ಚಿರಂಜೀವಿ- ಅಲ್ಲು ಅರ್ಜುನ್ ಕ್ರೇಜಿ ಕಾಂಬಿನೇಷನ್‌ಗೆ ಚಾಲನೆ ನೀಡಿದ ನಿರ್ದೇಶಕ ಯಾರು?

ಕೆಲವು ಕಾಂಬಿನೇಷನ್‌ಗಳು, ಕೆಲವು ಇತಿಹಾಸ, ಐತಿಹಾಸಿಕ ಸಂಗತಿಗಳನ್ನು ಆಧಾರಿಸಿದ ಕಥಾವಸ್ತುಗಳು ಇದೆಲ್ಲವನ್ನು ಪ್ರೇಕ್ಷಕರು ಬಯಸುತ್ತಾರೆ. 'ಭಕ್ತ ಅಂಬರೀಶ' ರಾಜ್ ಕುಮಾರ್ ಅವರ ಕನಸಿನ ಚಿತ್ರವಾಗಿತ್ತು, ಕನ್ನಡ ನಾಡಿನ ಜನತೆ ಕೂಡ ರಾಜ್ ಕುಮಾರ್ ಅವರನ್ನು 'ಭಕ್ತ ಅಂಬರೀಶ'ನ ಪಾತ್ರದಲ್ಲಿ ನೋಡಲು ಬಯಸಿದ್ದರು.

ಶಂಕರ್ ನಾಗ್ ಅವರು 'ಜೋಕುಮಾರಸ್ವಾಮಿ' ತೆರೆಗೆ ತರಲು ಸಾಕಷ್ಟು ಶ್ರಮವಹಿಸಿದ್ದರು. ಆದರೆ ವಿಧಿ ಇದ್ಯಾವುದು ಕೈಗೂಡದoತೆ ಮಾಡಿತು. ಅದು ಅಲ್ಲದೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಲು ಕನ್ನಡದ ಜನತೆ ಸಾಕಷ್ಟು ಕಾತರರಾಗಿದ್ದರು. ಅಲ್ಲದೆ ಶಿವಣ್ಣ ಕೂಡ ಅನೇಕ ಬಾರಿ ಅಂಥದೊಂದು ಚಿತ್ರ ಮಾಡುವ ಇಚ್ಛೆ ವ್ಯಕ್ತಪಡಿಸುತ್ತಲೇ ಬಂದಿದ್ದರು. ಆದರೆ ವಿಧಿ ಅದಕ್ಕೂ ಕೂಡ ಅವಕಾಶ ಕೊಡಲಿಲ್ಲ. ಆದರೆ ಕೆಲವರು ಮಾತ್ರ ಇಂತಹ ಅದೃಷ್ಟವನ್ನು ಹೊಂದಿದ್ದರು.

ತೆಲುಗಿನ ಹಿರಿಯ ನಟ ನಾಗೇಶ್ವರ್ ರಾವ್ ಅವರ 'ಅಕ್ಕಿನೇನಿ' ಕುಟುಂಬದ ಮೂರು-ತಲೆಮಾರು ಸೇರಿ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅದೇ 'ಮನಂ'. ವಿಕ್ರಂ ಕುಮಾರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ, ಅಕ್ಕಿನೇನಿ ನಾಗೇಶ್ವರರಾವ್,ನಾಗಾರ್ಜುನ ಮತ್ತು ನಾಗಚೈತನ್ಯ (ಜೊತೆಗೆ ನಾಗಾರ್ಜುನ ಕಿರಿಯಮಗ ಅಖಿಲ್ ಕೂಡ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು) ಒಟ್ಟಿಗೆ ಮೂರು ತಲೆಮಾರಿನ ಒಂದು ವಿಭಿನ್ನ ಕಥಾವಸ್ತುವಿನ ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದರು ಇದು ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಕಡೆಗೆ ಚಿತ್ರವಾಗಿತ್ತು.

