ಬೆಂಗಳೂರಿನಲ್ಲೇ ಕನ್ನಡತಿ ಕೈ ಹಿಡಿದಿದ್ದ ನಟ; ಮದುವೆ ಬಳಿಕ ತಾಯಿಯಿಂದ ದೂರಾಗಿದ್ದೇಕೆ?

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟ. ಅಲ್ಲಿಯವರೆಗೂ ಇದ್ದ ಜೀವನ ದಿಢೀರ್ ಬದಲಾಗುತ್ತದೆ. ಹುಡುಗಿ ತಾಯಿ ಮನೆ ಬಿಟ್ಟು ಹೊಸ ಮನೆಗೆ(ಗಂಡನ ಮನೆ) ಬರ್ತಾಳೆ. ಅಲ್ಲಿವರೆಗೂ ತಾನಾಯ್ತು ತನ್ನಿಷ್ಟ ಆಯ್ತು ಎಂದುಕೊಂಡಿದ್ದ ಹುಡುಗನ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಿರುತ್ತದೆ.

ಮದುವೆಯಾದ ಒಂದೆರಡು ತಿಂಗಳು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಒಂದೆರಡು ತಿಂಗಳ ಕಳೆದ ಬಳಿಕ ನಿಧಾನವಾಗಿ ಸಮಸ್ಯೆಗಳು ಶುರುವಾಗುತ್ತದೆ. ಕೆಲವೇ ದಿನಗಳಲ್ಲಿ ಮಗ ಬೇರೆ ಮನೆ ಮಾಡುವುದು ಸಹಜ ಎನ್ನುವಂತಾಗಿಬಿಟ್ಟಿದೆ. ಆದರೆ ಕೆಲ ಪೋಷಕರು ಮಾತ್ರ ಮಗನಿಗೆ ಮದುವೆ ಆಗುತ್ತಿದ್ದಂತೆ ಮಗ-ಸೊಸೆಗೆ ಪ್ರೈವೆಸಿ ಇರಲಿ ಎಂದು ಬೇರೆ ಮನೆ ಮಾಡಿ ಇಡುತ್ತಾರೆ. ತೆಲುಗು ನಟ ನಾಗಶೌರ್ಯ ಕೂಡ ಮದುವೆ ಬಳಿಕ ಪೋಷಕರಿಂದ ದೂರಾಗಿ ಬೇರೆ ಮನೆಯಲ್ಲಿದ್ದಾರೆ.

Why did actor Naga Shaurya live in a separate house from his parents after marriage

ತೆಲುಗು ನಟ ನಾಗಶೌರ್ಯ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಗಲಿಲ್ಲ. ಬೆಂಗಳೂರು ಮೂಲದ ಉದ್ಯಮಿ ಅನೂಷಾ ಶೆಟ್ಟಿ ಎಂಬುವವರ ಜೊತೆ ಎರಡು ವರ್ಷಗಳ ಹಿಂದೆ ನಾಗಶೌರ್ಯ ಮದುವೆ ನಡೆದಿತ್ತು. ಉಡುಪಿಯ ಕುಂದಾಪುರ ಮೂಲದ ಅನುಷಾ ಬೆಂಗಳೂರಿನಲ್ಲೇ ನೆಲೆಸಿದ್ದರು. ನವೆಂಬರ್ 20, 2022ರಂದು ಬೆಂಗಳೂರಿನ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಜೆಡಬ್ಲೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು.

ನಾಗಶೌರ್ಯ ತಮ್ಮ ತಾಯಿ ಉಷಾ ಅವರ ಜೊತೆ ಸೇರಿ ರೆಸ್ಟೋರೆಂಟ್ ಆರಂಭಿಸಿದ್ದಾರೆ. ರೆಸ್ಟೋರೆಂಟ್ ಬ್ಯುಸಿನೆಸ್ ಮೂಲಕ ಉಷಾ ಅವರು ಜನಪ್ರಿಯತೆ ಸಾಧಿಸಿದ್ದು ಸಾಕಷ್ಟು ಯೂಟ್ಯೂಬ್‌ ಚಾನಲ್‌ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಐ ಡ್ರೀಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಗ ನಾಗಶೌರ್ಯ ಬಗ್ಗೆ ಕೇಳಿದಾಗ ಆತ ಈಗ ನಮ್ಮ ಜೊತೆ ಇಲ್ಲ. ಮದುವೆ ಬಳಿಕ ಬೇರೆ ಮನೆ ಮಾಡಿಕೊಂಡಿದ್ದಾನೆ ಎಂದು ಉಷಾ ಹೇಳಿದ್ದಾರೆ. ಸದ್ಯ ಮಗ, ಅಳಿಯ ಬೇರೆ ಮನೆಯಲ್ಲಿದ್ದರೆ ನಾನು ನಮ್ಮ ಪತಿ ಬೇರೆ ಇದ್ದೀವಿ. ಮದುವೆಗೆ ಮುನ್ನ ನಾಗಶೌರ್ಯ ಬೇರೆ ಮನೆ ಮಾಡುವ ಬಗ್ಗೆ ಹೇಳಿದ್ದ. ಮದುವೆ ಬಳಿಕ ನಿನ್ನೊಟ್ಟಿಗೆ ಇರಲ್ಲ ಎನ್ನುತ್ತಿದ್ದ ಎಂದು ಉಷಾ ಹೇಳಿಕೊಂಡಿದ್ದಾರೆ.

