Ramcharan: "ಪ್ರೀತಿಯಿಂದ ಕೊಟ್ಟ ಗಿಫ್ಟ್ ಉಪಾಸನಾ ಮುಖದ ಮೇಲೆ ಬಿಸಾಕಿದ್ಲು": ಪುರುಷರಿಗೆ ರಾಮ್‌ಚರಣ್ ಟಿಪ್ಸ್ ಏನು?
ಟಾಲಿವುಡ್ ಹಾಟ್ ಕಪಲ್ ರಾಮ್‌ಚರಣ್- ಉಪಾಸನಾ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಚರಣ್ ಸಿನಿಮಾ ಚಿತ್ರೀಕರಣಕ್ಕೂ ಬ್ರೇಕ್ ಹಾಕಿ ಮಡದಿ, ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮಗಳಿಗೆ ಕ್ಲಿನ್ ಕಾರಾ ಎಂದು ನಾಮಕರಣ ಮಾಡಿದ್ದಾರೆ. ಮುದ್ದಿನ ಮಗಳಿಗಾಗಿ ಹೊಸ ಲೋಕವನ್ನೇ ಸೃಷ್ಟಿಸುತ್ತಿದ್ದಾರೆ. ಮದುವೆಯಾಗಿ 11 ವರ್ಷಗಳ ಬಳಿಕ ದಂಪತಿಗೆ ಮಗಳು ಹುಟ್ಟಿದ್ದಾಳೆ.
2012ರಲ್ಲಿ ರಾಮ್‌ಚರಣ್ ಹಾಗೂ ಉಪಾಸನಾ ಪ್ರೀತಿಸಿ ಮದುವೆ ಆಗಿದ್ದರು. ಆಗ ಉಪಾಸನಾ ಕೊಂಚ ದಪ್ಪ ಇದ್ದಿದ್ದರಿಂದ ಬಾಡಿ ಶೇಮಿಂಗ್ ಕೂಡ ಎದುರಿಸಬೇಕಾಯಿತು. ಇದೀಗ ತೂಕ ಇಳಿಸಿ ಮೋಡಿ ಮಾಡುತ್ತಿದ್ದಾರೆ. ಮಕ್ಕಳ ವಿಚಾರದಲ್ಲೂ ಇದೇ ಸಮಸ್ಯೆ ಎದುರಿಸಿದರು. ಸಾಕಷ್ಟು ಬಾರಿ ಈ ವಿಚಾರ ಚರ್ಚೆಗೆ ಬಂದಿತ್ತು. ಕೊನೆಗೆ ಕಳೆದ ವರ್ಷ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಸೊಸೆ ಗರ್ಭಿಣಿ ಆಗಿರುವ ವಿಚಾರವನ್ನು ಮೊದಲಿಗೆ ಚಿರಂಜೀವಿ ಹಂಚಿಕೊಂಡಿದ್ದರು. ಕಳೆದ ತಿಂಗಳು ಜೂನ್ 20ರಂದು ಮೆಗಾ ಫ್ಯಾಮಿಲಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ರಾಮ್‌ಚರಣ್ ತಮ್ಮ ಪತ್ನಿ ಉಪಾಸನಾ ಕುರಿತು ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಉಡುಗೊರೆ ಕೊಡಿಸುವ ವಿಚಾರದಲ್ಲಿ ಪುರುಷರಿಗೆ ಒಂದು ಸಲಹೆ ಕೂಡ ಕೊಟ್ಟಿದ್ದಾರೆ. "ಮದುವೆಯಾದ ಹೊಸತರಲ್ಲಿ ಉಪಾಸನಾಗಾಗಿ ನಾನು ಒಂದು ಕಾಸ್ಟ್ಲಿ ಗಿಫ್ಟ್ ತಗೊಂಡುಹೋಗಿ ಕೊಟ್ಟೆ. ಅದನ್ನು ಹುಡುಕಿ ತರಲು ಐದಾರು ಗಂಟೆ ಹಿಡಿಯಿತು. ಎರಡ್ಮೂರು ಅಂಗಡಿಯಲ್ಲಿ ಹುಡುಕಿ ತಂದಿದ್ದೆ. ಆದರೆ ಆಕೆ ಅದನ್ನು 5 ಸೆಕೆಂಡ್ ಕೂಡ ನೋಡಲಿಲ್ಲ. ಮುಖದ ಮೇಲೆ ಬಿಸಾಕಿದಳು" ಎಂದಿದ್ದಾರೆ.
