ಲಿಪ್‌ಲಾಕ್ ಸೀನ್ ಕಾರಣಕ್ಕೆ ರಕ್ಷಿತ್, ರಶ್ಮಿಕಾ ಬ್ರೇಕಪ್ ಆಗಿತ್ತಾ? ವಿಜಯ್ ದೇವರಕೊಂಡ ಅಂದು ಹೇಳಿದ್ದಿದ್ದೇನು?
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ರಾಜಸ್ಥಾನದ ಉದಯ್‌ಪುರ್ ಪ್ಯಾಲೇಸ್‌ನಲ್ಲಿ ಅದ್ಧೂರಿ ಡೆಸ್ಟಿನೇಷನ್ ವೆಡ್ಡಿಂಗ್ ನಡೀತಿದೆ. ಫೆಬ್ರವರಿ 26ರಂದು ಕೆಲವೇ ಆಪ್ತರ ಸಮ್ಮುಖದಲ್ಲಿ ಜೋಡಿ ಹಸೆಮಣೆ ಏರಲಿದೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯುವ ರಿಸೆಪ್ಷನ್ ಪಾರ್ಟಿಯಲ್ಲಿ ತಾರೆಯರು ಭಾಗಿ ಆಗಲಿದ್ದಾರೆ.
ಈವರೆಗೆ ತಮ್ಮ ಮದುವೆ ಬಗ್ಗೆ 'ಡಿಯರ್ ಕಾಮ್ರೇಡ್' ಜೋಡಿ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮದುವೆ ನಡೆಯುತ್ತಿರುವುದು ಖಚಿತ, ಸಾಕಷ್ಟು ಜನರಿಗೆ ಮದುವೆ ಆಮಂತ್ರಣ ಕೂಡ ತಲುಪಿದೆ. ಅಂದಹಾಗೆ ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಮದುವೆ ನಿಶ್ಚಯವಾಗಿತ್ತು. ಅದ್ಧೂರಿ ಎಂಗೇಜ್‌ಮೆಂಟ್ ಬಳಿಕ ಜೋಡಿ ದೂರಾಗಿತ್ತು. 'ಗೀತಗೋವಿಂದಂ' ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಲಿಪ್‌ಲಾಕ್ ಸೀನ್ ಲೀಕ್ ಆಗಿದ್ದೇ ಇದಕ್ಕೆಲ್ಲಾ ಕಾರಣ ಎನ್ನುವ ಊಹಾಪೋಹ ಕೇಳಿಬಂದಿತ್ತು. ಈ ಬಗ್ಗೆ ವಿಜಯ್ ದೇವರಕೊಂಡಗೆ ನೇರವಾಗಿ ಪ್ರಶ್ನೆ ಎದುರಾಗಿದ್ದು ಇದೆ. ರಶ್ಮಿಕಾ ಮದುವೆ ದಿನಾಂಕ ಹತ್ತಿರವಾದಂತೆ ಈ ಬಗ್ಗೆ ಚರ್ಚೆ ಜೋರಾಗಿದೆ.

'ನೋಟ' ಸಿನಿಮಾ ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕಪ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ವಿಜಯ್ ಪ್ರತಿಕ್ರಿಯಿಸಿ "ಆ ರೀತಿ ಏನಾದರೂ ನಡೆದರೆ ನಿಜಕ್ಕೂ ಬೇಸರವಾಗುತ್ತದೆ. ಅವರಿಬ್ಬರೂ ಇದರಿಂದ ಎಷ್ಟು ನೊಂದಿದ್ದಾರೆ ಎನ್ನುವುದು ನನಗೆ ಗೊತ್ತು. ಬೇರೆಯವರ ವೈಯಕ್ತಿಕ ವಿಚಾರದ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ನಾನು ಅವರಿಬ್ಬರನ್ನು ಗೌರವಿಸುತ್ತೀನಿ. ನನಗೆ ರಕ್ಷಿತ್ ವರ್ಕ್ ಬಹಳ ಇಷ್ಟ. ಸಹನಟಿಯಾಗಿ ರಶ್ಮಿಮಾ ಕೂಡ ಇಷ್ಟ. ನಾನು ಈ ಬಗ್ಗೆ ಮಾತನಾಡಲು 3ನೇ ವ್ಯಕ್ತಿ" ಎಂದು ಹೇಳಿದ್ದರು.
