"ನಾನು KGF ಸಿನ್ಮಾ ಮಾಡ್ಬೇಕಿತ್ತು ಅಂತ ಫ್ಯಾನ್ಸ್ ಕೈಕೈ ಹಿಸುಕಿಕೊಂಡಿದ್ರು, ಸಲಾರ್ ಒಪ್ಪದಿದ್ರೆ ಅವ್ರು ನನ್ನ ಸಾಯ್ಸಿಬಿಡ್ತಿದ್ರು

'ಸಲಾರ್' ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಪ್ರಭಾಸ್ ಅಭಿಮಾನಿಗಳು ಫಸ್ಟ್ ಡೇ ಟಿಕೆಟ್ ಬುಕ್‌ ಮಾಡಿಕೊಂಡು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ತೆಲಂಗಾಣದಲ್ಲಿ ಮಧ್ಯರಾತ್ರಿಯಿಂದಲೇ 'ಸಲಾರ್' ಆರ್ಭಟ ಶುರುವಾಗಲಿದೆ. ಇನ್ನು ಚಿತ್ರದ ಪ್ರಚಾರಕ್ಕಾಗಿ ರಾಜಮೌಳಿ ಚಿತ್ರತಂಡವನ್ನು ಸಂದರ್ಶನ ಮಾಡಿದ್ದಾರೆ.

ಪ್ರಭಾಸ್, ಪ್ರಶಾಂತ್ ನೀಲ್ ಹಾಗೂ ಪೃಥ್ವಿರಾಜ್‌ ಸುಕುಮಾರನ್ ಈ ಸಂದರ್ಶನದಲ್ಲಿ ಭಾಗಿ ಆಗಿದ್ದು ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. 'KGF' ಸರಣಿ ಬಳಿಕ ಎಲ್ಲಾ ಸ್ಟಾರ್ ನಟರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದರು. ಆದರೆ ನೀಲ್ ಮಾತ್ರ ನಿಮ್ಮನ್ನು ಆಯ್ಕೆ ಮಾಡಿಕೊಂಡರು. ಆಗ ನಿಮ್ಮ ಈಗೋ ಹೇಗಿತ್ತು? ಎಂದು ರಾಜಮೌಳಿ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಭಾಸ್ ಇಂಟ್ರೆಸ್ಟಿಂಗ್ ಆಗಿ ಉತ್ತರಿಸಿದ್ದಾರೆ.

Wherever I go, there is more discussion about KGF than Baahubali, Says prabhas

"ನನ್ನ ಅಭಿಮಾನಿಗಳು 'KGF' ಸಿನಿಮಾ ನೋಡಿ ಅರೇ, ಪ್ರಭಾಸ್ ಈ ಸಿನಿಮಾ ಮಾಡ್ಬೇಕಿತ್ತು ಅಂತ ಕೈಕೈ ಹಿಸುಕಿಕೊಂಡಿದ್ದರು. ದೊಡ್ಡ ದೊಡ್ಡ ರಾಜಕಾರಣಗಳು ಕೂಡ 'ಬಾಹುಬಲಿ' ಬಳಿಕ 'KGF' ಸಿನಿಮಾ ಮಾಡ್ಬೇಕಿತ್ತು ಅಂತ ಚಡಪಡಿಸಿದ್ರು. ನಾನು ಎಲ್ಲೇ ಹೋದರೂ 'ಬಾಹುಬಲಿ'ಗಿಂತ ಜಾಸ್ತಿ 'KGF' ಬಗ್ಗೆ ಮಾತನಾಡುತ್ತಿದ್ದರು. ನನಗೆ ಶಾಕ್ ಆಗಿತ್ತು. ನಾನು ಆಗ ಸಿನಿಮಾ ನೋಡಿರಲಿಲ್ಲ. ನನ್ನ ಸುತ್ತಾಮುತ್ತಾ ಇದ್ದ ಎಲ್ಲರೂ ಸಿನಿಮಾ ಬಗ್ಗೆ ಮಾತನಾಡಿ ಕೈ ಕೈ ಹಿಸುಕಿಕೊಳ್ತಿದ್ರು"

"ನಾನು ಅಬ್ಬಾ ಈ ಮನುಷ್ಯ ಅದೇನು ಮಾಡಿದ್ದಾನೆ ಅಂದುಕೊಂಡಿದ್ದೆ. ಸಿನಿಮಾ ನೋಡಿದ ಮೇಲೆ ನಿಜಕ್ಕೂ ಇಷ್ಟವಾಯಿತು. ಬಳಿಕ ಪ್ರಶಾಂತ್ ನೀಲ್ ನನ್ನನ್ನು ಭೇಟಿ ಆಗಬೇಕು ಎಂದುಕೊಂಡಿದ್ದಾರೆ ಎಂದರು. ಸಾಮಾನ್ಯವಾಗಿ ನಿರ್ದೇಶಕರು ನಿಮ್ಮನ್ನು ಭೇಟಿಯಾಗಬೇಕು ಎನ್ನುತ್ತಿದ್ದಾರೆ ಎಂದು ನಿರ್ಮಾಪಕರು ಹೇಳುತ್ತಾರೆ. ಆದರೆ ಇಲ್ಲಿ ಹೀರೊ ನಿಮ್ಮನ್ನು ಭೇಟಿಯಾಗಬೇಕು ಎಂದಿದ್ದಾರೆ ಎಂದು ಹೇಳಬೇಕಿತ್ತು. ಯಾಕಂದರೆ ನೀಲ್‌ಗೆ ಅಷ್ಟು ಬೇಡಿಕೆ ಇತ್ತು. ಅದು ನಿಮಗೂ ಗೊತ್ತು"

