twitter
    For Quick Alerts
    ALLOW NOTIFICATIONS  
    For Daily Alerts

    5 ನಿಮಿಷದ ಸುಖಕ್ಕೆ ನಟಿಯ ಮೇಲೆ 20 ಕೋಟಿ ಸುರಿತ್ತಾರಾ ? ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಪ್ರಗತಿ ಓಪನ್ ಟಾಕ್

    |

    ತೆಲುಗು ಪೋಷಕ ನಟಿ ಪ್ರಗತಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿದ್ದಾರೆ. ಬಿಂದಾಸ್ ಫೋಟೊಗಳು, ವರ್ಕೌಟ್‌ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮದ ತೀರ್ಪುಗಾರರಾಗಿಯೂ ಗುರ್ತಿಸಿಕೊಂಡಿದ್ದಾರೆ. ಸದ್ಯ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ನಟಿ ಪ್ರಗತಿ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ಚಿತ್ರರಂಗದಲ್ಲಿ ಕೆಲವರು ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆಯುತ್ತಾರೆ ಎನ್ನುವ ಆರೋಪ ಇದೆ. ಹುಡುಗ ಹಾಗೂ ಹುಡುಗಿಯರಿಬ್ಬರಿಗೂ ಇಂತಹ ಆಫರ್​ ಕೊಟ್ಟಿರುವ ಉದಾಹರಣೆಗಳಿವೆ. ಬಣ್ಣದ ಲೋಕದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆ ಇಂದು ನಿನ್ನೆಯದಲ್ಲ. ಮೀಟು ಅಭಿಯಾನ ಶುರುವಾದ ಮೇಲೆ ಸಾಕಷ್ಟು ನಟ ನಟಿಯರು ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಇಂತಾದೊಂದು ಕೆಟ್ಟ ಸಂಸ್ಕೃತಿ ಬಗ್ಗೆ ನಟಿ ಪ್ರಗತಿ ಹೇಳುವುದೇ ಬೇರೆ. ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಇಡೀ ಚಿತ್ರರಂಗವನ್ನು ನಿಂದಿಸುವುದು ಸರಿಯಲ್ಲ ಎಂದು ಆಕೆ ಹೇಳಿದ್ದಾರೆ.

    ರಾಜಮೌಳಿ ನಿರ್ದೇಶಿಸೋ ಮಹೇಶ್ ಬಾಬು ಸಿನಿಮಾ 28ನೆಯದ್ದಾ? ತ್ರಿವಿಕ್ರಮ್ ಸಿನಿಮಾ ಎಷ್ಟನೆಯದ್ದು?ರಾಜಮೌಳಿ ನಿರ್ದೇಶಿಸೋ ಮಹೇಶ್ ಬಾಬು ಸಿನಿಮಾ 28ನೆಯದ್ದಾ? ತ್ರಿವಿಕ್ರಮ್ ಸಿನಿಮಾ ಎಷ್ಟನೆಯದ್ದು?

    ಹಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ವರೆಗೂ ಕಾಸ್ಟಿಂಗ್ ಕೌಚ್ ವಿಚಾರ ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಕೆಲ ನಟರ, ನಿರ್ಮಾಪಕರ, ನಿರ್ದೇಶಕರ ಕರಾಳ ಮುಖ ಕಳಚಿತ್ತು. ಇವತ್ತಿಗೂ ಕೆಲ ಹುಡುಗಿಯರು ಚಿತ್ರರಂಗಕ್ಕೆ ಬರುವುದಕ್ಕೆ ಹಿಂದು ಮುಂದು ನೋಡುವಂತಾಗಿದೆ. ಚಿತ್ರರಂಗದಲ್ಲಿರುವ ಈ ಕೆಟ್ಟು ಪಿಡುಗಿನ ಬಗ್ಗೆ ಆತಂಕವಿದೆ. ಆದರೆ ಕಾಸ್ಟಿಂಗ್‌ ಕೌಚ್ ಬಗ್ಗೆ ತಮ್ಮ ಅಭಿಪ್ರಾಯವನ್ನು ನಟಿ ಪ್ರಗತಿ ಹೇಳಿಕೊಂಡಿದ್ದಾರೆ.

