ಮಹೇಶ್ ಬಾಬು 28 ಕೋಟಿ ದುಬಾರಿ ಬಂಗಲೆ ಹೇಗಿದೆ ಗೊತ್ತಾ?

ಸೌತ್‌ ಸಿನಿಮಾರಂಗದ ನಟರಲ್ಲಿ ಸ್ಟಾರ್‌ ನಟರು ಸಹಜವಾಗಿ ಐಷಾರಾಮಿ ಜೀವನವನ್ನು ನಡೆಸುತ್ತಿರುತ್ತಾರೆ. ಹಾಗಾಗಿ ಅವರ ಮನೆ ಮತ್ತು ಜೀವನ ಶೈಲಿ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲ ಇರುತ್ತದೆ. ಅಂತೆಯೇ ಸಿನಿಮಾ ಮಂದಿಯ ಐಷಾರಾಮಿ ಜೀವನ ಹೇಗಿದೆ ಎಂದು ತಿಳಿಯಲು ಕುತೂಹಲಗಳು ಇರುತ್ತವೆ. ನಟ ಮಹೇಶ್ ಬಾಬು ದುಬಾರಿ ಬಂಗಲೆ ಹೇಗಿದೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ತೆಲುಗು ನಟ ಮಹೇಶ್‌ ಬಾಬು ಅವರ ಐಶಾರಾಮಿ ಮನೆಯನ್ನು ನೋಡಿದ್ರೆ ಸುಸ್ತಾಗಿ ಬಿಡ್ತೀರ. ಅಷ್ಟೊಂದು ಅಚ್ಚುಕಟ್ಟಾಗಿ ದುಬಾರಿ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಿನ್ಸ್ ಎನ್ನುವ ಟೈಟಲ್‌ಗೆ ತಕ್ಕ ಹಾಗೆ ಪ್ರಿನ್ಸ್‌ ಅಂತೆಯೇ ಅವರ ಜೀವನ ಶೈಲಿ ಕೂಡ ಇದೆ. ಮಹೇಶ್‌ ಬಾಬು ಅವರ 28 ಕೋಟಿ ಬೆಲೆಯ ದುಬಾರಿ ಮನೆ ಎನ್ನುವುದು ಈಗ ರಿವೀಲ್ ಆಗಿದೆ.

ಹೈದ್ರಾಬಾದ್‌ನ ಜ್ಯುಬಿಲಿ ಹಿಲ್ಸ್‌ನಲ್ಲಿ ಮಹೇಶ್ ಬಾಬು ಮನೆ ಇದೆ. ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ನಟ ಮಹೇಶ್ ಬಾಬು ವಾಸ ಇದ್ದಾರೆ. ಮಹೇಶ್‌ ಬಾಬು ಪತ್ನಿ ಮತ್ತು ಮಕ್ಕಳೂ ಆಗಾಗ ಮನೆಯ ವಿಡಿಯೋಗಳನ್ನು, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಮಹೇಶ್ ಬಾಬು ಮನೆಯಲ್ಲಿ ವಿಶೇಷವಾದ ದೇವರ ಕೋಣೆ!

ನಟ ಮಹೇಶ್‌ ಮನೆಯಲ್ಲಿ ವಿಶೇಷವಾದ ಪೂಜಾ ಕೊಠಡಿ ಇದೆ. ದೇವರ ಕೋಣೆ ದೊಡ್ಡದಾಗಿ ವಿಶಾಲವಾಗಿದೆ. ದೇವರ ಕೋಣೆಯ ಫೋಟೊಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮಹೇಶ್ ಬಾಬು ಪತ್ನಿ ನಮ್ರತಾ ಅವರಿಗೆ ವಿಶಾಲವಾದ ಜಾಗ ಹೊಂದಲು ಇಷ್ಟ ಅಂತೆ. ಹಾಗಾಗಿ ದೇವರ ಕೋಣೆಯನ್ನು ಕೂಡ ವಿಶಾಲವಾಗಿ ನಿರ್ಮಿಸಲಾಗಿದೆ.

ಮಕ್ಕಳಿಗಾಗಿ ಪ್ರತ್ಯೇಕ ಕಿಡ್ಸ್ ರೂಮ್: ಸ್ಪೆಷಲ್ ಫೋಟೊ ವಾಲ್!

