'ಬೊಮ್ಮರಿಲ್ಲು' ಮಾಡಲ್ಲ ಎಂದು ಬಿಟ್ಟು ಹೋಗಿದ್ದ ಜೆನಿಲಿಯಾ ಮತ್ತೆ ನಟಿಸಿದ್ದೇಕೆ?

'ಬೊಮ್ಮರಿಲ್ಲು' ಸಿನಿಮಾದಲ್ಲಿ ನಟಿಸಿದ ನಂತರ ನಟಿ ಜೆನಿಲಿಯಾ ವೃತ್ತಿಜೀವನ ಉತ್ತುಂಗಕ್ಕೇರಿತು. ಹಾಸಿನಿ ಪಾತ್ರ ಜೆನಿಲಿಯಾಗೆ ಬಹುದೊಡ್ಡ ಬ್ರೇಕ್ ಕೊಡ್ತು. ಸೌತ್ ಇಂಡಸ್ಟ್ರಿಯ ಟಾಕ್ ಆಫ್ ದಿ ಟೌನ್ ಆದರು. 2006ರಲ್ಲಿ ತೆರೆಕಂಡಿದ್ದ 'ಬೊಮ್ಮರಿಲ್ಲು' ಚಿತ್ರವನ್ನು ಭಾಸ್ಕರ್ ನಿರ್ದೇಶಿಸಿದ್ದರು. ತದನಂತರ ಈ ಚಿತ್ರ ತಮಿಳು, ಬೆಂಗಾಳಿ ರಿಮೇಕ್ ಆಯ್ತು. ಹಿಂದಿಯಲ್ಲೂ ತಯಾರಾಗಿದೆ.

ಸಿದ್ಧಾರ್ಥ್, ಜೆನಿಲಿಯಾ ನಾಯಕ-ನಾಯಕಿಯಾಗಿ ನಟಿಸಿದ ಈ ಚಿತ್ರದಲ್ಲಿ ಜಯಸುಧಾ, ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ದಿಲ್ ರಾಜು ನಿರ್ಮಾಣ ಮಾಡಿದ್ದರು, ವರದಿಗಳ ಪ್ರಕಾರ 2007ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎನಿಸಿಕೊಂಡಿದೆ. ತೆಲುಗು ಇಂಡಸ್ಟ್ರಿಯಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಬೊಮ್ಮರಿಲ್ಲು ಚಿತ್ರಕ್ಕೀಗ 15 ವರ್ಷ.

ಆಸಕ್ತಿಕರ ವಿಷಯ ಏನಪ್ಪಾ ಅಂದ್ರೆ ಬೊಮ್ಮರಿಲ್ಲು ಚಿತ್ರದ ಮೊದಲ ದಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಜೆನಿಲಿಯಾ, ಈ ಸಿನಿಮಾ ಮಾಡಲ್ಲ ಎಂದು ಬಿಟ್ಟು ಹೋಗಿದ್ದರಂತೆ. ಆಮೇಲೆ ಅಲ್ಲು ಅರ್ಜುನ್ ಮಾತನಾಡಿ ವಾಪಸ್ ಕರೆತಂದರಂತೆ. ಅಷ್ಟಕ್ಕೂ, ಈ ಚಿತ್ರವನ್ನು ಬಿಟ್ಟು ಹೋಗಿದ್ದೇಕೆ? ಮುಂದೆ ಓದಿ...

