ದೀಪಿಕಾ ಅಲ್ಲ, ಆಲಿಯಾ ಅಲ್ಲ ಪ್ರಭಾಸ್ ಜೊತೆಯಾಗುವ ಬಾಲಿವುಡ್ ಬೆಡಗಿ ಯಾರು?
ನಾಗ್ ಅಶ್ವಿನ್ ಚಿತ್ರಕ್ಕೆ ಪ್ರಭಾಸ್ ಸಹಿ ಹಾಕಿದಾಗಿನಿಂದಲೂ ಚಿತ್ರದ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ನಾಗ್ ಅಶ್ವಿನ್ ಜೊತೆಗಿನ ಪ್ರಭಾಸ್ ಸಿನಿಕಾ ಅತಿ ದೊಡ್ಡ ಬಜೆಟ್ ನದ್ದಾಗಿದ್ದು, ವೈಜ್ಞಾನಿಕ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ಭಾರತದ ಟಾಪ್ ನಾಯಕಿಯನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.
ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿ ಇನ್ನೂ ಕೆಲವರನ್ನು ಸಿನಿ ತಂಡ ಲಿಸ್ಟ್‌ನಲ್ಲಿರಿಸಿದೆ. ಕೆಲವರನ್ನು ಭೇಟಿ ಮಾಡಿ ಮಾತುಕತೆಯನ್ನೂ ಮಾಡಿದ್ದಾರೆ.

ದೀಪಿಕಾ ಪಡುಕೋಣೆಯನ್ನು ಸಂಪರ್ಕಿಸಿದ ಚಿತ್ರತಂಡ
ಮೊದಲಿಗೆ ಚಿತ್ರತಂಡವು ದೀಪಿಕಾ ಪಡುಕೋಣೆಯನ್ನು ಭೇಟಿ ಮಾಡಿದೆ. ಆದರೆ ದೀಪಿಕಾ ಪಡುಕೋಣೆ ಈ ಸಿನಿಮಾವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಬಾಲಿವುಡ್-ಹಾಲಿವುಡ್ ನಲ್ಲಿ ಬ್ಯುಸಿ ಇರುವ ಆಕೆಯ ಡೇಟ್ಸ್ ಸಹ ಚಿತ್ರತಂಡಕ್ಕೆ ಹೊಂದಾಣಿಕೆ ಆಗುವುದಿಲ್ಲ ಹಾಗೂ ಸಂಭಾವನೆ ಪ್ರಭಾಸ್ ಗಿಂತಲೂ ಹೆಚ್ಚು ಎನ್ನಲಾಗಿದೆ.

ರಾಜಮೌಳಿ ಸಿನಿಮಾದಲ್ಲಿ ಆಲಿಯಾ ಭಟ್ ನಟನೆ
ಇನ್ನು ಆಲಿಯಾ ಭಟ್ ರಾಜಮೌಳಿ ಸಿನಿಮಾದಲ್ಲಿ ನಟಿಸುವ ನಿಶ್ಚಯ ಆಗಿ, ನಂತರ ಆಕೆಯೂ ಸಹ ಡೇಟ್ಸ್ ಸಮಸ್ಯೆಯಿಂದ ಹಿಂದೆ ಸರಿದಿದ್ದಾರೆ. ಪ್ರಭಾಸ್ ಚಿತ್ರಕ್ಕೂ ಸಹ ಅವರು ಇದೇ ಸಬೂಬು ಹೇಳಿದ್ದಾರೆ ಎನ್ನಲಾಗಿದೆ.

ಕರೀನಾ ಕಪೂರ್ ಜೊತೆ ಮಾತುಕತೆ ಜಾರಿ
ಕೊನೆಗೆ ಚಿತ್ರತಂಡವು ಮಿಲ್ಕಿ ಬ್ಯೂಟಿ ಕರೀನಾ ಕಪೂರ್ ಖಾನ್ ಅನ್ನು ಸಂಪರ್ಕಿಸಿದ್ದು, ಮಾತುಕತೆ ನಡೆದಿದೆ ಎನ್ನಲಾಗಿದೆ. ಕರೀನಾ ಕಪೂರ್ ಖಾನ್ ಆಯ್ಕೆ ಅಂತಿಮವಾಗುವ ಸಾಧ್ಯತೆ ಇದೆ. ಹಾಗೊಂದು ವೇಳೆ ಕರೀನಾ ಸಹಿ ಹಾಕಿದರೆ ಇದು ಅವರ ಮೊದಲ ಅನ್ಯ ಭಾಷೀಯ ಚಿತ್ರವಾಗಿಲಿದೆ. ಹಿಂದಿ ಹೊರತಾಗಿ ಇನ್ನಾವ ಭಾಷೆಯಲ್ಲೂ ಅವರು ನಟಿಸಿಲ್ಲ.

ಕತ್ರೀನಾ ಕೈಫ್ ಅನ್ನು ಸಂಪರ್ಕಿಸಲಿದೆ ತಂಡ
ಒಂದು ವೇಳೆ ಕರೀನಾ ಕಪೂರ್ ಖಾನ್ ಒಲ್ಲೆ ಎಂದಲ್ಲಿ ಕತ್ರೀನಾ ಕೈಫ್ ಅವರನ್ನು ಸಹಿ ಮಾಡಿಸಿಕೊಳ್ಳಲು ಚಿತ್ರತಂಡ ರೆಡಿಯಾಗಿದೆ. ಆದರೆ ಕತ್ರೀನಾ ಗಿಂತಲೂ ಮೊದಲ ಆದ್ಯತೆಯನ್ನು ಕರೀನಾ ಗೆ ಕೊಟ್ಟಿದೆ ಚಿತ್ರತಂಡ.


Click it and Unblock the Notifications











