'ಕೆಜಿಎಫ್‌ 2' ನಿಂದ 'ಪುಷ್ಪ 2' ಕಥೆ ಬದಲಾಗುತ್ತಾ? ಏನಂತಾರೆ ನಿರ್ಮಾಪಕರು?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ 'ಪುಷ್ಪ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹಾಡು, ಡೈಲಾಗ್‌ ಮೂಲಕ ಭಾರೀ ಟ್ರೆಂಡ್‌ ಸೃಷ್ಟಿ ಮಾಡಿತ್ತು. ಸದ್ಯ ಈಗ 'ಪುಷ್ಪ 2' ಚಿತ್ರ ಹೇಗಿರಬಹುದು? ಎಂಬ ನಿರೀಕ್ಷೆ ಸಿನಿ ಪ್ರೇಕ್ಷಕರಲ್ಲಿದೆ. ಅದರಂತೆ 'ಪುಷ್ಪ 2' ಚಿತ್ರದ ನಿರ್ದೇಶಕ ಸುಕುಮಾರ್‌ ಇತ್ತೀಚಿಗೆ ರಿಲೀಸ್‌ ಆದ 'ಕೆಜಿಎಫ್‌ 2' ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ಸೀಕ್ವೆಲ್‌ ತೆಗೆಯಲು ಸ್ಕ್ರಿಪ್ಟ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಸಂದರ್ಶನವೊಂದರಲ್ಲಿ 'ಪುಷ್ಪ' ನಿರ್ಮಾಪಕ ವೈ ರವಿ ಶಂಕರ್‌ ಈ ವಿಚಾರದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ವೈ ರವಿಶಂಕರ್ 'ಕೆಜಿಎಫ್‌ 2' ಸಿನಿಮಾ 'ಪುಷ್ಪ 2' ಚಿತ್ರದ ಮೇಲೆ ಪರಿಣಾಮ ಬೀರಲು ಏನು ಮಾಡಿದೆ ? 'ಪುಷ್ಪ 2' ಕಥೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ನಮ್ಮ ಕೈಯಲ್ಲಿ ಈಗಾಗಲೇ ಹೈ ವೋಲ್ಟೇಜ್ ಸ್ಕ್ರಿಪ್ಡ್ ಇದೆ. ಹೀಗಿರಬೇಕಾದರೆ ನಾವೇ ಸ್ಕ್ರಿಪ್ಟ್ ಅನ್ನು ಏಕೆ ಬದಲಾಯಿಸಬೇಕು? ಸುಕುಮಾರ್‌ ಮೊದಲಿನಿಂದ ಮಾಡಿದ ಹೈ ವೋಲ್ಟೇಜ್ ಸ್ಕ್ರಿಪ್ಟ್‌ ಅನ್ನೇ 'ಪುಷ್ಪ' ಭಾಗ 2ನಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಒಂದೂವರೆ ತಿಂಗಳಿನಿಂದ ಶೂಟಿಂಗ್ ಮಾಡಲು ಬೇರೆ ಬೇರೆ ಹೊಸ ಸ್ಥಳಗಳ ಹುಡುಕಾಟ ನಡೆಸಲಾಗುತ್ತಿದೆ. ಸದ್ಯಕ್ಕೆ ಮೊದಲ ಭಾಗಕ್ಕೆ ಚಿತ್ರೀಕರಣ ಮಾಡಿದ ಕಾಡಿನಲ್ಲೇ 'ಪುಷ್ಪ 2' ಚಿತ್ರದ ಚಿತ್ರೀಕರಣ ಮಾಡುತ್ತಿದ್ದೇವೆ ಎಂದು ಚಿತ್ರ ನಿರ್ಮಾಪಕ ವೈ ರವಿಶಂಕರ್ ಹೇಳಿದ್ದಾರೆ.

