ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಸಮಂತಾ ಮೇಲೆ ಮುಗಿಬಿದ್ದ ಜನ; ಅಂಧಾಭಿಮಾನಕ್ಕೆ ಸ್ಯಾಮ್ ಹೈರಾಣು

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.ಬಾಡಿಗಾರ್ಡ್‌ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುವ ಪ್ರಯತ್ನವನ್ನು ಮಾಡಿದರೂ ಕೂಡ ಪ್ರಯೋಜನವಾಗುತ್ತಿಲ್ಲ. ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂತೆ ಜನ ಎಲ್ಲಾ...

ಭದ್ರ ಕೋಟೆಯನ್ನು ದಾಟಿ ಈ ಸೆಲೆಬ್ರಿಟಿಗಳನ್ನು ಮುತ್ತಿಕೊಳ್ಳುತ್ತಾರೆ. ಅದರಲ್ಲಿಯೂ ನಾಯಕಿಯರ ಪಾಡು ಹೇಳಲು ಅಸಾಧ್ಯ. ಅಭಿಮಾನದ ನೆಪದಲ್ಲಿ ಕೊಡಬಾರದ ಟಾರ್ಚರ್‌ನ ಕೊಡಲು ಕೆಲವರು ಕೊಡುತ್ತಾರೆ. ಅಂಧಾಭಿಮಾನದ ಪ್ರದರ್ಶನ ಮಾಡ್ತಾರೆ. ತಮ್ಮ ನೆಚ್ಚಿನ ನಟಿಗೆ ನರಕ ದರ್ಶನವನ್ನೂ ಕೂಡ ಮಾಡಿಸುತ್ತಾರೆ. ಇದಕ್ಕೆ ವೈರಲ್ ಆದ ಸಮಂತಾ ವಿಡಿಯೋ ಮತ್ತೊಂದು ಸಾಕ್ಷಿ.

Where Are the Boundaries Samantha Mobbed as Fan Frenzy Turns Dangerous in Hyderabad

ಹೌದು..ಮೊನ್ನೆ..ಮೊನ್ನೆಯಷ್ಟೇ ಎರಡನೇ ಮದುವೆಯಾದ ಸಮಂತಾ, ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆದರೆ.. ಇದೇ ಸಮಯದಲ್ಲಿ ಸಮಂತಾ ಅವರನ್ನು ಹಲವರು ಸುತ್ತುವರೆದಿದ್ದರು. ಜನಸ್ತೋಮ ಎಷ್ಟಿತ್ತು ಅಂದರೆ ಅಲ್ಲಿಂದ ಪಾರಾಗುವಷ್ಟರಲ್ಲಿ ಸಮಂತಾ ಅಕ್ಷರಶಃ ಹೈರಾಣಾದರು. ಸೆಕ್ಯೂರಿಟಿ ಗಾರ್ಡ್‌ಗಳು ಸುತ್ತ ಇದ್ದರೂ ಕೂಡ ಪ್ರಯೋಜನವಾಗಿಲ್ಲ. ಅಲ್ಲೇ ಇದ್ದ ಪೊಲೀಸರು ಕೂಡ ಹರಸಾಹಸ ಮಾಡಿದರು ಕೂಡ ನೂಕು ನುಗ್ಗಲನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಸಮಂತಾ ಅವರನ್ನು ಹತ್ತಿರದಿಂದ ನೋಡಿದರೆ ಸಾಕು, ಅವರ ಜೊತೆ ಒಂದು ಸೆಲ್ಫಿ ಕ್ಲಿಕಿಸಿಕೊಂಡರೆ ನಮ್ಮ ಜನ್ಮ ಸಾರ್ಥಕ ಎಂದುಕೊಂಡು ಬಂದಿದ್ದ ಹಲವಾರು ಜನ ಸಮಂತಾ ಕೈ ಕುಲುಕಲು ಮುಗಿ ಬಿದ್ದಿದ್ದರು. ಸೆಲ್ಫಿಗಾಗಿ ಮಾಡಬಾರದ ಕಸರತ್ತನ್ನೆಲ್ಲಾ ಮಾಡಿದರು. ಆದರೂ ಕೂಡ ತಮಗೆ ಎಷ್ಟೇ ಕಷ್ಟವಾದರು ಕೂಡ ಸಮಂತಾ ನಗುತ್ತಲೇ ಪರಿಸ್ಥಿತಿಯನ್ನು ಸಂಭಾಳಿಸುವ ಪ್ರಯತ್ನ ಮಾಡಿದರು. ಆದರೆ.. ತಮ್ಮ ಈ ಪ್ರಯತ್ನದಲ್ಲಿ ಸಮಂತಾ ಯಶಸ್ವಿಯಾಗಲೇ ಇಲ್ಲ.