ಜೆನಿಲಿಯಾ ಹೆಸರು ಚರ್ಚೆಗೆ ಬಂತು

ಜೆನಿಲಿಯಾ ಹೆಸರು ಚರ್ಚೆಗೆ ಬಂತು

ಭಾಸ್ಕರ್‌ಗೆ ಬೊಮ್ಮರಿಲ್ಲು ಚೊಚ್ಚಲ ಸಿನಿಮಾ. ನಾಯಕಿ ಯಾರು ಎಂದು ಹುಡುಕುತ್ತಿರುವಾಗ ಜೆನಿಲಿಯಾ ಹೆಸರು ಚರ್ಚೆಗೆ ಬಂದಿದೆ. ಆ ಸಮಯದಲ್ಲಿ ಅಲ್ಲು ಅರ್ಜುನ್ ಜೊತೆ 'ಹ್ಯಾಪಿ' ಸಿನಿಮಾದಲ್ಲಿ ಜೆನಿಲಿಯಾ ನಟಿಸುತ್ತಿದ್ದರು. ಜೆನಿಲಿಯಾ ಅವರನ್ನು ಮಾತನಾಡಿಸೋಕೆ ಅಂತ ನಿರ್ದೇಶಕ ಭಾಸ್ಕರ್ ಹ್ಯಾಪಿ ಚಿತ್ರದ ಸೆಟ್‌ಗೆ ಹೋದರು. 'ಹ್ಯಾಪಿ' ನಿರ್ದೇಶಕ ಕರುಣಾಕರನ್‌ಗೆ ಜೆನಿಲಿಯಾ ಅವರ ದೃಶ್ಯಗಳನ್ನು ತೋರಿಸಿ ಎಂದು ಕೇಳಿದರು. ಸುಮಾರು 20 ನಿಮಿಷಗಳ ಉದ್ದವಾದ ಡೈಲಾಗ್ ಹೇಳುವ ದೃಶ್ಯ ನೋಡಿದರು. ಈ ಸೀನ್ ನೋಡಿದ ಭಾಸ್ಕರ್, ಬೊಮ್ಮರಿಲ್ಲು ಚಿತ್ರದ ಹಾಸಿನಿ ಪಾತ್ರಕ್ಕೆ ಜೆನಿಲಿಯಾ ಸೂಕ್ತ, ಆ ಪಾತ್ರಕ್ಕೆ ಬೇಕಾದ ಡೆಡಿಕೇಶನ್ ಇವರಲ್ಲಿದೆ ಎಂದು ನಿರ್ಧರಿಸಿ ಆಯ್ಕೆಮಾಡಿಕೊಂಡರಂತೆ.

ಆ ಒಂದು ಸೀನ್‌ನಿಂದ ಬೇಸತ್ತ ನಟಿ

ಆ ಒಂದು ಸೀನ್‌ನಿಂದ ಬೇಸತ್ತ ನಟಿ

ಬೊಮ್ಮರಿಲ್ಲು ಚಿತ್ರೀಕರಣ ಆರಂಭವಾಯಿತು. ಮೊದಲ ದಿನ ಜೆನಿಲಿಯಾ ಸೆಟ್‌ಗೆ ಬಂದರು. ಮೊದಲ ದೃಶ್ಯ ರಸ್ತೆಯಲ್ಲಿ ನಿಂತು ಐಸ್‌ಕ್ರೀಮ್ ತಿನ್ನಬೇಕು, ಪಕ್ಕದಲ್ಲೇ ನಿಂತಿದ್ದ ಸಿದ್ಧಾರ್ಥ್‌ಗೆ ನಿನಗೂ ಬೇಕಾ ಐಸ್ ಎನ್ನಬೇಕು. ಈ ಒಂದು ದೃಶ್ಯವನ್ನು ನಿರ್ದೇಶಕ ಭಾಸ್ಕರ್ ಸುಮಾರು 30 ಟೇಕ್ ತೆಗೆದುಕೊಂಡರಂತೆ. ರಾತ್ರಿ 9 ಗಂಟೆಗೆ ಶುರು ಮಾಡಿದ ಚಿತ್ರೀಕರಣ ಮುಂಜಾನೆವರೆಗೂ ನಡೆಯಿತಂತೆ. ಇದರಿಂದ ತೀವ್ರವಾಗಿ ಬೇಸತ್ತ ನಟಿ, ಈ ಒಂದು ಸೀನ್ ಮಾಡೋಕೆ ನನಗೆ ಬರಲ್ವಾ ಎಂದು ಕೋಪಗೊಂಡು ಸೆಟ್‌ನಿಂದ ಹೊರಟು ಹೋದರಂತೆ.

