ ಮಾಡಿದ ಆರೋಪಗಳಿಗೆ ರಾಜಮೌಳಿ ಪ್ರತಿಕ್ರಿಯೆ ನೀಡಿಲ್ಲ. ಶ್ರೀನಿವಾಸ ರಾವ್ ಮಾಡಿದ ಆರೋಪಗಳೆಲ್ಲವೂ ನಿಜವೇ? ಇಲ್ಲಾ ಸುಳ್ಳಾ? ರಾಜಮೌಳಿಯ ಹೆಸರನ್ನು ಹಾಳು ಮಾಡುವುದಕ್ಕೆ ಈ ಪಿತೂರಿಯನ್ನು ಮಾಡಿದ್ದಾರಾ? ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಬಹುದು. ಆದರೆ, ಈ ತ್ರಿಕೋನ ಪ್ರೇಮಕಥೆ ಏನು? ಶ್ರೀನಿವಾಸ್ ರಾವ್ ವಿಡಿಯೋ ಹೊರ ಬಿದ್ದ ಬಳಿಕ ಟಾಲಿವುಡ್‌ನಲ್ಲಿ ಆಗುತ್ತಿರುವ ಚರ್ಚೆಯೇನು? ಅಂತ ನೋಡುವುದಾರೇ.

ಜಕ್ಕಣ್ಣ 'ಶಾಂತಿ ನಿವಾಸಂ' ಅನ್ನೋ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದರು. ಆ ವೇಳೆ ರಾಜಮೌಳಿಗೆ ರಮಾ ಪರಿಚಯವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ರಮಾ ಈ ಸೀರಿಯಲ್ ನಿರ್ದೇಶನದ ವೇಳೆ ಪರಿಚಯವಾಗಿದ್ದರು. ರಮಾ ಅವರು ಕಷ್ಟದಲ್ಲಿ ಇದ್ದಾಗ ರಾಜಮೌಳಿ ಅವರ ಬೆಂಬಲಕ್ಕೆ ನಿಂತಿದ್ದರು. ಅವರ ಪ್ರತಿಯೊಂದು ಕಷ್ಟಕ್ಕೂ ಸಾಥ್ ನೀಡಿದ್ದರು. ಆಗಲೇ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ರಮಾ ಅವರಿಗೂ ರಾಜಮೌಳಿ ಇಷ್ಟ ಆಗಿದ್ದರೂ ಹಿಂದಿನ ಕಹಿ ಘಟನೆಯಿಂದ ಹಿಂದೇಟು ಹಾಕಿದ್ದರು. ಬಳಿಕ ಒಪ್ಪಿ ಮದುವೆ ಆಗಿದ್ದರು. ಇದು ಎಲ್ಲರಿಗೂ ಗೊತ್ತಿರುವ ವರ್ಷನ್.

What is this SS Rajamouli wife Rama and Uppalapati Srinivasa Rao controversial triangular love story

ಆದ್ರೀಗ ರಾಜಮೌಳಿ ಹಾಗೂ ರಮಾ ಮಧ್ಯೆ ಶ್ರೀನಿವಾಸ ರಾವ್ ಎಂಟ್ರಿಯಾಗಿದೆ. ಇವರೇ ವಿಡಿಯೋದಲ್ಲಿ ಹೇಳಿಕೊಂಡಂತೆ " ನಮ್ಮಿಬ್ಬರ ಮಧ್ಯೆ ಒಬ್ಬ ಮಹಿಳೆ ಬರಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ನಮ್ಮದೊಂದು ತರ ತ್ರಿಕೋನ ಪ್ರೇಮಕಥೆ" ಎಂದು ಹೇಳಿಕೊಂಡಿದ್ದಾರೆ. ಹಾಗೇ ರಾಜಮೌಳಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವಂತೆ ಹೇಳಿಕೊಂಡಿದ್ದಾರೆ ಎಂದಿದ್ದಾರೆ.

"ರಾಜಮೌಳಿ ನನ್ನ ಪ್ರೀತಿಯನ್ನು ತ್ಯಾಗ ಮಾಡುವಂತೆ ಕೇಳಿಕೊಂಡರು. ಮೊದಲು ನಾನು ಇದನ್ನು ಒಪ್ಪಿರಲಿಲ್ಲ. ನಂತರದ ದಿನಗಳಲ್ಲಿ ಒಪ್ಪಿಕೊಂಡೆ. ನಾನು ಇದನ್ನು ಜನರು ಹೇಳುತ್ತೇನೆ ಎಂದು ಅವನು ನಂಬಿದ್ದ. ನಾವು ಒಪ್ಪಂದ ಮಾಡಿಕೊಂಡ ಬಳಿಕ ನನಗೆ ಈ ವಿಚಾರಕ್ಕೆ ಚಿತ್ರಹಿಂಸೆ ನೀಡುವುದಕ್ಕೆ ಶುರು ಮಾಡಿದ್ದ. ನನಗೀಗ 55 ವರ್ಷ. ಒಂಟಿಯಾಗಿ ಬದುಕುತ್ತಿದ್ದೇನೆ" ಎಂದು ಶ್ರೀನಿವಾಸ್ ರಾವ್ ತನ್ನ ಲವ್ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ.

ಹಾಗಿದ್ದರೆ, ನಿಜಕ್ಕೂ ರಾಜಮೌಳಿ, ರಮಾ ರಾಜಮೌಳಿ ಹಾಗೂ ಶ್ರೀನಿವಾಸ್ ರಾವ್ ಮೂವರದ್ದೂ ತ್ರಿಕೋನ ಪ್ರೇಮಕಥೆನಾ? ರಾಜಮೌಳಿ ಪತ್ನಿಯನ್ನು ಶ್ರೀನಿವಾಸ್ ರಾವ್ ಪ್ರೀತಿಸಿದ್ದು ನಿಜವೇ? ಆ ಪ್ರೀತಿಯನ್ನು ತ್ಯಾಗ ಮಾಡಿದ್ದು ನಿಜವೇ? ಇದೆಲ್ಲ ರಮಾ ರಾಜಮೌಳಿಗೆ ಗೊತ್ತಿತ್ತೇ? ಇದೆಲ್ಲದಕ್ಕೂ ಉತ್ತರ ಬೇಕು ಅಂದರೆ, ರಾಜಮೌಳಿ, ರಮಾ ಹಾಗೂ ಶ್ರೀನಿವಾಸ ರಾವ್ ಒಟ್ಟಿಗೆ ಬಂದಿ ಕ್ಲಾರಿಟಿ ಕೊಡಬೇಕು.

More from Filmibeat

English summary
What is this SS Rajamouli wife Rama and Uppalapati Srinivasa Rao controversial triangular love story?
Read more about: rajamouli love story tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X