Samantha: ನಟಿ ಸಮಂತಾ ಮುಂಬೈ ಭೇಟಿ ಹಿಂದಿನ ರಹಸ್ಯವೇನು?

ಖುಷಿ ಸಿನಿಮಾ ಬಳಿಕ ಸಿನಿಮಾಗಳಿಂದ ಬ್ರೇಕ್‌ನಲ್ಲಿ ಇರುವ ಪ್ರತಿಭಾವಂತ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ನಟನೆ ಮತ್ತು ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ವಿದೇಶಿ ಪ್ರವಾಸಗಳಿಂದ ವಾಪಸ್ ಆಗಿರುವ ಅವರು, ತಮ್ಮ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಇದರ ಬೆನ್ನಲ್ಲೆ ನಟಿ ಪದೇ ಪದೇ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾಗಳ ಜೊತೆಗೆ ಸಮಂತಾ ರುತ್ ಪ್ರಭು ಹಲವು ಪ್ರಾಡಕ್ಟ್‌ಗಳಿಗೆ ರಾಯಭಾರಿಯಾಗಿದ್ದಾರೆ. ಹಾಗಾಗಿ ಅನೇಕ ಕಡೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಪ್ರಸ್ತುತ ತಮ್ಮ ಕಮಿಟ್‌ಮೆಂಟ್‌ಗಳನ್ನು ಪೂರೈಸಲು ಮತ್ತು ಫೋಟೋಶೂಟ್‌ಗಳಲ್ಲಿ ಭಾಗವಹಿಸಲು ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳಿಂದ ಸಮಂತಾ ಮುಂಬೈನ ಸ್ಟುಡಿಯೋ ಬಳಿ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ.

actress-samantha-ruth-prabhu-visits-mumbai

ಮುಂಬೈನಲ್ಲಿ ಬ್ಯುಸಿಯಾದ ನಟಿ ಸಮಂತಾ

ಇತ್ತೀಚೆಗೆ ಸಮಂತಾ ಮುಂಬೈನಲ್ಲಿ ಇರುವ ವಿಡಿಯೋವೊಂದು ವೈರಲ್ ಆಗಿತ್ತ. ಅದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಕಾಣಿಸಿಕೊಂಡಿದ್ದು, ಇದರಲ್ಲಿ ಸಮಂತಾ ತೋಳಿಲ್ಲದ ಆಲಿವ್ ಗ್ರೀನ್ ಕ್ರಾಪ್ ಟಾಪ್ ಮತ್ತು ನೀಲಿ ಡೆನಿಮ್ ಜೀನ್ಸ್‌ ಧರಿಸಿ ಪಾಪರಾಜಿಗಳಿಗೆ ಸಕತ್ ಸ್ಮೈಲ್ ಕೊಟ್ಟಿದ್ದಾರೆ.

ತಮ್ಮ ಫ್ಯಾಶನ್ ಮತ್ತು ಬಟ್ಟೆಗಳ ಬಗ್ಗೆ ಚರ್ಚೆ ಹುಟ್ಟುಹಾಕುವ ನಟಿ ಸಮಂತಾ, ಆಲಿವ್ ಗ್ರೀನ್ ಟಾಪ್‌ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದರು. ಗ್ರೇ ಕಲರ್ ಸನ್‌ಗ್ಲಾಸ್‌ಗಳು, ಕೊರಳಿಗೆ ಎಳೆ ಎಳೆಯಾದ ಸರ, ಸಮುದ್ರದ ಅಲೆಗಳಂರೆ ಕಾಣುವ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಅವರ ಸಂದರ್ಯವನ್ನು ಹೆಚ್ಚಿಸಿರುವುದು ಆಕೆಯ ನಗು.

ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಸಮಂತಾ

ನಟಿ ಸಮಂತಾ ರುತ್ ಪ್ರಭು ಖುಷಿ ಬಳಿಕ ಯಾವುದೇ ಸಿನಿಮಾ ಘೋಷಿಸಿಲ್ಲ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಕೆಲಸದಿಂದ ಆರು ತಿಂಗಳ ವಿರಾಮ ತೆಗೆದುಕೊಂಡಿದ್ದರು. ತೀವ್ರವಾದ ಸ್ನಾಯು ನೋವು ಮತ್ತು ಉರಿಯೂತಕ್ಕೆ ಕಾರಣವಾಗುವ ಮೈಯೋಸೈಟ್‌ ಖಾಯಿಲೆಯಿಂದ ಬಳಲುತ್ತಿದ್ದರು. ಸದ್ಯ ನಟಿ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿರುವಂತೆ ತೋರುತ್ತಿದೆ.

actress-samantha-ruth-prabhu-visits-mumbai

ಸಮಂತಾ ಅವರ ಮುಂದಿನ ಸಿನಿಮಾಗಳು

ಸಮಂತಾ ರುತ್ ಪ್ರಭು ಇತ್ತೀಚೆಗಷ್ಟೇ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಖುಷಿಯಲ್ಲಿ ಕಾಣಿಸಿಕೊಂಡಿದ್ದರು. ನಟ ವಿಜಯ್ ದೇವರಕೊಂಡ ಜೊತೆಗೆ ಡುಯೇಟ್ ಹಾಡಿದ್ದರು. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಖೇಡ್ಕರ್, ಜಯರಾಮ್, ಮುರಳಿ ಶರ್ಮಾ, ರಶ್ಮಿ, ರೋಹಿಣಿ, ಶರಣ್ಯ ಪೊನ್ವಣ್ಣನ್ ಮತ್ತು ಇತರರು ನಟಿಸಿದ್ದಾರೆ. ಖುಷಿ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇವುಗಳಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದರು.

ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಿದ್ದ ಸಮಂತಾ ಅವರ ಖುಷಿ ಸಿನಿಮಾಗೆ ವಿಮರ್ಶಾತ್ಮಕ ಮೆಚ್ಚುಗೆ ಸಿಕ್ಕಿತ್ತು. ಜನರು ವಿಜಯ್ ದೇವರಕೊಂಡ ಮತ್ತು ಸಮಂತಾ ಅವರ ಕೆಮಿಸ್ಟ್ರೀಗೆ ಫುಲ್ ಮಾರ್ಕ್ಸ್ ನೀಡಿದ್ದರು. ಸದ್ಯ ನಟಿ ಸಮಂತಾ ಅಮೇರಿಕನ್ ಆನ್‌ಲೈನ್ ಸರಣಿ ಸಿಟಾಡೆಲ್‌ನ ಭಾರತೀಯ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟ ವರುಣ್ ಧವನ್ ಕೂಡ ನಟಿಸಿದ್ದಾರೆ. ಇದನ್ನು ಪ್ರಸಿದ್ಧ ಜೋಡಿ ರಾಜ್ ಮತ್ತು ಡಿಕೆ ಹೆಲ್ಮ್ ನಿರ್ಮಿಸಲಿದ್ದಾರೆ.

ಪ್ರತಿಭಾವಂತ ನಟ ಮನೋಜ್ ಬಾಜಪೇಯಿ ನಟಿಸಿದ ಜನಪ್ರಿಯ ಫ್ಯಾಮಿಲಿ ಮ್ಯಾನ್ ಸೀಸನ್ 2 ರ ನಂತರ ಇದು ಸಮಂತಾ ಜೊತೆಗೆ ರಾಜ್ ಮತ್ತು ಡಿಕೆ ಹೆಲ್ಮ್ ಅವರು ಎರಡನೇ ಬಾರಿ ಕೈ ಜೋಡಿಸುತ್ತಿದ್ದಾರೆ. ಸಿಟಾಡೆಲ್ ಇಂಡಿಯಾ ಸಹ ವರುಣ್ ಧವನ್ ನಟಿಸಿದ್ದಾರೆ. ಸರಣಿಯ ಅಮೇರಿಕನ್ ಆವೃತ್ತಿಯಲ್ಲಿ ರಿಚರ್ಡ್ ಮ್ಯಾಡೆನ್ ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Samantha Ruth Prabhu visit's Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X