ಮಹೇಶ್ ಬಾಬು ಮತ್ತು ನಮ್ರತಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗೌತಮ್ ಮತ್ತು ಸಿತಾರ. ಇಬ್ಬರು ಮಕ್ಕಳಿಗೂ ಪ್ರತ್ಯೇಕ ಕೋಣೆಗಳು ಇವೆ. ಮಕ್ಕಳ ರೂಮ್‌ಗಳನ್ನು ವಿಶೇಷವಾಗಿ ಡಿಸೈನ್‌ ಮಾಡಲಾಗಿದೆ. ಅವರ ನೆಚ್ಚಿನ ಕಾರ್ಟೂನ್‌ ಇರುವ ಪೇಂಟಿಂಗ್‌ನಿಂದ ವಿನ್ಯಾಸ ಮಾಡಲಾಗಿದೆ. ಇನ್ನು ಸೆಲೆಬ್ರೆಟಿ ಮನೆಗಳಲ್ಲಿ ಸಹಜವಾಗಿ ಫೋಟೊ ವಾಲ್‌ ಇದ್ದೆ ಇರುತ್ತದೆ. ತಮ್ಮ ನೆನಪುಗಳನ್ನು ಫೋಟೋಗಳಲ್ಲಿ ಸೆರೆ ಹಿಡಿದು ವಾಲ್‌ಗೆ ಹಾಕಿಸುತ್ತಾರೆ. ಇಂತಹ ಫೋಟೊವಾಲ್ ಮಹೇಶ್ ಬಾಬು ಮನೆಯಲ್ಲಿ ದೊಡ್ಡದಾಗಿ ಇದೆ.

ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್ ಕೂಡ ಇದೆ!

ಸಿನಿಮಾ ತಾರೆಯರು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಜಿಮ್‌ ಮಾಡುತ್ತಾರೆ. ಹಾಗಾಗಿ ಮಹೇಶ್ ಬಾಬು ಮನೆಯಲ್ಲಿ, ಜಿಮ್‌ ಇದೆ. ಮನೆಯಲ್ಲೇ ಮಹೇಶ್ ಬಾಬು ಮತ್ತು ಪತ್ನಿ ಇಬ್ಬರೂ ಕೂಡ ಜಿಮ್ ಮಾಡುತ್ತಾರೆ. ಜೊತೆಗೆ ಸಮಯ ಸಿಕ್ಕಾಗ ಸ್ವಿಮ್ಮಿಂಗ್ ಪೂಲ್‌ನಲ್ಲಿ ಕುಟುಂಬದೊಂದಿಗೆ ಮಹೇಶ್‌ ಬಾಬು ಕಾಲ ಕಳೆಯುತ್ತರೆ. ಮಕ್ಕಳಿಗೆ ಸ್ವಿಮ್ಮಿಂಗ್ ಪೂಲ್ ಅಂದರೆ ಹೆಚ್ಚು ಇಷ್ಟ ಅಂತೆ.

ಹಸಿರು ಗಾರ್ಡನ್‌ನಿಂದ ಕೂಡಿದೆ ಮಹೇಶ್ ಬಾಬು ಮನೆ!

ಮಹೇಶ್‌ ಬಾಬು ಅವರ ಮನೆಯಲ್ಲಿ ದೊಡ್ಡದಾದ ಗಾರ್ಡನ್ ಇದೆ. ಮನೆಯ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ದೊಡ್ಡ ವಿಸ್ತೀರ್ಣದ ಗಾರ್ಡನ್ ಇದೆ. ಮನೆಯ ಸುತ್ತಲೂ ಹಸಿರು ಹಾಸಿದೆ. ಹಲವು ವಿಡಿಯೋಗಳಲ್ಲಿ ಇದನ್ನು ಕೂಡ ನೋಡಬಹುದು. ಇನ್ನು ನಮ್ರತಾ ಅವರಿಗೆ ವುಡ್‌ಫಿನಿಶಿಂಗ್ ಅಂದ್ರೆ ಇಷ್ಟವಂತೆ. ಹಾಗಾಗಿ ಮನೆಯ ಬಹುತೇಕ ಭಾಗಕ್ಕೆ ವುಡನ್ ಫಿನಿಶಿಂಗ್ ನೀಡಲಾಗಿದೆ.

More from Filmibeat

English summary
Here Is Story About Mahesh Babu 28 Crore Worth House And His Life Style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X