ಹಿಂದಿ ಸಿನಿಮಾ 'ಬ್ರಹ್ಮಾಸ್ತ್ರ'ಗಾಗಿ ರಾಜಮೌಳಿ ತಲೆಕೆಡಿಸಿಕೊಳ್ಳುತ್ತಿರುವುದೇಕೆ?

'RRR' ಮೂಲಕ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡಿದ ರಾಜಮೌಳಿ ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ ಎನಿಸಿಕೊಂಡಿದ್ದಾರೆ. 'RRR' ಸಿನಿಮಾವನ್ನು ಕಂಡು ಹಾಲಿವುಡ್ಡಿಗರು ಬೆಚ್ಚಿ ಬಿದ್ದಿದ್ದಾರೆ.

'RRR' ಬಳಿಕ ಮಹೇಶ್ ಬಾಬು ಜೊತೆಗೆ ಹೊಸ ಸಿನಿಮಾ ಘೋಷಿಸಿರುವ ರಾಜಮೌಳಿ ಈ ನಡುವೆ ಆ ಸಿನಿಮಾದ ಕೆಲಸಗಳನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಈ ನಡುವೆ ಹಿಂದಿ ಸಿನಿಮಾ ಒಂದರ ಸಲುವಾಗಿ ಬಹಳ ಶ್ರಮಪಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಅದುವೆ 'ಬ್ರಹ್ಮಾಸ್ತ್ರ'.

ರಣ್ಬೀರ್ ಕಪೂರ್-ಆಲಿಯಾ ಭಟ್ ನಟನೆಯ 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ರಾಜಮೌಳಿ ತಮ್ಮನ್ನು ತಾವು ಬಹುವಾಗಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಸಿನಿಮಾದ ಮೇಲೆ ರಾಜಮೌಳಿಗೇಕೆ ಇಷ್ಟೋಂದು ಆಸಕ್ತಿ ಎಂದು ಹಲವರು ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಕಾರಣ ಇದೆ.

'ಬ್ರಹ್ಮಾಸ್ತ್ರ' ಸಿನಿಮಾ ತಂಡ ಆಂಧ್ರ, ತೆಲಂಗಾಣಕ್ಕೆ ಬಂದಾಗಲೆಲ್ಲ ರಾಜಮೌಳಿ, ಸಿನಿಮಾ ತಂಡದ ಜೊತೆಗೆ ಪ್ರಚಾರಕ್ಕೆ ಹೋಗಿದ್ದಾರೆ. ಸತತವಾಗಿ ಸಿನಿಮಾದ ಬಗ್ಗೆ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಈ ಸಿನಿಮಾದ ಪ್ರಚಾರ ಹೇಗಿರಬೇಕು ಎಂಬ ಡಿಸೈನ್ ಅನ್ನು ಸಹ ಅವರೇ ಮಾಡಿದ್ದಾರೆ. ರಣ್ಬೀರ್ ಹಾಗೂ ಆಲಿಯಾಗೆ ತೆಲುಗು ಜನರನ್ನು ಆಕರ್ಷಿಸಲು ತೆಲುಗಿನ ಸಂಭಾಷಣೆಗಳನ್ನು ಬರೆದುಕೊಟ್ಟಿದ್ದಾರೆ. ಇವುಗಳ ಜೊತೆಗೆ ಚಿತ್ರತಂಡ ಹೋದಲ್ಲೆಲ್ಲ ತಾವೂ ಚಿತ್ರತಂಡದ ಜೊತೆಗೆ ಹೋಗಿ ವೇದಿಕೆ ಹಂಚಿಕೊಂಡು ಪ್ರಚಾರ ಮಾಡಿದ್ದಾರೆ.

ವಿತರಣೆ ಹಕ್ಕು ಖರೀದಿಸಿರುವ ರಾಜಮೌಳಿ

ವಿತರಣೆ ಹಕ್ಕು ಖರೀದಿಸಿರುವ ರಾಜಮೌಳಿ

ಇದಕ್ಕೆ ಮುಖ್ಯ ಕಾರಣವೆಂದರೆ ರಾಜಮೌಳಿ 'ಬ್ರಹ್ಮಾಸ್ತ್ರ' ಸಿನಿಮಾದ ವಿತರಣೆ ಹಕ್ಕನ್ನು ಖರೀದಿಸಿರುವುದು. ಸಿನಿಮಾವನ್ನು ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಾಜಮೌಳಿಯವರು ತಮ್ಮೊಬ್ಬ ಗೆಳೆಯನ ಜೊತೆ ಸೇರಿ ವಿತರಣೆ ಮಾಡುತ್ತಿದ್ದಾರೆ. ರಾಜಮೌಳಿಯ ಮಿತ್ರ ಬಳ್ಳಾರಿ ಸಾಯಿ ಜೊತೆ ಸೇರಿ ಬ್ರಹ್ಮಾಸ್ತ್ರ ಸಿನಿಮಾವನ್ನು ರಾಜಮೌಳಿ ವಿತರಣೆ ಮಾಡುತ್ತಿದ್ದಾರೆ.

