ವೇಣುಸ್ವಾಮಿ ಹೊಸ ವಿವಾದದಲ್ಲಿ ರಶ್ಮಿಕಾ ಮಂದಣ್ಣ ಹಳೇ ಪೂಜೆ ವೀಡಿಯೋ ಸಿಲುಕಿದ್ಯಾಕೆ?
ನಟಿ ರಶ್ಮಿಕಾ ಮಂದಣ್ಣ ದಿಢೀರ್ ಕ್ರೇಜ್ ಸೃಷ್ಟಿಸಿಕೊಂಡಿದ್ದು ಗೊತ್ತೇಯಿದೆ. 'ಗೀತಾಗೋವಿಂದಂ' ಸಿನಿಮಾ ಆಕೆಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸುವಂತಾಯಿತು. ಇದಕ್ಕೆಲ್ಲಾ ನಾನು ಮಾಡಿಸಿದ ಪೂಜೆಯೇ ಕಾರಣ ಎಂದು ವೇಣುಸ್ವಾಮಿ ಹೇಳಿಕೊಳ್ಳುತ್ತಾರೆ.
ಆಂಧ್ರ, ತೆಲಂಗಾಣದಲ್ಲಿ ಸೆಲೆಬ್ರೆಟಿ ಜ್ಯೋತಿಷಿ ಎಂದೇ ವೇಣುಸ್ವಾಮಿ ಜನಪ್ರಿಯರಾಗಿದ್ದಾರೆ. ಸಾಕಷ್ಟ ನಟಿಯರು ರಾಜಕೀಯ ಮುಖಂಡರು ಅವರ ಬಳಿ ತಮ್ಮ ಏಳಿಗೆಗಾಗಿ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ಕರ್ನಾಟಕದ ಮಾಜಿ ಸಚಿವರಾದ ಹೆಚ್. ಡಿ ರೇವಣ್ಣ ಸಹ ಕುಟುಂಬ ಸಮೇತರಾಗಿ ಪೂಜೆ ಮಾಡಿಸಿದ್ದರು. ಇತ್ತೀಚೆಗೆ ನಟಿ ನಿಶ್ವಿಕಾ ನಾಯ್ಡು ಕೂಡ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದರು.

ವಾಮಾಚಾರ ಪದ್ಧತಿಯಲ್ಲಿ ವೇಣುಸ್ವಾಮಿ ತಮ್ಮ ಬಳಿಗೆ ಬರುವ ಭಕ್ತರಿಂದ ಪೂಜೆ ಮಾಡಿಸುತ್ತಾರೆ. ಯಶಸ್ಸಿಗಾಗಿ ರಾಜಶ್ಯಾಮಲ ಪೂಜೆ ಸಲಹೆ ನೀಡುತ್ತಾರೆ. ಮದ್ಯ, ಮಾಂಸ ನೈವೇದ್ಯವಾಗಿ ಇಟ್ಟು ಪೂಜೆ ಮಾಡುವುದು ವಿಶೇಷ. ಸದ್ಯ ವೇಣುಸ್ವಾಮಿ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿದೆ. ಇದರಲ್ಲಿ ಹಿಂದೆ ರಶ್ಮಿಕಾ ಕೈಯಲ್ಲಿ ಮಾಡಿಸಿದ್ದ ಪೂಜೆ ವೀಡಿಯೊ ಚರ್ಚೆಗೆ ಬಂದಿದೆ.
ಹಿಂದೆ ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಟಾಲಿವುಡ್ ಹಾಟ್ ಕಪಲ್ ಚೈಸ್ಯಾಮ್ ಯಾಕೆ ದೂರಾಗುತ್ತಾರೆ? ವೇಣುಸ್ವಾಮಿ ಹೇಳುವುದೆಲ್ಲಾ ಸುಳ್ಳು ಎಂದೇ ಕೆಲವರು ಭಾವಿಸಿದ್ದರು. ಆದರೆ ಆತ ಹೇಳಿದಂತೆಯೇ ಅವರಿಬ್ಬರು ದೂರಾದರು. ಅಲ್ಲಿಂದ ಮುಂದೆ ಆತನ ಭವಿಷ್ಯದ ಬಗ್ಗೆ ಚರ್ಚೆ ಆರಂಭವಾಯಿತು. ಸಾಕಷ್ಟು ಜನ ಸೆಲೆಬ್ರೆಟಿಗಳು ಆತನ ಬಳಿಗೆ ಕಷ್ಟ ಹೇಳಿಕೊಂಡು ಹೋಗಲು ಆರಂಭಿಸಿದರು.
