ವಿಜಯ್ ಅಥವಾ ರಶ್ಮಿಕಾ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಸೀಕ್ರೆಟ್ ಬಿಚ್ಚಿಟ್ಟ ಜೋಡಿ

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆ ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ನವ ದಂಪತಿ ಭಾಗವಹಿಸುತ್ತಿದ್ದಾರೆ. ನಿನ್ನೆಯಷ್ಟೆ ವಿಜಯ್ ತಮ್ಮ ಹುಟ್ಟೂರಿಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಊರಿನಲ್ಲಿ ಒಂದಷ್ಟು ಶಾಸ್ತ್ರಗಳನ್ನು ನೆರವೇರಿಸಿದ್ದರು. ಊರಿನ ಜನರಿಗೆ ವಿಜಯ್ ವಿಶೇಷ ಭೋಜವ ವ್ಯವಸ್ಥೆ ಮಾಡಿಸಿದ್ದರು.

ಉದಯ್‌ಪುರದಲ್ಲಿ ಅದ್ಧೂರಿಯಾಗಿ ವಿರೋಷ್ ಜೋಡಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಬಳಿಕ ತಿರುಪತಿ ಬೆಟ್ಟಕ್ಕೆ ದಂಪತಿ ತೆರಳಿ ಪೂಜೆ ಸಲ್ಲಿಸಿದ್ದರು. ತೆಲುಗು ನಟ ಅಲ್ಲು ಶಿರೀಷ್(ಅಲ್ಲು ಅರ್ಜುನ್ ಸಹೋದರ) ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಇಂದು(ಫೆಬ್ರವರಿ 3) ಹೈದರಾಬಾದ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಿಸಿದ್ದರು. ಹೈದರಾಬಾದ್‌ ಹೋಟೆಲ್‌ವೊಂದರಲ್ಲಿ ಕೆಲ ಅಭಿಮಾನಿಗಳನ್ನು ಆಹ್ವಾನಿಸಿ ದಂಪತಿ ತಮ್ಮ ಕೈಯಾರೆ ಊಟ ಬಡಿಸಿದ್ದಾರೆ.

Who Proposed First Rashmika or Vijay Virosh Wedding Celebrations Move from Udaipur to Hyderabad

'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಜೊತೆಯಾಗಿದ್ದರು. ಮೊದಲ ಚಿತ್ರದಲ್ಲಿ ನಟಿಸುವಾಗಿ ಶುರುವಾಗ ಪರಿಚಯ ಬಳಿಕ ಸ್ನೇಹವಾಗಿ ಬದಲಾಗಿತ್ತು. 2ನೇ ಚಿತ್ರದಲ್ಲಿ ನಟಿಸುವ ವೇಳೆಗೆ ಸ್ನೇಹ ಹೆಚ್ಚಾಗಿ ಪ್ರೀತಿಗೆ ತಿರುಗಿತ್ತು. ಇಬ್ಬರ ನಡುವೆ ಲವ್ ಶುರುವಾಗಿದ್ದು ಹೇಗೆ? ಇಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು? ಎನ್ನುವ ಕುತೂಹಲ ಕೆಲವರಲ್ಲಿದೆ. ಈ ಬಗ್ಗೆ ಸ್ವತಃ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗ್ತಿದೆ.

ಅಭಿಮಾನಿಗಳನ್ನು ಭೇಟಿ ಮಾಡಿ ಅವರೊಟ್ಟಿಗೆ ಊಟ ಮಾಡಿ ಸಂಭ್ರಮಿಸಿದ ವಿರೋಷ್ ಜೋಡಿ ಅಭಿಮಾನಿಗಳ ಜೊತೆ ಕೆಲವೊತ್ತು ಮಾತನಾಡಿದ್ದಾರೆ. ಈ ವೇಳೆ ಇಬ್ಬರ ಲವ್ ಸ್ಟೋರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