Why did actor Naga Shaurya live in a separate house from his parents after marriage

ಈಗ ಅಂತ ಅಲ್ಲ, ಅವನು 2ನೇ ತರಗತಿಯಲ್ಲಿ ಓದುವಾಗಲೇ ಮದುವೆ ಬಳಿಕ ನಾನು ಬೇರೆ ಮನೆ ಮಾಡ್ತೀನಿ ಎನ್ನುತ್ತಿದ್ದ. ನಾನು ಬಹಳ ಹಿಂದಿನಿಂದಲೂ ಇದೇ ರೀತಿ ಭಾವಿಸುತ್ತಿದ್ದೆ. ಮದುವೆ ಆಗಿ ಒಂದೇ ಮನೆಯಲ್ಲಿ ಇದ್ದು ಸಮಸ್ಯೆ ಆಗುವುದಕ್ಕಿಂತ ದೂರ ಇದ್ದು ಆಗಾಗ್ಗೆ ಒಟ್ಟಿಗೆ ಸೇರಿ ಸಂಭ್ರಮಿಸುವುದು ಒಳ್ಳೆಯದು ಅನ್ನಿಸುತ್ತಿತ್ತು. ಆಗ ಯಾಕೆ ಆ ಮಾತು ಹೇಳಿದ್ನೋ ಗೊತ್ತಿಲ್ಲ. ಇಬ್ಬರು ಒಳ್ಳೆ ವ್ಯಕ್ತಿಗಳು ಒಟ್ಟಿಗೆ ಇರಬಾರದು ಎನ್ನುತ್ತಿದ್ದ. ಮೊದಲಿನಿಂದ ಆ ರೀತಿ ಅಂದುಕೊಂಡಿದ್ದರಿಂದ ಮದುವೆ ಆಗುತ್ತಿದ್ದಂತೆ ಬೇರೆ ಮನೆ ಮಾಡಿ ಇಟ್ಟೆವು, ಅದು ಬಿಟ್ಟು ಬೇರೆ ಏನು ಸಮಸ್ಯೆ ಇಲ್ಲ ಎಂದು ಉಷಾ ವಿವರಿಸಿದ್ದಾರೆ.

ಇಬ್ಬರೂ ಮಕ್ಕಳು ಮದುವೆ ಆಗಿ ಬೇರೆ ಮನೆ ಮಾಡಿಕೊಂಡು ಹೋದಮೇಲೆ ನಮಗೆ ಒಂಟಿತನ ಕಾಡುತ್ತಿತ್ತು. ಮನೆ ಖಾಲಿ ಖಾಲಿ ಎನಿಸುತ್ತಿತ್ತು. ಆಗ ಏನಾದರೂ ಮಾಡಬೇಕು ಎನಿಸಿ ಬ್ಯುಸಿನೆಸ್ ಮಾಡಲು ಮುಂದಾದೆ. ಮೊದಲು ಕ್ಲೌಡ್ ಕಿಚನ್ ಎಂದು ಆರಂಭಿಸಿದ್ದು. ಬಳಿಕ ರೆಸ್ಟೋರೆಂಟ್ ಆಯಿತು. ಇವತ್ತು ಸಾಕಷ್ಟು ಬ್ರ್ಯಾಂಚ್‌ಗಳಿವೆ ಎಂದು ನಟ ನಾಗಶೌರ್ಯ ತಾಯಿ ಮಾಹಿತಿ ನೀಡಿದ್ದಾರೆ.

ನಾಗಶೌರ್ಯ ಪತ್ನಿ ಬೆಂಗಳೂರಿನಲ್ಲಿ ಬ್ಯುಸಿನೆಸ್ ನೋಡಿಕೊಳ್ಳುತ್ತಾರೆ. ಆದರೂ ಇಲ್ಲಿ ಮನೆಯಲ್ಲಿ ಎಲ್ಲವನ್ನು ನಿಭಾಯಿಸುತ್ತಾಳೆ. ಬಹಳ ಗಟ್ಟಿಗಿತ್ತಿ. ನನಗಿಂತಲೂ ಆಕೆ ಬಹಳ ಸಮರ್ಥಳು. ಮದುವೆ ಜವಾಬ್ದಾರಿಯನ್ನು ಕೂಡ ಆಕೆ ಹೊತ್ತುಕೊಂಡಿದ್ದಳು. ಡೆಕೊರೇಷನ್, ಊಟೋಪಚಾರ ಎಲ್ಲವೂ ಆಕೆಯದ್ದೇ ಎಂದು ಸೊಸೆಯನ್ನು ಸೊಸೆಯನ್ನು ಕೊಂಡಾಡಿದ್ದಾರೆ.

More from Filmibeat

English summary
Actor's mother shares why her son separated after his wedding
Read more about: tollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X