ಐಟಂ ಸಾಂಗ್‌ಗೆ ಕುಣಿಯಲ್ಲ ಎಂದಿದ್ದ ಶ್ರೀಲೀಲಾ ಈಗ ಉಲ್ಟಾ ಹೊಡೆದ್ರಾ? ವೀಡಿಯೋ ವೈರಲ್

ಬೆಂಗಳೂರು ಬ್ಯೂಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿ ಆಗಿದ್ದಾರೆ. ಒಳ್ಳೆ ಅವಕಾಶಗಳು ಸಿಕ್ಕರೂ ಬ್ರೇಕ್ ಮಾತ್ರ ಸಿಗಲಿಲ್ಲ. ಸ್ಟಾರ್ ನಟರ ಜೊತೆ ನಟಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ 'ಪುಷ್ಪ'-2 ಚಿತ್ರದಲ್ಲಿ ಐಟಂ ಸಾಂಗ್‌ಗೆ ಕಿಸ್ ಬೆಡಗಿ ಹೆಜ್ಜೆ ಹಾಕುತ್ತಾರೆ ಎನ್ನಲಾಗ್ತಿದೆ.

ಸ್ಟಾರ್ ನಟಿಯರು ಸ್ಪೆಷಲ್ ಸಾಂಗ್‌ಗಳಿಗೆ ಮಾದಕವಾಗಿ ಹೆಜ್ಜೆ ಹಾಕುವುದು ಹೊಸದೇನು ಅಲ್ಲ. ತೆಲುಗು ಸಿನಿಮಾಗಳಲ್ಲಿ ಕಥೆಗೆ ಬೇಕೋ ಬೇಡವೋ ಬಿಂದಾಸ್ ಡ್ಯಾನ್ಸ್ ನಂಬರ್ ಇರಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಇದೇ ಕಾರಣಕ್ಕೆ ಬಿಂದಾಸ್ ಟ್ಯೂನ್, ಲಿರಿಕ್ಸ್ ಸೇರಿಸಿ ಡ್ಯಾನ್ಸಿಂಗ್ ನಂಬರ್ ಡಿಸೈನ್ ಮಾಡಲಾಗುತ್ತದೆ.

Why actress Sreeleela breaks no item song rule for Pushpa-2 the rule film

ಅಲ್ಲು ಅರ್ಜುನ್ ನಟನೆಯ ' ಪುಷ್ಪ' ಚಿತ್ರದಲ್ಲಿ ಸಮಂತಾ ಸ್ಪೆಷಲ್ ಸಾಂಗ್‌ಗೆ ಕುಣಿದಿದ್ದರು. 'ಊ ಅಂಟಾವಾ ಉಹೂಂ ಅಂಟಾವ' ಎಂದು ಸ್ಯಾಮ್ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ರಂಗೇರಿಸಿದ್ದರು. ಚಿತ್ರದ ಸಕ್ಸಸ್‌ನಲ್ಲಿ ಈ ಸಾಂಗ್ ಪಾಲು ದೊಡ್ಡದಿದೆ. ಸದ್ಯ 'ಪುಷ್ಪ-2' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲೂ ಒಂದು ಡ್ಯಾನ್ಸಿಂಗ್ ನಂಬರ್ ಇದೆ, ಅದಕ್ಕೆ ಶ್ರೀಲೀಲಾ ಹೆಜ್ಜೆ ಹಾಕುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ಕಳೆದ ವರ್ಷವಷ್ಟೆ ಶ್ರೀಲೀಲಾ ನಾನು ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಲ್ಲ ಎಂದಿದ್ದರು. ಸದ್ಯಕ್ಕೆ ಒಳ್ಳೆ ಒಳ್ಳೆ ಪಾತ್ರಗಳು ಬರ್ತಿವೆ. ಇಂತಹ ಸಮಯದಲ್ಲಿ ಆ ರಿಸ್ಕ್ ತೆಗೆದುಕೊಳ್ಳಲ್ಲ ಎಂದಿದ್ದರು. ಆದರೆ 'ಗುಂಟೂರು ಖಾರಂ' ಚಿತ್ರದಲ್ಲಿ ಹೆಚ್ಚು ಕಮ್ಮಿ ಐಟಂ ಸಾಂಗ್ ರೀತಿಯಲ್ಲೇ ಒಂದು ಬಿಂದಾಸ್ ನಂಬರ್‌ಗೆ ಶ್ರೀಲೀಲಾ ಕುಣಿದಿದ್ದರು. ಟಾಲಿವುಡ್‌ನಲ್ಲಿ ಡ್ಯಾನ್ಸಿಂಗ್ ಕ್ವೀನ್ ಎಂದೇ ಆಕೆ ಫೇಮಸ್ ಆಗಿಬಿಟ್ಟಿದ್ದಾರೆ.