ಕಾಂಬಿನೇಷನ್‌ಗಳ ಕ್ರೇಜ್

ಕಾಂಬಿನೇಷನ್‌ಗಳ ಕ್ರೇಜ್

ಕೆಲವು ಕಾಂಬಿನೇಷನ್‌ಗಳೇ ಹಾಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿಬಿಡುತ್ತೆ.ಹಿಂದೆ ಬಾಲಿವುಡ್ ನಲ್ಲಿ ಯಶ್ ರಾಜ್- ಅಮಿತಾಬ್ ಬಚ್ಚನ್ ಅಂತಹ ಒಂದು ಕ್ರೇಜಿ ಕಂಬಿನೇಶನ್ ಆಗಿತ್ತು.ಅದೇ ರೀತಿ ಶಾರುಖ್ ಖಾನ್ ಕರಣ್- ಜೋಹರ್ ಕಾಂಬಿನೇಷನ್ ಕೂಡ.

ಇನ್ನು ತಂದೆ-ಮಗ ರಾಕೇಶ್ ರೋಷನ್ ಹೃತಿಕ್ ರೋಷನ್ ಕಾಂಬಿನೇಶನ್ ಬಗ್ಗೆ ಹೇಳುವುದೇ ಬೇಕಿಲ್ಲ ಅದು ಸದಾ ಸೂಪರ್ ಹಿಟ್ ಚಿತ್ರಗಳ ಜೋಡಿ ಅದು. ಹಾಗೆ ನಟರ ವಿಷಯಕ್ಕೆ ಬಂದರೆ ರಜನಿಕಾಂತ್- ಕಮಲಹಾಸನ್ ಅಂತಹದೊಂದು ಜೋಡಿ. ಇನ್ನು ತೆಲುಗಿನಲ್ಲಿ ನೋಡುವುದಾದರೆ ಮೆಗಾಸ್ಟಾರ್ ಕುಟುಂಬ, ಇಂಥದೊಂದು ಕ್ರೇಜಿ ಕಾಂಬಿನೇಷನ್.

ಚರಣ್ ತೇಜ ಒಟ್ಟಿಗೆ 'ಆಚಾರ್ಯ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಚರಣ್ ತೇಜ ಒಟ್ಟಿಗೆ 'ಆಚಾರ್ಯ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಈಗಾಗಲೇ ತಂದೆ- ಮಗ ಮೆಗಾಸ್ಟಾರ್ ಚಿರಂಜೀವಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಒಟ್ಟಿಗೆ 'ಆಚಾರ್ಯ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಈಗಾಗಲೇ ಸಿಕ್ಕಾಪಟ್ಟೆ ಪ್ರೇಕ್ಷಕರಲ್ಲಿ ಆಸಕ್ತಿಯನ್ನು ಹುಟ್ಟುಹಾಕಿದೆ. ಇನ್ನು ಮೆಗಾ ಫ್ಯಾನ್ ಗಳಂತೂ ಚಿರಂಜೀವಿ- ಪವನ್ ಕಲ್ಯಾಣ್- ರಾಮ್ ಚರಣ್ ತೇಜ ಒಟ್ಟಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುವುದನ್ನು ನೋಡಲು ಕಾತರದಿಂದ ಎದುರು ನೋಡುತ್ತಿದ್ದಾರೆ. ಇದರ ಮಧ್ಯೆ ಮತ್ತೆ ಒಂದು ಆಸಕ್ತಿದಾಯಕ ಕಾಂಬಿನೇಶನ್ ಚಾಲನೆ ಲಕ್ಷಣಗಳು ಕಾಣುತ್ತದೆ. ಅದೇ ಮೆಗಾಸ್ಟಾರ್ ಚಿರಂಜೀವಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ಚಿತ್ರ.

ಮೆಗಾ-ಅಲ್ಲು ಕಾಂಪೌಂಡುಗಳ ಇದರ ಮಧ್ಯೆ ಹೆಚ್ಚಿರುವ ಅಂತರ

ಮೆಗಾ-ಅಲ್ಲು ಕಾಂಪೌಂಡುಗಳ ಇದರ ಮಧ್ಯೆ ಹೆಚ್ಚಿರುವ ಅಂತರ

ಮೆಗಾಸ್ಟಾರ್ ಚಿರಂಜೀವಿ ವರಸೆಯಲ್ಲಿ ಅಲ್ಲು ಅರ್ಜುನ್‌ಗೆ ಮಾವ ಆಗಬೇಕು. ಚಿರಂಜೀವಿ ಅವರ ಪತ್ನಿ ಸುರೇಖಾ, ತೆಲುಗಿನ ಖ್ಯಾತ ಹಿರಿಯ ನಟರಾದ ಅಲ್ಲು ರಾಮಲಿಂಗಯ್ಯ ನವರ ಮಗಳು.

ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್‌ಗೆ ತಂಗಿ. ಹೀಗಾಗಿ ಅಲ್ಲು ಅರ್ಜುನ್ ಅವರಿಗೆ ಸೋದರತ್ತೆ ಆಗುತ್ತಾರೆ. ಆರಂಭದಿಂದಲೂ ಮೆಗಾ ಕಾಂಪೌಂಡಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಅಲ್ಲು ಅರವಿಂದ್ ಅವರೇ ಅಂತಿಮ ನಿರ್ಣಯ ಕೈಗೊಳ್ಳುತ್ತಿದ್ದರು. ಚಿರಂಜೀವಿಯವರ 'ಪ್ರಜಾರಾಜ್ಯಂ' ಪಕ್ಷ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ನಂತರ ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ಮಿಲನಗೊಳಿಸುವುದರ ಹಿಂದೆ ಅಲ್ಲುಅರವಿಂದ್ ಅವರ ಆಲೋಚನೆ ಇತ್ತು ಅಂತ ಹೇಳಲಾಗುತ್ತದೆ. ಆದರೆ ಈ ವಿಚಾರದಲ್ಲಿ ಪವನ್ ಕಲ್ಯಾಣ್ ವಿರೋಧಿಸಿದ್ದರು ಅಂತ ಹೇಳಲಾಗುತ್ತದೆ.

ಅಲ್ಲು ಅರವಿಂದ್ ಪವನ್ ಕಲ್ಯಾಣ್ ಮಧ್ಯೆ ಒಂದು ಗ್ಯಾಪ್

ಅಲ್ಲು ಅರವಿಂದ್ ಪವನ್ ಕಲ್ಯಾಣ್ ಮಧ್ಯೆ ಒಂದು ಗ್ಯಾಪ್

ಇದೇ ಕಾರಣದಿಂದಲೇ ಅಲ್ಲು ಅರವಿಂದ್ ಪವನ್ ಕಲ್ಯಾಣ್ ಮಧ್ಯೆ ಒಂದು ಗ್ಯಾಪ್ ಬಂತು ಅಂತ ಹೇಳಲಾಗುತ್ತದೆ. ಮುಂದೆ ರಾಮ್ ಚರಣ್ ತೇಜ, ಮೆಗಾ ಪರಿವಾರದ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಿದರು. ಅಲ್ಲಿಂದ ಅಲ್ಲು ಅರವಿಂದ್ ಅವರ ಅನಿವಾರ್ಯತೆ ಅಥವಾ ಅವರ ನಿರ್ಣಯ ಎರಡು ಕೂಡ ಮೆಗಾ ಕಾಂಪೌಂಡ್ ಇಂದ ದೂರವಾಯಿತು ಅಂತ ಹೇಳಲಾಗುತ್ತದೆ. ಹೀಗಾಗಿಯೇ ಇತ್ತೀಚಿನ ಸಂದರ್ಭಗಳಲ್ಲಿ ಸಿನಿಮಾಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಎರಡು ಕುಟುಂಬಗಳ ಸದಸ್ಯರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಮ್ಮಿಯಾಗಿದೆ.

ಚಿರು-ಅಲ್ಲು ಕಾಂಬಿನೇಷನ್‌ಗೆ ಗ್ರೀನ್ ಸಿಗ್ನಲ್?

ಚಿರು-ಅಲ್ಲು ಕಾಂಬಿನೇಷನ್‌ಗೆ ಗ್ರೀನ್ ಸಿಗ್ನಲ್?

