ಅಲ್ಲು ಅರ್ಜುನ್ ಜೊತೆ ನಟಿಸಿದ ಬಳಿಕ ಅವಕಾಶ ಸಿಕ್ತಿಲ್ಲ ಎಂದಿದ್ದ ನಟಿಯನ್ನು ಬ್ಲಾಕ್ ಮಾಡಿದ್ದ ನಟ

ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರನ್ನು ಬ್ಲಾಕ್ ಮಾಡುವುದು ಗೊತ್ತೇಯಿದೆ. ಸೆಲೆಬ್ರೆಟಿಗಳು ಕೂಡ ತಮಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುವವರನ್ನು ಬ್ಲಾಕ್ ಮಾಡುತ್ತಾರೆ. ಆದರೆ ತೆಲುಗು ನಟ ಅಲ್ಲು ಅರ್ಜುನ್ ತನ್ನ ಜೊತೆಗೆ ನಟಿಸಿದ್ದ ನಾಯಕಿ ನಟಿಯನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿದ್ದು 3 ವರ್ಷಗಳ ಹಿಂದೆ ಸುದ್ದಿ ಆಗಿತ್ತು.

ಅಲ್ಲು ಅರ್ಜುನ್ ನಟಿಸಿದ್ದ 'ವರುಡು' ಸಿನಿಮಾ 16 ವರ್ಷ ಪೂರೈಸಿದೆ. ಗುಣಶೇಖರ್ ನಿರ್ದೇಶನದ ಸಿನಿಮಾ ಹೀನಾಯವಾಗಿ ಸೋತಿತ್ತು. ಚಿತ್ರದಲ್ಲಿ ಭಾನುಶ್ರೀ ಮೆಹ್ರಾ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಸೋತಿದ್ದರಿಂದ ಆಕೆಗೆ ಮುಂದೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಇದೇ ವಿಚಾರವನ್ನು ಭಾನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದ್ದಕ್ಕಿದಂತೆ ಅಲ್ಲು ಅರ್ಜುನ್ ತಮ್ಮನ್ನು ಟ್ವಿಟ್ಟರ್‌ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಸ್ಕ್ರೀನ್‌ ಶಾಟ್ ಸಮೇತ ಆಕೆ ಪೋಸ್ಟ್ ಮಾಡಿದ್ದರು. ಅದು ವೈರಲ್ ಆಗಿತ್ತು.

When Allu Arjun blocked Varudu co star in twitter netizens recalls

ಹೀಗೆ ಸ್ಟಾರ್ ನಟನೊಬ್ಬ ತನ್ನ ಜೊತೆ ನಟಿಸಿದ್ದ ನಾಯಕಿಯ ಅಕೌಂಟ್ ಬ್ಲಾಕ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ಮತ್ತೆ ಕೆಲವೇ ಗಂಟೆಗಳಲ್ಲಿ ಅನ್‌ಬ್ಲಾಕ್ ಕೂಡ ಮಾಡಿದ್ದರು. ಈ ಬಗ್ಗೆ ಕೂಡ ಭಾನು ಪೋಸ್ಟ್ ಮಾಡಿದ್ದರು. ಸದ್ಯ 'ವರುಡು' ಚಿತ್ರ 16 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೆಟ್ಟಿಗರು ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೇ ತೋರಿಸಿ ಕೆಲವರು ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಭಾನುಶ್ರೀ ಮೆಹ್ರಾ ಅಂದು ಟ್ವೀಟ್ ಮಾಡಿ "ನೀವು ಎಂದಾದರೂ ಗೊಂದಲದಲ್ಲಿ ಸಿಲುಕಿಕೊಂಡಿದ್ದೀರಿ ಅಂತ ಅನ್ನಿಸಿದ್ಯಾ? ನಾನು ಅಲ್ಲು ಅರ್ಜುನ್ ಜೊತೆ 'ವರುಡು' ಚಿತ್ರದಲ್ಲಿ ನಟಿಸಿದ್ದೆ.. ಬಳಿಕ ಅವಕಾಶಗಳು ಸಿಗಲಿಲ್ಲ. ಆದರೆ ನನ್ನ ಕಷ್ಟಗಳಲ್ಲಿ ಹಾಸ್ಯವನ್ನು ಕಂಡುಕೊಳ್ಳಲು ನಾನು ಕಲಿತಿದ್ದೇನೆ. ವಿಶೇಷವಾಗಿ ಈಗ ಅಲ್ಲು ಅರ್ಜುನ್ ಟ್ವಿಟರ್‌ನಲ್ಲಿ ನನ್ನನ್ನು ಬ್ಲಾಕ್‌ ಮಾಡಿದ್ದಾರೆ. ನನ್ನ ಯೂಟ್ಯೂಬ್ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿ" ಎಂದು ಬರೆದುಕೊಂಡಿದ್ದರು.