'ಪುಷ್ಪ 1'ಕ್ಕಿಂತ 'ಪುಷ್ಪ 2'ನಲ್ಲಿರುತ್ತೆ ಅದ್ಭುತ ಆಕ್ಷನ್

ಪುಷ್ಪ ಭಾಗ ಒಂದಕ್ಕಿಂತ 'ಪುಷ್ಪ 2' ಚಿತ್ರದಲ್ಲಿ ವಿಭಿನ್ನ ರೀತಿಯ ಆಕ್ಷನ್ ಸೀಕ್ಷೆನ್ಸ್‌ ಇರಲಿವೆ. 'ಪುಷ್ಪ 2' ರಲ್ಲಿ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ 1' ರಲ್ಲಿ ಪ್ರೇಕ್ಷಕರು ನೋಡಿದ ದೃಶ್ಯಗಳಿಗಿಂತ 'ಪುಷ್ಪ 2' ನಲ್ಲಿ ಅದ್ಭುತ ದೃಶ್ಯಗಳಿವೆ ಎಂದು ಹೇಳಲಾಗುತ್ತಿದೆ. 'ಪುಷ್ಪ' ಚಿತ್ರದ 2ನೇ ಭಾಗವು ಜುಲೈ ವೇಳೆಗೆ ರಿಲೀಸ್‌ ಆಗುವ ನಿರೀಕ್ಷೆಯಿದೆ.

Whats In KGF 2 To Affect Pushpa Part 2 Says Allu Arjun Producer Y Ravi Shankar

ಈ ಹಿಂದೆ ಪಿಂಕ್‌ವಿಲ್ಲಾ ವೆಬ್‌ ತಾಣದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಅಲ್ಲು ಅರ್ಜುನ್ 'ಪುಷ್ಪ 2'ಗಾಗಿ ಕಾತುರದಿಂದ ಕಾಯುತ್ತಿದ್ದೇನೆ. 'ಪುಷ್ಪ 2' ಚಿತ್ರೀಕರಣದಲ್ಲಿ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಏಕೆಂದರೆ ನಾವು 'ಪುಷ್ಪ 2' ರಲ್ಲಿ ಜನರ ನಿರೀಕ್ಷೆಗೂ ಮೀರಿ ಹೆಚ್ಚಿನ ಮನರಂಜನೆ ನೀಡುತ್ತೇವೆ. ಅದರ ಮೇಲೆ ನನಗೆ ನಂಬಿಕೆ ಇದೆ.

'ಪುಷ್ಪ 1' ಅನ್ನೂ ಮೀರಿಸುತ್ತೆ 'ಪುಷ್ಪ 2'

ಈಗ ಭಾಗ 1 ಅನ್ನು ಆಧರಿಸಿ ಭಾಗ 2 ಅನ್ನು ಬಹಳ ಅದ್ಬುತವಾಗಿ ತೆರೆಯ ಮೇಲೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಕೈಲಾದಷ್ಟು ಶ್ರಮ ಹಾಕಿ ಸಿನಿಮಾವನ್ನು ಅದ್ಬುತ ಹಾಗೂ ಮನರಂಜನಾತ್ಮಕವಾಗಿ ಸಿನಿಪ್ರಿಯರಿಗೆ ನೀಡಲಿದ್ದೇವೆ ಎಂದು ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.

Whats In KGF 2 To Affect Pushpa Part 2 Says Allu Arjun Producer Y Ravi Shankar

ಸದ್ಯ ಪುಷ್ಪ ಭಾಗ 1 ರಲ್ಲಿ ಹಾಡು, ಡೈಲಾಗ್‌ ಮೂಲಕವೇ ದೇಶಾದ್ಯಂತ ವೈರಲ್ ಆಗಿತ್ತು. ಈಗ 'ಪುಷ್ಪ 2' ಕೂಡ 'ಪುಷ್ಪ 1' ಒಂದನ್ನು ಮೀರಿಸುವ ರೀತಿಯಲ್ಲಿ ಸಿನಿಮಾವನ್ನು ತಯಾರು ಮಾಡಲಾಗ್ತಿದೆ. ಒಟ್ಟಿನಲ್ಲಿ 'ಕೆಜಿಎಫ್‌ 2' ಎಲ್ಲಾ ಸಿನಿಮಾಗಳ ದಾಖಲೆ ಮುರಿದು ಮುನ್ನುಗುತ್ತಿದೆ. ಹೀಗಾಗಿ 'ಪುಷ್ಪ ಭಾಗ 2' ಚಿತ್ರದ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದು, ಜನರ ನಿರೀಕ್ಷೆಗೂ ಮೀರಿ ಸಿನಿಮಾ ತಯಾರಿಸುವ ಜವಾಬ್ದಾರಿ ಇಡೀ ಚಿತ್ರತಂಡದ ಮೇಲೆ ಬಿದ್ದಿದೆ.

More from Filmibeat

English summary
Pushpa movie Producer Y ravi shankar reaction to Director Sukumar changing pushpa 2 movie script post KGF 2 success. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X