Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೆಚ್ಚಿನ ಗೆಳೆಯನ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲಿಲ್ಲ ರಶ್ಮಿಕಾ: ತಲೆ ಕೆಡಿಸಿಕೊಂಡ ಫ್ಯಾನ್ಸ್
'ಗೀತಾ ಗೋವಿದಂ' ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಹೆಚ್ಚು ಫೇಮಸ್ ಆದ ಜೋಡಿ ವಿಜಯ ದೇವರಕೊಂಡ ಹಾಗೂ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ. ಈ ಸಿನಿಮಾ ಮೂಲಕ ಅತ್ಯುತ್ತಮ ಜೋಡಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದರು. ಅದರಲ್ಲೂ ಈ ಸಿನಿಮಾದಲ್ಲಿ ಲಿಪ್‌ಲಾಕ್ ಸೀನ್ ಭಾರೀ ಚರ್ಚೆಗೂ ಕಾರಣವಾಗಿತ್ತು. ಅಲ್ಲದೆ ರಶ್ಮಿಕಾ ಹಾಗೂ ರಕ್ಷಿತ್ ಬ್ರೇಕಪ್ ಆಗಲು ಈ ಸೀನ್‌ನೇ ಕಾರಣ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು. ಅಷ್ಟರ ಮಟ್ಟಿಗೆ ಸಿನಿಮಾ ಹೆಸರು ಮಾಡಿತ್ತು. ಈ ಸಿನಿಮಾ ಮೂಲಕವೇ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಉತ್ತಮ ಸ್ನೇಹಿತರಾಗಿದ್ದರು.
ಹೌದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ 'ಗೀತಾ ಗೋವಿದಂ' ಸಿನಿಮಾ ಬಳಿಕ ಜನಪ್ರಿಯತೆ ಪಡೆದುಕೊಂಡಿದ್ದರು. ಇದಾದ ಬಳಿಕ 'ಡಿಯರ್ ಕಾಮ್ರೆಡ್' ಸಿನಿಮಾದಲ್ಲೂ ಇಬ್ಬರು ಒಟ್ಟಿಗೆ ನಟಿಸಿದರು. ನಂತರ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಆದರೆ. ಇವರಿಬ್ಬರ ಸಂಬಂಧ ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾಗಿಲ್ಲ. ಇನ್ನು ಪ್ರೇಮಿಗಳು ಎನ್ನುವಷ್ಟು ಅನ್ಯೋನ್ಯತೆ ಇದ್ದಿದ್ದರಿಂದ ನೆಟ್ಟಿಗರು ಇದೂವರೆಗೂ ಪ್ರೇಮಿಗಳೆಂದೇ ಹೇಳುತ್ತಿದ್ದಾರೆ.
'ಲೈಗರ್'
ಚಿತ್ರದ
ಲಿರಿಕಲ್
ವಿಡಿಯೋ
ರಿಲೀಸ್,
ವಿಜಯ
ದೇವರಕೊಂಡ
ಹೊಸ
ಗೆಟಪ್‌ಗೆ
ಫ್ಯಾನ್ಸ್
ಫಿದಾ
ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿರುವ ಬಗ್ಗೆ ರಶ್ಮಿಕಾ ಆಗಲಿ ಅಥವಾ ವಿಜಯ ದೇವರಕೊಂಡ ಯಾವುದೇ ಪ್ರತಿಕ್ರಿಯೆಯ ನೀಡಿಲ್ಲ. ಗಾಳಿ ಸುದ್ದಿಗಳಿಗೆ ತಲೆ ಕೂಡ ಕೆಡಿಸಿಕೊಂಡಿಲ್ಲ. ಆದ್ರೀಗ, ರಶ್ಮಿಕಾ-ವಿಜಯ ದೇವರಕೊಂಡ ನಡುವೆ ಏನಾದರೂ ಕಿತ್ತಾಟ ನಡೆದಿದ್ಯಾ ಎಂಬ ಸಣ್ಣ ಚರ್ಚೆ ಅಭಿಮಾನಿಗಳ ವಲಯದಲ್ಲಿ ಎದ್ದಿದೆ.
Vijay
Devarakonda:
ಇದು
ವಿಜಯ್
ದೇವರಕೊಂಡರ
15
ಕೋಟಿ
ಬೆಲೆಯ
ಲಕ್ಷುರಿ
ಬಂಗಲೆ!

