"ವಿದೇಶಿಗನನ್ನು ಮಗಳು ಪ್ರೀತಿಸಿದ್ದಕ್ಕೆ ನಮ್ಮ ಕುಲದವ್ರು ಕುತಂತ್ರ ಮಾಡಿದ್ರು"- 'ರಾಬರ್ಟ್' ನಟ

ಇವತ್ತಿನ ಕಾಲದಲ್ಲಿ ಕೂಡ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ. ಜಾತಿ ಜಾತಿಗಳ ನಡುವೆ ಸಮಾನತೆ ಇಲ್ಲ. ಜಾತಿ ಪದ್ಧತಿ ನಾನಾ ಅನರ್ಥಗಳಿಗೆ ಕಾರಣವಾಗುತ್ತಿದೆ. ಇನ್ನು ವಿದೇಶಿಗರನ್ನು ಭಾರತೀಯರು ಪ್ರೀತಿಸಿ ಮದುವೆ ಆಗುವುದನ್ನು ಕೂಡ ಕೆಲವರು ಒಪ್ಪುವುದಿಲ್ಲ.

ತಮ್ಮ ಕುಲದವರನ್ನು ಬಿಟ್ಟು ಉಳಿದವರನ್ನು ಪ್ರತ್ಯೇಕವಾಗಿ ನೋಡುವ ಪರಿಪಾಠ ಇಂದಿಗೂ ಮುಂದುವರೆದಿದೆ. ಅದರಲ್ಲೂ ಪ್ರೀತಿ, ಮದುವೆ ವಿಚಾರಗಳು ಬಂದಾಗ ಈ ವಿಚಾರ ಬಹಳ ಚರ್ಚೆ ಆಗುತ್ತದೆ. ಅನ್ಯ ಜಾತಿ, ಅನ್ಯ ಧರ್ಮದವರನ್ನು ಮದುವೆ ಆಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಕುಟುಂಬಸ್ಥರು, ನೆಂಟರು, ಅವರದ್ದೇ ಸಮುದಾಯದವರು ಅಷ್ಟು ಸುಲಭವಾಗಿ ಆಸ್ಪದ ಕೊಡುವುದಿಲ್ಲ.

When Jagapathi Babu Opens Up on Caste Bias Against Daughter s Interracial Marriage in old Interview

ಅನ್ಯ ಜಾತಿ, ಅನ್ಯ ಧರ್ಮ ವಿವಾಹಕ್ಕೆ ಕೆಲವೊಮ್ಮೆ ಹುಡುಗ, ಹುಡುಗಿಯ ಪೋಷಕರು ಒಪ್ಪಿದರೂ ಅವರಿಗೆ ಆಪ್ತರು ಎನಿಸಿಕೊಂಡವರು ಒಪ್ಪುವುದಿಲ್ಲ. ನನ್ನ ಮಗಳು ಒಬ್ಬ ವಿದೇಶಿಗನನ್ನು ಪ್ರೀತಿಸಿದ್ದಳು. ಆದರೆ ಅವನೊಟ್ಟಿಗೆ ಮಗಳ ಮದುವೆಗೆ ನಮ್ಮ ಸಮುದಾಯದವರು ಒಪ್ಪಲಿಲ್ಲ. ಹೇಗಾದರೂ ಮಾಡಿ ಮದುವೆ ನಿಲ್ಲಿಸಬೇಕು, ಆತನನ್ನು ವಿದೇಶದಲ್ಲೇ ಯಾವುದಾದರೂ ಪ್ರಕರಣದಲ್ಲಿ ಜೈಲಿಗೆ ಕಳುಹಿಸೋಣ ಎಂದು ನನಗೆ ಸಲಹೆ ನೀಡಿದ್ದರು ಎಂದು ಬಹುಭಾಷಾ ನಟ ಜಗಪತಿ ಬಾಬು ಹೇಳಿಕೊಂಡಿದ್ದರು.

ಹಳೇ ಸಂದರ್ಶನವೊಂದರಲ್ಲಿ ನಟ ಜಗಪತಿ ಬಾಬು ಮಾತನಾಡಿದ್ದ ವೀಡಿಯೋ ಈಗ ದಿಢೀರ್ ವೈರಲ್ ಆಗುತ್ತಿದೆ. 'ರಾಬರ್ಟ್' ಸೇರಿ ಒಂದೆರಡು ಕನ್ನಡ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದ್ದಾರೆ. ಸಾಕ್ಷಿ ಟಿವಿ ಸಂದರ್ಶನದಲ್ಲಿ ನಟ ಜಗಪತಿ ಬಾಬು ಈ ವಿಚಾರದ ಬಗ್ಗೆ ಮಾತನಾಡಿದ್ದರು. "ನನಗೆ ಈ ಜಾತಿ, ಮನೆತನದ ಹೆಸರು ಇಂತಹ ವಿಚಾರಗಳು ಇಷ್ಟವಾಗುವುದಿಲ್ಲ. ಸತ್ತಮೇಲೆ ಯಾವ ಹೆಸರು ಇದ್ದು ಏನು ಪ್ರಯೋಜನ ಅಂತೀನಿ ನಾನು" ಎಂದು ಜಗಪತಿ ಬಾಬು ಹೇಳಿದ್ದಾರೆ.

