ಇನ್‌ಸ್ಟಾಗ್ರಾಮ್‌ ರೀಲ್ಸ್ ಮಾಡ್ತಿದ್ದ ಪೋರಿ ಈಗ ಪ್ರಭಾಸ್ ಹೊಸ ಸಿನಿಮಾ ನಾಯಕಿ; ಯಾರೀಕೆ?

ಯಾರ ಅದೃಷ್ಟ ಹೇಗಿರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ಹೇಗೆ ಬೇಕಾದರೂ ಅವಕಾಶ ಹುಡುಕಿ ಬರಬಹುದು. ತಾವು ಮಾಡುವ ಕೆಲಸವನ್ನೇ ಶ್ರದ್ಧಯಿಂದ, ನೂರರಷ್ಟು ಪರಿಶ್ರಮ ಹಾಕಿ ಮಾಡುತ್ತಿದ್ದರೆ ತಾನಾಗಿಯೇ ಯಶಸ್ಸು ಸಿಗುತ್ತದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅಂತೂ ಯಾರ್ಯಾರೋ ರಾತ್ರೋರಾತ್ರಿ ಫೇಮಸ್ ಆಗಿಬಿಡುತ್ತಾರೆ.

ಬಾಹುಬಲಿ ಪ್ರಭಾಸ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರದಲ್ಲಿ ಹನು ರಾಘವಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೈತ್ರಿ ಮೂವಿಮೇಕರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ 'ಫೌಜಿ' ಎನ್ನುವ ಟೈಟಲ್ ಪರಿಶೀಲನೆಯಲ್ಲಿದೆ ಚಿತ್ರತಂಡ. ಇದೊಂದು ಪೀರಿಯಡ್ ರೊಮ್ಯಾಂಟಿಕ್ ಸಿನಿಮಾ ಆಗಿರಲಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

Who is iman esmail aka imanvi delhi girl to play female lead in prabhas-hanu film

'ಸೀತಾರಾಮಂ' ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕ ಹನು ರಾಘವಪುಡಿ ಗಮನ ಸೆಳೆದಿದ್ದರು. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ಸಿನಿಮಾ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಪ್ರಭಾಸ್‌ಗೆ ಕಥೆ ಹೇಳಿ ಒಪ್ಪಿಸಿದ್ದರು. ಬೇರೆಲ್ಲಾ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಯಂಗ್ ರೆಬಲ್ ಸ್ಟಾರ್ ಈ ಕಥೆ ಆಯ್ಕೆ ಮಾಡಿಕೊಂಡಿದ್ದರು. ಎರಡನೇ ಶ್ರಾವಣ ಶನಿವಾರದ ಶುಭ ದಿನದಂದು ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.

ಬಹಳ ಹಿಂದೆಯೇ ಪ್ರಭಾಸ್- ಹನುರಾಘವಪುಡಿ ಕಾಂಬಿನೇಷನ್‌ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿತ್ತು. ಚಿತ್ರದ ಕಥೆ ಏನು? ಟೈಟಲ್ ಏನು? ನಾಯಕಿ ಯಾರು? ಅಂತೆಲ್ಲಾ ಗುಸುಗುಸು ಕೇಳಿಬಂದಿತ್ತು. ಯಾರೋ ಪಾಕಿಸ್ತಾನಿ ನಟಿ ಚಿತ್ರದ ನಾಯಕಿ ಆಗುತ್ತಾರೆ ಎನ್ನುವ ಅಂತೆಕಂತೆ ಸುದ್ದಿ ಕೂಡ ಹರಿದಾಡಿತ್ತು. ಇನ್ನು ಡ್ಯಾನ್ಸ್ ಕೊರಿಯೋಗ್ರಫರ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಇಮಾಮ್ ಇಸ್ಮಾಯಿಲ್ ಹೆಸರೂ ಕೇಳಿ ಬಂದಿತ್ತು. ಈಗ ಅದೇ ನಿಜವಾಗಿದೆ.

ಹೌದು ಪ್ರಭಾಸ್- ಹನು ಜೋಡಿಯ ಚಿತ್ರಕ್ಕೆ ಇಮಾಮ್ ಇಸ್ಮಾಯಿಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕೂಡ ಆಕೆ ಭಾಗಿ ಆಗಿದ್ದರು. ಆಕೆಗೆ ಇಮನ್ವಿ ಎನ್ನುವ ಹೆಸರೂ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಚೆಲುವೆ ತನ್ನ ಡ್ಯಾನ್ಸ್ ವೀಡಿಯೋಗಳಿಂದ ಸದಾ ಗಮನ ಸೆಳೆಯುತ್ತಾರೆ. ಆಕೆಯ ಡ್ಯಾನ್ಸ್ ಮೂವ್ಸ್‌ಗೆ ಮರುಳಾಗದವರಿಲ್ಲ.