ರಾಜಮೌಳಿ ಪುತ್ರ ಸಹ ಸಿನಿಮಾದ ಜೊತೆ ತೊಡಗಿಕೊಂಡಿದ್ದಾರೆ

ರಾಜಮೌಳಿ ಪುತ್ರ ಸಹ ಸಿನಿಮಾದ ಜೊತೆ ತೊಡಗಿಕೊಂಡಿದ್ದಾರೆ

'ಬ್ರಹ್ಮಾಸ್ತ್ರ' ಸಿನಿಮಾದೊಟ್ಟಿಗೆ ರಾಜಮೌಳಿ ಮಾತ್ರವೇ ಅಲ್ಲದೆ ಅವರ ಪುತ್ರ ಕಾರ್ತಿ ಸಹ ಗುರುತಿಸಿಕೊಂಡಿದ್ದಾರೆ. ಕಾರ್ತಿ ಸಿನಿಮಾ ಇವೆಂಟ್ ಮ್ಯಾನೇಜ್‌ಮೆಂಟ್‌ ಹಾಗೂ ಸಿನಿಮಾ ಯುನಿಟ್ ಉದ್ಯಮ ನಡೆಸುತ್ತಿದ್ದು, 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರ ಕಾರ್ಯದ ಆಯೋಜನೆಯನ್ನು ಕಾರ್ತಿಯೇ ನೋಡಿಕೊಂಡಿದ್ದಾರೆ. ಇದಕ್ಕಾಗಿ ಕೋಟ್ಯಂತರ ಹಣ ಶುಲ್ಕವನ್ನೂ ಕಾರ್ತಿ ಪಡೆದಿದ್ದಾರೆ. 'RRR' ಸಿನಿಮಾದ ಪ್ರಚಾರದ ಮೇಲುಸ್ತುವಾರಿಯನ್ನು ಕಾರ್ತಿಯ ಸಂಸ್ಥೆಯೇ ನೋಡಿಕೊಂಡಿತ್ತು.

ನಾಗಾರ್ಜುನ ಸಹ ಪ್ರಚಾರದಲ್ಲಿ ಭಾಗಿ

ನಾಗಾರ್ಜುನ ಸಹ ಪ್ರಚಾರದಲ್ಲಿ ಭಾಗಿ

'ಬ್ರಹ್ಮಾಸ್ತ್ರ' ಸಿನಿಮಾಕ್ಕೆ ರಾಜಮೌಳಿ ಮಾತ್ರವೇ ಅಲ್ಲದೆ ತೆಲುಗಿನ ನಟ ನಾಗಾರ್ಜುನ ಸಹ ಸಾಥ್ ನೀಡಿದ್ದಾರೆ. ಆದರೆ ನಾಗಾರ್ಜುನ ಅವರು 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿರುವ ಕಾರಣ ಅವರು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ವಿಶೇಷವೆಂದರೆ ಹಿಂದಿ ಸಿನಿಮಾ ಆಗಿದ್ದರೂ ಸಹ 'ಬ್ರಹ್ಮಾಸ್ತ್ರ' ಅತಿ ಹೆಚ್ಚು ಪ್ರಚಾರ ಮಾಡಿರುವುದು ಆಂಧ್ರ ಹಾಗೂ ತೆಲಂಗಾಣದಲ್ಲಿ. ಹೈದರಾಬಾದ್‌ನಲ್ಲಿ ಭಾರಿ ದೊಡ್ಡ ಪ್ರೀ ರಿಲೀಸ್ ಇವೆಂಟ್ ಅನ್ನು ಸಿನಿಮಾ ತಂಡ ಹಮ್ಮಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಯ್ತು.

ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿರುವ ಸಿನಿಮಾ

ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿರುವ ಸಿನಿಮಾ

ಬ್ರಹ್ಮಾಸ್ತ್ರ' ಸಿನಿಮಾವು ಶಿವನ ಶಕ್ತಿಯ ಕುರಿತಾದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್, ತೆಲುಗು ನಟ ನಾಗಾರ್ಜು, ಕೆಜಿಎಫ್ ಸುಂದರಿ ಮೌನಿ ರಾಯ್, ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಸಿನಿಮಾವು ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Why director SS Rajamouli so much involved in Hindi movie Brahmastra promotions. Movie is releasing on September 30.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X