"ನಮ್ ಮಾವ ಯಾವಾಗ್ಲೂ ಕುಡಿತ್ತಾನೆ, ಬಾಟಲ್ ಬ್ಯಾಗ್‌ನಲ್ಲಿಟ್ಟುಕೊಂಡು ಸುತ್ತಾಡ್ತಾನೆ: ಬಾಲಯ್ಯ ಅಳಿಯನ ಹೇಳಿಕೆ ವೈರಲ್
ಮೊನ್ನೆ ಮೊನ್ನೆ ಕಾರ್ಯಕ್ರಮವೊಂದರಲ್ಲಿ ತೆಲುಗು ನಟ ಬಾಲಕೃಷ್ಣ ವರ್ತನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ವೇದಿಕೆ ಮೇಲೆ ನಟಿ ಅಂಜಲಿ ಅವರನ್ನು ಬಾಲಯ್ಯ ತಳ್ಳಿದ್ದ ವೀಡಿಯೋ ವೈರಲ್ ಆಗಿತ್ತು. ಆಕೆ ಕೂಡ ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಎಂದು ಹೇಳಿ ಎಲ್ಲದ್ದಕ್ಕೂ ತೆರೆ ಎಳೆದಿದ್ದರು.
ಅಂಜಲಿ ಕೂಡ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಬಾಲಯ್ಯ ವರ್ತನೆ ಬಗ್ಗೆ ಆಕ್ರೋಶ ವ್ಯಕ್ಯವಾಗಿತ್ತು. ಈ ಹಿಂದೆ ಕೂಡ ಹಲವು ಬಾರಿ ಸಾರ್ವಜನಿಕವಾಗಿ ಬಾಲಕೃಷ್ಣ ಇದೇ ರೀತಿ ವರ್ತಿಸಿದ್ದರು. ಅವರ ಕೆಲ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿತ್ತು. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಮೊನ್ನೆ ಕಾರ್ಯಕ್ರಮದ ನಡುವೆ ಕೂಡ ಬಾಲಯ್ಯ ಮದ್ಯ ಸೇವಿಸಿದ್ದರು. ಅದೇ ಕಾರಣಕ್ಕೆ ವೇದಿಕೆ ಮೇಲೆ ಆ ರೀತಿ ನಡೆದುಕೊಂಡರು ಎನ್ನುವ ಆರೋಪ ಕೇಳಿಬಂತು.

ಒಬ್ಬ ನಟನಾಗಿ ಮಾತ್ರವಲ್ಲದೇ ಶಾಸಕರಾಗಿರುವ ಬಾಲಯ್ಯ ಕಾರ್ಯಕ್ರಮದಲ್ಲಿ ಕುಡಿದು ಈ ರೀತಿ ಮಾಡಬಹುದಾ? ಎನ್ನುವ ಚರ್ಚೆಯೂ ಶುರುವಾಯಿತು. ಅದಕ್ಕೆ ಕಾರಣ ವೇದಿಕೆ ಮುಂಭಾಗದಲ್ಲಿ ಅವರು ಕುಳಿತ್ತಿದ್ದಾಗ ಕಾಲಿನ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯದ ರೀತಿ ಪಾನೀಯ ಇರುವ ವಿಡಿಯೋಗಳು ವೈರಲ್ ಆಗಿತ್ತು. ಕಾರ್ಯಕ್ರಮದ ಆಯೋಜಕರು(ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ನಿರ್ಮಾಪಕರಿ) ಅದೆಲ್ಲಾ ಗ್ರಾಫಿಕ್ಸ್, ಬಾಲಯ್ಯಗೆ ಕೆಟ್ಟ ಹೆಸರು ತರುವ ಕುತಂತ್ರ ಎಂದುಬಿಟ್ಟರು.
ಈ ರೀತಿ ಕೂಡ ಗ್ರಾಫಿಕ್ಸ್ ಮಾಡಿ ಒಬ್ಬರ ಹೆಸರನ್ನು ಹಾಳು ಮಾಡಲು ಯತ್ನಿಸುವವರು ಯಾರಪ್ಪಾ? ಎಂದು ಕೆಲವರು ಅಚ್ಚರಿಗೊಂಡಿದ್ದರು. ಅದು ಗ್ರಾಫಿಕ್ಸ್ ಅಲ್ಲ, ಸತ್ಯ ಮುಚ್ಚಿ ಹಾಕುವ ಮಾತು ಎಂದು ಕೆಲವರು ಹೇಳಿದ್ದರು. ಇನ್ನು ಇದೆಲ್ಲದರ ಬೆನ್ನಲ್ಲೇ ನಟಿ ಅಂಜಲಿ ವೇದಿಕೆ ಏರಲು ಹೊರಟಾಗ ಪಕ್ಕದಲ್ಲೇ ಇದ್ದ ಬಾಲಕೃಷ್ಣ ಆಕೆಯ ಹಿಂಭಾಗ ಮುಟ್ಟಿದ ವೀಡಿಯೋ ಸಹ ವೈರಲ್ ಆಯಿತು. ಇದು ಗ್ರಾಫಿಕ್ಸ್ ಅಂತ ಹೇಳ್ಬೇಡಿ ಎಂದು ಕೆಲವರು ವ್ಯಂಗ್ಯವಾಡಿದ್ದರು.
ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಬಾಲಕೃಷ್ಣ ಮದ್ಯ ಸೇವಿಸಿದ್ದರು, ಅದಕ್ಕೆ ಆ ರೀತಿ ನಡೆದುಕೊಂಡರು ಎನ್ನುವ ಚರ್ಚೆ ನಡುವೆ ಅವರ ಅಳಿಯನ ಹಳೇ ಸಂದರ್ಶನದ ವಿಡಿಯೋ ವೈರಲ್ ಆಗ್ತಿದೆ. ತಮ್ಮ ಮಾವನ ಮದ್ಯ ವ್ಯಸನದ ಬಗ್ಗೆ ಅಳಿಯ ಶ್ರೀ ಭರತ್ ಮಾತನಾಡಿದ್ದರು. ಇದನ್ನು ತೋರಿಸಿ ಕೆಲವರು ಮತ್ತೆ ಬಾಲಕೃಷ್ಣ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಹಳೇ ಸಂದರ್ಶನದಲ್ಲಿ ಮಾತನಾಡಿದ್ದ ಬಾಲಯ್ಯ ಅವರ ಕಿರಿಯ ಅಳಿಯ ಶ್ರೀ ಭರತ್ "ನಮ್ಮ ಮಾವ ಮ್ಯಾನ್ಷನ್ ಹೌಸ್ ಕುಡಿಯುತ್ತಾರೆ ಎಂದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್ ಮೌಲ್ಯ ಹೆಚ್ಚಾಯಿತು ಎಂದು ನಕ್ಕಿದ್ದಾರೆ. ಬಿಸಿನೀರಿನಲ್ಲಿ ಬೆರೆಸಿ ಕುಡಿಯುತ್ತಾರಂತೆ? ಎಂದು ನಿರೂಪಕ ಕೇಳಿದಾಗ "ಹೌದು ನಿಜ" ಎಂದು ಭರತ್ ಪ್ರತಿಕ್ರಿಯಿಸಿದ್ದಾರೆ.
ಮಾತು ಮುಂದುವರೆಸಿರುವ ಶ್ರೀ ಭರತ್ "ಮಾವನ ಬಳಿ ಒಂದು ಬ್ಯಾಗ್ ಇರುತ್ತದೆ. ಅದರಲ್ಲಿ ಸದಾ ಬಿಸಿ ನೀರು ಮತ್ತು ಮದ್ಯದ ಬಾಟಲ್ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೇರಿಕಾಗೆ ಹೋದರೂ ತೆಗೆದುಕೊಂಡು ಹೋಗ್ತಾರೆ. ತುಂಬಾ ಲಾಯಲ್ಟಿ ನಮ್ಮ ಮಾವ " ಎಂದು ಭರತ್ ಹೇಳಿದ್ದ ವೀಡಿಯೋ ಈಗ ವೈರಲ್ ಆಗ್ತಿದೆ.
ಮತ್ತೊಂದು ಸಂದರ್ಶನದಲ್ಲಿ ಖುದ್ದು ಬಾಲಯ್ಯ ಮದ್ಯದ ಬಗ್ಗೆ ಒಂದು ಪದ್ಯ ಹೇಳಿದ್ದರು. ಆ ವೀಡಿಯೋ ಸಹ ವೈರಲ್ ಆಗುತ್ತಿದೆ. ಮಾವ, ಅಳಿಯ ಈ ರೀತಿ ಮದ್ಯ ಸೇವಿಸುವ ಬಗ್ಗೆ ಮಾತನಾಡುವುದು ಎಷ್ಟು ಸರಿ. ಇದರಿಂದ ಅಭಿಮಾನಿಗಳಿಗೆ ಕೆಟ್ಟ ಸಂದೇಶ ರವಾನೆ ಆಗುವುದಿಲ್ಲದೇ ಎಂದು ಆಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು.


Click it and Unblock the Notifications