    ಇಂತಹವರು ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತಾರೆ- ಪ್ರಗತಿ

    ಇಂತಹವರು ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತಾರೆ- ಪ್ರಗತಿ

    "ಸಕ್ಸಸ್ ಆಗಿ ಒಂದು ಹಂತಕ್ಕೆ ಬೆಳೆದಿರುವ ನಟಿಯರನ್ನು ಕೇಳಿ, ಅವರು ತಮಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ನಡೆಯುವ ಇಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಸಕ್ಸಸ್ ಆಗಿರುವ ನಟಿಯರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಸ್ಟಿಂಗ್‌ ಕೌಚ್ ಆರೋಪ ಬರೀ ಸಕ್ಸಸ್ ಆಗದೇ ಇರುವ ನಟಿಯರಿಂದಲೇ ಕೇಳಿ ಬರುತ್ತದೆ. ಇಂತಹ ಕೆಟ್ಟ ಅನುಭವ ಕೆಲವೊಮ್ಮೆ ಎದುರಾಗಿರಬಹುದು. ಅದನ್ನು ಸುಳ್ಳು ಎನ್ನಲು ಸಾಧ್ಯವಿಲ್ಲ. ಆದರೆ ಅಂತಹವರನ್ನು ಸಂಪರ್ಕಿಸಿರುವ ನಿರ್ದೇಶಕರು, ನಿರ್ಮಾಪಕರು ಖ್ಯಾತರೇನು ಆಗಿರುವುದಿಲ್ಲ. ಇಂತಹವರು ಎಲ್ಲಾ ಕ್ಷೇತ್ರಗಳಲ್ಲೂ ಇರ್ತಾರೆ."

    ಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರುಪವರ್ ಸ್ಟಾರ್ ಆರ್ಭಟಕ್ಕೆ 'ಪೋಕಿರಿ' ದಾಖಲೆ ಧೂಳಿಪಟ: ಪವನ್ ಫ್ಯಾನ್ಸ್ 'ಜಲ್ಸಾ' ಶುರು

    5 ನಿಮಿಷ ಸುಖಕ್ಕೆ ಕೋಟಿ ಕೋಟಿ ಸುರಿಯುವುದಿಲ್ಲ

    5 ನಿಮಿಷ ಸುಖಕ್ಕೆ ಕೋಟಿ ಕೋಟಿ ಸುರಿಯುವುದಿಲ್ಲ

    "ಒಂದು ಹುಡುಗಿಗಾಗಿ ಯಾರು ಸಿನಿಮಾ ಮಾಡಲ್ಲ. ನಟಿಯರ ಮೇಲೆ ಕೋಟಿ ಕೋಟಿ ಹಣ ಹಾಕುವುದು, ಅವರಿಗೆ ಸಂಭಾವನೆ ಕೊಡುವುದು 5 ನಿಮಿಷದ ಸುಖಕ್ಕಾಗಿ ಅಲ್ಲ. ಒಬ್ಬ ಹುಡುಗಿ ಅದಕ್ಕೆ ಒಪ್ಪಿಕೊಂಡರೆ ಮಾತ್ರ ಅವಕಾಶ ಕೊಡುತ್ತೇನೆ ಎನ್ನುವುದು ಸಾಧ್ಯವಿಲ್ಲ. ಪಾತ್ರಕ್ಕೆ ಆಕೆ ಸೂಟ್ ಆದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಸಿನಿಮಾ ಫಲಿತಾಂಶ ಆಕೆಯ ಮೇಲೆ ಆಧಾರವಾಗಿರುತ್ತದೆ. ಚಿತ್ರರಂಗದಲ್ಲಿ ಬಹಳ ಪೈಪೋಟಿ ಇದೆ. ಸೂಪರ್ ಸ್ಟಾರ್ ಆದರೂ ಕೂಡ ಸಿನಿಮಾ ಗೆದ್ದರೆ ಮಾತ್ರ ಉಳಿಗಾಲ. ಕಾಸ್ಟಿಂಗ್ ಕೌಚ್ ನಟಿಯರ ಕರಿಯರ್‌ ಮೇಲೆ ಪ್ರಭಾವ ಬೀರುತ್ತದೆ ಎಂದರೆ ನಾನು ಒಪ್ಪುವುದಿಲ್ಲ. ಪ್ರತಿಭೆ, ಸಾಮರ್ಥ್ಯ ಇದ್ದರೆ ಒಂದು ವರ್ಷ ತಡವಾಗಿ ಆದರೂ ಒಳ್ಳೆಯ ಅವಕಾಶ ಸಿಗುತ್ತದೆ".