"ಮೊದಲ ಚಿತ್ರದಲ್ಲಿ ನಟಿಸುವಾಗ ನಾವಿಬ್ಬರು ಬರೀ ಸಹ ಕಲಾವಿದರಾಗಿದ್ದೆವು. ಅದೇ ಸಮಯದಲ್ಲಿ ಸ್ನೇಹಿತರಾಗಿದ್ದೆವು. ಆದರೆ 2ನೇ ಸಿನಿಮಾದಲ್ಲಿ ನಟಿಸುವಾಗ ನಮ್ಮಿಬ್ಬರ ನಡುವೆ ಪ್ರೀತಿ ಮೂಡಿತ್ತು. 3ನೇ ಸಿನಿಮಾ ಶುರುವಾಗುವ ಮುನ್ನ ಮದುವೆ ಆಗಿದ್ದೇವೆ. ರಶ್ಮಿಕಾ ಮೊದಲು ನನಗೆ ಪ್ರಪೋಸ್ ಮಾಡಿದ್ದು" ಎಂದು ವಿಜಯ್ ದೇವರಕೊಂಡ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾಗಿ ಹೇಳಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಬಹಳ ಸಂಪ್ರದಾಯಬದ್ಧವಾಗಿ ರಶ್ಮಿಕಾ, ವಿಜಯ್ ಮದುವೆ ನಡೆದಿದೆ. ಅಷ್ಟೇ ಅಲ್ಲ ಬಹಳ ಅರ್ಥಪೂರ್ಣವಾಗಿ ಜೋಡಿ ಮದುವೆಯನ್ನು ಸಂಭ್ರಮಿಸಿದೆ. ಒಂದ್ಕಡೆ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದಿದೆ. ಮತ್ತೊಂದು ಕಡೆ ನಾನಾ ರೀತಿಯಲ್ಲಿ ಈ ವಿಶೇಷ ಸಂದರ್ಭವನ್ನು ಜೋಡಿ ನೆನಪಿನಲ್ಲಿ ಉಳಿಯುವಂತೆ ಮಾಡಿ. ವಿಜಯ್ ತಮ್ಮ ಹುಟ್ಟೂರಿನ ಜನರಿಗೆ ಊಟ ಹಾಕಿಸಿದ್ದು ಮಾತ್ರವಲ್ಲ, ದೇಶಾದ್ಯಂತ ಸಿಹಿ ಹಂಚಿಕೆ, ಅನ್ನದಾನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಬೆಂಗಳೂರು ಸೇರಿ ದೇಶದ ಹಲವು ಭಾಗಗಳಲ್ಲಿ ಸಿಹಿ ಹಂಚಿ ಮದುವೆ ಸಂಭ್ರಮ ಹಂಚಿಕೊಂಡಿದ್ದಾರೆ. ಕೆಲ ದೇವಸ್ಥಾನಗಳಿಂದ ದೇಣಿಗೆ ನೀಡಿ ಅನ್ನದಾನ ಮಾಡಲು ಕೈ ಜೋಡಿಸಿದ್ದಾರೆ. ತಮ್ಮ ಹುಟ್ಟೂರಿನ ಸುತ್ತಮುತ್ತ ಇರುವ 40 ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡುವುದಾಗಿ ವಿಜಯ್ ದೇವರಕೊಂಡ ಘೋಷಿಸಿದ್ದಾರೆ. ಹೀಗೆ ನಾನಾ ಅರ್ಥಪೂರ್ಣ ವಿಚಾರಗಳ ಮೂಲಕ ತಮ್ಮ ಮದುವೆಯನ್ನು ಜೋಡಿ ಸಂಭ್ರಮಿಸುತ್ತಿದೆ.

ನಾಳೆ(ಮಾರ್ಚ್ 4) ಹೈದರಾಬಾದ್‌ನಲ್ಲಿ ವಿರೋಷ್ ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಖಾಸಗಿ ಹೋಟೆಲ್‌ನಲ್ಲಿ ಕೆಲವೇ ಆಪ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು, ಸಿನಿಮಾ ತಾರೆಯರಿಗೆ ಆಮಂತ್ರಣ ನೀಡಲಾಗಿದೆ. ಭಾರೀ ಭದ್ರತೆ ನಡುವೆ ಸಂಜೆ ಆರತಕ್ಷತೆ ಕಾರ್ಯಕ್ರಮ ಶುರುವಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X