ತುಂಡು ಬಟ್ಟೆ ಹಾಕಲ್ಲ ಅಂತ ಸೌಂದರ್ಯ ಅಳುತ್ತಾ ಕೂತಿದ್ರು, ಪ್ರಾಣಭಯದಿಂದ ಆ ಪಾತ್ರ ಒಲ್ಲೆ ಎಂದಿದ್ರು- ಶಂಕರ್
ಕನ್ನಡ ನಟಿ ಸೌಂದರ್ಯ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಮೋಡಿ ಮಾಡಿದ್ದರು. ಕನ್ನಡದಲ್ಲಿ ಕೂಡ ಕೆಲ ಸಿನಿಮಾಗಳಲ್ಲಿ ಮಿಂಚಿದ್ದರು. ಅಮಿತಾಬ್ ಮಾತ್ರವಲ್ಲದೇ ದಕ್ಷಿಣದ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡು ಗೆದ್ದಿದ್ದರು. ತಮ್ಮ 31ನೇ ವಯಸ್ಸಿನಲ್ಲೇ ಏರ್‌ಕ್ರಾಫ್ಟ್ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದರು.
ಅಭಿಮಾನಿಗಳು ಸೌಂದರ್ಯ ಅವರನ್ನು ಇಂದಿಗೂ ಮರೆತಿಲ್ಲ. ಆಕೆಯ ಸ್ನಿಗ್ಧ ಸೌಂದರ್ಯ, ನಟಿಸಿದ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಗ್ಲಾಮರಸ್ ಪಾತ್ರಗಳಿಗೆ ನೋ ಎನ್ನುತ್ತಿದ್ದ ಸೌಂದರ್ಯ ಸೀರೆ, ಸಲ್ವಾರ್ ತೊಟ್ಟು ತೆರೆಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು. ತುಂಡು ಬಟ್ಟೆ ತೊಡಲು ಒಪ್ಪುತ್ತಿರಲಿಲ್ಲ. 'ಹಲೋ ಬ್ರದರ್' ಚಿತ್ರಕ್ಕಾಗಿ ನಿರ್ದೇಶಕರು ಆಕೆ ತುಂಡು ಮಿಡ್ಡಿ ತೊಡಬೇಕು ಎಂದಾಗ ಸಾಧ್ಯವಿಲ್ಲ ಎಂದು ಅಳುತ್ತಾ ಕೂತಿದ್ದರಂತೆ. ಆ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಎನ್. ಶಂಕರ್ ಈ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಸೌಂದರ್ಯ ನಟಿಸಿದ 'ಹಲೋ ಬ್ರದರ್' ಹಾಗೂ 'ಶ್ರೀರಾಮುಲಯ್ಯ' ಚಿತ್ರಕ್ಕೆ ನಾನು ಕೋ ಡೈರೆಕ್ಟರ್ ಆಗಿದ್ದೆ ಎಂದು ತೆಲುಗು ವನ್ ಯೂಟ್ಯೂಬ್ ಸಂದರ್ಶನದಲ್ಲಿ ಎನ್. ಶಂಕರ್ ಹೇಳಿದ್ದಾರೆ. "ಸೌಂದರ್ಯ ತಂದೆ ಕನ್ನಡದಲ್ಲಿ ಸಿನಿಮಾ ಬರಹಗಾರಾಗಿದ್ದರು. ಅವ್ರೇ ಮಗಳ ಜೊತೆ ಇರುತ್ತಿದ್ದರು. 'ಹಲೋ ಬ್ರದರ್' ಚಿತ್ರೀಕರಣದ ವೇಲೆ ಮೊಣಕಾಲಿನವರಗೆ ಇರು ಡ್ರೆಸ್ ತೊಡಲು ನಿರ್ದೇಶಕರು ಹೇಳಿದ್ದರು. ಆಕೆ ಹಾಕಲು ಒಪ್ಪದೇ ಅಳುತ್ತಿದ್ದರು. ಇವಿವಿ ಸತ್ಯನಾರಾಯಣ ಖ್ಯಾತ ನಿರ್ದೇಶಕು, ನಾಗಾರ್ಜುನ ಹೀರೊ, ಈಕೆ ಹೊಸಬಳು. ಹಾಗಾಗಿ ತಂದೆ ಮಗಳು ಗಾಬರಿಯಾಗಿದ್ದರು" ಎಂದು