ಶ್ರೀಲೀಲಾಗೆ ಬಾಯ್‌ಫ್ರೆಂಡ್ ಇದ್ದಾನಾ? ಟಾಲಿವುಡ್‌ನಲ್ಲಿ ದಿಢೀರನೇ ಈ ಚರ್ಚೆ ಯಾಕೆ?

By ಫಿಲ್ಮಿಬೀಟ್ ಡೆಸ್ಕ್

ಕನ್ನಡದಲ್ಲಿ ಶ್ರೀಲೀಲಾ ಮೊದಲ ಸಿನಿಮಾ ರಿಲೀಸ್ ಆದಾಗ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬಹುದೆಂಬ ನಿರೀಕ್ಷೆಯಿತ್ತು. ಬಾಲ ನಟಿಯಾಗಿ ತೆಲುಗು ಚಿತ್ರದಲ್ಲಿ ನಟಿಸಿದ್ದರೂ, ಮೊದಲು ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ಕನ್ನಡದಿಂದಲೇ. ಎ ಪಿ ಅರ್ಜುನ್ ನಿರ್ದೇಶಿಸಿದ್ದ 'ಕಿಸ್' ಸಿನಿಮಾ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಆದರೆ, ಕಿಸ್ ಕನ್ನಡ ಪ್ರೇಕ್ಷಕರಿಗೆ ಕಿಕ್ ಕೊಡಲಿಲ್ಲ.

'ಕಿಸ್' ಬಾಕ್ಸಾಫೀಸ್‌ನಲ್ಲಿ ಸೋತರೂ ಶ್ರೀಲೀಲಾಗೆ ಹುಡುಗರ ಫೇವರಿಟ್ ನಟಿಯಾಗಿದ್ದರು. ಉತ್ತರ ಭಾರತದಿಂದ ಬರೋ ನಟಿಯರಿಗಿಂತ ನೋಡಲು ಸುಂದರವಾಗಿದ್ದ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಸಿಕ್ಕಿದ್ದವು. ಶ್ರೀಮುರಳಿ ಜೊತೆ ಶ್ರೀಲೀಲಾ 'ಭರಾಟೆ' ಅಂದರು. ಅದು ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. 'ಬೈಟು ಲವ್' ಅಂದರು ಅದೂ ಓಡಲಿಲ್ಲ. ಕನ್ನಡ ಸಾಕು ಅನಿಸಿ ಟಾಲಿವುಡ್‌ಗೆ ಹಾಡಿದ್ದರು. ಅಲ್ಲೂ ಒಂದು ಸಿನಿಮಾ ಬಿಟ್ಟರೆ, ಮತ್ಯಾವುದೂ ಗೆಲ್ಲಲಿಲ್ಲ.

Why is tollywood curious about Sreeleela boyfriend details

ಹಾಗಂತ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಸದ್ಯ ಟಾಲಿವುಡ್‌ನಿಂದ ಕಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಈ ಮಧ್ಯೆ ಶ್ರೀಲೀಲಾ ಬಗ್ಗೆ ಬಾಯ್‌ಫ್ರೆಂಡ್‌ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಇನ್ನೊಂದು ಕಡೆ ತೆಲುಗು ಮಾಧ್ಯಮಗಳು ಕೂಡ ಶ್ರೀಲೀಲಾ ಬಾಯ್‌ಫ್ರೆಂಡ್ ಬಗ್ಗೆ ಸುದ್ದಿ ಮಾಡಿವೆ. ಹಾಗಿದ್ದರೆ, 'ಕಿಸ್' ಬೆಡಗಿಯ ಬಾಯ್‌ಫ್ರೆಂಡ್ ಯಾರು? ಏನಿದು ಸುದ್ದಿ ತಿಳಿಯುವುದಕ್ಕೆ ಮುಂದೆ ಓದಿ..

