For Quick Alerts
  ALLOW NOTIFICATIONS  
  For Daily Alerts

  ಮಗಳ ವಯಸ್ಸಿನ ಮಹಿಳೆಯ ಜತೆ ನಿರ್ಮಾಪಕನ ಎರಡನೆಯ ಮದುವೆ: ಕಾರಣ ಇದು...

  By Avani Malnad
  |

  ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ತಮ್ಮ 49ನೇ ವಯಸ್ಸಿನಲ್ಲಿ ಎರಡನೆಯ ಮದುವೆಯಾಗಿದ್ದಾರೆ. ಮೊದಲ ಪತ್ನಿಯನ್ನು ಕಳೆದುಕೊಂಡ 36 ತಿಂಗಳ ಬಳಿಕ ಅವರು ಮತ್ತೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.

  ಮತ್ತೊಂದು ಖುಷಿಯನ್ನು ಶೇರ್ ಮಾಡಿದ 'ಲವ್ ಮಾಕ್ ಟೇಲ್' ಚಿತ್ರತಂಡ..? | Milana Nagaraj | Darling Krishna

  ದಿಲ್ ರಾಜು ಮರು ಮದುವೆಯಾಗುತ್ತಾರೆ ಎಂಬ ಸುದ್ದಿ ಹಲವು ಸಮಯಗಳಿಂದ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ಲಾಕ್ ಡೌನ್ ನಡುವೆಯೂ ಮೇ 11ರಂದು ನಿಜಾಮಾಬಾದ್‌ನ ವೆಂಕಟೇಶ್ವರ ದೇವಸ್ಥಾನದಲ್ಲಿ ಅವರು ಎರಡನೆಯ ಮದುವೆಯಾಗಿದ್ದಾರೆ. ಕುಟುಂಬದವರು ಮತ್ತು ತೀರಾ ಆತ್ಮೀಯರ ಸಮ್ಮುಖದಲ್ಲಿ ರಹಸ್ಯವಾಗಿ ಈ ಮದುವೆ ನಡೆದಿದೆ.

  ಲಾಕ್ ಡೌನ್ ನಲ್ಲಿ 2ನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕಲಾಕ್ ಡೌನ್ ನಲ್ಲಿ 2ನೇ ಮದುವೆಯಾದ ತೆಲುಗಿನ ಖ್ಯಾತ ನಿರ್ಮಾಪಕ

  'ದಿಲ್' ಎಂಬ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಸಿನಿ ಬದುಕು ಆರಂಭಿಸಿದ ಅವರು ಸುಮಾರು 35 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಅತ್ಯುತ್ತಮ ಮನರಂಜನಾ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದ 'ಶತಮಾನಂ ಭವತಿ' ಚಿತ್ರವೂ ಒಂದು. ಮುಂದೆ ಓದಿ...

  ಮಗಳ ವಯಸ್ಸಿನವರು

  ಮಗಳ ವಯಸ್ಸಿನವರು

  ವಿಶೇಷವೆಂದರೆ ದಿಲ್ ರಾಜು ಮದುವೆಯಾಗಿರುವ ಮಹಿಳೆಯ ವಯಸ್ಸು, ದಿಲ್ ರಾಜು ಅವರ ಮಗಳು ಹನ್ಷಿತಾ ರೆಡ್ಡಿ ಅವರಿಗಿಂತ ಒಂದೆರಡು ವರ್ಷ ಹೆಚ್ಚಷ್ಟೇ. ಮಗಳ ವಯಸ್ಸಿನ ಮಹಿಳೆಯೊಂದಿಗೆ 49 ವರ್ಷದ ದಿಲ್ ರಾಜು ಎರಡನೆಯ ಮದುವೆಯಾಗಿದ್ದಾರೆ.

  2017ರಲ್ಲಿ ಮೊದಲ ಪತ್ನಿ ಸಾವು

  2017ರಲ್ಲಿ ಮೊದಲ ಪತ್ನಿ ಸಾವು

  ದಿಲ್ ರಾಜು ಜನಿಸಿದ್ದು 1970ರ ಡಿ. 18ರಂದು. ಅವರ ಮೊದಲ ಪತ್ನಿ ಅನಿತಾ 2017ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗ ಅವರಿಗೆ 46 ವರ್ಷ. ಇಬ್ಬರೂ ಕಿರಿ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಈ ದಂಪತಿ ಮಗಳು ಹನ್ಷಿತಾ ರೆಡ್ಡಿಗೆ ಅಮ್ಮನ ಸಾವಿನ ಬಳಿಕ ಒಂಟಿಯಾಗಿರುವ ಅಪ್ಪನಿಗೆ ಸಂಗಾತಿ ಬೇಕು ಎಂಬ ಕಾರಣಕ್ಕೆ ಎರಡನೆಯ ಮದುವೆಗೆ ಅವರೇ ಒತ್ತಾಯಿಸಿದ್ದರಂತೆ.

  ಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳುಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳು

  ವೈಘಾ ರೆಡ್ಡಿ ಎಂದು ಹೆಸರು ಬದಲು

  ವೈಘಾ ರೆಡ್ಡಿ ಎಂದು ಹೆಸರು ಬದಲು

  ದಿಲ್ ರಾಜು ಮದುವೆಯಾಗಿರುವ ಮಹಿಳೆಯ ಹೆಸರು ತೇಜಸ್ವಿನಿ. ಅವರ ಹೆಸರನ್ನು ವೈಘಾ ರೆಡ್ಡಿ ಎಂದು ಬದಲಿಸಲಾಗಿದೆ. ಬ್ರಾಹ್ಮಣ ಕುಟುಂಬದವರಾದ ತೇಜಸ್ವಿನಿ ಈ ಹಿಂದೆ ಗಗನ ಸಖಿಯಾಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. 30 ವರ್ಷದ ತೇಜಸ್ವಿನಿ, 49 ವರ್ಷದ ದಿಲ್ ರಾಜು ಅವರ ಕೈ ಹಿಡಿಯಲು 29 ವರ್ಷದ ಮಗಳು ಹನ್ಷಿತಾ ಪಾತ್ರ ಮುಖ್ಯವಾಗಿತ್ತು ಎನ್ನಲಾಗಿದೆ.

  ಪ್ರೀತಿಸಿ ಮದುವೆಯಾಗಿದ್ದ ಹನ್ಷಿತಾ

  ಪ್ರೀತಿಸಿ ಮದುವೆಯಾಗಿದ್ದ ಹನ್ಷಿತಾ

  1991ರ ಜನವರಿ 26ರಂದು ಹೈದರಾಬಾದ್‌ನಲ್ಲಿ ಜನಿಸಿದ ಹನ್ಷಿತಾ, ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ನಂತರ ಭಾರತಕ್ಕೆ ಬಂದು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. 2010ರಿಂದಲೂ ಪ್ರೀತಿಸುತ್ತಿದ್ದ ಅರ್ಚಿತ್ ರೆಡ್ಡಿ ಅವರನ್ನು 2014ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ.

  ಶ್ರೀದೇವಿಯನ್ನು ಮದುವೆ ಆಗುವುದಿಲ್ಲ ಎಂದಿದ್ದ ಕಮಲ್ ಹಾಸನ್: ಕಾರಣ ಏನು?ಶ್ರೀದೇವಿಯನ್ನು ಮದುವೆ ಆಗುವುದಿಲ್ಲ ಎಂದಿದ್ದ ಕಮಲ್ ಹಾಸನ್: ಕಾರಣ ಏನು?

  ಅಪ್ಪನಿಗೆ ಪತ್ನಿ ಹುಡುಕಿದ ಮಗಳು

  ಅಪ್ಪನಿಗೆ ಪತ್ನಿ ಹುಡುಕಿದ ಮಗಳು

  ಮನೆಯಲ್ಲಿ ಒಬ್ಬಂಟಿಯಾಗಿದ್ದ ದಿಲ್ ರಾಜು ಸಂಗಾತಿ ಹಾಗೂ ಬೆಂಬಲವಿಲ್ಲದೆ ಪಡುತ್ತಿರುವ ಕಷ್ಟ ಕಂಡಿದ್ದ ಕುಟುಂಬದವರು ಎರಡನೆಯ ಮದುವೆಗೆ ಒತ್ತಾಯಿಸುತ್ತಿದ್ದರು. ಅಪ್ಪನಿಗೆ ಸೂಕ್ತ ಸಂಗಾತಿಯ ಹುಡುಕಾಟದಲ್ಲಿದ್ದ ಹನ್ಷಿಕಾ ಅವರಿಗೆ ತೇಜಸ್ವಿನಿ ಸಿಕ್ಕಿದ್ದಾರೆ. ತಮ್ಮ ನಡುವೆ ಹೆಚ್ಚಿನ ವಯಸ್ಸಿನ ಅಂತರವಿಲ್ಲದಿದ್ದರೂ ಅಪ್ಪ ಹಾಗೂ ಮಲತಾಯಿಯ ಜೋಡಿ ಚೆನ್ನಾಗಿ ಬದುಕಲಿದೆ ಎಂಬ ಭರವಸೆಯೊಂದಿಗೆ ಅವರೇ ಈ ಮದುವೆಯ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.

  ದಿಲ್ ರಾಜು ಚಿತ್ರಗಳು

  ದಿಲ್ ರಾಜು ಚಿತ್ರಗಳು

  ತೆಲುಗಿನ ಅನೇಕ ಹಿಟ್ ಚಿತ್ರಗಳನ್ನು ದಿಲ್ ರಾಜು ನಿರ್ಮಿಸಿದ್ದಾರೆ. 'ಆರ್ಯ', 'ಬೊಮ್ಮರಿಲ್ಲು', 'ಪರುಗು', 'ಮುನ್ನ', 'ಬೃಂದಾವನಂ', 'ಮಿ. ಪರ್ಫೆಕ್ಟ್', 'ಸೀತಮ್ಮ ವಕಿಟ್ಲೊ ಸಿರಿಮಲ್ಲೆ ಚೆಟ್ಟು', 'ಯೆವುಡು', 'ರಾಮಯ್ಯ ವಸ್ತಾವಯ್ಯ' ಮುಂತಾದ ಸೂಪರ್ ಹಿಟ್‌ ಚಿತ್ರಗಳನ್ನು ನಿರ್ಮಿಸಿದವರು ಇವರು. ಚಿತ್ರರಂಗದ ಅನೇಕ ಗಣ್ಯರು ದಿಲ್ ರಾಜು ಅವರ ಎರಡನೆಯ ಮದುವೆಗೆ ಶುಭ ಹಾರೈಸಿದ್ದಾರೆ.

  English summary
  Telugu producer Dil Raju got married for second time on May 11. His daughter Hanshitha Reddy and second wife Vygha Reddy's age is almost same.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X