ಪ್ರಭಾಸ್ ಚಿತ್ರಕ್ಕೆ ಇಮನ್ವಿ ನಾಯಕಿ ಎನ್ನುತ್ತಿದ್ದಂತೆ ಆಕೆ ಯಾರು? ಹಿನ್ನೆಲೆ ಏನು? ಎಂದು ಕೆಲವರು ತಡಕಾಡಲು ಶುರು ಮಾಡಿದ್ದಾರೆ. ಆದರೆ ಆಕೆಯ ಡ್ಯಾನ್ಸ್ ವೀಡಿಯೋಗಳು ಬಿಟ್ಟರೆ ಹೆಚ್ಚು ಏನು ಸಿಗುತ್ತಿಲ್ಲ. ಕೆಲ ಸಣ್ಣಪುಟ್ಟ ಚಿತ್ರಗಳಲ್ಲಿ ನಟಿಸಿರುವ ಇಮನ್ವಿ ಹೆಚ್ಚು ಡ್ಯಾನ್ಸರ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಚಿರಪರಿಚಿತ. ದೆಹಲಿ ಮೂಲದ ಈ ಚೆಲುವೆ ಯೂಟ್ಯೂಬ್‌ ಚಾನಲ್‌ನಲ್ಲಿ 1.81 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿದ್ದಾರೆ.

ಇಮನ್ವಿ ಸೆಲೆಬ್ರೆಟಿಗಳ ಜೊತೆಗೂ ಡ್ಯಾನ್ಸ್ ವೀಡಿಯೋಗಳನ್ನು ಮಾಡಿ ಶೇರ್ ಮಾಡುತ್ತಿರುತ್ತಾರೆ. ಎಂಬಿಎ ಮುಗಿಸಿರುವ ಚೆಲುವೆ ಡ್ಯಾನ್ಸ್ ಎಂದರೆ ಹುಚ್ಚು. ತಂದೆಯ ಪ್ರೋತ್ಸಾಹದೊಂದಿಗೆ ಕೆಲಸ ಬಿಟ್ಟು ಯೂಟ್ಯೂಬ್ ಚಾನಲ್ ಆರಂಭಿಸಿದ್ದರು. ಕೆಲ ಈವೆಂಟ್‌ಗಳಲ್ಲಿ ಡ್ಯಾನ್ಸ್ ಶೋ ಮೂಲಕ ಅಭಿಮಾನಿಗಳು ಹೆಚ್ಚಾಗಿದ್ದರು. ಮಾಧುರಿ ದೀಕ್ಷಿತ್, ರೇಖಾ ವೈಜಯಂತಿ ಮಾಲಾ ತನ್ನ ಫೇವರಿಟ್ ಎಂದು ಇಮನ್ವಿ ಹೇಳುತ್ತಿರುತ್ತಾರೆ.

ಹೇಳಿ ಕೇಳಿ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್. 200 ರಿಂದ 300 ಕೋಟಿ ರೂ. ಬಜೆಟ್‌ನಲ್ಲಿ ಆತನ ಸಿನಿಮಾಗಳು ನಿರ್ಮಾಣವಾಗುತ್ತವೆ. ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ 5 ಭಾಷೆಗಳಲ್ಲಿ ತೆರೆಗೆ ಬರುತ್ತದೆ. ಇಂತಹ ಚಿತ್ರಕ್ಕೆ ಹೊಸ ಪ್ರತಿಭೆ ಇಮನ್ವಿಗೆ ನಾಯಕಿಯಾಗಿ ಅವಕಾಶ ಸಿಕ್ಕಿರುವುದು ವಿಶೇಷ. ಮೊದಲಿಗೆ ಸ್ಟಾರ್ ನಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲು ನಿರ್ದೇಶಕರು ಬಯಸಿದ್ದರು. ಬಳಿಕ ಹೊಸ ಮುಖವನ್ನು ಪರಿಚಯಿಸಲು ಮುಂದಾಗಿದ್ದಾರೆ.

More from Filmibeat

English summary
Social media influencer to play the female lead in Prabhas's Fauji
Read more about: prabhas telugu heroine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X