ನಟಿ ಸಮಂತಾ ವಿಶ್ ಮಾಡಿದ್ರೂ, ರಶ್ಮಿಕಾ ಮಾಡಿಲ್ಲ
ಮೇ 9 ರಂದು ನಿನ್ನೆ ವಿಜಯ ದೇವರಕೊಂಡ ಹುಟ್ಟುಹಬ್ಬದ ಹಿನ್ನೆಲೆ ನಟ ವಿಜಯ ದೇವರಕೊಂಡಗೆ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಾಶಯವನ್ನು ಕೋರಿದ್ದರು. ನಟಿ ಸಮಂತಾ ಕೂಡ ವಿಜಯ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಆದರೆ. ರಶ್ಮಿಕಾ ಮಾತ್ರ ವಿಶ್ ಮಾಡಿಲ್ಲ. ಕಡೆ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಕೂಡ ಹಾಕಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಶುರುವಾಗಿದೆ. ಯಾಕೆ ರಶ್ಮಿಕಾ ವಿಜಯ ದೇವರಕೊಂಡಗೆ ಬರ್ತಡೇ ವಿಶ್ ಮಾಡಿಲ್ಲ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ವಿಜಯ್ ದೇವರಕೊಂಡ 'ಲೈಗರ್' ಕ್ರೇಜ್
ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಹಿಂದಿಯಲ್ಲಿ 'ಗುಡ್ ಬೈ' ಹಾಗೂ 'ಮಿಷನ್ ಮಜ್ನು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತ ವಿಜಯ್ ದೇವರಕೊಂಡ ಸಹ 'ಲೈಗರ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲಿ ಇಬ್ಬರು ಒಟ್ಟಾಗೆ ಕಾಣಿಸಿಕೊಳ್ಳುತ್ತಿದ್ದರು.ಇದು ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚಗೆ ಕಾರಣವಾಗಿತ್ತು.

ಫ್ಯಾನ್ಸ್ ವಲಯದಲ್ಲಿ ಅನುಮಾನ ಹುಟ್ಟಿಸಿದ ರಶ್ಮಿಕಾ ನಡೆ
ಮೇ 9ರ ಬೆಳವಣಿಗೆ ಮಾತ್ರ ಅಭಿಮಾನಿಗಳ ತಲೆಗೆ ಸಖತ್ ಕೆಲಸ ಕೊಟ್ಟಿದೆ. ಸೋಶೀಯಲ್ ಮೀಡಿಯಾದಲ್ಲಿ ರಶ್ಮಿಕಾ ಬೇರೆ ಪೋಸ್ಟ್‌ಗಳನ್ನು ಹಾಕಿದ್ದಾರೆ. ಆದರೆ ವಿಜಯ್ ದೇವರಕೊಂಡ ಬರ್ತಡೇಗೆ ಮಾತ್ರ ವಿಶ್ ಮಾಡಿಲ್ಲ. ಹೀಗಾಗಿ ರಶ್ಮಿಕಾ ವಿಜಯ ದೇವರಕೊಂಡ ಬರ್ತೆಡೇಗೆ ಸ್ಪೆಷಲ್ ವಿಶ್ ಮಾಡುತ್ತಾರೆ, ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅಲ್ಲದೆ ಇವರಿಬ್ಬರ ಮಧ್ಯೆ ಏನೋ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರಶ್ಮಿಕಾ ವಿಶ್ ಮಾಡದ್ದಕ್ಕೆ ತಲೆಗೆ ಹುಳ ಬಿಟ್ಟುಕೊಂಡ ಫ್ಯಾನ್ಸ್
ಸದ್ಯ ವಿಜಯ ದೇವರಕೊಂಡ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದೇ ಇರುವುದು ಈಗ ಫ್ಯಾನ್ಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ನಡುವಿನ ಸಂಬಂಧ ಮುರಿದು ಬಿತ್ತಾ ಎಂಬ ಅನುಮಾನಗಳನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಇವರಿಬ್ಬರು ಇತ್ತೀಚಿಗೆ ಒಟ್ಟಿಗೆ ಎಲ್ಲಿಯೋ ಕಾಣಿಸಿಕೊಂಡಿಲ್ಲ. ಹೀಗಾಗಿ ರಶ್ಮಿಕಾ ಹಾಗೂ ವಿಜಯ್ ಫ್ಯಾನ್ಸ್‌ಗಳಲ್ಲಿ ಅನುಮಾನ ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ಆಗಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.