ಆ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಬಳಿಕ ಏನಾಯ್ತು ಕೊನೆಗೆ ನಿರ್ದೇಶಕರು ನಾನು ಹೇಗೆ ಒಪ್ಪಿಸಿದೆ ಎಂದು ಶಂಕರ್ ಹೇಳಿದ್ದಾರೆ. "ನಾನು ಕಾಸ್ಟ್ಯೂಮ್ ಡಿಸೈನರ್‌ನ ಕರೆದು ಈ ಕಾಸ್ಟ್ಯೂಮ್ ಕೊಂಚ ಕೆಳಕ್ಕೆ ಮಾಡಿ ಹೊಲಿದು ಕೊಡಿ ಅಂದಾಗ ಇಲ್ಲ ಬೇರೆ ಇದೆ ಎಂದ. ಸರಿ ಎಂದು ನಾನು ನಿರ್ದೇಶಕರ ಬಳಿ ಹೋಗಿ ಸರ್ ಸೌಂದರ್ಯಗೆ ನೀವು ಹೇಳಿದ ಕಾಸ್ಟ್ಯೂಮ್ ಚೆನ್ನಾಗಿರಲ್ಲ. ಆಕೆಗೆ ಸೂಟ್ ಆಗುವುದಿಲ್ಲ ಎಂದೆ. ಯಾಕೆ ಆಗಲ್ಲ ಎಂದ್ರು. ಇಲ್ಲ ಸರ್ ಯಾಕೋ ಹೊಂದಿಕೆ ಆಗಲ್ಲ. ಇದು ಚೆನ್ನಾಗಿದೆ ನೋಡಿ ಎಂದು ತೋರಿಸಿ ಬೇರಿ ಕಾಸ್ಟೂಮ್ ತೋರಿಸಿ ಒಪ್ಪಿಸಿದೆ. ಬಳಿಕ ಸೌಂದರ್ಯ ಅದನ್ನು ಧರಿಸಿ ನಟಿಸಿದರು" ಎಂದಿದ್ದಾರೆ.

ಮುಂದೆ 'ಶ್ರೀರಾಮುಲಯ್ಯ' ಸಿನಿಮಾ ಮಾಡುವಾಗ ಕೆಲವರು ಸೌಂದರ್ಯಳನ್ನು ಹೆದರಿಸಿಬಿಟ್ಟಿದ್ದರು. ಈ ಸಿನಿಮಾ ಮಾಡಿದ್ರೆ ಏನೇನೋ ಆಗಿಬಿಡುತ್ತೆ ಎಂದುಬಿಟ್ಟಿದ್ದರು. ಸೌಂದರ್ಯ, ಆಕೆಯ ಸಹೋದರ ಯಾರೂ ಒಪ್ಪಲಿಲ್ಲ. "ಅದು ಫ್ಯಾಕ್ಷನಿಸಂ ಸಿನಿಮಾ. ನೈಜ ಘಟನೆ ಆಧರಿತ ಸಿನಿಮಾ. ಹಾಗಾಗಿ ಏನಾದರೂ ದಾಳಿ ಆಗಬಹುದು ಎಂದು ಭಯಗೊಂಡಿದ್ದರು. ನಾನು ಮಾತನಾಡಿ ಒಪ್ಪಿಸಿದೆ. ಇರುವುದು ಒಂದೇ ಜೀವ ಸತ್ತರೆ ಒಮ್ಮೆ ಸಾಯ್ತೀವಿ. ಭಯಪಡಬೇಡ, ಇದು ಅದ್ಭುತ ಪಾತ್ರ, ಒಪ್ಪಿಕೋ ಎಂದು ಕಥೆ ಹೇಳಿದಾಗ ಕೇಳಿ ಅತ್ತುಬಿಟ್ಟಳು. ನೀನು ಒಪ್ಪಿ ಬಳಿಕ ಮಾಡಲಿಲ್ಲ ಅಂದ್ರೆ ಚೆನ್ನಾಗಿರಲ್ಲ ಎಂದು ತಿಳಿಹೇಳಿದ ಮೇಲೆ ನಟಿಸೋಕೆ ಒಪ್ಪಿಕೊಂಡಿದ್ದಳು" ಎಂದು ಶಂಕರ್ ವಿವರಿಸಿದ್ದಾರೆ.
ನಾಲ್ಕೈದು ದಿನ ಚಿತ್ರೀಕರಣದ ಬಳಿಕ ಸೌಂದರ್ಯ ಒಗ್ಗಿಕೊಂಡರು. ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾ ಮಾಡಿ ಮುಗಿಸಿದರು. ಅನಂತಪುರದಲ್ಲಿ ಚಿತ್ರದ ಚಿತ್ರೀಕರಣ ನಡೀತು. ಚಿತ್ರದಲ್ಲಿ ಪರಿಟಾಲ ರವಿ ಜೀವನಾಧರಿತ ಕಥೆ ಇತ್ತು. ಸ್ವತ ಎನ್. ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಮೋಹನ್ ಬಾಬು ಲೀಡ್ ರೋಲ್‌ನಲ್ಲಿ ನಟಿಸಿದ್ದರು.


Click it and Unblock the Notifications