ಅಲ್ಲು ಅರ್ಜುನ್ ಅನ್‌ಬ್ಲಾಕ್ ಮಾಡುತ್ತಿದ್ದಂತೆ "ಸಿಹಿ ಸುದ್ದಿ, ಅಲ್ಲು ಅರ್ಜುನ್ ನನ್ನನ್ನು ಅನ್‌ಬ್ಲಾಕ್ ಮಾಡಿದ್ದಾರೆ. ನನ್ನ ಕರಿಯರ್‌ನಲ್ಲಿ ಹಿನ್ನೆಡೆಯಾಗಿದ್ದಕ್ಕೆ ನಾನು ಎಂದಿಗೂ ಅವರನ್ನು ದೂಷಿಸಿಲ್ಲ. ನನ್ನ ಕಷ್ಟಗಳಲ್ಲೇ ಖುಷಿ ಕಂಡುಕೊಳ್ಳುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದ" ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.

ಬರೀ ಪೋಸ್ಟರ್‌ಗಳಿಂದಲೇ 'ವರುಡು' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಪಾತ್ರಕ್ಕಾಗಿ ದೇಹ ದಂಡಿಸಿ ಸಿಕ್ಸ್‌ಪ್ಯಾಪ್ ಹ್ಯಾಬ್ಸ್ ಮಾಡಿ ಸ್ಟೈಲಿಶ್ ಸ್ಟಾರ್ ನಟಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಸಿನಿಮಾ ಹೀನಾಯವಾಗಿ ಸೋತು ನಷ್ಟ ತಂದೊಡ್ಡಿತ್ತು. ಅಮೃತ್‌ಸರ್ ಮೂಲಕ ನಟಿ ಭಾನುಶ್ರೀ ಮೆಹ್ರಾ ಈ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದ 'ಡೀಲ್ ರಾಜ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಆಕೆ ನಟಿಸಿದ್ದರು. ಆದರೆ ಹಿಟ್ ಮಾತ್ರ ಸಿಗಲೇಯಿಲ್ಲ.

ಕಳೆದ 4 ವರ್ಷಗಳಿಂದ ಭಾನುಶ್ರೀ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಯೂಟ್ಯೂಬ್‌ನಲ್ಲಿ ಕೂಡ ಅಷ್ಟೇನು ಆಕ್ಟೀವ್ ಆಗಿಲ್ಲ. ತಮ್ಮ ಪೋಸ್ಟ್‌ಗಳಿಗೆ ಪದೇ ಪದೆ ಅಲ್ಲು ಅರ್ಜುನ್ ಅವರನ್ನು ಟ್ಯಾಗ್ ಮಾಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಬ್ಲಾಕ್ ಮಾಡಿದ್ದಾಗಿ ಹೇಳಲಾಗಿತ್ತು. ಅಲ್ಲು ಅರ್ಜುನ್ ಸದ್ಯ 'ಪುಷ್ಪ'-2 ಸಕ್ಸಸ್ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಬಳಿಕ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಟೈಟಲ್, ಪೋಸ್ಟರ್ ರಿವೀಲ್ ಆಗಲಿದೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 800 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

More from Filmibeat

Read more about: allu arjun actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X