ಸದ್ಯ ಅಭಿಮಾನದ ಹೆಸರಿನಲ್ಲಿ ಸಮಂತಾ ಅವರನ್ನು ಹಲವರು ಸುತ್ತುವರೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಈ ಅಭಿಮಾನ ಕಂಡು ಹಲವರು ಕೆಂಡ ಕಾರುತ್ತಿದ್ದಾರೆ.
ಅಭಿಮಾನಕ್ಕೆ ಅಲ್ಲಿ ಸುತ್ತುವರೆದ ಜನ ಕಳಂಕ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಮಂತಾ ಅವರನ್ನು ಸ್ಫರ್ಶಿಸಲೆಂದೇ ಬಂದ ಇವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವಾ ಎಂದು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಸಮಂತಾ ಅವರಿಗಾದಂತೆಯೇ ನಿಧಿ ಅಗರ್ವಾಲ್ ಅವರಿಗೆ ಕೂಡ ಈ ಅಂಧಾಭಿಮಾನದಿಂದ ನರಕ ದರ್ಶನವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನಿಧಿ ಅಗರ್ವಾಲ್ ಅವರು ಪರದಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಸಮಂತಾ ಸರದಿ. ಈ ಹಿನ್ನೆಲೆ ಕೆರಳಿ ಕೆಂಡವಾಗಿರುವ ಹಲವರು ಅಭಿಮಾನಿಗಳಿಗೆ ಕೂಡ ಒಂದು ಮೀತಿ ಇರುತ್ತೆ, ಅವರು ಯಾಕೆ ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕಾರ್ಯಕ್ರಮದ ಆಯೋಜಕರು ಯಾಕೆ ಮುಂಜಾಗೃತಾ ಕ್ರಮ ಕೈಗೊಳ್ಳಲ್ಲ ಎಂದು ಕೇಳುತ್ತಿದ್ದಾರೆ.

Where Are the Boundaries Samantha Mobbed as Fan Frenzy Turns Dangerous in Hyderabad

ಸದ್ಯ ಸಮಂತಾ ಅವರ ಈ ವಿಡಿಯೋ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಇನ್ನುಳಿದಂತೆ ತೀರಾ ಇತ್ತೀಚೆಗಷ್ಟೇ ಬಾಲಿವುಡ್‌ನ ನಿರ್ಮಾಫಕ ಮತ್ತು ನಿರ್ದೇಶಕ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ಸಮಂತಾ ತಮ್ಮ ಪತಿ ರಾಜ್ ನಿಡಿಮೋರು ನಿರ್ಮಾಣದಲ್ಲಿಯೇ ಸಿದ್ಧವಾಗುತ್ತಿರುವ ''ರಕ್ತ ಬ್ರಹ್ಮಾಂಡ: ದಿ ಬ್ಲಡಿ ಕಿಂಗ್‌ಡಮ್'' ಎಂಬ ಹೊಸ ವೆಬ್ ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ. ಆದಿತ್ಯ ರಾಯ್ ಕಪೂರ್, ಅಲಿ ಫಜಲ್, ವಾಮಿಕಾ ಗಬ್ಬಿ ಮತ್ತು ಜೈದೀಪ್ ಅಹ್ಲಾವತ್ ಈ ಸರಣಿಯಲ್ಲಿ ಸಮಂತಾ ಜೊತೆ ಕಾಣಸಿಗಲಿದ್ದಾರೆ. ಮುಂದಿನ ವರ್ಷ ಈ ಸರಣಿ ಪ್ರಸಾರವಾಗುವ ನಿರೀಕ್ಷೆ ಇದೆ.

Why fans in south don't understand boundaries even after rajasaab incident
byu/Hungry_Business592 inBollyBlindsNGossip

More from Filmibeat

English summary
Days after the Nidhhi Agerwal incident, Samantha Ruth Prabhu is mobbed by a "sea of men" at a Hyderabad event. Explore why the internet is demanding better safety and boundaries for celebrities.
Read more about: samantha fans tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X