ವಿಜಯ್ ದೇವರಕೊಂಡ ಜೊತೆಗೆ ಡುಯೇಟ್ ಹಾಡೋದು ತ್ರಿಪ್ತಿ ದಿಮ್ರಿಯೋ ಅಥವಾ ರುಕ್ಮಿಣಿ ವಸಂತ್?

'ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಮತ್ತು ಸೈಡ್ ಬಿ' ಸಿನಿಮಾಗಳಿಂದ ಹೆಸರು ಮಾಡಿದ ನಟಿ ರುಕ್ಮಿಣಿ ವಸಂತ್ ಈಗ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಪ್‌ಡೇಟ್ ಒಂದು ಹೊರ ಬಂದಿದ್ದು, ಕನ್ನಡದ ಈ ನಟಿ ತೆಲುಗಿನ ಸ್ಟಾರ್ ವಿಜಯ್ ದೇವಕೊಂಡ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗುತ್ತಿದೆ.

ನಟ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರವನ್ನು ಘೋಷಿಸಲಾಗಿದ್ದು, ಸಿನಿಮಾಗೆ ತಾತ್ಕಾಲಿಕವಾಗಿ VD12 ಎಂದು ಹೆಸರಿಸಲಾಗಿದೆ. ಈ ಸಿನಿಮಾಕ್ಕೆ ಇಬ್ಬರು ನಾಯಕಿಯರ ಹೆಸರು ಕೇಳಿಬರುತ್ತಿದೆ. ರುಕ್ಮಿಣಿ ವಸಂತ್ ಒಬ್ಬರಾಗಿದ್ದರೆ, ಮತ್ತೊಬ್ಬರು ಅನಿಮಲ್ ಖ್ಯಾತಿಯ ತ್ರಿಪ್ತಿ ದಿಮ್ರಿ.

Who is Leading Lady for Vijay Deverakonda’s next film Tripti Dimri or Rukmini Vasanth?

ವಿಜಯ್ ದೇವರಕೊಂಡ ಜೊತೆ ರುಕ್ಷ್ಮಿಣಿ ವಸಂತ್ ಡುಯೇಟ್!?

ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರವು ರೋಮಾಂಚಕಾರಿ ಸ್ಪೈ ಥ್ರಿಲ್ಲರ್ ಎಂದು ಹೇಳಲಾಗುತ್ತದೆ. ನಟ ನಾನಿ ಅವರ 'ಜರ್ಸಿ' ಚಿತ್ರದಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾದ ಪ್ರತಿಭಾವಂತ ನಿರ್ದೇಶಕ ಗೌತಮ್ ತಿನ್ನಾನೂರಿ ನಿರ್ದೇಶಿಸಲಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗ ವಂಶಿ ನಿರ್ಮಾಣ ಮಾಡಲಿದ್ದಾರೆ.

ಇದೇ ಸಿನಿಮಾಕ್ಕೆ 'ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಮತ್ತು ಸೈಡ್ ಬಿ' ನಟಿ ರುಕ್ಮಿಣಿ ವಸಂತ್ ಅವರನ್ನೂ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ ಎಂದು ಸುದ್ದಿಯಾಗುತ್ತಿದೆ. ಚಿತ್ರದ ಶೂಟಿಂಗ್ ಮಾರ್ಚ್ 2024 ರಲ್ಲಿ ಮತ್ತೆ ಆರಂಭಗೊಳ್ಳಲಿದೆ.

ಅನಿಮಲ್, ಬುಲ್ ಬುಲ್ ಖ್ಯಾತಿಯ ತ್ರಿಪ್ತಿ ದಿಮ್ರಿ

ಅನಿಮಲ್ ಸಿನಿಮಾ ಹಿಟ್ ಆದ ಬಳಿಕ ನಟಿ ತ್ರಿಪ್ತಿ ದಿಮ್ರಿ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಬಾಲಿವುಡ್ ಅಲ್ಲದೇ ಅನೇಕ ಪ್ಯಾನ್ ಇಂಡಿಯಾ, ತೆಲುಗು ಸಿನಿಮಾಗಳಲ್ಲಿಯೂ ಅವಕಾಶಗಳು ಅರಸಿ ಬರುತ್ತಿದ್ದು, ಸದ್ಯ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ.

Who is Leading Lady for Vijay Deverakonda’s next film Tripti Dimri or Rukmini Vasanth?

ವಿಡಿ 12 ಪೋಸ್ಟರ್‌ಗಳು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿವೆ. ಆರಂಭದಲ್ಲಿ, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಎದುರು ಶ್ರೀಲೀಲಾ ನಟಿಸಬೇಕಿತ್ತು. ಆದರೆ ಬ್ಯುಸಿ ಶೆಡ್ಯೂಲ್ ಕಾರಣದಿಂದಾಗಿ ಶ್ರೀಲೀಲಾ ಸಿನಿಮಾದಿಂದ ಹೊರಬಂದಿದ್ದಾರೆ.

ವಿಜಯ್ ದೇವರಕೊಂಡ ಮುಂದಿನ ಸಿನಿಮಾಗಳು

ವಿಜಯ್ ದೇವರಕೊಂಡ ಅವರು ತಮ್ಮ ಮುಂದಿನ ಚಿತ್ರವಾದ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ ನಟಿ ಮೃಣಾಲ್ ಠಾಕೂರ್ ಜೊತೆಗೆ ನಟಿಸುತ್ತಿದ್ದು, ಬಹುಪಾಲು ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ಗೀತಾ ಗೋವಿಂದಂ ಸಿನಿಮಾ ಮೂಲಕ ವಿಜಯ್ ಅವರಿಗೆ ದೊಡ್ಡ ಹಿಟ್ ನೀಡಿದ ಪರಶುರಾಮ್ ಪೆಟ್ಲಾ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಚಿತ್ರವನ್ನು ದಿಲ್ ರಾಜು ನಿರ್ಮಿಸುತ್ತಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ.

ರುಕ್ಮಿಣಿ ವಸಂತ್ ಮುಂದಿನ ಸಿನಿಮಾಗಳು

ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ ಮತ್ತು ಬಿ ಬಿಡುಗಡೆಯಾದ ನಂತರ, ರುಕ್ಮಿಣಿ ಚಿತ್ರರಂಗದ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಈಗಾಗಲೇ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸೇರಿದಂತೆ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಬರೆದು ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಶ್ರೀಮುರಳಿ ಅವರ ಮುಂದಿನ ಚಿತ್ರ 'ಬಘೀರ'ದಲ್ಲಿ ರುಕ್ಮಿಣಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

More from Filmibeat

English summary
Rukmini Vasanth to act in Vijay Deverakonda’s next VD12?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X