"ನಿಮ್ಮ ಅಮಾಯಕ ಪತಿಗೆ ಮೋಸ ಮಾಡಿದ್ದೇಕೆ?"; ನೇರ ಪ್ರಶ್ನೆಗೆ ಸ್ಯಾಮ್ ಉತ್ತರ

ಟಾಲಿವುಡ್ ಬ್ಯೂಟಿ ಸಮಂತಾ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸದ್ಯ 'ಸಿಟಾಡೆಲ್' ವೆಬ್‌ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ. ಮಯೋಸೈಟಿಸ್ ಸಮಸ್ಯೆಯಿಂದಲೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಟ್ ಹಾಟ್ ಫೋಟೊಶೂಟ್‌ ಮೂಲಕ ಹುಬ್ಬೇರಿಸುತ್ತಿದ್ದಾರೆ. ಹೆಲ್ತ್ ಪಾಡ್‌ಕಾಸ್ಟ್‌ನಲ್ಲಿ ಭಾಗಿ ಆಗಿ ಸಾಕಷ್ಟು ಮಾಹಿತಿ ನೀಡುತ್ತಿದ್ದಾರೆ.

ಚೆನ್ನೈ ಚೆಲುವೆ ಸಮಂತಾ ನಾಗಚೈತನ್ಯಾ ಕೈ ಹಿಡಿದು ಹೈದರಾಬಾದ್‌ನಲ್ಲಿ ಸೆಟ್ಲ್ ಆಗಿದ್ದರು. ಆದರೆ 3 ವರ್ಷಗಳ ಹಿಂದೆ ದಂಪತಿ ಡಿವೋರ್ಸ್ ಪಡೆದು ದೂರಾದರು. ಬಳಿಕ ಈ ಬಗ್ಗೆ ಇಬ್ಬರೂ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಯಾಮ್ ಅಕ್ಕಿನೇನಿ ಫ್ಯಾಮಿಲಿಯಿಂದ ದೂರಾಗಿದ್ದರೂ ಮೈದುನ ಅಖಿಲ್ ಜೊತೆ ಸ್ನೇಹ ಮುಂದುವರೆಸಿದ್ದಾರೆ.

why you cheated your huband Naga chaitanya Samantha gives strong counter to netizen

ಇತ್ತೀಚೆಗೆ ಅಖಿಲ್ ಹುಟ್ಟುಹಬ್ಬಕ್ಕೆ ಸಮಂತಾ ಶುಭಾಶಯ ಕೋರಿದ್ದರು. ಇನ್ನು ಡಿವೋರ್ಸ್ ಬಳಿಕ ಸಮಂತಾ ಆರೋಗ್ಯ ಕೈಕೊಟ್ಟಿತ್ತು. ಅಪರೂಪದ ಮಯೋಸೈಟಿಸ್ ಸಮಸ್ಯೆಗೆ ತುತ್ತಾದರು. ಅದರ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದಾರೆ. ಮತ್ತೊಂದು ಕಡೆ ನಟಿಸಿದ 3 ಸಿನಿಮಾಗಳು ಸೋಲುಂಡವು. 'ಯಶೋದ', 'ಶಾಕುಂತಲಂ', 'ಖುಷಿ' ಹೀಗೆ ಯಾವ ಸಿನಿಮಾ ಕೂಡ ಕೈ ಹಿಡಿಯಲಿಲ್ಲ.

'ಖುಷಿ' ಬಳಿಕ ಯಾವುದೇ ಹೊಸ ಸಿನಿಮಾ ಸ್ಯಾಮ್ ಒಪ್ಪಿಕೊಳ್ಳಲಿಲ್ಲ. ಆದರೆ ಅಲ್ಲು ಅರ್ಜುನ್ ಜೊತೆ ಸಮಂತಾ ನಟಿಸುತ್ತಾರೆ ಎಂದು ಗುಲ್ಲಾಗಿದೆ. 'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದ ಚಿತ್ರಕ್ಕೆ ಸ್ಟೈಲಿಶ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರಕ್ಕೆ ಸ್ಯಾಮ್ ನಾಯಕಿ ಎಂದು ಹೇಳಲಾಗುತ್ತಿದೆ. 'ಸನ್ ಆಫ್ ಸತ್ಯಮೂರ್ತಿ', 'ರಂಗಸ್ಥಳಂ' ಚಿತ್ರಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು.

why you cheated your huband Naga chaitanya Samantha gives strong counter to netizen