ಅಲ್ಲು ಅರ್ಜುನ್ ಸಮಾಧಾನ ಮಾಡಿಸಿದ್ರು

ಅಲ್ಲು ಅರ್ಜುನ್ ಸಮಾಧಾನ ಮಾಡಿಸಿದ್ರು

ಬೊಮ್ಮರಿಲ್ಲು ಮಾಡಲ್ಲ ಎಂದು ಹೋದ ಜೆನಿಲಿಯಾ ಅವರನ್ನು ಸಮಾಧಾನಪಡಿಸಿ, ಮತ್ತೆ ಚಿತ್ರಿಕರಣಕ್ಕೆ ಕರೆತಂದಿದ್ದು ನಟ ಅಲ್ಲು ಅರ್ಜುನ್. ಇದು ಒಳ್ಳೆಯ ಸಿನಿಮಾ ಆಗುತ್ತದೆ, ಡೈರೆಕ್ಟರ್ ಒಳ್ಳೆಯವರೇ ಎಂದು ಹೇಳಿ ಶೂಟಿಂಗ್ ಮಾಡಲು ಸಲಹೆ ಕೊಟ್ಟರು. ನಂತರ ಸೆಟ್‌ಗೆ ಬಂದ ನಟಿ ಬೊಮ್ಮರಿಲ್ಲು ಚಿತ್ರೀಕರಣದಲ್ಲಿ ತೊಡಗಿಕೊಂಡರು.

ದೃಶ್ಯ ನೋಡಿ ಖುಷಿಯಾದ ಜೆನಿಲಿಯಾ

ದೃಶ್ಯ ನೋಡಿ ಖುಷಿಯಾದ ಜೆನಿಲಿಯಾ

ಎರಡು ದಿನದ ನಂತರ ನಿರ್ದೇಶಕರ ಕೆಲಸ ನೋಡಿ ಜೆನಿಲಿಯಾ ಖುಷಿಯಾದರಂತೆ. ಆಮೇಲೆ ನಿರ್ದೇಶಕ ಭಾಸ್ಕರ್ ಅವರ ಬಳಿ ಬಂದು, ''ಈ ಸಿನಿಮಾ ಚೆನ್ನಾಗಿ ಬರುತ್ತದೆ, ಮಾಡೋಣ'' ಎಂದು ಭರವಸೆ ವ್ಯಕ್ತಪಡಿಸಿದರಂತೆ. ಆರಂಭದಲ್ಲಿ ಎಲ್ಲವೂ ಸ್ವಲ್ಪ ಕಷ್ಟಕರವೆನಿಸಿದರೂ ದಿನಕಳೆದಂತೆ ತುಂಬಾ ಚೆನ್ನಾಗಿ ಸಿನಿಮಾ ಬಂತು. ಆಮೇಲೆ ಬೊಮ್ಮರಿಲ್ಲು ದಾಖಲೆ ಬರೆಯಿತು. ತಮಿಳಿನಲ್ಲೂ ಜೆನಿಲಿಯಾ ಅವರೇ ಈ ಪಾತ್ರ ಮಾಡಿದರು. ಸದ್ಯ, ಬೊಮ್ಮರಿಲ್ಲು ಭಾಸ್ಕರ್ ಅಖಿಲ್ ಅಕ್ಕಿನೇನಿ ಮತ್ತು ಪೂಜಾ ಹೆಗ್ಡೆ ಜೊತೆ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾ ಮಾಡಿದ್ದು, ತೆರೆಗೆ ಬರಲು ಕಾಯುತ್ತಿದೆ.

More from Filmibeat

English summary
Bommarillu completes 15 years: Why Genelia D'souza cast in bommarillu? director Bhaskar revealed the interesting story about movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X