ಸೌಂದರ್ಯ ಅಲ್ಲ ಶ್ರೀದೇವಿ ರೀತಿ ಮಿಂಚಬೇಕು ಎನ್ನುವ ಆಸೆ ನನಗೆ ಎಂದ ನೇಹಾ ಶೆಟ್ಟಿ

ಮಂಗಳೂರು ಚೆಲುವೆ ನೇಹಾ ಶೆಟ್ಟಿ ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ 'ಮುಂಗಾರುಮಳೆ-2' ಸಿನಿಮಾ ಮೂಲಕ ಆಕೆ ಬಣ್ಣದಲೋಕ್ಕೆ ಕಾಲಿಟ್ಟರು. ಆದರೆ ಬಳಿಕ ಸಂಪೂರ್ಣವಾಗಿ ಟಾಲಿವುಡ್‌ನಲ್ಲಿ ಸೆಟ್ಲ್ ಆಗಿಬಿಟ್ಟರು. ಸದ್ಯ 'ಟಿಲ್ಲು ಸ್ಕ್ವೇರ್' ಚಿತ್ರದ ಅತಿಥಿ ಪಾತ್ರದಲ್ಲಿ ನೇಹಾ ಮಿಂಚಿದ್ದಾರೆ.

'ಗ್ಯಾಂಗ್ಸ್ ಆಫ್ ಗೋದಾವರಿ' ಎನ್ನುವ ಮತ್ತೊಂದು ಚಿತ್ರದಲ್ಲಿ ಕರಾವಳಿ ಬೆಡಗಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ನೇಹಾ ಹಳೇ ಸಂದರ್ಶನದ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ಹಿಂದೆ 'ರೂಲ್ಸ್ ರಂಜನ್' ಎನ್ನುವ ಚಿತ್ರದಲ್ಲಿ ನೇಹಾ ನಟಿಸಿದ್ದರು. ಹಾಡೊಂದರಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.

When Neha shetty says Sridevi is her role model not Soundarya

ಕಾಲಿಗೆ ಪೆಟ್ಟು ಮಾಡಿಕೊಂಡು ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಾಂಗ್ ಶೂಟಿಂಗ್ ವೇಳೆ ಬಹಳ ಕಷ್ಟವಾಗಿತ್ತು ಎಂದು ನೇಹಾ ಶೆಟ್ಟಿ ಹೇಳಿದ್ದರು. ಸಂದರ್ಶನದಲ್ಲಿ ಇತ್ತೀಚೆಗೆ ನಾಯಕಿಯರ ಅಭಿನಯಕ್ಕೆ ಅವಕಾಶಗಳಿರುವ ಪಾತ್ರಗಳು ಸಿಗುತ್ತಿಲ್ಲ. ಇದ್ದಿದ್ದರಲ್ಲಿ ಕೆಲವರು ಡೀ ಗ್ಲಾಮರಸ್‌ ಆಗಿ ನಟನೆಗೆ ಅವಕಾಶ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಉಳಿದವರು ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ, ಬಿಂದಾಸ್ ಆಗಿ ಕುಣಿಯುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ನಿಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಎದುರಾಗಿದೆ.

ನೇಹಾ ಶೆಟ್ಟಿ ಪ್ರತಿಕ್ರಿಯಿಸಿ ಇವರಡರ ನಡುವೆ ಮತ್ತೊಂದು ವಿಧ ಕೂಡ ಇದೆ. ಗ್ಲಾಮರಸ್ ಜೊತೆ ಜೊತೆಗೆ ನಟನೆಗೆ ಅವಕಾಶ ಇರುವಂತಹ ಪಾತ್ರಗಳು. ಉದಾಹರಣೆಗೆ ಶ್ರೀದೇವಿ ನಟಿಸುತ್ತಿದ್ದ ಸಿನಿಮಾಗಳು. ಆಕೆ ಎಲ್ಲಾ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಕೆಯೇ ನನಗೆ ರೋಲ್ ಮಾಡೆಲ್. ಶ್ರೀದೇವಿ ರೀತಿಯಲ್ಲಿ ಮಿಂಚಬೇಕು ಎನ್ನುವುದು ನನ್ನ ಆಸೆ ಎಂದಿದ್ದಾರೆ.