ಡಿವೋರ್ಸ್ ಬೆನ್ನಲ್ಲೇ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಸಮಂತಾ ಹೆಜ್ಜೆ ಹಾಕಿದ್ದರು. ಮತ್ತೆ ಇಂತಹ ಪ್ರಯತ್ನ ಮಾಡಲ್ಲ ಎಂದು ಸ್ಯಾಮ್ ಇತ್ತೀಚೆಗೆ ಹೇಳಿಕೊಂಡಿದ್ದರು. ಇನ್ನು ಸಮಂತಾ ಪದೇ ಪದೆ ಡಿವೋರ್‌ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. 'ಫ್ಯಾಮಿಲಿಮ್ಯಾನ್'-2 ಸೀರಿಸ್‌ನಲ್ಲಿ ಆಕೆ ಬೋಲ್ಡ್ ಆಗಿ ನಟಿಸಿದ್ದೇ ಚೈತುಗೆ ದೂರಾಗಲು ಕಾರಣ ಎಂದು ಕೆಲವರು ಆರೋಪಿಸಿದ್ದರು.

ನಾಗಚೈತನ್ಯಾ ಹಾಗೂ ಸ್ಯಾಮ್ ಪ್ರೀತಿಸಿ ಮದುವೆ ಆದವರು. ಆದರೆ ಇಬ್ಬರು ಅಷ್ಟು ಬೇಗ ಡಿವೋರ್ಸ್ ಪಡೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಕ್ಕಿನೇನಿ ಫ್ಯಾಮಿಲಿ ಅಭಿಮಾನಿಗಳಿಗೆ ಇದು ಭಾರೀ ಬೇಸರ ಉಂಟು ಮಾಡಿತ್ತು. ಕೆಲವರು ಇದಕ್ಕೆ ಸ್ಯಾಮ್ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದ್ದರು. ಕೆಲ ಅಭಿಮಾನಿಗಳು ಚೈತನ್ಯಾ ಅಮಾಯಕ ಎಂದೇ ಕಾಮೆಂಟ್ ಮಾಡಿದ್ದರು.

ಸದ್ಯ ಡಿವೋರ್ಸ್ ಬಗ್ಗೆ ಸಮಂತಾಗೆ ಮತ್ತೆ ಪ್ರಶ್ನೆ ಎದುರಾಗಿದೆ. ಮೊನ್ನೆ ಸ್ಯಾಮ್ ಒಂದು ಹೆಲ್ತ್ ಪಾಡ್‌ಕಾಸ್ಟ್ ಬಿಡುಗಡೆ ಮಾಡಿದ್ದರು. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಬಹುತೇಖ ಪಾಸಿಟಿವ್ ಕಾಮೆಂಟ್ಸ್‌ ಇವೆ. ಕೆಲ ಕಾಮೆಂಟ್‌ಗಳಿಗೆ ಸ್ಯಾಮ್ ರಿಪ್ಲೇ ಮಾಡಿದ್ದಾರೆ. ಈ ವೇಳೆ ನೆಟ್ಟಿಗನೊಬ್ಬ ಸಮಂತಾ ಡಿವೋರ್ಸ್ ವಿಚಾರ ಪ್ರಸ್ತಾಪಿಸಿ ಬೇಸರ ಉಂಟು ಮಾಡಿದ್ದಾನೆ.

"ನಿನ್ನ ಅಮಾಯಕ ಪತಿ ನಾಗ ಚೈತನ್ಯನಿಗೆ ಯಾಕೆ ಮೋಸ ಮಾಡಿದೆ?' ಎಂದು ಆತ ಕೇಳಿದ್ದಾನೆ. ಈ ಪ್ರಶ್ನೆಗೆ ಉತ್ತರಿಸಿರುವ ಸಮಂತಾ, "ಸ್ವಾರಿ, ನಿಮಗೆ ಈ ಅಭ್ಯಾಸ ಉಪಯೋಗವಾಗುವುದಿಲ್ಲ. ನಿಮಗೆ ಇನ್ನಷ್ಟು ಒಳ್ಳೆ ಟೆಕ್ನಿಕ್ಸ್ ಬೇಕಾಗುತ್ತದೆ" ಎಂದು ಖಡಕ್ ಕೌಂಟರ್ ಕೊಟ್ಟಿದ್ದಾರೆ. ಆರೋಗ್ಯದ ಬಗ್ಗೆ ನಡೆಯುತ್ತಿರುವ ಚರ್ಚೆ ನಡುವೆ ನಿಮ್ಮ ಈ ಪ್ರಶ್ನೆ ಬೇಕಿರಲಿಲ್ಲ ಎನ್ನುವಂತೆ ಸಮಂತಾ ತಿರುಗೇಟು ನೀಡಿದ್ದಾರೆ. ಸಾಕಷ್ಟು ಜನ ಕಾಮೆಂಟ್ ಮಾಡಿ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

More from Filmibeat

English summary
Actress Samantha's strong replay to netizen who commented on her divorce;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X