    ನನಗೆ ಚಿತ್ರರಂಗದಲ್ಲಿ ಇಂತಹ ಕೆಟ್ಟ ಅನುಭವ ಆಗಿಲ್ಲ

    ನನಗೆ ಚಿತ್ರರಂಗದಲ್ಲಿ ಇಂತಹ ಕೆಟ್ಟ ಅನುಭವ ಆಗಿಲ್ಲ

    "ಪ್ರತಿಭೆ ಇಲ್ಲದೇ ಕಾಸ್ಟಿಂಗ್‌ ಕೌಚ್‌ನ ಕಾರಣವಾಗಿ ಹೇಳುವವರು ಸಾಕಷ್ಟು ಜನ ಇದ್ದಾರೆ. ಒಂದು ಕಥೆಯಲ್ಲಿ ಯಾವ ಪಾತ್ರಕ್ಕೆ ಯಾರು ಸೂಟ್ ಆಗ್ತಾರೆ ಅನ್ನುವುದನ್ನು ನೋಡಿ ನಿರ್ಮಾಪಕ, ನಿರ್ದೇಶಕರು ಆಯ್ಕೆ ಮಾಡುತ್ತಾರೆ. ಎಷ್ಟೇ ನಷ್ಟ ಆದರೂ ಕೆಲ ನಿರ್ಮಾಪಕರು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಅಂತಹವರನ್ನೆಲ್ಲಾ ಇದೇ ದೃಷ್ಟಿಯಲ್ಲಿ ನೋಡುವುದು ತಪ್ಪು. ನಾನು ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ನನಗೆ ಇಂತಹ ನೆಗೆಟಿವಿಟಿ ಕಾಣಿಸಿಲ್ಲ. ಆದರೆ ಒಂದು ಎರಡೂ ಸಿನಿಮಾದಲ್ಲಿ ನಟಿಸಿ ಹೋದವರು ಇಡೀ ಚಿತ್ರರಂಗವೇ ಹೀಗೆ ಎಂದು ಮಾತನಾಡುವುದನ್ನು ನೋಡಿದರೆ ನಗು ಬರುತ್ತದೆ. ಅವರಿಗೆ ಸಿನಿಮಾ ಬಗ್ಗೆ ಏನು ಗೊತ್ತು ಅನಿಸುತ್ತದೆ".

