'ಪುಷ್ಪ'-2ನಲ್ಲಿ ಒದೆ ತಿನ್ನುವ ಪಾತ್ರ ಬೇಡ ಎಂದಿದ್ದ ಪ್ರಮೋದ್; ಆ ಪಾತ್ರ ಮಾಡಿರೋದ್ಯಾರು?
ತೆಲುಗಿನ 'ಪುಷ್ಪ'-2 ಚಿತ್ರದಲ್ಲಿ ಕನ್ನಡಿಗರ ದರ್ಬಾರು ಜೋರಾಗಿದೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ನಟ ಧನಂಜಯ್ ಕೂಡ ನಟಿಸಿದ್ದಾರೆ. ಶ್ರೀಲೀಲಾ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ, ಅಜನೀಶ್ ಲೋಕನಾಥ್ ಸಂಗೀತ ಕೂಡ ಚಿತ್ರಕ್ಕಿದೆ.
ತಾರಕ್ ಪೊನ್ನಪ್ಪ ಹಾಗೂ ನಂದ ಗೋಪಾಲ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನು ನಟ ಪ್ರಮೋದ್ ಅವರಿಗೂ 'ಪುಷ್ಪ'-2 ಚಿತ್ರದಿಮದ ಬುಲಾವ್ ಬಂದಿತ್ತು. ಒಂದು ಪಾತ್ರ ಇದೆ, ನೀವೇ ಮಾಡಬೇಕು ಎಂದರು. ಮೊದಲು ಇಷ್ಟ ಆಯ್ತು. ಆದರೆ ಬಳಿಕ ನಾಯಕನ ಕೈಯಲ್ಲಿ ಹೊಡೆಸಿಕೊಳ್ಳುವ ಪಾತ್ರ ಅದು, ಅದಕ್ಕೆ ಇಷ್ಟವಾಗಲಿಲ್ಲ. ಹಾಗಾಗಿ ಒಪ್ಪಲಿಲ್ಲ ಎಂದು ಪ್ರಮೋದ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಕನ್ನಡದಲ್ಲಿ ನಾನು ಹೀರೊ ಆಗಿ ನಟಿಸುತ್ತಿದ್ದೇನೆ. ಜನ ನನ್ನನ್ನು ಆ ರೀತಿ ನೋಡುತ್ತಿರುವಾಗ, ನೆಗೆಟಿವ್ ಪಾತ್ರ ಬೇಡ ಎನಿಸಿತು ಎಂದು ಪ್ರಮೋದ್ ವಿವರಿಸಿದ್ದರು. ಸದ್ಯ 'ಪುಷ್ಪ'-2 ಸಿನಿಮಾ ಬಿಡುಗಡೆ ಆಗಿದೆ. ಚಿತ್ರದ ಕಥೆ, ಕಲಾವಿದರು ಯಾರೆಲ್ಲಾ ನಟಿಸಿದ್ದಾರೆ? ಯಾರ ಪಾತ್ರ ಏನು? ಎನ್ನುವುದು ರಿವೀಲ್ ಆಗಿದೆ. ಹಾಗಾದರೆ ಪ್ರಮೋದ್ ಬೇಡ ಎಂದು ರಿಜೆಕ್ಟ್ ಮಾಡಿದ ಪಾತ್ರ ಯಾವುದೇ ಎಂದು ಕನ್ನಡ ಸಿನಿರಸಿಕರು ಚರ್ಚೆ ನಡೆಸುತ್ತಿದ್ದಾರೆ.
'ಪುಷ್ಪ'-2 ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ರಶ್ಮಿಕಾ ಮಂದಣ್ಣ ಉತ್ತಮವಾಗಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ನು ಧನಂಜಯ್ ಪಾತ್ರವೇ ನಿರಾಸೆ ಮೂಡಿಸುತ್ತದೆ. ಮತ್ತೊಮ್ಮೆ ಾಲಿ ರೆಡ್ಡಿಯಾಗಿ ಕ್ಲೈಮ್ಯಾಕ್ಸ್‌ನ ಸಣ್ಣ ಝಲಕ್‌ನಲ್ಲಿ ಕೆಲವೇ ಕ್ಷಣಗಳು ಬಂದು ಹೋಗುತ್ತಾರೆ. ಇನ್ನು 'ಕಿಸ್ಸಿಕ್' ಎಂದು ಶ್ರೀಲೀಲಾ ಕುಣಿದಿದ್ದಾರೆ. ಆದರೆ ಅದು ಚಿತ್ರಕ್ಕೆ ಪ್ಲಸ್ ಆದಂತೆ ಕಾಣುತ್ತಿಲ್ಲ.