"ಹುಡುಗಿಯರಿಗೆ ಗಿಫ್ಟ್ ಏನು ಎಂದು ಹೇಳಿ ಖರೀದಿಸಿ ಕೊಡಿ. ನೀವು ಅವರಿಗೆ ಸರ್‌ಪ್ರೈಸ್ ನೀಡುವ ಸಾಹಸ ಮಾಡಲು ಹೋಗಬೇಡಿ. ಅದು ತಪ್ಪಾಗುತ್ತದೆ. ಕೊನೆ ಪಕ್ಷ ಅಂಗಡಿಗೆ ಹೋದಾಗ ವಾಟ್ಸ್‌ಪ್ ಮಾಡಿ ತೋರಿಸಿ ಇದನ್ನು ತರೋದಾ? ಎಂದು ಕೇಳಿ, ಒಪ್ಪಿದ ಮೇಲೆ ಕೊಂಡುಕೊಂಡು ಹೋಗಿ ಕೊಡಿ" ಎಂದು ರಾಮ್‌ಚರಣ್ ಪುರುಷರಿಗೆ ಟಿಪ್ಸ್ ಕೊಟ್ಟಿದ್ದಾರೆ. ಇನ್ನು ತಮಗೆ ಆನ್‌ಲೈನ್ ಶಾಪಿಂಗ್ ಅಂದರೆ ಬಹಳ ಇಷ್ಟ. ಆಪ್ತರಿಗೆ ಉಡುಗೊರೆ ಕೊಡುವುದು ಇಷ್ಟ, ಅದು ನನ್ನ ಹವ್ಯಾಸ ಎಂದಿದ್ದಾರೆ.

"ನನಗೆ ವಾಚ್‌ಗಳು ಅಂದರೆ ಬಹಳ ಇಷ್ಟ. ಪಟೇಕ್, ಕಸಿಯೊ ಬ್ರ್ಯಾಂಡ್‌ಗಳಂದ್ರೆ ಮತ್ತಷ್ಟು ಇಷ್ಟ ಎಂದು ಮೆಗಾಪವರ್ ಸ್ಟಾರ್ ಹೇಳಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಕಸಿಯೊ ವಾಚ್ ಆರ್ಡರ್ ಮಾಡಿದ್ದೆ. ಅದು ನಮ್ಮ ಮನೆಗೆ ಬಂದಾಗ, ಅದನ್ನು ಓಪನ್ ಮಾಡಿ ನೋಡಿದಾಗ ಆಗಿದ್ದ ಸಂತೋಷ ಅಷ್ಟಿಷ್ಟಲ್ಲ ಎಂದಿದ್ದಾರೆ. ಸಾಕಷ್ಟು ವಾಚ್‌ಗಳು ನನ್ನ ಬಳಿ ಇವೆ ಎಂದು ರಾಮ್‌ಚರಣ್ ಹೇಳಿದ್ದಾರೆ.
ಆನ್‌ಲೈನ್ ಕ್ಲಾತ್ ಆಪ್ ರಾಯಭಾರಿಯಾಗಿರುವ ರಾಮ್‌ಚರಣ್ ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ಭಾಗವಾಗಿ ಈ ವಿಚಾರಗಳನ್ನೆಲ್ಲಾ ಹಂಚಿಕೊಂಡಿದ್ದಾರೆ. ನಾನು ಸಾಧಾರಣವಾಗಿ ಚೆಕ್ಸ್ ಶರ್ಟ್ ಧರಿಸುತ್ತೇನೆ. ಆದರೆ ನಮ್ಮ ಸಹೋದರಿಯರು ಅದು ಸರಿಯಿಲ್ಲ, ಇದು ಚೆನ್ನಾಗಿದೆ ಅಂತ ಸದಾ ಏನಾದರೂ ಕಾಮೆಂಟ್ ಮಾಡುತ್ತಿರುತ್ತಾರೆ. ಮದುವೆ ನಂತರ ನಾನು ಹೆಚ್ಚು ಗ್ರೇ, ವೈಟ್ಸ್ ಕಲರ್ ಶರ್ಟ್‌ಗಳನ್ನು ಮಾತ್ರ ಧರಿಸುತ್ತಿದ್ದೆ. ನನ್ನ ಫ್ಯಾಷನ್ ಬದಲಿಸುವಂತೆ ನನ್ನ ಫ್ಯಾಷನ್ ಡಿಸೈನರ್ಸ್‌ಗೆ ಉಪಾಸನಾ ಹೇಳುತ್ತಿರುತ್ತಾಳೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ರಾಮ್‌ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸ್ತಿದ್ದಾರೆ. ತಮಿಳು ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಚರಣ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನಲಾಗ್ತಿದೆ. 'ಗೇಮ್ ಚೇಂಜರ್' ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರವನ್ನು ಲೈನ್‌ಅಪ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ, ಜಾನ್ವಿ ಕಪೂರ್ ನಟಿಸ್ತಾರೆ ಎನ್ನಲಾಗ್ತಿದೆ.


Click it and Unblock the Notifications