'ಗೀತಗೋವಿಂದಂ' ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದರ ಬಗ್ಗೆಯೂ ವಿಜಯ್ ಮಾತನಾಡಿದ್ದರು. "ದುರಾದೃಷ್ಟವಶಾತ್ ಆ ರೀತಿ ಆಗಿಹೋಯಿತು. ಅದರಿಂದ ಬಹಳ ಸಮಸ್ಯೆ ಆಯಿತು. ಆದರೆ ನಡೆಯು ಹೋಯಿತು. ಜೀವನ ಒಂದು ನಾಟಕ, ನಡೆದಿದ್ದು ನಡೆದು ಹೋಯಿತು" ಎಂದಿದ್ದರು.

'ಡಿಯರ್ ಕಾಮ್ರೇಡ್' ಸಿನಿಮಾ ಪ್ರಚಾರಕ್ಕಾಗಿ ರಶ್ಮಿಕಾ ಹಾಗೂ ವಿಜಯ್ ಬೆಂಗಳೂರಿಗೆ ಬಂದಿದ್ದರು. ಆಗ ಬ್ರೇಕಪ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಈ ವೇಳೆ ಪ್ರಶ್ನೆಗೆ ಉತ್ತರಿಸದೇ ರಶ್ಮಿಕಾ ಪತ್ರಕರ್ತರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಿದ್ದರು.
ಬ್ರೇಕಪ್ ಬಳಿಕ ಕೂಡ ರಶ್ಮಿಕಾ ಜೊತೆ ಸ್ನೇಹ ಮುಂದುವರೆದಿದೆ ಎಂದು ರಕ್ಷಿತ್ ಶೆಟ್ಟಿ ಹೇಳುತ್ತಾ ಬರ್ತಿದ್ದಾರೆ. ಆದರೆ ರಕ್ಷಿತ್ ಗ್ಯಾಂಗ್‌ನಲ್ಲಿ ಯಾರಿಗೂ ರಶ್ಮಿಕಾ ಮದುವೆ ಆಮಂತ್ರಣ ಕೊಟ್ಟಿಲ್ಲ. ಈ ಬಗ್ಗೆ ನಟ ಪ್ರಮೋದ್ ಶೆಟ್ಟಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. ರಶ್ಮಿಕಾ ಮದುವೆಗೆ ಕರೆದಿದ್ದಾರಾ? ಎಂದು ಮಾಧ್ಯಮದವರು ಕೇಳಿದ್ದಕ್ಕೆ "ಅವರು ನನಗೆ ಇನ್ವಿಟೇಷನ್ ಕೊಟ್ಟಿಲ್ಲ. ನನಗೆ ಕೊಡಲ್ಲ ಅನ್ನುವುದು ಗೊತ್ತಿದೆ" ಎಂದಿದ್ದಾರೆ.
ರಶ್ಮಿಕಾ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದ್ಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಪ್ರಮೋದ್ ಶೆಟ್ಟಿ "ಅದೆಲ್ಲಾ ಯಾವ ಕಾಲದಲ್ಲೋ ಆಗಿ ಹೋಯಿತು. ಅವನೇನು ಏನು ಚಿಕ್ಕ ಮಗುನಾ, ಅದರಲ್ಲೇ ಕೊರಗುತ್ತಾ ಕೂರೋಕೆ ಎಂದು ಹೇಳಿದ್ದಾರೆ. ಚಾಕ್ಲೆಟ್ ತಿನ್ನೋವ್ರಾ? ಎಂದು ಪ್ರಶ್ನೆ ಮಾಡಿ ಅದೆಲ್ಲಾ ಮುಗಿದು ಹೋದ ಅಧ್ಯಾಯ" ಎಂದು ತಿಳಿಸಿದ್ದಾರೆ.
ಈಗಾಗಲೇ 'ಗೀತಾಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾಗಳ ಬಳಿಕ ವಿಜಯ್ ಹಾಗೂ ರಶ್ಮಿಕಾ 'ರಣಬಾಲಿ' ಎಂಬ ಮತ್ತೊಂದು ಚಿತ್ರಕ್ಕಾಗಿ ಜೊತೆಯಾಗುತ್ತಿದ್ದಾರೆ. ಈ ಐತಿಹಾಸಿಕ ಸಿನಿಮಾ ಶೀಘ್ರದಲ್ಲೇ ಶುರುವಾಗಲಿದೆ. ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