ರಕ್ತಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಸದಸ್ಯನಾಗಿ ನಂದ ಗೋಪಾಲ್ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರತಾಪ್ ರೆಡ್ಡಿ(ಜಗಪತಿ ಬಾಬು) ತಮ್ಮನ ಮಗ ಕೊಗತಂ ಬುಗ್ಗಿ ರೆಡ್ಡಿ ಪಾತ್ರದಲ್ಲಿ ತಾರಕ್ ಪೊನ್ನಪ್ಪ ನಟಿಸಿದ್ದಾರೆ. ನೆಗೆಟಿವ್ ಪಾತ್ರ ಇದು. ಗಂಗಮ್ಮ ಜಾತ್ರೆ ಎಪಿಸೋಡ್‌ನಲ್ಲಿ ಹುಚ್ಚಾಟ ಮರೆದು ಪುಷ್ಪರಾಜ್ ಕೈಯಲ್ಲಿ ಒದೆ ತಿನ್ನುವ ಪಾತ್ರ. ಅದೇ ಕೋಪದಿಂದ ಮತ್ತೆ ಪುಷ್ಪರಾಜ್ ವಿರುದ್ಧ ಸೇಡು ತೀರಿಸಿಕೊಳ್ಳುವಂತ ಪಾತ್ರ.

ಸದ್ಯ 'ಪುಷ್ಪ'-2 ಸಿನಿಮಾ ನೋಡಿದ ಬಳಿಕ ಪ್ರಮೋದ್ ರಿಜೆಕ್ಟ್ ಮಾಡಿದ್ದು ಇದೇ ಕೊಗತಂ ಬುಗ್ಗಿ ರೆಡ್ಡಿ ಎಂದು ಸಿನಿರಸಿಕರು ಕಾಮೆಂಟ್ ಮಾಡುತ್ತಿದ್ದಾರೆ. ಆ ಪಾತ್ರ ಬೇಡ ಎಂದು ಹೇಳಿ ಒಳ್ಳೆ ಕೆಲಸ ಮಾಡಿದ್ದೀರಾ ಪ್ರಮೋದ್ ಸರ್ ಎಂದು ಕೆಲವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕನ್ನಡ ಸಿನಿರಸಿಕರು ಇಂತಹ ಪ್ರತಿಭೆಗಳನ್ನು ಬೆಳೆಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
'ಪುಷ್ಪ'-3 ಚಿತ್ರ ಕೂಡ ಘೋಷಣೆ ಆಗಿದೆ. ಜಾಲಿ ರೆಡ್ಡಿ ಪಾತ್ರವನ್ನು ಕೊನೆಗೆ ತೋರಿಸಿ, ಧನಂಜಯ್ ಮುಂದಿನ ಭಾಗದಲ್ಲಿ ಇರ್ತಾರೆ ಎನ್ನುವುದು ಖಚಿತವಾಗಿದೆ. ಆದರೆ ಸದ್ಯಕ್ಕೆ ಆ ಸಿನಿಮಾ ಶುರುವಾಗುವ ಸಾಧ್ಯತೆ ಕಮ್ಮಿ ಇದೆ. ಇನ್ನು 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.
ವಿಶ್ವದಾದ್ಯಂತ 'ಪುಷ್ಪ'-2 ಸಿನಿಮಾ ಮೊದಲ ದಿನ 250 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನು ಮಾತುಗಳು ಕೇಳಿಬರ್ತಿದೆ. ಹಿಂದಿನ ವರ್ಷನ್ ಮಾತ್ರ 72 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಮುಂದಿಡುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸಿದ್ದು ಕೂಡ ಕಲೆಕ್ಷನ್‌ಗೆ ಪ್ಲಸ್ ಆಗಿದೆ.


Click it and Unblock the Notifications