ಶ್ರೀಲೀಲಾ ತೆಲುಗು ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ನಟಿಸುವ ಎಲ್ಲಾ ಅವಕಾಶಗಳು ಕೂಡ ಇತ್ತು. ಒಂದರ ಹಿಂದೊಂದು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ಶ್ರೀಲೀಲಾಗೆ ತೆಲುಗು ಚಿತ್ರರಂಗದಲ್ಲೂ ಅದೃಷ್ಟ ಕೈ ಹಿಡಿದಿಲ್ಲ. ಒಂದೇ ಒಂದು ಸಿನಿಮಾ ಗೆದ್ದಿದ್ದು ಬಿಟ್ಟರೆ, ಉಳಿದ 6 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ.

Why is tollywood curious about Sreeleela boyfriend details

ಪ್ರಿನ್ಸ್ ಮಹೇಶ್ ಬಾಬು ಜೊತೆ ನಟಿಸಿದ 'ಗುಂಟೂರು ಖಾರಂ' ಸಿನಿಮಾದ ಮೇಲೆ ನಿರೀಕ್ಷೆಯಿತ್ತು. ಈ ಸಿನಿಮಾ ದೊಡ್ಡ ಸಕ್ಸಸ್ ಕೊಡಬಹುದೆಂಬ ಆಸೆಯಿತ್ತು. ಆದರೆ, ಆ ಸಿನಿಮಾ ಕೂಡ ಶ್ರೀಲೀಲಾ ಕೈ ಹಿಡಿಯಲಿಲ್ಲ. ಸದ್ಯಕ್ಕೀಗ ಶ್ರೀಲೀಲಾ ವ್ಯಾಸಂಗದ ಹಿನ್ನೆಲೆಯಲ್ಲಿ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಅಷ್ಟರಲ್ಲೇ ಅಜಿತ್ ಸಿನಿಮಾದಲ್ಲಿ ನಟಿಸುವುದಕ್ಕೆ ಆಫರ್ ಬಂದಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಸಿನಿಮಾ ವಿಚಾರ ಏನೇ ಇರಲಿ. ಶ್ರೀಲೀಲಾಗೆ ಬಾಯ್‌ಫ್ರೆಂಡ್ ಇದ್ದಾನೆ ಅನ್ನೋದು ಯುವಕ ನಿರಾಸೆಗೆ ಕಾರಣವಾಗಿಬಿಟ್ಟಿದೆ. ಕಳೆದೆರಡು ದಿನಗಳಿಂದ ತೆಲುಗು ಮಾಧ್ಯಮಗಳಲ್ಲಿ ಈ ಸುದ್ದಿ ಓಡಾಡುತ್ತಿದೆ. ಶ್ರೀಲೀಲಾಗೆ ಬಾಯ್‌ಫ್ರೆಂಡ್ ಇದ್ದು, ಆತ ಕೂಡ ಎಂಬಿಬಿಎಸ್ ಓದುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದು ಬಾಯ್‌ಫ್ರೆಂಡ್ ಜೊತೆ ಓಡಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಶ್ರೀಲೀಲಾ ಬಾಯ್‌ಫ್ರೆಂಡ್ ರಾಜಕೀಯ ಕುಟುಂಬಕ್ಕೆ ಸೇರಿದವನು. ಸಾವಿರಾರು ಕೋಟಿಯ ಒಡೆಯ ಅಂತ ಸುದ್ದಿಗಳು ಆಗುತ್ತಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ ಬಾಯ್‌ಫ್ರೆಂಡ್ ಇದ್ದರೂ, ಶ್ರೀಲೀಲಾಗೆ ಇನ್ನೂ ಕೇವಲ 22 ವರ್ಷ. ಅಲ್ಲದೆ, ಶಿಕ್ಷಣ ಹಾಗೂ ಸಿನಿಮಾ ಎರಡರಲ್ಲೂ ಬ್ಯುಸಿಯಾಗಿರುವುದರಿಂದ ಈಗಲೇ ಮದುವೆ ಬಗ್ಗೆ ಯೋಚನೆ ಮಾಡುವುದು ಡೌಟು.

More from Filmibeat

English summary
Tollywood discussing about Sreeleela's boyfriend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X