ಪತಿಯ ಅಗಲಿಕೆ ಬಳಿಕ ನನಗೆ ಮೆಮೊರಿ ಲಾಸ್ ಸಮಸ್ಯೆ ಶುರುವಾಯಿತು ಎಂದ ಖ್ಯಾತ ನಟಿ

ತೆಲುಗು ನಟಿ ಭಾನುಪ್ರಿಯ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಒಂದ್ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಮೆರೆದ ಭಾನು ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಆದರೆ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸುತ್ತಿಲ್ಲ. ಅದಕ್ಕೆ ಕಾರಣ ನೆನಪಿನ ಶಕ್ತಿ ಕ್ಷಿಣಿಸಿರುವುದು.

ಸಿನಿಮಾ ತಾರೆಯರು ಸಹ ಮನಷ್ಯರೇ. ಅವರಿಗೂ ವಯಸ್ಸಾಗುತ್ತೆ, ಕಾಯಿಲೆಗಳು ಬರುತ್ತವೆ. ತೆರೆಮೇಲೆ ಸೊಗಸಾಗಿ ಕಾಣಿಸುವ ಕಲಾವಿದರು ನಿಜ ಬದುಕಿನಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದು ಬಹುತೇಕರಿಗೆ ಹೊತ್ತಿರುವುದಿಲ್ಲ. ಚಿತ್ರರಂಗದಲ್ಲಿ ರಿಲೇಷನ್‌ಶಿಪ್, ಬ್ರೇಕಪ್, ಮದುವೆ, ಡಿವೋರ್ಸ್ ಇದರ ಸಂಖ್ಯೆ ಹೆಚ್ಚು ಎನ್ನುವಂತೆ ಕಾಣಿಸುತ್ತದೆ. ಆದರೆ ಪ್ರಪಂಚದಲ್ಲಿ ಎಲ್ಲಾ ಕಡೆ ನಡೆಯುವಂತೆಯೇ ತಾರೆಯರ ಜೀವನದಲ್ಲಿ ಬೆಳವಣಿಗೆ ಆಗುತ್ತದೆ. ಬಣ್ಣದಲೋಕದವರು ಆಗಿರುವುದರಿಂದ ಹೆಚ್ಚು ಪ್ರಚಾರ ಸಿಕ್ಕಿ ಸುದ್ದಿ ಸದ್ದು ಮಾಡುತ್ತದೆ.

When Senior Actress Bhanupriya opens up about her memory loss problem

ಸದ್ಯ ನಟಿ ಭಾನುಪ್ರಿಯ ವಯಸ್ಸು 58 ವರ್ಷ ದಾಟಿದೆ. ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡಿದ್ದಾರೆ. ಅದಕ್ಕೆ ಕಾರಣ ಏನು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೂಚಿಪುಡಿ ನೃತ್ಯವನ್ನು ಸಹ ಬಹಳ ಹಿಂದೆಯೇ ಅಭ್ಯಸಿಸಿದ್ದರು. ಆದರ್ಶನ್ ಕೌಶಲ್ ಎಂಬುವವರ ಜೊತೆಗೆ ನಟಿ ಭಾನುಪ್ರಿಯ ಮದುವೆ ಆಗಿತ್ತು. 2018ರಲ್ಲಿ ಪತಿ ನಿಧನರಾಗಿದ್ದರು. ಆಕೆ ಒಬ್ಬ ಹೆಚ್ಚು ಮಗಳು ಸಹ ಇದ್ದಾರೆ.

ರಾಜಮಂಡ್ರಿಯಲ್ಲಿ ಹುಟ್ಟಿದವರು ಭಾನುಪ್ರಿಯ. ಬಳಿಕ ಅವರ ಕುಟುಂವ ಚೆನ್ನೈಗೆ ಬಂದು ನೆಲೆಸುವಂತಾಯಿದೆ. ತಮಿಳಿನ 'ಮೆಲ್ಲ ಪೇಸುಗಳ್' ಎಂಬ ತಮಿಳು ಚಿತ್ರದ ಮೂಲಕ ಬಣ್ಣ ಲೋಕಕ್ಕೆ ಬಂದಿದ್ದರು. ಮುಂದೆ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿ ತಮ್ಮ ಜ್ಞಾನಪಶಕ್ತಿ ಬಗ್ಗೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ನಟಿಸದಿರಲು ಕಾರಣ ಏನು ಎಂದು ತಿಳಿಸಿದ್ದರು. ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.