Why actress Sreeleela breaks no item song rule for Pushpa-2 the rule film

'ಪುಷ್ಪ-2' ಚಿತ್ರದಲ್ಲಿ ಶ್ರೀಲೀಲಾ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡುವುದು ಕನ್ಫರ್ಮ್ ಎಂದು ವರದಿಯಾಗಿದೆ. ಮುಂದಿನ ವಾರವೇ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಇದೆಲ್ಲದ ನಡುವೆ ಶ್ರೀಲೀಲಾ ನಾನು ಸದ್ಯಕ್ಕೆ ಐಟಂ ಸಾಂಗ್‌ಗೆ ಕುಣಿಯಲ್ಲ ಎಂದಿದ್ದ ವೀಡಿಯೋ ವೈರಲ್ ಆಗುತ್ತಿದೆ. 'ಭಗವಂತ್ ಕೇಸರಿ' ಚಿತ್ರದ ರಿಲೀಸ್ ವೇಳೆ ನೀಡಿದ್ದ ಸಂದರ್ಶನದಲ್ಲಿ ಶ್ರೀ ಈ ಬಗ್ಗೆ ಮಾತನಾಡಿದ್ದರು.

ಶ್ರೀಲೀಲಾ ಮಾತನಾಡಿ "ಸದ್ಯಕ್ಕೆ ನಾನು ಐಟಂ ಸಾಂಗ್‌ ಬಗ್ಗೆ ಯೋಚಿಸುತ್ತಿಲ್ಲ. ಭಗವಂತ್ ಕೇಸರಿ ಚಿತ್ರದಲ್ಲಿ ವಿಜಿ ಪಾಪ ರೀತಿಯ ಪಾತ್ರಗಳನ್ನು ಮಾಡುತ್ತಿರುವಾಗ ಇದನ್ನೆಲ್ಲಾ ನಮ್ಮ ಮನೆಗಳಲ್ಲಿ ಒಪ್ಪಲ್ಲ. ನಮ್ಮವರು ಅದನ್ನು ಒಪ್ಪಲ್ಲ. ನೋಡಲ್ಲ, ಹಾಗಾಗಿ ಈಗ ಪ್ರಶಾಂತವಾಗಿ ಒಳ್ಳೆ ಪಾತ್ರಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ" ಎಂದು ಹೇಳಿದ್ದರು.

ಶ್ರೀಲೀಲಾ 'ಪುಷ್ಪ'-2 ಚಿತ್ರದ ಸ್ಪೆಷಲ್‌ ಸಾಂಗ್‌ಗೆ ಕುಣಿಯುತ್ತಾರೆ ಎನ್ನುತ್ತಿದ್ದಂತೆ ಈ ವಿಡಿಯೋ ವೈರಲ್ ಆಗ್ತಿದೆ. ಇಷ್ಟು ಬೇಗ ನಿರ್ಧಾರ ಬದಲಿಸಿಬಿಟ್ರಾ? ಯಾವುದೇ ಒಳ್ಳೆ ಅವಕಾಶ ಸಿಗುತ್ತಿಲ್ವಾ? ಅಥವಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲು ಹೆಚ್ಚು ಸಂಭಾವನೆ ಕೊಡ್ತಿದ್ದಾರಾ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ದೇವಿಶ್ರೀ ಪ್ರಸಾದ್ 'ಪುಷ್ಪ'-2 ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಿನಿಮಾ ಬಿಡುಗಡೆ ಒಂದು ತಿಂಗಳು ಮಾತ್ರ ಬಾಕಿಯಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡಿ ಪ್ರಮೋಷನ್‌ಗೆ ಚಾಲನೆ ಕೊಡಲಿದೆ ಚಿತ್ರತಂಡ.

ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಾಯಕಿಯಾಗಿ ಸೀಕ್ವೆಲ್‌ನಲ್ಲಿ ಮುಂದುವರೆಯುತ್ತಿದ್ದಾರೆ. ಫಹಾದ್ ಫಾಸಿಲ್ ಪೊಲೀಸ್ ಆಫೀಸರ್ ಆಗಿ ಪುಷ್ಪರಾಜ್‌ಗೆ ಪೈಪೋಟಿ ಕೊಡಲಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

More from Filmibeat

English summary
When Sreeleela said no to Special song; now she changed her decision;
Read more about: sreeleela pushpa tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X