'ಸಲಾರ್' ಸಕ್ಸಸ್ ಪಾರ್ಟಿಯಲ್ಲಿ ಅಖಿಲ್‌ಗೇನು ಕೆಲ್ಸ? ನೀಲ್ ಮುಂದಿನ ಚಿತ್ರದಲ್ಲಿ ನಾಗಾರ್ಜುನ ಪುತ್ರ?

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ಸಂಕ್ರಾಂತಿ ಸಂಭ್ರಮದಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಈಗಾಗಲೇ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ ಓಟಿಟಿಗೂ ಎಂಟ್ರಿ ಕೊಡಲಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮಹತ್ವಾಕಾಂಕ್ಷೆಯ ಸಿನಿಮಾ 'ಸಲಾರ್' ಹಿಟ್ ಲಿಸ್ಟ್ ಸೇರಿದೆ. ಇದೀಗ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಮುಂದಿನ ವರ್ಷವೇ 'ಸಲಾರ್-2: ಶೌರ್ಯಾಂಗ ಪರ್ವ' ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ 'ಸಲಾರ್' ಸಕ್ಸಸ್ ಪಾರ್ಟಿ ಆಯೋಜಿಸಲಾಗಿತ್ತು. ಇಡೀ ಚಿತ್ರತಂಡ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಔಟ್‌ಫುಟ್‌ನಲ್ಲಿ ಹಾಜರಾಗಿ ಸಂಭ್ರಮಿಸಿದ್ದಾರೆ.

Why Akhil akkineni attend Prabhas Salaar Success party

ಭರ್ಜರಿ ಕಾಕ್‌ಟೇಲ್ ಮಾಡಿ ಎಲ್ಲರೂ ಎಂಜಾಯ್ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆಯೇ ಬಹಳ ಅದ್ಧೂರಿಯಾಗಿ ಪಾರ್ಟಿ ಆಯೋಜಿಸಿತ್ತು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಡೀಗ ಪಾರ್ಟಿ ಸುಂದರ ಕ್ಷಣಗಳ ಸ್ಪೆಷಲ್ ವಿಡಿಯೋವನ್ನು ಹೊಂಬಾಳೆ ಸಂಸ್ಥೆ ರಿಲೀಸ್ ಮಾಡಿದೆ. ಆದರೆ ಪಾರ್ಟಿಗೆ ಚಿತ್ರದ ಎರಡನೇ ನಾಯಕ ಪೃಥ್ವಿರಾಜ್ ಸುಕುಮಾರನ್ ಮಾತ್ರ ಗೈರಾಗಿದ್ದರು.

ನಟ ಪ್ರಭಾಸ್, ನಟಿ ಶ್ರುತಿ ಹಾಸನ್, ಗರುಡ ರಾಮ್, ಈಶ್ವರಿ ರಾವ್, ಶ್ರಿಯಾ ರೆಡ್ಡಿ, ಬಾಬಿ ಸಿಂಹ, ಟಿನ್ನು ಆನಂದ್, ನವೀನ್ ಶಂಕರ್, ಪ್ರಮೋದ್ ಸೇರಿದಂತೆ ಇಡೀ ಚಿತ್ರರಂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಂಗೀತ ನಿರ್ದೇಶಕ ರವಿ ಬಸ್ರೂರು, ಛಾಯಾಗ್ರಹಕ ಭುವನ್ ಗೌಡ ಜೊತೆಗೆ ಮಾಜಿ ಸಚಿವರಾದ ಅಶ್ವಥ್ ನಾರಾಯಣ್ ಪಾರ್ಟಿಯಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಅಚ್ಚರಿ ಎನ್ನುವಂತೆ ತೆಲುಗು ನಟ ಅಖಿಲ್ ಅಕ್ಕಿನೇನಿ ಕಾಣಿಸಿಕೊಂಡಿದ್ದಾರೆ. 'ಸಲಾರ್' ಚಿತ್ರಕ್ಕೂ ಅಖಿಲ್‌ಗೂ ಏನು ಸಂಬಂಧ? ಎನ್ನುವ ಚರ್ಚೆ ಶುರುವಾಗಿದೆ.

ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬ್ರೇಕ್ ಮಾತ್ರ ಸಿಕ್ಕಿಲ್ಲ. ಅಖಿಲ್ ಕೈಗೆ ಪೆಟ್ಟಾಗಿದ್ದು ಬ್ಯಾಂಡೇಜ್ ಸುತ್ತಿಕೊಂಡೇ 'ಸಲಾರ್' ಸಕ್ಸಸ್ ಪಾರ್ಟಿಗೆ ಬಂದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 'ಸಲಾರ್‌' ಸೀಕ್ವೆಲ್‌ನಲ್ಲಿ ಅಖಿಲ್ ನಟಿಸುತ್ತಾರಾ? ಹೊಂಬಾಳೆ ಫಿಲ್ಮ್ಸ್ ಹೊಸ ಪ್ರಾಜೆಕ್ಟ್‌ನಲ್ಲಿ ಅಕ್ಕಿನೇನಿ ಹೀರೊ ಇರ್ತಾರಾ? ಅಥವಾ ಅಖಿಲ್ ಜೊತೆ ನೀಲ್ ಸಿನಿಮಾ ಮಾಡುತ್ತಾರಾ? ಎಂದು ಸಿಕ್ಕಾಪಟ್ಟೆ ಚರ್ಚೆ ನಡೀತಿದೆ.

Why Akhil akkineni attend Prabhas Salaar Success party

'ಸಲಾರ್' ಚಿತ್ರದಲ್ಲಿ ನಾಯಕ ದೇವನಿಗೆ ಒಬ್ಬ ತಮ್ಮ ಇರ್ತಾನೆ. ಆತನನ್ನು ಸೀಕ್ವೆಲ್‌ನಲ್ಲಿ ತೋರಿಸುತ್ತಾರೆ. ಆ ಪಾತ್ರವನ್ನು ಅಖಿಲ್ ಮಾಡುತ್ತಾರೆ? 2ನೇ ಭಾಗದಲ್ಲಿ ಅಖಿಲ್ ಮೇನ್ ವಿಲನ್? ಎನ್ನುವ ಊಹಾಪೋಹ ಕೆಲವರದ್ದು. ಇದೇ ವಿಚಾರ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡ್ತಿದೆ.

ಹೊಂಬಾಳೆ ಫಿಲ್ಮ್ಸ್ ಹಾಗೂ ಯುವಿ ಕ್ರಿಯೇಷನ್ಸ್ ಜಂಟಿಯಾಗಿ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಅದರಲ್ಲಿ ಅಖಿಲ್ ನಟಿಸುತ್ತಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಅಖಿಲ್ ಕೂಡ 'ಸಲಾರ್' ಪಾರ್ಟಿಗೆ ಬಂದಿದ್ದರು ಎನ್ನುವ ವಾದ ಕೆಲವರದ್ದು. ಅದೆಲ್ಲ ಏನೇ ಇದ್ದರೂ ಪಾರ್ಟಿಯಲ್ಲಿ ಬ್ಯಾಂಡೇಜ್ ಸುತ್ತಿಕೊಂಡು ಕಾಣಿಸಿಕೊಂಡು ಅಖಿಲ್‌ನ ನೋಡಿ ತೆಲುಗು ಮಂದಿ ಹುಬ್ಬೇರಿಸಿದ್ದಾರೆ. ಇನ್ನು ಆತನ ಕೈಗೆ ಏನಾಯಿತು? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.

ಇನ್ನು ಸಲಾರ್- 1 ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಕೊಂಡುಕೊಂಡಿದೆ. ಭಾರೀ ಮೊತ್ತಕ್ಕೆ 5 ಭಾಷೆಗಳ ರೈಟ್ಸ್ ತನ್ನದಾಗಿಸಿಕೊಂಡಿದೆ. ಫೆಬ್ರವರಿಯಲ್ಲೇ 'ಸಲಾರ್' ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸದ್ಯ ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ.

More from Filmibeat

English summary
is Akhil akkineni join Prashanth neel's Salaar sequel?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X