ಮೆಗಾಸ್ಟಾರ್ ಚಿರಂಜೀವಿ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಮಲ್ಟಿಸ್ಟಾರರ್ ರೂಪುಗೊಳ್ಳುವ ಅವಕಾಶವಿದೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ. ಇದೇ ನಿಜವಾದರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಎಲ್ಲವೂ ಅಂದುಕೊಂಡಂತೆ ನಡೆದರೆ ಆ ಮಲ್ಟಿಸ್ಟಾರರ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾಸ್ಟಾರ್ ಆಗಿದ್ದಾರೆ, ಮೊದಲಿನಿಂದಲೂ, ಮೆಗಾಸ್ಟಾರ್ ಚಿರಂಜೀವಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಈಗ ಅವರ ನಡುವೆ ಅಂತಹ ಮೈತ್ರಿ ಇಲ್ಲ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಇವರಿಬ್ಬರ ಜೊತೆ ಮಲ್ಟಿಸ್ಟಾರರ್ ಸಿನಿಮಾವೊಂದು ಬಂದರೆ ಅಭಿಮಾನಿಗಳಲ್ಲಿ ಮಾತ್ರವಲ್ಲ ಚಿತ್ರರಂಗದಲ್ಲೂ ಸಿನಿಮಾ ಬಗ್ಗೆ ಆಸಕ್ತಿ ಮೂಡಿಸುವುದರಲ್ಲಿ ಅನುಮಾನವಿಲ್ಲ. ಇನ್ನೂ ಈ ಸಿನಿಮಾವನ್ನು ನಿರ್ದೇಶಿಸಲು ಬಯಸುವವರು ಯಾರು ಗೊತ್ತಾ! ಶ್ರೀಕಾಂತ್ ಅಡ್ಡಾಲ.

ಕೌಟುಂಬಿಕ ಕಥಾ ಚಿತ್ರಗಳ ನಿರ್ದೇಶಕ ಶ್ರೀಕಾಂತ್ ಅಡ್ಡಾಲ

ಕೌಟುಂಬಿಕ ಕಥಾ ಚಿತ್ರಗಳ ನಿರ್ದೇಶಕ ಶ್ರೀಕಾಂತ್ ಅಡ್ಡಾಲ

ಚಿರಂಜೀವಿ- ಅಲ್ಲು ಅರ್ಜುನ್ ಅವರ ಕಾಂಬಿನೇಷನ್ ಚಿತ್ರಕ್ಕೆ ಕೇಳಿಬಂದಿರುವ ಹೆಸರು ಶ್ರೀಕಾಂತ್ ಅಡ್ಡಾಲ. ಕೌಟುಂಬಿಕ ಕಥಾ ಚಿತ್ರಗಳ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಇವರು ವಿಕ್ಟರಿ ವೆಂಕಟೇಶ್ ಹಾಗೂ ಸೂಪರ್ ಸ್ಟಾರ್ ಮಹೇಶ್ ಜೊತೆ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆಚೆಟ್ಟು' ಸಿನಿಮಾ ಮಾಡಿದ್ದು ಗೊತ್ತೇ ಇದೆ. ಅದಾದ ನಂತರ ಮಹೇಶ್ ಸೋಲೋ ಹೀರೋ ಆಗಿ ನಟಿಸಿದ್ದ 'ಬ್ರಹ್ಮೋತ್ಸವಂ' ಡಿಸಾಸ್ಟರ್ ಆಯಿತು. ಇಂತಹ ಹೊತ್ತಿನಲ್ಲಿ ತಮಿಳಿನ 'ಅಸುರನ್' ಚಿತ್ರದ ರಿಮೇಕ್ 'ನಾರಪ್ಪ' ವಿಕ್ಟರಿ ವೆಂಕಟೇಶ್ ಜೊತೆ ತೆರೆಕಂಡಿದ್ದು, ಶ್ರೀಕಾಂತ್ ಮತ್ತೆ ಟ್ರ್ಯಾಕ್‌ಗೆ ಲಗ್ಗೆ ಇಟ್ಟಿದ್ದಾರೆ. 'ನಾರಪ್ಪ' ಹಿಟ್ ಆದ ನಂತರ ನಿರ್ದೇಶಕ ಶ್ರೀಕಾಂತ್ ಅಡ್ಡಾಲ 'ನಾರಪ್ಪ' ಯಶಸ್ಸು ಕೊಟ್ಟ ಆತ್ಮವಿಶ್ವಾಸದಿಂದ ಚಿರಂಜೀವಿ ಅವರನ್ನು ಭೇಟಿ ಮಾಡಿ, ಸಿನಿಮಾದ ಒನ್ ಲೈನ್ ಕಥೆ ಹೇಳಿದ್ದಾರಂತೆ. ಕಥೆ ಕೇಳಿದ ಮೆಗಾಸ್ಟಾರ್ ಕೂಡ ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಕಂಪ್ಲೀಟ್ ಸ್ಕ್ರಿಪ್ಟ್ ರೆಡಿ ರೆಡಿ ಮಾಡಿಕೊಂಡು ಬರುವಂತೆ ಸೂಚಿಸಿದ್ದಾರೆ.