    ಕಾಸ್ಟಿಂಗ್‌ ಕೌಚ್‌ನಿಂದ ಚಿತ್ರರಂಗವನ್ನು ಅಳೆಯಬಾರದು

    ಕಾಸ್ಟಿಂಗ್‌ ಕೌಚ್‌ನಿಂದ ಚಿತ್ರರಂಗವನ್ನು ಅಳೆಯಬಾರದು

    "ನನಗೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ಆದರೆ ಯಾರಾದರೂ ಪರೋಕ್ಷವಾಗಿ ಆ ರೀತಿ ಮಾತನಾಡಿದರೆ ಅಲ್ಲಿಂದ ಹೊರಬಂದು ಬೇರೆ ಸಿನಿಮಾದಲ್ಲಿ ಅವಕಾಶ ಪಡೆದ ಸಂದರ್ಭವೂ ಇದೆ. ಹಾಗಂತ ನಾನು ಚಿತ್ರರಂಗವನ್ನು ದೂಷಿಸುವುದಿಲ್ಲ. ಒಂದು ಹುಡುಗಿ ಸುಂದರವಾಗಿ ಇದ್ದರೆ ಅಪ್ರೋಚ್ ಆಗುವವರು ಇರುತ್ತಾರೆ. ಆಕೆಯಿಂದ ಏನಾದರೂ ಬಯಸುತ್ತಾರೆ. ಇದೊಂದು ಪಾಯಿಂಟ್ ಹಿಡಿದುಕೊಂಡು ಚಿತ್ರರಂಗದಲ್ಲಿ ನಡೆಯುತ್ತಿರುವ ನೂರಾರು ಕೋಟಿ ವ್ಯವಹಾರ ಎಲ್ಲವೂ ಅದಕ್ಕಾಗಿಯೇ ಎನ್ನುವುದು ಸರಿಯಲ್ಲ. ಸಿನಿಮಾ ಸಾವಿರಾರು ಜನರ ಜೀವನಾಧಾರ. ಅಂತಹ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್‌ ಒಂದೇ ಎಲ್ಲಾ ಎನ್ನುವುದು ತಪ್ಪು" ಎಂದು ಪ್ರಗತಿ ಹೇಳಿದ್ದಾರೆ.

    ನೆಪೋಟಿಸಂ ಬಗ್ಗೆ ನಟಿ ಪ್ರಗತಿ ಮಾತು

    ನೆಪೋಟಿಸಂ ಬಗ್ಗೆ ನಟಿ ಪ್ರಗತಿ ಮಾತು

    ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನೆಪೋಟಿಸಂ ಬಗ್ಗೆ ಕೂಡ ನಟಿ ಪ್ರಗತಿ ಮಾತನಾಡಿದ್ದಾರೆ. "ಪೊಲೀಸ್ ಮಗ ಪೊಲೀಸ್ ಆಗಬೇಕು, ಡಾಕ್ಟರ್ ಮಗ ಡಾಕ್ಟರ್ ಆಗಬೇಕು ಎಂದುಕೊಳ್ಳುವುದು ತಪ್ಪಲ್ಲ. ಅದೇ ರೀತಿ ನಟನ ಮಗ ನಟ ಆಗಬೇಕು ಎಂದುಕೊಳ್ಳುತ್ತಾರೆ. ಆದರೆ ಸಾಮರ್ಥ್ಯ ಇದ್ದರೆ ಮಾತ್ರ ಕ್ಲಿಕ್ ಆಗುವುದಕ್ಕೆ ಸಾಧ್ಯ. ತಂದೆಯಿಂದ ಚಿತ್ರರಂಗಕ್ಕೆ ಎಂಟ್ರಿ ಆಗುವುದು ಸುಲಭ ಇರಬಹುದು. ಆದರೆ ಗೆಲ್ಲುವುದಕ್ಕೆ ಪರಿಶ್ರಮ ಬಹಳ ಅಗತ್ಯ. ಅವರವರ ನಟನೆಯನ್ನು ಅವರೇ ಮಾಡಬೇಕು" ಎಂದು ಪ್ರಗತಿ ವಿವರಿಸಿದ್ದಾರೆ.

    Recommended Video

    Arjun Ramesh | ನಾನು ಸೀರಿಯಲ್‌ಗೆ ಎಂಟ್ರಿ ಆಗಿದ್ದೆ ವಿಚಿತ್ರ | Bigg Boss OTT *Interview

    English summary
    When Actress Pragathi Opened Up About Casting Couch in the Telugu film industry. Know More.
    Thursday, September 1, 2022, 14:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X