ಮನೆಯವರಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ಸಿನಿಮಾ ನಿರ್ದೇಶನ, ಮಾಸ್ಕ್ ಧರಿಸಿ ಪ್ರಚಾರ

ಚಿತ್ರರಂಗ ಬಣ್ಣದಲೋಕ. ಬಹಳ ಬೇಗ ಇಲ್ಲಿ ನೇಮು ಫೇಮು ಸಿಗುತ್ತದೆ. ಜನಪ್ರಿಯತೆಗಾಗಿ ಸಾಕಷ್ಟು ಜನ ಚಿತ್ರರಂಗಕ್ಕೆ ಬರ್ತಾರೆ. ಸದಾ ಲೈಮ್‌ಲೈಟ್‌ನಲ್ಲಿ ಇರೋಕೆ ಏನೇನೋ ಸರ್ಕಸ್ ಮಾಡ್ತಾರೆ. ಚಿತ್ರವಿಚಿತ್ರ ವೇಷ ಹಾಕ್ತಾರೆ. ಪ್ರಚಾರಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಆದರೆ ಇಲ್ಲೊಬ್ಬ ನಿರ್ದೇಶಕ ನನಗೆ ಯಾವುದೇ ಪ್ರಚಾರ ಬೇಡ ಎನ್ನುತ್ತಿದ್ದಾರೆ.

ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ. ನಿಜ ಹೇಳಬೇಕು ಅಂದ್ರೆ ನಾನು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಕದ್ದು ಮುಚ್ಚಿ ಬಂದಿದ್ದೀನಿ. ಆ ವಿಚಾರ ಅವರಿಗೆ ಗೊತ್ತಾದರೆ ನೋವಾಗುತ್ತದೆ ಎನ್ನುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಸಿನಿಮಾ ಸುದ್ದಿಗೋಷ್ಠಿ, ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ.

Why telugu film director whisky wearing mask in movie promotion

ತಮ್ಮ ಅಸಲಿ ಹೆಸರು ಮುಚ್ಚಿಟ್ಟಿ ಬೇರೆ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟೈಟಲ್‌ ಕಾರ್ಡ್‌ನಲ್ಲಿ ಕೂಡ ಅದೇ ಹೆಸರು ಇದೆ. ರ‌ವಿಕೃಷ್ಣ, ಸ‌ಮೀರ್ ಮ‌ಲ್ಲಾ ಮುಖ್ಯಭೂಮಿಕೆಯಲ್ಲಿರುವ 'ದಿ ಬರ್ತ್‌ಡೇ ಬಾಯ್‌' ತೆಲುಗು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ವಿಸ್ಕಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಅವರ ನಿಜವಾದ ಹೆಸರಲ್ಲ, ಚಿತ್ರಕ್ಕಾಗಿ ಬದಲಿಸಿಕೊಂಡಿದ್ದಾರೆ.

4 ವರ್ಷ ವಿದೇಶದಲ್ಲಿದ್ದ ನಿರ್ದೇಶಕರು ಅಲ್ಲಿಂದ ಇಲ್ಲಿಗೆ ಬಂದು ಸ್ನೇಹಿತರ ಜೊತೆ ಸೇರಿ 'ದಿ ಬರ್ತ್‌ಡೇ ಬಾಯ್‌' ಸಿನಿಮಾ ಮಾಡಿದ್ದಾರಂತೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಬರ್ತ್‌ಡೇ ಬಂಪ್ಸ್ ಕಾರಣದಿಂದ ಒಬ್ಬ ಸ್ನೇಹಿತ ಸಾಯುತ್ತಾನೆ. ಮುಂದೆ ಏನಾಗುತ್ತದೆ ಎನ್ನುವುದು ಈ ಸಿನಿಮಾ ಕಥೆ.

"ನನ್ನ ಕುಟುಂಬದಲ್ಲಿ ಯಾರಿಗೂ ನಾನು ಚಿತ್ರರಂಗಕ್ಕೆ ಬರುವುದು ಇಷ್ಟವಿಲ್ಲ. ನಾನು ಅಮೆರಿಕದಿಂದ ಬಂದಿರುವ ಸಂಗತಿಯೂ ಅವರಿಗೆ ಗೊತ್ತಿಲ್ಲ. ಅವರಿಗೆ ನೋವುಂಟು ಮಾಡುವುದು ಇಷ್ಟವಿಲ್ಲದೇ ನಾನು ನನ್ನ ಹೆಸರನ್ನು ವಿಸ್ಕಿ ಎಂದು ಬದಲಿಸಿಕೊಂಡೆ. ನನ್ನ ಫೇಸ್ ಕಾಣಿಸದೆ ಮಾಸ್ಕ್ ಹಾಕಿಕೊಂಡು ತಿರುಗುತ್ತಿದ್ದೇನೆ. ಕೋವಿಡ್‌ ಸಮಯದಲ್ಲಿ ನಾನು ಸಾಕಿದ ಪ್ರೀತಿಯ ನಾಯಿ ವಿಸ್ಕಿ ಸತ್ತು ಹೋಗಿತ್ತು. ಅದರ ಜ್ಞಾಪಕಾರ್ಥವಾಗಿ ಅದೇ ಹೆಸರು ಇಟ್ಟುಕೊಂಡೆ" ಎಂದು ಹೇಳಿದ್ದಾರೆ.

ಸಾಕಷ್ಟು ಸಿನಿಮಾಗಳು ಬಂದು ಹೋಗುವುದೇ ಗೊತ್ತಾಗಲ್ಲ. ಆದರೆ ನಮ್ಮ ಸಿನಿಮಾ ಆ ರೀತಿ ಆಗಬಾರದು ಎಂದು ಪ್ರಚಾರ ಮಾಡುತ್ತಿದ್ದೇವೆ. ನನ್ನ ಎರಡು ಸಿನಿಮಾಗಳು ಫ್ಲಾಪ್ ಆದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ ಎಂದು ನಿರ್ದೇಶಕ ವಿಸ್ಕಿ ಹೇಳಿದ್ದಾರೆ. ಸದ್ಯ ಮಾಸ್ಕ್ ಹಾಕಿಕೊಂಡು ಆತ ಸಿನಿಮಾ ಪ್ರಚಾರ ಮಾಡುತ್ತಿರುವುದು ವೈರಲ್ ಆಗುತ್ತಿದೆ. ಇದು ಕೂಡ ಪ್ರಚಾರದ ಗಿಮಿಕ್ಕಾ ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಜುಲೈ 19ಕ್ಕೆ 'ದಿ ಬರ್ತ್‌ಡೇ ಬಾಯ್‌' ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
The reason behind film director wearing mask in promotion;
Read more about: telugu director tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X