ಶ್ರೀಕಾಂತ್ ಸ್ಕ್ರಿಪ್ಟ್ ತಯಾರಿ ನಡೆಸುತ್ತಿದ್ದಾರೆ

ಶ್ರೀಕಾಂತ್ ಸ್ಕ್ರಿಪ್ಟ್ ತಯಾರಿ ನಡೆಸುತ್ತಿದ್ದಾರೆ

ಶ್ರೀಕಾಂತ್ ಅಡ್ಡಾಲ ಮತ್ತು ಚಿರಂಜೀವಿ ಕಾಂಬಿನೇಷನ್‌ನ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವಿದ್ದು, ಆ ಪಾತ್ರಕ್ಕೆ ಅಲ್ಲು ಅರ್ಜುನ್ ಅಭಿನಯಿಸಿದರೆ ಚೆನ್ನಾಗಿರುತ್ತದೆ ಅಂತ ಚಿರಂಜೀವಿ ಅವರಿಗೆ ಶ್ರೀಕಾಂತ್ ಹೇಳಿದ್ದಾರೆ. ಆದರೆ, ಚಿರು ಮೊದಲು ಸ್ಕ್ರಿಪ್ಟ್ ಸಿದ್ಧಪಡಿಸುವಂತೆ ಸೂಚಿಸಿದ್ದಾರಂತೆ. ಹೀಗಾಗಿ ಪ್ರಸ್ತುತ ಶ್ರೀಕಾಂತ್ ಸ್ಕ್ರಿಪ್ಟ್ ತಯಾರಿ ನಡೆಸುತ್ತಿದ್ದಾರೆ. ಹಿಂದೆ ಚಿರಂಜೀವಿ ನಾಯಕನಾಗಿ ನಟಿಸಿದ್ದ 'ಡ್ಯಾಡಿ' ಮತ್ತು 'ಶಂಕರ್ ದಾದಾ ಜಿಂದಾಬಾದ್ 'ಚಿತ್ರಗಳಲ್ಲಿ ಅಲ್ಲು ಅರ್ಜುನ್ ಮಿಂಚಿದ್ದು, ಅಭಿಮಾನಿಗಳನ್ನು ರಂಜಿಸಿದ್ದು ಗೊತ್ತೇ ಇದೆ. ಬಹಳ ಗ್ಯಾಪ್ ನಂತರ, ನಿಜವಾಗಿಯೂ ಚಿರು- ಬನ್ನಿ ಮಲ್ಟಿಸ್ಟಾರರ್ ಪ್ರಾಜೆಕ್ಟ್‌ ಸೆಟ್‌ ಮೇಲೆ ಹೋದರೆ ಅಭಿಮಾನಿಗಳಿಗೆ ಹಬ್ಬ. ಆದರೆ ಈ ಕಾಂಬಿನೇಷನ್ ನ ಸಾಧ್ಯಾಸಾಧ್ಯತೆಗಳನ್ನು ತಿಳಿಯಬೇಕಾದರೆ ಒಂದಷ್ಟು ಸಮಯ ಕಾಯಬೇಕಾಗುತ್ತದೆ. ಚಿರಂಜೀವಿ ಪ್ರಸ್ತುತ 'ಗಾಡ್‌ಫಾದರ್‌'ನಲ್ಲಿ ನಟಿಸುತ್ತಿದ್ದರೆ, ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಮೂವಿ 'ಪುಷ್ಪ'ವನ್ನು ಡಿಸೆಂಬರ್ 17 ರಂದು ಬಿಡುಗಡೆ ಆಗುತ್ತಿದೆ.

More from Filmibeat

English summary
Chiranjeevi Allu Arjun is likely to star in the same movie, Director Srikanth Adalala will direct the film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X