When Neha shetty says Sridevi is her role model not Soundarya

ಕೆಲವು ಪಾತ್ರಗಳು ಕೆಲವರನ್ನು ಮಾತ್ರ ಹುಡುಕಿಕೊಂಡು ಹೋಗುತ್ತವೆ. ಕೆಲವರು ಅಂತಹ ಪಾತ್ರಗಳಿಗೆ ಬ್ರ್ಯಾಂಡ್ ಆಗಿರುತ್ತಾರೆ. ದಿವಂಗತ ನಟಿ ಸೌಂದರ್ಯಕ್ಕೆ ಬ್ರ್ಯಾಂಡ್ ಇತ್ತು. ನಟನೆಗೆ ಸ್ಕೋಪ್ ಇರುವ ಪಾತ್ರಗಳು ಆಕೆಯನ್ನು ಹುಡುಕಿ ಹೋಗುತ್ತಿದ್ದವು. ಆಕೆಯನ್ನು ಗ್ಲಾಮರಸ್ ಆಗಿ ಕುಣಿಯುವಂತೆ ಯಾರು ಕೇಳುತ್ತಿರಲಿಲ್ಲ ಎಂದು ನಿರೂಪಕರು ಹೇಳಿದ್ದಾಗ ಅದಕ್ಕೆ ನಾನು ಶ್ರೀದೇವಿ ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದಾಗಿ ನೇಹಾ ವಿವರಿಸಿದ್ದಾರೆ.

ಖಂಡಿತ ನಾನು ಶ್ರೀದೇವಿ ರೀತಿ ದೊಡ್ಡ ಸ್ಟಾರ್ ನಟಿಯಾಗುತ್ತೇನೆ. ಆ ನಂಬಿಕೆ ನನಗಿದೆ ಎಂದು ನೇಹಾ ವಿವರಿಸಿದ್ದಾರೆ. ಶ್ರೀದೇವಿ ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಿದರು. ಗ್ಲಾಮರಸ್ ಆಗಿ ಕೂಡ ಕಾಣಿಸಿಕೊಂಡರು. ನನಗೂ ಗ್ಲಾಮರ್ ಹಾಗೂ ನಟನೆಯ ವಿಚಾರದಲ್ಲಿ ಮಿತಿಯಿಲ್ಲ. ಯಾಕೆ ಮಿತಿಗಳಿರಬೇಕು? ಗ್ಲಾಮರ್ ಪಾತ್ರಗಳನ್ನು ಮಾಡುವವರೇ ಅದೇ ಮಾಡಬೇಕು, ಪರ್ಫಾರ್ಮೆನ್ಸ್ ಇರುವ ಪಾತ್ರಗಳನ್ನು ಮಾಡುವರು ಅದೇ ಮಾಡಬೇಕು ಎಂದು ಇಂಡಸ್ಟ್ರಿಯಲ್ಲಿ ಕೆಲವರು ಅಂದುಕೊಳ್ಳುತ್ತಾರೆ. ಆದರೆ ನಾನು ಹಾಗಲ್ಲ" ಎಂದಿದ್ದಾರೆ.

'ಮೆಹಬೂಬ' ಸಿನಿಮಾ ಮೂಲಕ ನೇಹಾ ಶೆಟ್ಟಿ ಟಾಲಿವುಡ್ ಪ್ರವೇಶಿಸಿದರು. ಆದರೆ 'ಡಿಜೆ ಟಿಲ್ಲು' ಸಿನಿಮಾ ಹಿಟ್ ಆಗಿತ್ತು. ಚಿತ್ರದಲ್ಲಿ ರಾಧಿಕಾ ಆಗಿ ನೆಗೆಟಿವ್ ಶೇಡ್ ರೋಲ್‌ನಲ್ಲಿ ನಟಿಸಿ ನೇಹಾ ಗಮನ ಸೆಳೆದರು. ಈ ಸಿನಿಮಾ ಮೂಲಕ ಟಾಲಿವುಡ್‌ನಲ್ಲಿ ಆಕೆಗೆ ಒಳ್ಳೆ ಕ್ರೇಜ್ ಶುರುವಾಗಿದೆ. ಆದರೆ ಬಳಿಕ ಮತ್ತೆ ಯಾವುದೇ ಸಿನಿಮಾ ಕೈಹಿಡಿಯಲಿಲ್ಲ. 'ರೂಲ್ಸ್ ರಂಜನ್' ಸಿನಿಮಾ ಬಂದು ಹೋಗಿದ್ದೇ ಗೊತ್ತಾಗಲಿಲ್ಲ.

More from Filmibeat

English summary
Neha shetty about Sridevi rolls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X