ಮಾತು ಮುಂದುವರೆಸಿದ್ದ ಜಗಪತಿ ಬಾಬು "ನಾನು ಒಂದು ಉದಾಹರಣೆ ಕೊಡ್ತೀನಿ. ನನ್ನ ಮಗಳು ಒಬ್ಬ ವಿದೇಶಿಗನನ್ನು ಪ್ರೀತಿಸಿ ಮದುವೆ ಆಗಲು ಮುಂದಾಗಿದ್ದಳು. ಅದಕ್ಕೆ ಕೆಲವರು ನಮ್ಮದು ಕಮ್ಮ ಸಮುದಾಯ. ಬಹಳ ದೊಡ್ಡ ಹೆಸರು ಇದೆ. ಅಂಥದ್ದರಲ್ಲಿ ಮಗಳು ಯಾವವೋ ವಿದೇಶಿಗನನ್ನು ಮದುವೆ ಆಗ್ತಾಳಾ? ಎನ್ನುವುದು ಅವರ ಟಾಪಿಕ್. ಹೇಗಾದರೂ ಮಾಡಿ ಅವನನ್ನು ಆ ದೇಶದಲ್ಲೇ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಸಿ ಜೈಲಿಗೆ ಕಳಿಸೋಣ ಎಂದು ಕುತ್ರಂತ್ರ ಸಲಹೆ ಕೊಟ್ಟರು. ಇದನ್ನು ನೋಡಿದರೆ ನಮ್ಮ ಜನ ಇನ್ನು ಎಷ್ಟು ಹಿಂದೆ ಉಳಿದಿದ್ದಾರೆ ಎನ್ನುವುದು ಗೊತ್ತಾಗುತ್ತದೆ" ಎಂದು ಜಗಪತಿ ಬಾಬು ಹೇಳಿದ್ದರು.

ಹೀಗೆ ಸಲಹೆ ಕೊಟ್ಟವರಿಗೆ ನಾನು ಹೇಳ್ದೆ, ಇಂತಹ ಕೆಟ್ಟ ಆಲೋಚನೆ ಮಾಡ್ಬೇಡ. ನೀನು ಹಾಗೆ ಮಾಡಿದ್ರೆ, ನಾನು ಲೈಫ್ ಲಾಂಗ್ ಅವನನ್ನು ಹೇಗೆ ಜೈಲಿನಿಂದ ಬಿಡಿಸಬೇಕು ಎಂದು ಯೋಚಿಸುವಂತಾಗುತ್ತದೆ. ನನ್ನ ಮಗಳು, ಆ ಹುಡುಗ ಪ್ರೀತಿಸಿದ್ದಾರೆ ನಿಮಗೇನು ಸಮಸ್ಯೆ? ಎಂದು ಕೇಳಿದ್ದೆ. ಈಗಿನ ಕಾಲದಲ್ಲಿ ಕೂಡ ಜನ ಯಾಕೆ ಹೀಗೆ ಯೋಚಿಸ್ತಾರೆ ಅರ್ಥವಾಗುವುದಿಲ್ಲ ಎಂದು ಜಗಪತಿ ಬಾಬು ವಿವರಿಸಿದ್ದರು.

ಒಂದ್ಕಾಲದಲ್ಲಿ ಹೀರೊ ಆಗಿ ಮಿಂಚಿದ್ದ ಜಗಪತಿ ಬಾಬು ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. 'ಲೆಜೆಂಡ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಬಳಿಕ ಅಂತಹದ್ದೇ ಪಾತ್ರಗಳು ಅರಸಿ ಬಂದಿತ್ತು. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಕೂಡ ಜಗಪತಿ ಬಾಬು ಕಮಾಲ್ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಹೀರೊ ಆಗಿ ನಟಿಸೋ ಪ್ರಯತ್ನ ಮಾಡುತ್ತಿದ್ದಾರೆ. ಜಗಪತಿ ಬಾಬು ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರ ಮಗಳು ಮೇಘನಾ, ಅನಿವಾಸಿ ಭಾರತೀಯ ಚಾಡ್ ಬೋವೆನ್ ಎಂಬುವವರನ್ನು 2015ರಲ್ಲಿ ಮದುವೆ ಆಗಿದ್ದರು.

More from Filmibeat

English summary
actor Jagapathi Babu reveals how his daughter's marriage to a foreigner faced caste-based opposition
Read more about: jagapathi babu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X