ಎರಡು ವರ್ಷಗಳ ಹಿಂದೆ ತೆಲುಗು ವನ್ ಯೂಟ್ಯೂಬ್ ಸಂದರ್ಶನದಲ್ಲಿ ನಟಿ ಭಾನುಪ್ರಿಯ ಮಾತನಾಡಿದ್ದರು. ಡ್ಯಾನ್ಸ್ ಶಾಲೆ ತೆರೆಯಲು ಭಾನುಪ್ರಿಯ ಇಷ್ಟಪಟ್ಟಿದ್ದರು. ಇವತ್ತಿಗೂ ಆ ಆಸೆ ಈಡೇರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಆಕೆ ತಿಳಿಸಿದ್ದರು.

"ಅದ್ಯಾಕೋ ಡ್ಯಾನ್ಸ್ ಶಾಲೆ ತೆಗೆಯಲು ಸಾಧ್ಯವಾಗಲಿಲ್ಲ. ನಡುವೆ ನನಗೆ ಆರೋಗ್ಯ ಕೈ ಕೊಟ್ಟಿತ್ತು. ಮೆಮೊರಿ ಲಾಸ್ ಆಯಿತು. ಕಲಿತಿದ್ದ ನೃತ್ಯದ ಕೆಲ ಭಂಗಿ, ಮುದ್ರೆಗಳನ್ನೆಲ್ಲಾ ಮರೆತುಬಿಟ್ಟೆ. ಹಾಗಾಗಿ ಅದರ ಮೇಲೆ ಆಸಕ್ತಿ ಕಮ್ಮಿ ಆಯಿತು. ಈಗ ಮನೆಯಲ್ಲಿ ಕೂಡ ಡ್ಯಾನ್ಸ್ ಮಾಡಲ್ಲ, 2 ವರ್ಷಗಳಿಂದ ಮೆಮೊರಿ ಲಾಸ್ ಸಮಸ್ಯೆ ಎದುರಾಗಿದೆ" ಎಂದು ಭಾನುಪ್ರಿಯ ಹೇಳಿದ್ದರು.

ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ಡ್ಯಾನ್ಸ್ ಪರ್ಫಾರ್ಮನ್ಸ್ ಸಾಧ್ಯವಿಲ್ಲ. ಏನಾದರೂ ನೆನಪಿಟ್ಟುಕೊಳ್ಳಬೇಕಾದ ವಿಷಯಗಳನ್ನು ಮರೆತುಬಿಡ್ತೀನಿ. 'ಸಿಲ ನೆರಂಗಳಿಲ್ ಸಿಲ ಮಣಿಧರಗಳ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದೆ. ಚಿತ್ರೀಕರಣದ ವೇಳೆ ಡೈಲಾಗ್ಸ್ ಮರೆತುಬಿಡುತ್ತಿದ್ದೆ. ಆರೋಗ್ಯ ಸಮಸ್ಯೆಯಿಂದ ಹೀಗೆ ಆಗುತ್ತಿದೆ. ಅದಕ್ಕೆ ಮೆಡಿಸಿನ್ ತೆಗೆದುಕೊಳ್ತಿದ್ದೀನಿ. ಪತಿ ಅಗಲಿಕೆ ಬಳಿಕ ಇದು ಶುರುವಾಯಿತು" ಎಂದು ಭಾನುಪ್ರಿಯ ವಿವರಿಸಿದ್ದರು.

ಪತಿ ಆದರ್ಶ್ ಕೌಶಲ್ ಅಮೆರಿಕಾದಲ್ಲಿ ಡಿಜಿಟಲ್ ಗ್ರಾಫಿಕ್ಸ್ ಎಂಜಿನಿಯರ್ ಆಗಿದ್ದರು. ಹಾಗಾಗಿ ಭಾನುಪ್ರಿಯ ಸಿನಿಮಾ ಚಿತ್ರೀಕರಣಕ್ಕಾಗಿ ಹೆಚ್ಚು ಚೆನ್ನೈನಲ್ಲಿ ಇರುತ್ತಿದ್ದರು. ಹಾಗಾಗಿ ಇಬ್ಬರು ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿ ಕೇಳಿಬಂದಿತ್ತು. ಇದೇ ಸಂದರ್ಶನದಲ್ಲಿ ಅದೆಲ್ಲಾ ಸುಳ್ಳು, ನಾನು ಇಲ್ಲಿ ಅವರು ವಿದೇಶದಲ್ಲಿ ಇರುತ್ತಿದ್ದರು ಅಷ್ಟೆ. ಯಾವುದೇ ಡಿವೋರ್ಸ್ ಆಗಿರಲಿಲ್ಲ ಎಂದಿದ್ದರು. ಕನ್ನಡದಲ್ಲಿ 'ರಸಿಕ', 'ಸಿಂಹಾದ್ರಿಯ ಸಿಂಹ' ಸೇರಿ ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

More from Filmibeat

English summary
Famous Actress talked about her memory loss problem, video goes viral
Read more about: bhanupriya kollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X