"ನಿರ್ಮಾಪಕರು ಹೇಳಿದ್ದು ನಿಜಾನಾ? ಎಂದು ಮತ್ತೊಮ್ಮೆ ಕೇಳಿದೆ. ನಿಜಕ್ಕೂ ಪ್ರಶಾಂತ್ ನೀಲ್ ನನ್ನನ್ನು ಭೇಟಿ ಆಗಬೇಕು ಅಂದ್ರಾ? ಅಥವಾ ನೀವೇ ಒತ್ತಡ ಹಾಕಿದ್ರಾ? ಅಂತ. ಬಾಹುಬಲಿ ಹೀರೊ ಕರೆ ಮಾಡ್ತಿದ್ದಾರೆ ಅಂತ ಅವ್ರು, KGF ನಿರ್ದೇಶಕರು ಕರೆ ಮಾಡ್ತಿದ್ದಾರೆ ಅಂತ ನಾನು, ಇಬ್ಬರೂ ಆಗಲ್ಲ ಅನ್ನೋಕೆ ಸಾಧ್ಯವಿಲ್ಲ. ಇದು ನಿರ್ಮಾಪಕರು ಹೇಳ್ತಿದ್ದಾರಾ? ನಾವು ಅಂದುಕೊಳ್ತಿದ್ದೀವಾ? ಗೊತ್ತಾಗಲಿಲ್ಲ."

"ನಾನು ಮತ್ತೊಮ್ಮೆ ನಿರ್ಮಾಪಕರನ್ನು ಕೇಳಿದೆ. ಅವ್ರು ಹೌದು ಪ್ರಶಾಂತ್ ನೀಲ್ ಮಾತನಾಡಬೇಕು ಅಂದ್ರು ನಾನು ಸರಿ ಎಂದೆ. ಆದರೆ ಅದು ಹೊಂಬಾಳೆ ಫಿಲ್ಮ್ಸ್‌ನವರು ಅಲ್ಲ. ಬೇರೆ ನಿರ್ಮಾಪಕರು. ಸರಿ ನಾವು ಭೇಟಿ ಆಗಿದ್ದೆವು. ಸುಮ್ಮನೆ ಮಾತನಾಡುತ್ತಿದ್ದೆವು. ನಿಮಗೆ ಯಾವ ಸಿನಿಮಾ ಇಷ್ಟ? ಅಂತ ಅವ್ರು, ಅವರಿಗೆ ಯಾವ ಸಿನಿಮಾ ಇಷ್ಟ ಅಂತ ನಾನು ಮಾತನಾಡುತ್ತಿದ್ದೆವು. ಇಬ್ಬರು ಕೂಡ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚಿಸಲಿಲ್ಲ. ಆ ಬಳಿಕವೇ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೀತು"

"ಒಂದು ವೇಳೆ ನಾನು ಪ್ರಶಾಂತ್‌ ನೀಲ್ ಕೇಳಿದಾಗ ಒಪ್ಪಿಕೊಳ್ಳಲಿಲ್ಲ ಎಂದರೆ ನನ್ನ ಫ್ಯಾನ್ಸ್ ನನ್ನ ಸಾಯಿಸಿಬಿಡುತ್ತಿದ್ದರು. ಹಾಗಾಗಿ ಒಪ್ಪಿಕೊಂಡೆ ಎಂದಿದ್ದಾರೆ" ಎಂದು ಪ್ರಭಾಸ್ ಹೇಳಿದ್ದಾರೆ. ರಾಜಮೌಳಿ ನೀವು 'ಸಲಾರ್' ಸಿನಿಮಾ ಹೇಗೆ ಶುರುವಾಯಿತು ಎಂದು ಹೇಳಿದ್ರಿ, ಸರಿ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂದಿದ್ದಾರೆ. ಪ್ರಶಾಂತ್ ನೀಲ್ ಎಲ್ಲರನ್ನು ಬಿಟ್ಟು ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಹೇಗನಿಸಿತು? ಎಂದು ಪುನಃ ಕೇಳಿದ್ದಾರೆ.

"ನಿಜಕ್ಕೂ ನಾನು ಲಕ್ಕಿ ಎನಿಸಿತು. ನನಗೆ ಅನಿಸಿತು, ಒಬ್ಬ ವ್ಯಕ್ತಿ(ರಾಜಮೌಳಿ) ನನಗೆ ಬಾಹುಬಲಿ ಸಿನಿಮಾ ಕೊಟ್ಟ. ಅದಕ್ಕೆ ಇದೆಲ್ಲಾ ನಡೀತಿದೆ ಎನಿಸಿತು" ಎಂದು ರಾಜಮೌಳಿ ಎದುರೇ ಪ್ರಭಾಸ್ ನಕ್ಕಿದ್ದಾರೆ. ಸಲಾರ್ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ.

More from Filmibeat

English summary
Prabhas reveled My fans wished that I should've done the KGF series;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X