ಮುಂದೆ ವೇಣುಸ್ವಾಮಿ ಸಾಕಷ್ಟು ವಿಚಾರಗಳ ಬಗ್ಗೆ ಇದೇ ರೀತಿ ಭವಿಷ್ಯ ನುಡಿಯಲು ಆರಂಭಿಸಿದರು. ನಿಜವಾದಾಗ ತಮ್ಮ ಬೆನ್ನು ತಟ್ಟಿಕೊಳ್ಳುವುದು, ಸುಳ್ಳಾದಾಗ ಏನೇನೋ ಸಬೂಬು ಹೇಳುವುದು ಮಾಡುತ್ತಿದ್ದರು. ಇತ್ತೀಚೆಗೆ ನಾಗಚೈತನ್ಯಾ ಹಾಗೂ ಶೋಭಿತಾ ಧುಲಿಪಾಲ ಮದುವೆ ನಿಶ್ಚಯವಾಗಿದೆ. ಇವರಿಬ್ಬೆ ಮದುವೆ ಜೀವನದ ಬಗ್ಗೆಯೂ ವಿವಾದತ್ಮಕವಾಗಿ ವೇಣುಸ್ವಾಮಿ ಮಾತನಾಡಿದ್ದಾರೆ. ಇಬ್ಬರ ಜಾತಕದ ಪ್ರಕಾರ ಬಹಳ ದಿನ ಒಟ್ಟಿಗೆ ಇರಲ್ಲ. ಒಬ್ಬ ಸ್ತ್ರೀ ಕಾರಣದಿಂದ ದೂರಾಗುತ್ತಾರೆ ಎಂದಿದ್ದಾರೆ.

ಮದುವೆಗೂ ಮುನ್ನವೇ ವೇಣುಸ್ವಾಮಿ ಈ ರೀತಿ ಭವಿಷ್ಯ ಹೇಳುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ತೆಲುಗು ಮಾಧ್ಯಮ ಸಂಘ ಆತನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗ ವೇಣುಸ್ವಾಮಿಗೆ ನೋಟಿಸ್ ಸಹ ನೀಡಿದೆ. ಆದರೆ ಇದನ್ನು ವಿರೋಧಿಸಿ ಒಂದು ಮಾಧ್ಯಮ ಪ್ರತಿನಿಧಿ ವಿರುದ್ಧ ವೇಣುಸ್ವಾಮಿ ವೀಡಿಯೋ ಬಿಡುಗಡೆ ಮಾಡಿದ್ದಾರೆ.
ಒಂದು ಮಾಧ್ಯಮಕ್ಕೆ ಸೇರಿದ ಕೆಲ ವ್ಯಕ್ತಿಗಳು ನನ್ನ ಬಳಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟರು. ನಮಗೆ ಅಷ್ಟು ಶಕ್ತಿ ಇಲ್ಲ. ಆತ್ಮಹತ್ಯೆ ಒಂದೇ ದಾರಿ ಎಂದು ವೇಣುಸ್ವಾಮಿ ಪತ್ನಿ ಸಮೇತರಾಗಿ ವಿಡಿಯೋದಲ್ಲಿ ಮಾತನಾಡಿದ್ದಾರೆ. ಆದರೆ ಇದಕ್ಕೆ ಮಾಧ್ಯಮ ಪ್ರತಿನಿಧಿಗಳು ಸವಾಲು ಹಾಕಿದ್ದಾರೆ. ಆತ ಹೇಳುವುದೆಲ್ಲಾ ಸುಳ್ಳು ಜ್ಯೋತಿಷ್ಯ. ಆತನಿಗೆ ಪೂಜೆ, ವಾಮಾಚಾರ ಮಾಡುವುದಕ್ಕೆ ಬರಲ್ಲ. ವೇದ ಮಂತ್ರಗಳು ಹೇಳುವುದಕ್ಕೂ ಬರಲ್ಲ ಎಂದು ಆರೋಪಿಸಿದ್ದಾರೆ.
ತೆಲುಗು ಟಿವಿ5 ಚಾನಲ್‌ನಲ್ಲಿ ಈ ಬಗ್ಗೆ ಚರ್ಚಾ ಕಾರ್ಯಕ್ರಮ ನಡೆದಿದೆ. ವೇಣುಸ್ವಾಮಿ ವಿರುದ್ಧ ಸುದ್ದಿ ನಿರೂಪಕ ಮೂರ್ತಿ ಸಾಕಷ್ಟು ಆರೋಪ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಕೈಯಲ್ಲಿ ಹಿಂದೆ ಮಾಡಿಸಿದ್ದ ರಾಜಶ್ಯಾಮಲ ಪೂಜೆಯ ವೀಡಿಯೋ ತೋರಿಸಿ ಅಣಕವಾಡಿದ್ದಾರೆ. ವೀಡಿಯೋದಲ್ಲಿ ನೋಡಿದರೆ ಗೊತ್ತಾಗುತ್ತದೆ ವೇಣುಸ್ವಾಮಿಗೆ ಮಂತ್ರ ಹೇಳಲು ಬರಲ್ಲ, ಸಂಪ್ರೋಕ್ಷಣೆ ಮಾಡುವುದು ಗೊತ್ತಿಲ್ಲ ಎಂದಿದ್ದಾರೆ.
ವೇಣುಸ್ವಾಮಿ ಬಳಿ ರಶ್ಮಿಕಾ ಪೂಜೆ ಮಾಡಿಸಿದ್ದು ನಿಜ. ಆದರೆ ಎಂದೂ ಆ ಬಗ್ಗೆ ಮಾತನಾಡಲಿಲ್ಲ. ಆದರೆ ಈಗ ಮತ್ತೆ ಆ ಬಗ್ಗೆ ಚರ್ಚೆ ಶುರುವಾಗಿದೆ. ಇನ್ನು ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











