twitter
    For Quick Alerts
    ALLOW NOTIFICATIONS  
    For Daily Alerts

    ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?

    |

    ಸಿನಿಮಾದಲ್ಲಿ ವಾಸ್ತವತೆ ಸಾಧ್ಯವಿಲ್ಲ. ಕಮರ್ಶಿಯಲ್ ಸಿನಿಮಾಗಳಲ್ಲಿಯಂತೂ ಅಸಾಧ್ಯವೇ. ಆದರೂ ಸಿನಿಮಾಗಳು ನಿಜ ಘಟನೆಗಳನ್ನು, ನಿಜ ಜೀವನದ ವ್ಯಕ್ತಿಗಳನ್ನು, ಇತಿಹಾಸದ ಕತೆಗಳನ್ನು ಎತ್ತಿಕೊಂಡು ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಮುಂದೆಯೂ ಮಾಡುತ್ತಾರೆ.

    ಐತಿಹಾಸಿಕ ಕತೆಗಳನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಾಗ ಸತ್ಯಕ್ಕೆ ನಿಷ್ಟರಾಗಿರಲೇ ಬೇಕಾಗುತ್ತದೆ. ಆದರೆ ಹೀರೋಯಿಸಂ ಇನ್ನಿತರೆ ಇಸಂ ಗಳ ಹಿಂದೆ ಬಿದ್ದಿರುವ ಸಿನಿಮಾದವರಿಗೆ ಸತ್ಯಕ್ಕೆ ನಿಷ್ಟರಾಗಿರುವುದು ಬಹುತೇಕ ಸಾಧ್ಯವಿಲ್ಲ. ಈ ಹಿಂದೆಯೂ ಇದು ಸಾಬೀತಾಗಿದೆ. ದುರುಳ ಧುರ್ಯೋಧನನ್ನೂ ನಾಯಕನಂತೆ ತೋರಿಸಿದ್ದೂ ಆಗಿದೆ ನಮ್ಮ ಸಿನಿಮಾಗಳು.

    RRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪRRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪ

    ಈಗ ಇಂಥಹುದೇ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ರಾಜಮೌಳಿ. ಆರ್‌ಆರ್‌ಆರ್ ಸಿನಿಮಾ ಮೂಲಕ ನಿಜ ಜೀನವದ ನಾಯಕರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಕತೆಗಳನ್ನು ಕಮರ್ಶಿಯಲ್ ಟಚ್ ಮೂಲಕ ತೆರೆಗೆ ತರುತ್ತಿದ್ದಾರೆ. ಆದರೆ ರಾಜಮೌಳಿ ತಮ್ಮ ಸಿನಿಮಾದಲ್ಲಿ ಐತಿಹಾಸಿಕ ಸತ್ಯವನ್ನು ತಿರುಚಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಮುಸ್ಲಿಂ ಧರ್ಮೀಯನ ವೇಷದಲ್ಲಿ ಜೂ.ಎನ್‌ಟಿಆರ್

    ಮುಸ್ಲಿಂ ಧರ್ಮೀಯನ ವೇಷದಲ್ಲಿ ಜೂ.ಎನ್‌ಟಿಆರ್

    ಇತ್ತೀಚೆಗಷ್ಟೆ ಕೋಮರಂ ಭೀಮ್ ಪಾತ್ರವನ್ನು ಪರಿಚಯಿಸುವ ಟೀಸರ್ ಒಂದು ಬಿಡುಗಡೆ ಆಗಿದೆ. ಟೀಸರ್ ಅದ್ಭುತವಾಗಿಯೇನೋ ಇದೆ. ಟೀಸರ್‌ನ ಕೊನೆಯಲ್ಲಿ ಕೋಮರಂ ಭೀಮ್ ಪಾತ್ರಧಾರಿ ಜೂ.ಎನ್‌ಟಿಆರ್ ಮುಸ್ಲಿಂ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ದೃಶ್ಯವೇ ಈಗ ವಿವಾದದ ಕೇಂದ್ರಬಿಂದು.

    ಗೋಂಡಿ ಬುಡಕಟ್ಟು ಜನಾಂಗದಲ್ಲಿ ಕೋಮರಂ ಭೀಮ್ ಜನನ

    ಗೋಂಡಿ ಬುಡಕಟ್ಟು ಜನಾಂಗದಲ್ಲಿ ಕೋಮರಂ ಭೀಮ್ ಜನನ

    1901 ರಲ್ಲಿ ಕೋಮರಂ ಭೀಮ್ ಅವರ ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಹುಟ್ಟುತ್ತಾರೆ. ತಮ್ಮ ಜೀವನ ಪೂರ್ತಿ ಅವರು ನಿಜಾಮರ ವಿರುದ್ಧ ಹಾಗೂ ರಜಾಕರ ವಿರುದ್ಧ ಹೋರಾಡಿದ್ದರು. ಬುಡಕಟ್ಟು ಜನರ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಬುಡಕಟ್ಟು ಸಮುದಾಯದ ನಾಯಕನಾಗಿ ಗುರುತಿಸಿಕೊಂಡವರು ಕೋಮರಂ ಭೀಮ್. ಆದರೆ ಸಿನಿಮಾದಲ್ಲಿ ಅವರನ್ನು ಮುಸ್ಲಿಂ ಧರ್ಮೀಯನಾಗಿ ತೋರಿಸಲಾಗಿದೆ!

    'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ

    ಇತಿಹಾಸವನ್ನು ಚಿರುಚುವ ಪ್ರಯತ್ನ?

    ಇತಿಹಾಸವನ್ನು ಚಿರುಚುವ ಪ್ರಯತ್ನ?

    ಕೋಮರಂ ಭೀಮ್ ಅನ್ನು ಮುಸ್ಲಿಂ ಸಮುದಾಯದವನಂತೆ ಚಿತ್ರೀಕರಿಸಿದ್ದಾರೆ ರಾಜಮೌಳಿ, ಆ ಮೂಲಕ ಇತಿಹಾಸವನ್ನು ತಿರುಚುವ ಯತ್ನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇತಿಹಾಸವನ್ನು ಗಮನಿಸಿದರೆ ಇದು ಸತ್ಯವೂ ಆಗಿದೆ. ಕೋಮರಂ ಭೀಮ್ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದರೇ ಹೊರತು ಮುಸ್ಲಿಂ ಧರ್ಮೀಯರಾಗಿರಲಿಲ್ಲ ಎನ್ನಲಾಗುತ್ತಿದೆ.

    ಕೋಮರಂ ಭೀಮ್ ಪುತ್ರನನ್ನು ಮತಾಂತರ ಮಾಡಲಾಗಿತ್ತು?

    ಕೋಮರಂ ಭೀಮ್ ಪುತ್ರನನ್ನು ಮತಾಂತರ ಮಾಡಲಾಗಿತ್ತು?

    ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಕೋಮರಂ ಭೀಮ್ ತನ್ನ ಜೀವನ ಪೂರ್ತಿ ಮುಸ್ಲಿಂ ನಿಜಾಮರ ರ ಅರಾಜಕತೆ, ಅಧರ್ಮದ ವಿರುದ್ಧ ಹೋರಾಡಿದವರು ಆದರೆ ಅವರನ್ನು ಮುಸ್ಲಿಂ ಧರ್ಮೀಯ ಎಂದು ತೋರಿಸಲಾಗಿದೆ. ಮುಸ್ಲಿಂ ಧರ್ಮೀಯರನ್ನು ಓಲೈಸುವ ಸಲುವಾಗಿ ಹೀಗೆ ಮಾಡಿದ್ದಾರೆ ರಾಜಮೌಳಿ ಎಂದು ಕೆಲವರು ಆರೋಪಿಸಿದ್ದಾರೆ. ಕೆಲವರ ವಾದದಂತೆ ಕೋಮರಂ ಭೀಮ್ ಮಗನನ್ನು ನಿಜಾಮರು ಬಂಧಿ ಮಾಡಿಕೊಂಡು ಆತನನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಳಿಸಿದರು ಎನ್ನಲಾಗಿದೆ.

    Recommended Video

    Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ
    'ಪೂರ್ಣ ಸಿನಿಮಾ ನೋಡಿ ವಿಮರ್ಶೆ ಮಾಡಿ'

    'ಪೂರ್ಣ ಸಿನಿಮಾ ನೋಡಿ ವಿಮರ್ಶೆ ಮಾಡಿ'

    ರಾಜಮೌಳಿ ಪರವಾಗಿಯೂ ಕೆಲವರು ವಾದ ಮಂಡಿಸಿದ್ದಾರೆ. ಕೇವಲ ಟೀಸರ್ ನೋಡಿ ರಾಜಮೌಳಿ ಯನ್ನು ತೆಗಳುವುದು ತರವಲ್ಲ. ಯಾವುದೋ ಒಂದು ದೃಶ್ಯಕ್ಕಾಗಿಯಷ್ಟೆ ಕೋಮರಂ ಭೀಮ್ ಅನ್ನು ಮುಸ್ಲಿಂ ಧರ್ಮೀಯನಾಗಿ ಚಿತ್ರಿಸಿರುವ ಸಾಧ್ಯತೆಯೂ ಇದೆ. ಪೂರ್ಣ ಸಿನಿಮಾ ನೋಡಿದ ನಂತರವೇ ಇದರ ಬಗ್ಗೆ ವಿಮರ್ಶೆ ಮಾಡಬಹುದು ಎಂದಿದ್ದಾರೆ.

    English summary
    Rajamouli shown Komaram Bheem as a Muslim in his RRR movie teaser. In social media some upset about it and said Komaram Bheem was not a Muslim.
    Saturday, October 24, 2020, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X