ಕಾಜಲ್ ಅಗರ್‌ವಾಲ್ ಸೊಂಟಕ್ಕೆ ಕೈ ಹಾಕಿದ ಅಭಿಮಾನಿ, ವಿಡಿಯೋ ವೈರಲ್
ಅಭಿಮಾನಿಗಳ ಅಭಿಮಾನಿಗಳ ಕೆಲವೊಮ್ಮೆ ಅತಿರೇಕಕ್ಕೆ ಹೋಗಿಬಿಡುತ್ತದೆ. ಇದರಿಂದ ಸೆಲೆಬ್ರೆಟಿಗಳಿಗೂ ಕಸಿವಿಸಿ ಆಗಿಬಿಡುತ್ತದೆ. ನಟಿಯರಿಗೆ ಹೆಚ್ಚು ಇಂತಹ ಕಹಿ ಅನುಭವ ಆಗುತ್ತದೆ. ಸಾಮಾನ್ಯವಾಗಿ ನಟ, ನಟಿಯರನ್ನು ಕಂಡಾಗ ಅಭಿಮಾನಿಗಳು ನೋಡಲು, ಕೈಕುಲುಕಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ.
ಕೆಲವೊಮ್ಮೆ ಅಭಿಮಾನಿಗಳ ದುರ್ವರ್ತನೆ ಬೇಸರ ತರಿಸುತ್ತಿದೆ. ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ಗೆ ಇತ್ತೀಚೆಗೆ ಇಂತದ್ದೆ ಕಹಿ ಅನುಭವ ಆಗಿದೆ. ಸದ್ಯ ಆ ವೀಡಿಯೋ ವೈರಲ್ ಆಗುತ್ತಿದ್ದು ಅಭಿಮಾನಿಗಳ ಅಸಭ್ಯ ವರ್ತನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತೆಲುಗು ಸಿನಿಮಾಗಳ ಮೂಲಕ ನಾಯಕಿಯಾಗಿ ಪರಿಚಿತರಾದ ಮುಂಬೈ ಚೆಲುವೆ ಕಾಜಲ್ ಅಗರ್‌ವಾಲ್ ಬಳಿಕ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿ ಪ್ರೇಕ್ಷಕರ ಮನಗೆದ್ದರು.
ತೆಲುಗಿನ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು, ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಹಾಗೂ ತಮಿಳಿನಲ್ಲಿ ದಳಪತಿ ವಿಜಯ್, ಸೂರ್ಯ, ಧನುಷ್, ಅಜಿತ್ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ತೆರೆ ಹಂಚಿಕೊಂಡು ಕಾಜಲ್ ಅಗರ್‌ವಾಲ್ ಮೋಡಿ ಮಾಡಿದ್ದರು. ಬಾಲಿವುಡ್ ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಕಾಜಲ್ ಮಿಂಚಿದರು. 4 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಕಿಚ್ಲು ಜೊತೆ ಹಸೆಮಣೆ ಏರಿದ ಚೆಲುವೆ ಒಂದು ಮಗುವಿನ ತಾಯಿಯಾದ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯ ಕಮಲ್ ಹಾಸನ್ ಜೊತೆ 'ಇಂಡಿಯನ್-2' ಚಿತ್ರದಲ್ಲಿ ಕಾಜಲ್ ನಟಿಸುತ್ತಿದ್ದಾರೆ. 'ಉಮಾ', 'ಸತ್ಯಭಾಮ' ಎನ್ನುವ ಎರಡು ಮಹಿಳಾ ಪ್ರಧಾನ ಸಿನಿಮಾಗಳು ಆಕೆಯ ಕೈಯಲ್ಲಿವೆ. ಇನ್ನು ಮಳಿಗೆಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ಒಂದು ಶಾಪಿಂಗ್ ಮಾಲ್ ಉದ್ಘಾಟನೆಗೆ ಕಾಜಲ್ ಅಗರ್‌ವಾಲ್ ಮುಖ್ಯ ಅತಿಥಿಯಾಗಿ ಹೋಗಿದ್ದರು.
ಮಾಲ್ ಒಳಗೆ ಎಲ್ಲಾ ಕೌಂಟರ್‌ಗಳಲ್ಲಿ ಜನ ಕಿಕ್ಕಿರುದು ತುಂಬಿದ್ದರು. ಕಾಜಲ್ ತಮ್ಮ ಅಭಿಮಾನಿಗಳ ಜೊತೆ ಹರಟೆ ಹೊಡೆಯುತ್ತಾ ಮಾಲ್ ಒಳಗೆ ಓಡಾಡುಡುತ್ತಿದ್ದರು. ಕೇಳಿದವರಿಗೆ ಆಟೋಗ್ರಾಫ್ ಕೊಟ್ಟು, ಕೆಲ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಡಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಅತಿಯಾಗಿ ಆಡಿದ್ದಾನೆ. ಸೆಲ್ಫಿ ಕೇಳಿ ಆಕೆಯ ಸೊಂಟ ಬಳಸಿ ಪೋಸ್ ನೀಡಲು ಹೋಗಿದ್ದಾನೆ. ಏನಿದು ಎಂದು ಕಾಜಲ್ ಶಾಕ್ ಆಗಿದ್ದಾರೆ. ಕೂಡಲೇ ಬೌನ್ಸರ್ಸ್ ಆತನನ್ನು ದೂರ ಪಕ್ಕಕ್ಕೆ ಸರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಕಾಜಲ್ ಜೊತೆ ಅಸಭ್ಯವಾಗಿ ವರ್ತಿಸಿದ ಆತನ ನಡೆಗೆ ನೆಟ್ಟಿಗೆರು ಬೇಸರ ವಕ್ತಪಡಿಸುತ್ತಿದ್ದಾರೆ. ಆಕೆ ಆಗಿದ್ದಕ್ಕೆ ಸುಮ್ಮನಿದ್ದರು. ಬೇರೆ ಯಾರಾದರೂ ಆಗಿದ್ದರೆ ತಕ್ಕಶಾಸ್ತಿ ಮಾಡುತ್ತಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಕಾಜಲ್ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಅಭಿಮಾನಿಗಳ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಕಾಜಲ್, "ಫ್ಯಾನ್ಸ್ ಎಲ್ಲಿರಗೂ ಐ ಲವ್ ಯು. ನನಗೆ ಅಭಿಮಾನಿಗಳು ಎಂದರೆ ನನ್ನ ಕುಟುಂಬವಿದ್ದಂತೆ. ನೀವು ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೀರಿ" ಎಂದು ಹೇಳಿದ್ದಾರೆ.
'ಕ್ಯೂ ಹೋ ಗಯಾ ನಾ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಜಲ್ ಅಗರ್‌ವಾಲ್ ನಟಿಸಿದ್ದರು. ಬಳಿಕ ತೆಲುಗಿನ 'ಲಕ್ಷ್ಮಿ ಕಲ್ಯಾಣಂ' ಚಿತ್ರದಲ್ಲಿ ನಾಯಕಿ ಅವಕಾಶ ಸಿಕ್ಕಿತ್ತು. ರಾಜಮೌಳಿ ನಿರ್ದೇಶದನ 'ಮಗಧೀರ' ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಮೋಡಿ ಮಾಡಿದ್ದರು. ಬಳಿಕ ಸಾಲು ಸಾಲು ಅವಕಾಶಗಳು ಅರಸಿ ಬಂದವು.


Click it and Unblock the Notifications











