'ಮಹೇಶ್ ಬಾಬು ಹೊಸ ಚಿತ್ರಕ್ಕೆ ಆಕೆಯೇ ಹೀರೋಯಿನ್ ಆಗಲಿ': ಪ್ರಿನ್ಸ್ ಪತ್ನಿ ಸೂಚಿಸಿದ್ದು ಯಾರನ್ನು?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲು ಗೆದ್ದು ಬೀಗಿರುವ ಈ ಚಿತ್ರ 200 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

ಈ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ವಂಶಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ಪ್ರಿನ್ಸ್ ನಟನೆಯ 27ನೇ ಇದಾಗಿದ್ದು, ಈ ಚಿತ್ರಕ್ಕೆ ಹೀರೋಯಿನ್ ಯಾರಾಗಬಹುದು ಎಂಬ ಕುತೂಹಲ ಮೂಡಿದೆ.

ಇದೀಗ, ಮಹೇಶ್ ಬಾಬು ಪತ್ನಿ ನಮ್ರತಾ ತಮ್ಮ ಪತಿಯ ಹೊಸ ಚಿತ್ರಕ್ಕೆ ನಾಯಕಿಯನ್ನು ಸೂಚಿಸಿದ್ದು, ಈ ನಟಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೂ, ಮಹೇಶ್ ಪತ್ನಿ ಸೂಚಿಸಿದ ನಟಿ ಯಾರು? ಮುಂದೆ ಓದಿ...

'ಮಹರ್ಷಿ' ಡೈರೆಕ್ಟರ್ ಜೊತೆ ಸಿನಿಮಾ

'ಮಹರ್ಷಿ' ಡೈರೆಕ್ಟರ್ ಜೊತೆ ಸಿನಿಮಾ

ಮಹರ್ಷಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ವಂಶಿ ಪೈದಿಪಲ್ಲಿ ಜೊತೆ ಮಹೇಶ್ ಬಾಬು ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಹೀರೋಯಿನ್ ವಿಷಯ ಸದ್ದು ಮಾಡ್ತಿದೆ.

ನಮ್ರತಾ ಸೂಚಿಸಿದ ನಟಿ ಇವರೇ

ನಮ್ರತಾ ಸೂಚಿಸಿದ ನಟಿ ಇವರೇ

ಮಹೇಶ್ ಬಾಬು ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳು ಹಂತದಲ್ಲಿ ನಮ್ರತಾ ಅವರ ಪಾತ್ರವೂ ಇರಲಿದೆ ಎನ್ನುವುದು ಟಾಲಿವುಡ್ನಲ್ಲಿ ತಿಳಿದಿರುವ ಸಂಗತಿ. ಇದೀಗ, 27ನೇ ಚಿತ್ರಕ್ಕೆ ಬಾಲಿವುಡ್ ನಟಿ ಕೈರಾ ಅಡ್ವಾನಿ ಹೆಸರು ಸೂಚಿಸಿರುವ ನಮ್ರತಾ, ಈಕೆ ಉತ್ತಮ ಜೋಡಿ ಎಂದಿದ್ದಾರಂತೆ.

ಭರತ್ ಅನೇ ನೇನು ನಾಯಕಿ!

ಭರತ್ ಅನೇ ನೇನು ನಾಯಕಿ!

ಕೈರಾ ಅಡ್ವಾನಿ ಈ ಹಿಂದೆ ಮಹೇಶ್ ಬಾಬು ಜೊತೆ ಭರತ್ ಅನೇ ನೇನು ಸಿನಿಮಾ ಮಾಡಿದ್ದರು. ಕೈರಾಗೆ ಈ ಚಿತ್ರ ಮೊದಲ ತೆಲುಗು ಸಿನಿಮಾ. ಸಿನಿಮಾನೂ ಹಿಟ್ ಆಗಿತ್ತು. ಕೈರಾಗೂ ಅದೃಷ್ಟ ತಂದಿತ್ತು. ಇದಾದ ಬಳಿಕ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡಿದ್ದರು. ಈಗ ಬಾಲಿವುಡ್ನಲ್ಲಿ ಕೈರಾ ಬ್ಯುಸಿಯಾಗಿದ್ದಾರೆ.

ವಂಶಿ ಕೂಡ ಗ್ರೀನ್ ಸಿಗ್ನಲ್!

ವಂಶಿ ಕೂಡ ಗ್ರೀನ್ ಸಿಗ್ನಲ್!

ಮಹೇಶ್ ಬಾಬು ಅವರ ಪತ್ನಿ ನಮ್ರತಾ ಅವರ ಸಲಹೆಯನ್ನು ಸ್ವೀಕರಿಸಿರುವ ನಿರ್ದೇಶಕ ವಂಶಿ, ಕೈರಾ ಅಡ್ವಾನಿಯನ್ನು ಅಪ್ರೋಚ್ ಮಾಡಲು ನಿರ್ಧರಿಸಿದ್ದಾರಂತೆ. ಸದ್ಯಕ್ಕೆ ಕೈರಾ ಹಿಂದಿಯಲ್ಲಿ ನಾಲ್ಕು ಸಿನಿಮಾ ಮಾಡುತ್ತಿದ್ದಾರೆ. ಈ ಕಡೆ ಮಹೇಶ್ ಬಾಬು ಸಿನಿಮಾ ಎಂಬ ಕಾರಣಕ್ಕೆ ಮತ್ತೆ ಕಾಲ್ ಶೀಟ್ ಕೊಟ್ಟರೂ ಕೊಡಬಹುದು. ಪಕ್ಕಾ ಆಗುತ್ತಾ ಎಂದು ಕಾದುನೋಡಬೇಕಿದೆ.

More from Filmibeat

English summary
Telugu actor Mahesh babu's wife namrata shirodkar suggest to director vamsi to select this heroine to next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X